Fact Check: ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?

ಮಹಿಳೆಯರ ಅರೆನಗ್ನ ಪ್ರತಿಭಟನೆ, ಹಿಜಾಬ್, ಷರಿಯಾ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ

Fact
ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ವಿದ್ಯಮಾನ ಇದಲ್ಲ, ಮಹಿಳೆಯರ ದೌರ್ಜನ್ಯ ವಿರುದ್ಧ ಪ್ಯಾರಿಸ್‌ ನಲ್ಲಿ ನಡೆಸಿದ ಪ್ರತಿಭಟನೆ ಇದಾಗಿದೆ

ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಮುಸ್ಲಿಂ ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಸಹೋದರಿಯರು ಮುಸ್ಲಿಂ ನೆಲದಲ್ಲಿಯೇ ಹಿಜಾಬ್ ಅನ್ನು ಕಿತ್ತೆಸೆದು ಅರೆನಗ್ನದಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.. ಹೆಣ್ಣಾಗಿ ಈ ರೀತಿ ಪ್ರತಿಭಟಿಸುತ್ತಿದ್ದಾರೆ ಎಂದರೆ ಅವರಿಗೆ ಇನ್ನೆಷ್ಟು ನೋವ್ವಾಗಿರಬೇಡ ಭಾರತದ ಕನ್ವರ್ಟೆಡ್ ಗಳಿಗೆ ಯಾವಾಗ ಅರ್ಥವಾಗುತ್ತದೆಯೋ…” ಎಂದಿದೆ.

Also Read: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

ಇದೇ ರೀತಿಯ ಹೇಳಿಕೆ ಇಲ್ಲಿದೆ.

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ ಈ ಹೇಳಿಕೆ ತಪ್ಪಾಗಿದ್ದು ಫ್ರಾನ್ಸ್ ನಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಕುರಿತ ಪ್ರತಿಭಟನೆ ಇದಾಗಿದೆ ಎಂದು ಕಂಡುಕೊಂಡಿದ್ದೇವೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ನವೆಂಬರ್ 25, 2024ರಂದು ಜಿಸಿ ಎಂಬ ಬಳಕೆದಾರರು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಈ ಪೋಸ್ಟ್ ನಲ್ಲಿ “ಇಂದು ಪ್ಯಾರಿಸ್‌ನಲ್ಲಿ, ಫೆಮಿನ್ ಗುಂಪಿನ ಸ್ತ್ರೀವಾದಿಗಳು ಕುರ್ದಿಗಳ ಸಾಂಕೇತಿಕ ಧ್ಯೇಯವಾಕ್ಯವನ್ನು ಅನೇಕ ಭಾಷೆಗಳಲ್ಲಿ “ಜಿನ್ ಜಿಯಾನ್ ಆಜಾದಿ” ಎತ್ತಿದರು. ಆದರೆ ಕುತೂಹಲಕಾರಿ ಸಂಗತಿಯೆಂದರೆ ಅದು ಅದರ ಮೂಲ ರೂಪವಾದ ಕುರ್ದಿಷ್ ಭಾಷೆಯಲ್ಲಿ ಮಾತ್ರ ಅಸ್ತಿತ್ವದಲ್ಲಿಲ್ಲ. ಕುರ್ದಿಗಳನ್ನು ನಿರ್ಲಕ್ಷಿಸಲಾಗಿದೆ.” (ಸ್ಪಾನಿಶ್‌ ನಿಂದ ಅನುವಾದಿಸಲಾಗಿದೆ) ಎಂದಿದೆ.

ಈ ಸುಳಿವಿನ ಪ್ರಕಾರ ನಾವು ಸ್ಪಾನಿಶ್ ಕೀವರ್ಡ್ ಗಳನ್ನು ಬಳಸಿ ಇನ್ನಷ್ಟು ಶೋಧ ನಡೆಸಿದ್ದೇವೆ.  ಈ ವೇಳೆ ನವೆಂಬರ್ 24, 2024ರ ಸ್ವಿಸ್‌ ಇನ್ಫೋ ಸಿಎಚ್ ವರದಿಯಲ್ಲಿ ಕಂಡುಬಂದಂತೆ “ಫೆಮೆನ್ ಗುಂಪಿನ ಸುಮಾರು ನೂರು ಸ್ತ್ರೀವಾದಿ ಕಾರ್ಯಕರ್ತರು ಪ್ಯಾರಿಸ್‌ನ ಲೌವ್ರೆ ವಸ್ತುಸಂಗ್ರಹಾಲಯದ ಮುಂದೆ ಲೈಂಗಿಕ ಹಿಂಸಾಚಾರದ ವಿರುದ್ಧ ಈ ಭಾನುವಾರ ಪ್ರತಿಭಟಿಸಿದರು.” ಎಂದಿದೆ. (ಸ್ಪಾನಿಶ್‌ ನಿಂದ ಅನುವಾದಿಸಲಾಗಿದೆ) ಇದೇ ವರದಿಯಲ್ಲಿ ಮಹಿಳೆಯರು ಅರೆನಗ್ನವಾಗಿ ಪ್ರತಿಭಟಿಸಿದ ಕುರಿತ ಉಲ್ಲೇಖವನ್ನು ಗಮನಿಸಿದ್ದೇವೆ.

Fact Check: ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?

25 ನವೆಂಬರ್ 2024ರ ಪಂಕ್ಚುವಲ್ ವರದಿಯಲ್ಲಿ “ಲೌವ್ರೆ ಮುಂಭಾಗದಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಕಾರ್ಯಕರ್ತರು ಪ್ರತಿಭಟಿಸಿದರು” ಎಂದಿದೆ. (ಸ್ಪಾನಿಶ್‌ ನಿಂದ ಅನುವಾದಿಸಲಾಗಿದೆ) ವರದಿಯೊಂದಿಗೆ ವೀಡಿಯೋವನ್ನು ಲಗತ್ತಿಸಲಾಗಿದ್ದು ಇದು ವೈರಲ್ ವೀಡಿಯೋದ ಕೀಫ್ರೇಮ್ ಗಳಿಗೆ ಸಾಮ್ಯತೆ ಹೊಂದಿರುವುದನ್ನು ಗಮನಿಸಿದ್ದೇವೆ.

Fact Check: ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?

24 ನವೆಂಬರ್ 2024ರ ಬಿಎಫ್‌ಎಮ್‌ಟಿವಿ ವರದಿಯಲ್ಲಿ, “ಮಹಿಳಾವಾದಿ ಸಮೂಹದ ಸುಮಾರು ನೂರು ಕಾರ್ಯಕರ್ತರು ಪ್ಯಾರಿಸ್‌ನ ಲೌವ್ರೆ ವಸ್ತುಸಂಗ್ರಹಾಲಯದ ಮುಂದೆ ನವೆಂಬರ್ 24 ಭಾನುವಾರದಂದು ಸಜ್ಜುಗೊಂಡರು. ಅವರು ಪ್ರಪಂಚದಾದ್ಯಂತ ಮಹಿಳೆಯರ ಮೇಲಿನ ಎಲ್ಲಾ ರೀತಿಯ ಹಿಂಸೆ ಮತ್ತು ದಬ್ಬಾಳಿಕೆಯನ್ನು ಖಂಡಿಸಿದರು. ಜಗತ್ತಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಮೇಲಿನ ಮುಸುಕನ್ನು ತೆಗೆದುಹಾಕೋಣ” ಎಂದು ನವೆಂಬರ್ 24 ರ ಭಾನುವಾರದಂದು ಮಹಿಳಾವಾದಿ ಸಮೂಹದ ಸುಮಾರು ನೂರು ಮಹಿಳೆಯರು ಘೋಷಣೆ ಕೂಗಿದರು.” (ಸ್ಪಾನಿಶ್‌ ನಿಂದ ಅನುವಾದಿಸಲಾಗಿದೆ) ಎಂದಿದೆ.

Fact Check: ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ವೈರಲ್ ಪೋಸ್ಟ್ ನೊಂದಿಗೆ ಲಗತ್ತಿಸಲಾದ ವೀಡಿಯೋ ಬಗ್ಗೆ ನಾವು ಶೋಧ ನಡೆಸಿದ್ದು, ಬ್ರೂಟ್‌ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವೀಡಿಯೋ ದೊರಕಿದೆ. ಈ ಸಮಯದಲ್ಲಿ, ಬ್ರೂಟ್ ಫ್ರಾನ್ಸ್‌ನ Instagram ಖಾತೆಯಿಂದ 24 ನವೆಂಬರ್ 2024 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೋ ವರದಿಯನ್ನು ನಾವು ಕಂಡುಕೊಂಡಿದ್ದೇವೆ

ಈ ವರದಿಯ ಶೀರ್ಷಿಕೆ ಮತ್ತು ವೀಡಿಯೋದಲ್ಲಿ, ಫೆಮಿನಿಸ್ಟ್ ಸಂಸ್ಥೆ ಫೆಮೆನ್ ಫ್ರಾನ್ಸ್ ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂ ಬಳಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸಿಸಲಾಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ, ಪ್ರತಿಭಟನೆ ನಿರತ ಮಹಿಳೆಯರು “ಮಹಿಳೆ, ಜೀವನ ಮತ್ತು ಸ್ವಾತಂತ್ರ್ಯ” ಮತ್ತು “ಮಹಿಳೆಯರ ವಿರುದ್ಧದ ಯುದ್ಧವನ್ನು ನಿಲ್ಲಿಸಿ” ಎಂಬ ಘೋಷಣೆಗಳನ್ನು ಮಾಡಿದರು. ಈ ವರದಿಯನ್ನು ಬ್ರೂಟ್‌ಗಾಗಿ ಫ್ರೆಂಚ್ ಪತ್ರಕರ್ತ ರೆಮಿ ಬಿಸ್ಸಿನೆ ಅವರು ಮಾಡಿದ್ದರೆ.

ಇದರ ನಂತರ, ಫೆಮೆನ್ ಫ್ರಾನ್ಸ್‌ನ ಇನ್‌ಸ್ಟಾಗ್ರಾಂ ಖಾತೆಯಿಂದ ಮಾಡಿದ ಹಲವಾರು ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ , ಇದರಲ್ಲಿ ಈ ವೀಡಿಯೋಗೆ ಸಂಬಂಧಿಸಿದ ಅನೇಕ ಚಿತ್ರಗಳಿವೆ. ಚಿತ್ರದ ಜೊತೆಗಿನ ಶೀರ್ಷಿಕೆಯಲ್ಲಿ, ನವೆಂಬರ್ 24 ರಂದು ಪ್ಯಾರಿಸ್‌ನಲ್ಲಿ ಮಹಿಳೆಯರು ಇದನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದೆ.

ಏತನ್ಮಧ್ಯೆ, ನವೆಂಬರ್ 24, 2024 ರ ಫೆಮೆನ್ ಫ್ರಾನ್ಸ್‌ನ ಇನ್ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾದ ಪ್ರದರ್ಶನಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ಮಾಹಿತಿಯನ್ನು ಕಂಡುಕೊಂಡಿದ್ದೇವೆ.

ನವೆಂಬರ್ 24, 2024 ರಂದು, ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಯ ದಿನದಂದು, ಸ್ತ್ರೀವಾದಿ ಕಾರ್ಯಕರ್ತರಾದ ಲಿಯೋ, ಮರಿಯಾಮ್ ನಮಾಝಿ ಮತ್ತು ಪಿನಾರ್ ಸೆಲೆಕ್ ಅವರೊಂದಿಗೆ ಸುಮಾರು 100 ಮಹಿಳಾ ಪ್ರತಿಭಟನಕಾರರು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದರು ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಲಾಗಿದೆ. ವಿವಿಧ ದೇಶಗಳಿಂದ ಪ್ಯಾರಿಸ್‌ಗೆ ಬಂದ ಈ ಪ್ರತಿಭಟನಾಕಾರರು, ಧರ್ಮಾಧಿಕಾರ, ಯುದ್ಧಗಳು ಮತ್ತು ಸರ್ವಾಧಿಕಾರಗಳಿಂದ ತುಳಿತಕ್ಕೊಳಗಾದ ಮಹಿಳೆಯರ ಪರವಾಗಿ ಹೇಳಿಕೆಗಳನ್ನು ನೀಡಿದರು. ಗಣ್ಯ ಸಾಂಸ್ಕೃತಿಕ ಶಕ್ತಿಯ ಸ್ಮಾರಕವಾದ ಲೌವ್ರೆ ಮ್ಯೂಸಿಯಂ ಬಳಿ ಮಹಿಳೆಯರು ಪ್ರತಿಭಟಿಸಿದರು.

ಅಫ್ಘಾನಿಸ್ತಾನ, ಇರಾನ್, ಇರಾಕ್, ಉಕ್ರೇನ್, ಪ್ಯಾಲೆಸ್ಟೈನ್, ಇಸ್ರೇಲ್ ಮತ್ತು ಇತರ ಯಾವುದೇ ದೇಶದಿಂದ ಬಂದವರಾಗಿರಲಿ, ಪ್ರತಿಭಟಿಸುವ ಮಹಿಳೆಯರು ಪ್ರಪಂಚದಾದ್ಯಂತ ಬಳಲುತ್ತಿರುವ ಮಹಿಳೆಯರೊಂದಿಗೆ ಒಗ್ಗಟ್ಟನ್ನು ತೋರಿಸಿದ್ದಾರೆ ಎಂದು ಶೀರ್ಷಿಕೆಯಲ್ಲಿದೆ. ಈ ಸಂದರ್ಭದಲ್ಲಿ, ಪ್ರತಿಭಟನಕಾರರು ಮಹಿಳಾ ಪ್ರತಿರೋಧ ಗೀತೆಗಳನ್ನು ಹಾಡುತ್ತಾ ತಮ್ಮ ಮುಖವನ್ನು ಮುಚ್ಚುವ ಪರದೆಗಳನ್ನು ಅಥವಾ ಮುಸುಕುಗಳನ್ನು ತೆಗೆದು ಹಾಕಿದರು. ಮಹಿಳಾ ಪ್ರತಿರೋಧದ ಸಂದೇಶವನ್ನು ಸಾರಲು ಮಹಿಳೆಯರು ತಮ್ಮ ದೇಹದ ಮೇಲೆ ಘೋಷಣೆಗಳನ್ನು ಬರೆದರು ಮತ್ತು ಮುಸುಕು ತೆಗೆಯುವುದು ಕೇವಲ ಸಾಂಕೇತಿಕ ಸೂಚಕವಲ್ಲ, ನಾವು ಮೌನವಾಗಿರುವುದಿಲ್ಲ, ನಮ್ಮನ್ನು ಅಳಿಸಲು ಸಾಧ್ಯವಿಲ್ಲ ಮತ್ತು ನಮ್ಮ ಪರವಾಗಿ ಹೋರಾಡುತ್ತೇವೆ ಎಂಬ ಘೋಷಣೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಸ್ವಾತಂತ್ರ್ಯ ಮತ್ತು ನಮ್ಮ ಸಹೋದರಿಯರು ಎಂದಿಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಲಾಗಿದೆ.

ಇಲ್ಲಿಯವರೆಗಿನ ತನಿಖೆಯಿಂದ, ಮಹಿಳೆಯರು ಕೇವಲ ಹಿಜಾಬ್ ವಿರುದ್ಧ ಪ್ರತಿಭಟಿಸಲಿಲ್ಲ, ಬದಲಿಗೆ ಪ್ರಪಂಚದಾದ್ಯಂತ ನಡೆಯುತ್ತಿರುವ ಮಹಿಳೆಯರ ವಿರುದ್ಧದ ದೌರ್ಜನ್ಯದ ವಿರುದ್ಧವಾಗಿತ್ತು ಎಂದು ಕಂಡುಬಂದಿದೆ.

ಹೆಚ್ಚಿನ ಮಾಹಿತಿಗಾಗಿ ನಾವು ಪ್ರತಿಭಟನೆಯ ಸಹ ಆಯೋಜಕರಾದ ಮರಿಯಾಮ್ ನಮಾಝಿ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, “ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ, ಎಲ್ಲ ರೀತಿಯ ಹಿಂಸೆಯ ವಿರುದ್ಧ ವಿವಿಧ ಮಹಿಳೆಯರು ನಡೆಸಿದ ಪ್ರತಿಭಟನೆ ಇದಾಗಿತ್ತು. ಇದರಲ್ಲಿ ಎಲ್ಲ ಪ್ರತಿಭಟನಕಾರರೂ ಕುರ್ದಿಷ್ ಮುಸ್ಲಿಂ ಮಹಿಳೆಯರಾಗಿರಲಿಲ್ಲ” ಎಂದು ತಿಳಿಸಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಮುಸ್ಲಿಂ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂಬುದು ನಿಜವಲ್ಲ, ಪ್ಯಾರಿಸ್‌ ನಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ನಡೆದ ಅರೆನಗ್ನ ಪ್ರತಿಭಟನೆ ಇದಾಗಿದೆ ಎಂದು ತಿಳಿದುಬಂದಿದೆ.

Also Read: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆಯೇ? ವೈರಲ್ ಪೋಸ್ಟ್ ಗಳು ಸುಳ್ಳು

Result: Partly False

Our Sources
Report By Swissinfo, Dated: November 24, 2024

Report By Punctual, Dated: November 24, 2024

Report By BFMTV, Dated: November 24, 2024

Instagram Post By Brut, Dated: November 24, 2024

Instagram Post By femen_official, Dated: November 24, 2024

Conversation with Maryam Namazie, London

(Inputs from Runjay Kumar)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.