Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯಾಂಶವೇನು?

ಹಿಂದೂ ನಾಶ, ಬಾಂಗ್ಲಾದೇಶ, ಮುಸ್ಲಿಂ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ

Fact
ಇದು ಕೋಮು ಗಲಭೆಯಲ್ಲ, ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಗಲಭೆಯಾಗಿದೆ

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

1 ನಿಮಿಷ 16 ಸೆಕೆಂಡ್ ಗಳ ಈ ವೀಡಿಯೋದಲ್ಲಿ ಜನರು ಪರಸ್ಪರ ಬಡಿಗೆಗಳಿಂದ ಹೊಡೆದಾಡುವುದು, ಕಲ್ಲು ತೂರಾಟದ ದೃಶ್ಯಗಳು ಕಾಣಿಸುತ್ತವೆ.

‍Also Read: ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಮೋದಿ ಹೇಳಿದ್ದಾರೆಯೇ, ಸತ್ಯ ಏನು?

Fact Check/Verification

ಸತ್ಯಶೋಧನೆಯ ಭಾಗವಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ವೀಡಿಯೋದಲ್ಲಿ ಕಾಣಿಸಿಕೊಂಡವರು ಬಹುತೇಕ ಯುವಕರು ಎಂದು ಗುರುತಿಸಿದ್ದೇವೆ. ಜೊತೆಗೆ ವೀಡಿಯೋದಲ್ಲಿ ಡಾ.ಬುಹುಬುರ್ ರಹ್ಮಾನ್ ಮೊಲ್ಲಾಹ್ ಕಾಲೇಜು ಎಂದು ಬರೆಯಲಾದ ಕಟ್ಟಡದ ಎದುರು ಹೊಡೆದಾಡುವುದನ್ನೂ ನೋಡಿದ್ದೇವೆ.

ಬಳಿಕ ವೀಡಿಯೋ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಲವು ವರದಿಗಳು ಲಭ್ಯವಾಗಿದ್ದು, ಇದು ಎರಡು ಕಾಲೇಜು ವಿದ್ಯಾರ್ಥಿಗಳ ನಡುವಿನ ಗಲಭೆ ಎಂದು ತಿಳಿದುಬಂದಿದೆ.

ಈ ವೇಳೆ ನವೆಂಬರ್ 26, 2024ರ ಢಾಕಾ.24 ವರದಿಯನ್ನು ನೋಡಿದ್ದೇವೆ. ಇದರಲ್ಲಿ ವಿಧ್ವಂಸಕ ಕೃತ್ಯ ಮತ್ತು ಮ್ಯಾಗಝೀನ್ ಗಳ ಕಳ್ಳತನದ ಆರೋಪದ ಮೇಲೆ ರಾಜಧಾನಿಯ ಡಾ.ಮಹಬೂಬುರ್ ರೆಹಮಾನ್ ಮೊಲ್ಲಾ ಕಾಲೇಜು ಮತ್ತು ಇತರ ಕಾಲೇಜುಗಳ 8,000 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಎಕೆಎಂ ಹಸನ್ ಮಹಮುದುಲ್ ಕಬೀರ್ ಭಾನುವಾರ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸೋಮವಾರ ನ್ಯಾಯಾಲಯ ವಿಚಾರಣೆಗೆ ಬಂದಿದೆ. ಢಾಕಾ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದುರ್ ರಹಮಾನ್ ಅವರು ಪ್ರಕರಣವನ್ನು ಸ್ವೀಕರಿಸಿದ ನಂತರ ಪ್ರಕರಣ ದಾಖಲಿಸುವಂತೆ  ಈ ಆದೇಶವನ್ನು ಹೊರಡಿಸಿದ್ದಾರೆ. ಹೇಳಿಕೆಯ ಪ್ರಕಾರ, ಡಾ.ಮಹಬೂಬುರ್ ರೆಹಮಾನ್ ಮೊಲ್ಲಾಹ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 7,000 ರಿಂದ 8,000 ವಿದ್ಯಾರ್ಥಿಗಳು ನವೆಂಬರ್ 24 ರಂದು ಮಾರಕಾಸ್ತ್ರಗಳಿಂದ ಗಲಭೆಗಳನ್ನು ಸೃಷ್ಟಿಸುವ ಮೂಲಕ ಸರ್ಕಾರಿ ಆಸ್ತಿಯನ್ನು ನಾಶಪಡಿಸಿದ್ದಾರೆ. ಅವರು ಸರ್ಕಾರಿ ಶಸ್ತ್ರಾಸ್ತ್ರ (ಪಿಸ್ತೂಲ್ಗಳು), ಸರ್ಕಾರಿ ಕರ್ತವ್ಯದಲ್ಲಿ ಬಳಸುವ ಶಸ್ತ್ರಸಜ್ಜಿತ ವಾಹನಗಳು ಅಥವಾ ಎಪಿಸಿಗಳನ್ನು (ಆರ್ಮರ್ ಪರ್ಸನಲ್ ಕ್ಯಾರಿಯರ್ಸ್) ಧ್ವಂಸಗೊಳಿಸಿ ಹಾನಿ ಉಂಟುಮಾಡಿ ಮ್ಯಾಗಝೀನ್ ಗಳನ್ನು ಕದ್ದಿದ್ದಾರೆ. ಅವರು ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ದಾಳಿ ಮಾಡುವ ಮೂಲಕ, ಅವರ ಜೀವಕ್ಕೆ ಬೆದರಿಕೆ ಹಾಕಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎಂದಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯಾಂಶವೇನು?

ನವೆಂಬರ್ 25, 2024ರ ಪ್ರೊಥೊಮಾಲೊ ವರದಿಯ ಪ್ರಕಾರ, “ರಾಜಧಾನಿಯ ಜಾತ್ರಾಬಾರಿ ಡಾ. ಮಹಬೂಬುರ್ ರಹಮಾನ್ ಮೊಲ್ಲಾ ಕಾಲೇಜ್ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಯಿತು. ಈ ವೇಳೆ ದಾಳಿ ನಡೆಸಿದ ವಿದ್ಯಾರ್ಥಿಗಳು ಕಾಲೇಜಿನ ವಿವಿಧ ಸಾಮಗ್ರಿಗಳು ಹಾಗೂ ಪರಿಕರಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಹೀದ್ ಸುಹ್ರವರ್ದಿ ಕಾಲೇಜು ಮತ್ತು ಕವಿ ನಜ್ರುಲ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಹಬೂಬುರ್ ರಹಮಾನ್ ಮೊಲ್ಲಾ ಕಾಲೇಜಿನ ಮೇಲೆ ದಾಳಿ ಮಾಡಿದರು. ಈ ವರದಿಯನ್ನು 1 ಗಂಟೆಗೆ ಬರೆಯುವವರೆಗೆ, ಮಹೆಬೂಬುರ್ ರಹಮಾನ್ ಮೊಲ್ಲಾಹ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಜನರು ಮತ್ತು ಶಹೀದ್ ಸುಹ್ರವರ್ದಿ ಕಾಲೇಜು ಮತ್ತು ಕವಿ ನಜ್ರುಲ್ ಕಾಲೇಜು ವಿದ್ಯಾರ್ಥಿಗಳ ನಡುವೆ ಸರಗಳ್ಳತನ ಮತ್ತು ಘರ್ಷಣೆ ನಡೆಯಿತು. ಇದಕ್ಕೂ ಮೊದಲು, ಅಭಿಜಿತ್ ಹೌಲಾದರ್ ಎಂಬ ವಿದ್ಯಾರ್ಥಿಯು ತಪ್ಪು ಚಿಕಿತ್ಸೆಯಿಂದ ಸಾವನ್ನಪ್ಪಿದ ದೂರಿನ ಮೇರೆಗೆ ಮಹೆಬೂಬುರ್ ರಹಮಾನ್ ಮೊಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ ಹಳೇ ಢಾಕಾದ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಶಹೀದ್ ಸುಹ್ರವರ್ದಿ ಕಾಲೇಜ್ ಅನ್ನು ದೋಚಿ ಲೂಟಿ ಮಾಡಿದ್ದರು. ಶಹೀದ್ ಸುಹ್ರವರ್ದಿ ಕಾಲೇಜಿನ ಬಂಗಾಳಿ ವಿಭಾಗದ ವಿದ್ಯಾರ್ಥಿ ವಿಜಯ್ ಅಹ್ಮದ್ ಪ್ರಥಮ್ ಅಲೋಗೆ ತಿಳಿಸಿದರು, ‘ಮಹಬೂಬುರ್ ರೆಹಮಾನ್ ಕಾಲೇಜು ವಿದ್ಯಾರ್ಥಿಗಳು ನಿನ್ನೆ ನಮ್ಮ ಕಾಲೇಜನ್ನು ಧ್ವಂಸಗೊಳಿಸಿ ಲೂಟಿ ಮಾಡಿದ್ದಾರೆ. ನಾವು ಸೇಡು ತೀರಿಸಿಕೊಳ್ಳಲು ಬಂದಿದ್ದೇವೆ. ನನಗೆ ಸಿಕ್ಕಿದ್ದನ್ನು ಮೊಲ್ಲ ಕಾಲೇಜಿಗೆ ತಂದಿದ್ದೇನೆ’ ಎಂದರು. ಪ್ರತ್ಯಕ್ಷದರ್ಶಿಗಳು ಮತ್ತು ಸಂಬಂಧಿತ ವ್ಯಕ್ತಿಗಳೊಂದಿಗೆ ಮಾತನಾಡಿ, ಹಿಂದಿನ ದಿನದ ದಾಳಿಯಿಂದಾಗಿ ಇಂದು ಮಹೆಬೂಬುರ್ ರಹಮಾನ್ ಮೊಲ್ಲಾ ಕಾಲೇಜು ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ ಎಂದಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯಾಂಶವೇನು?

ಈ ವರದಿಯಲ್ಲಿ ಶಹೀದ್ ಸುಹ್ರವರ್ದಿ ಕಾಲೇಜಿನ ಮೇಲೆ ನಡೆಸಲಾದ ದಾಳಿಗೆ ಪ್ರತಿಯಾಗಿ ಮಹಬೂಬುರ್ ರಹಮಾನ್ ಮೊಲ್ಲಾ ಕಾಲೇಜ್ ಮೇಲೆ ದಾಳಿ ಮಾಡಲಾಯಿತು ಎಂದು ಗೊತ್ತಾಗಿದೆ.

ನವೆಂಬರ್ 26, 2024ರ ಡೈಲಿ ಸನ್ ವರದಿಯ ಪ್ರಕಾರ, ಎರಡು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು “ಮೆಗಾ ಸೋಮವಾರ” ಎಂದು ಕರೆಯುವ ಯೋಜಿತ ಪ್ರತೀಕಾರವು ಸೋಮವಾರ ರಾಜಧಾನಿಯ ಡೆಮ್ರಾ ಮತ್ತು ಜತ್ರಾಬರಿ ಪ್ರದೇಶಗಳನ್ನು ಯುದ್ಧಭೂಮಿಯನ್ನಾಗಿ ಪರಿವರ್ತಿಸಿತು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸರ್ಕಾರಿ ಕಾಬಿ ನಜ್ರುಲ್ ಕಾಲೇಜು ಮತ್ತು ಸರ್ಕಾರಿ ಶಹೀದ್ ಸುಹ್ರಾವರ್ದಿ ಕಾಲೇಜಿನ ವಿದ್ಯಾರ್ಥಿಗಳು ಡೆಮ್ರಾದ ಡಾ.ಮಹಬೂಬುರ್ ರೆಹಮಾನ್ ಮೊಲ್ಲಾ ಕಾಲೇಜಿನ ತಮ್ಮ ಸಹವರ್ತಿಗಳೊಂದಿಗೆ ಭಾನುವಾರ “ಸೂಪರ್ ಸಂಡೇ” ಎಂದು ಲೇಬಲ್ ಮಾಡಲಾದ ತಮ್ಮ ಕಾಲೇಜುಗಳ ಮೇಲೆ ಭಾನುವಾರ ನಡೆದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ದಾಳಿ ನಡೆಸಿದರು. ಈ ಗಲಭೆಯು ಡಾ.ಮಹಬೂಬುರ್ ರಹಮಾನ್ ಮೊಲ್ಲಾ ಕಾಲೇಜಿನಲ್ಲಿ ವ್ಯಾಪಕ ವಿಧ್ವಂಸಕ ಕೃತ್ಯಕ್ಕೆ ಕಾರಣವಾಯಿತು ಮತ್ತು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿತು, ಇದು ನಗರವಾಸಿಗಳಲ್ಲಿ ಭೀತಿಯನ್ನು ಹರಡಿತು. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಿಗೆ ದಾಖಲಿಸಲಾಗಿದೆ ಎಂದಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯಾಂಶವೇನು?

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ, ಇದೊಂದು ಕೋಮು ಗಲಭೆಯಲ್ಲ, ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಗಲಭೆಯಾಗಿದೆ ಎಂದು ತಿಳಿದುಬಂದಿದೆ.

Also Read: ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?

Result: False

Our Sources
Report By Dhaka.24, Dated: November 26, 2024

Report By Prothomalo, Dated: November 25, 2024

Report By Daily Sun, Dated: November 26, 2024

(Inputs from Rifat and Sayeed joy, Newschecker Bangladesh)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.