Authors
Claim
ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ
Fact
ಗೂಳಿಯನ್ನು ಹೊಡೆದು ಕೊಲ್ಲುವ ವೀಡಿಯೋ ಪಂಜಾಬ್ ನ ಜಲಂಧರ್ ನ ಜಮ್ಶೇರ್ ಡೈರಿ ಕಾಂಪ್ಲೆಕ್ಸಿನದ್ದಾಗಿದೆ
ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ ಎಂಬ ಹೇಳಿಕೆಯುಳ್ಳ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೊಟ್ಟಿಗೆಯಲ್ಲಿ ಗೂಳಿಯನ್ನು ನಾಲ್ವರು ಥಳಿಸಿ ಕೊಂದಿರುವ ವೀಡಿಯೋ ಇದಾಗಿದೆ.
ಬಾಂಗ್ಲಾದೇಶದ ಹಿಂದೂ ಧರ್ಮಗುರು, ಇಸ್ಕಾನ್ ಮಾಜಿ ಸದಸ್ಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನದ ಬೆನ್ನಲ್ಲೇ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Factcheck/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಎಕ್ಸ್ ನಲ್ಲಿ ‘ಜರ್ನಲಿಸ್ಟ್ ಫೈಸಲ್’ ಎಂಬ ಖಾತೆಯಿಂದ ನವೆಂಬರ್ 19, 2024 ರಂದು ಹಂಚಿಕೊಂಡಿರುವುದು ಕಂಡುಬಂದಿದೆ. ಆದರೆ ಈ ಘಟನೆ ಎಲ್ಲಿ ನಡೆಯಿತು ಎಂದು ಪೋಸ್ಟ್ ಹೇಳಿಲ್ಲ. ಆದಾಗ್ಯೂ, ಪೋಸ್ಟ್ಗೆ ಪೆಟಾ ಇಂಡಿಯಾ ಮಾಡಿರುವ ಕಾಮೆಂಟ್ ನಲ್ಲಿ ಈ ಘಟನೆಯ ಬಗ್ಗೆ ಸದರ್ ಪೊಲೀಸ್ ಠಾಣೆಯಲ್ಲಿ ಹಲವು ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದಿದೆ.
ಈ ಸುಳಿವನ್ನು ತೆಗೆದುಕೊಂಡು ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ದಿ ಟ್ರಿಬ್ಯೂನ್ ನವೆಂಬರ್ 20, 2024 ರಂದು ಘಟನೆಯ ಬಗ್ಗೆ ವರದಿ ಮಾಡಿರುವುದನ್ನು ಗಮನಿಸಿದ್ದೇವೆ. ಜಲಂಧರ್ ನಲ್ಲಿ ಹಸು ಹೊಡೆದು ಕೊಂದ ವೀಡಿಯೋ ವೈರಲ್, ಆಕ್ರೋಶ ಎಂದಿದೆ. ಈ ವರದಿಯ ಪ್ರಕಾರ, ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ ನಾಯಕ ಸೃಷ್ಟಿತ್ ಬಕ್ಷಿ ಅವರು ವೀಡಿಯೋದಲ್ಲಿ ಕಂಡುಬರುವ ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ ಎಂದಿದೆ.
ಈ ಸಂಬಂಧ ದೂರು ದಾಖಲು ಮಾಡಿದ ಜಲಂಧರ್ ಮೂಲದ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ ನ ಯುವಿ ಸಿಂಗ್ ಅವರೊಂದಿಗೆ ನಾವು ಮಾತನಾಡಿದ್ದೇವೆ. ವೀಡಿಯೋದಲ್ಲಿ ಕಂಡುಬರುವಂತೆ, ಪಂಜಾಬ್ ನ ಜಲಂಧರ್ ನಲ್ಲಿ ಜಮ್ಶೇರ್ ಡೈರಿ ಕಾಂಪ್ಲೆಕ್ಸ್ ನಲ್ಲಿ ನಾಲ್ವರು ವ್ಯಕ್ತಿಗಳು ಗೂಳಿಯನ್ನು ಹೊಡೆದು ಕೊಲ್ಲುವುದನ್ನು ಕಾಣಬಹುದು. ಸಂಘಟನೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು.
“ಘಟನೆಯಲ್ಲಿ ಭಾಗಿಯಾಗಿರುವವರೆಲ್ಲರೂ ಹಿಂದೂಗಳು. ಇದರಲ್ಲಿ ಯಾವುದೇ ಕೋಮು ಬಣ್ಣವಿಲ್ಲ. ನಾವು ಪೊಲೀಸ್ ಡಿಎಸ್ಪಿಗೆ ದೂರು ನೀಡಿದ್ದೇವೆ. ಪೊಲೀಸರು ಇನ್ನೂ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಎಫ್ಐಆರ್ ಅನ್ನು ನಮ್ಮ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ” ಎಂದು ಅವರು ಹೇಳಿದರು. ಸಂಘಟನೆಯು ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ನವೆಂಬರ್ 18, 2024 ರಂದು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
Conclusion
ಸತ್ಯಶೋಧನೆಯ ಪ್ರಕಾರ, ಗೂಳಿ ಹೊಡೆದು ಕೊಲ್ಲುವ ವೀಡಿಯೋ ಪಂಜಾಬ್ ಜಲಂಧರ್ ನ ಜಮ್ಶೇರ್ ಡೈರಿ ಕಾಂಪ್ಲೆಕ್ಸಿನದ್ದಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
Also Read: ಆಂಧ್ರ ಪ್ರದೇಶದಲ್ಲಿ ಸರ್ಕಾರ ವಕ್ಫ್ ಬೋರ್ಡ್ ವಿಸರ್ಜಿಸಿದ್ದನ್ನು ‘ರದ್ದು’ ಮಾಡಲಾಗಿದೆ ಎಂದು ಪ್ರಚಾರ
Result: False
Our Sources
X Post by @faisalbaig3102 Dated: November 20, 2024
X Post by @PetaIndia Dated: November 20, 2024
News Report by The Tribune Dated: November 20, 2024
Facebook Post by Animal Protection Foundation Dated: November 18, 2024
Telephone Conversation with Yuvi Singh of the Animal Protection Foundation
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.