Authors
Claim
ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ
Fact
ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬ ಹೇಳಿಕೆ ತಪ್ಪಾಗಿದೆ. ತುಪ್ಪದ ಕ್ಯಾನ್ ಗಳಲ್ಲಿ ಪಿಸ್ತೂಲ್ ಅಡಗಿಸಿ ಸಾಗಿಸಿದ ಬಂಧಿತರು ಇಸ್ಲಾಂ ಧರ್ಮೀಯರಲ್ಲ ಎಂದು ಕಂಡುಬಂದಿದೆ.
ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಈ ಶಾಂತಿ ದೂತರು ಮುಸ್ಲಿಂ ಧರ್ಮದವರು ಕಾಫಿರರನ್ನ (ಹಿಂದುಗಳನ್ನು) ಹೊಡೆಯಲಿಕ್ಕೆ ಯಾವ ತರಹದ ಆಯುಧಗಳನ್ನು ತರುತ್ತಿದ್ದಾರೆ ನೋಡಿ, ಸರಿಯಾದ ಸಮಯಕ್ಕೆ ಪೊಲೀಸರು ಹಿಡಿಯುತ್ತಾರೆ ಇಲ್ಲದಿದ್ದರೆ” ಎಂದಿದೆ.
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಕೋಮು ಹೇಳಿಕೆಯೊಂದಿಗೆ ಹಂಚಿಕೊಂಡ ಪೋಸ್ಟ್ ಗೆ ಮತ್ತು ಬಂಧಿತರಲ್ಲಿ ಯಾವುದೇ ಮುಸ್ಲಿಂ ಸಮುದಾಯದವರಿಲ್ಲ ಎಂದು ಕಂಡುಕೊಂಡಿದ್ದೇವೆ.
Fact Check/Verification
ಸತ್ಯಶೋಧನೆಗಾಗಿ ನಾವು “ghee pistol” ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ.
ಸೆಪ್ಟೆಂಬರ್ 27, 2019ರ ನ್ಯೂಸ್ ನೇಷನ್ ಯೂಟ್ಯೂಬ್ ವೀಡಿಯೋದಲ್ಲಿ ನೀಡಿದ ಶೀರ್ಷಿಕೆಯಲ್ಲಿ ದಿಲ್ಲಿ ಪೊಲೀಸರು ತುಪ್ಪದ ಕ್ಯಾನಿನೊಳಗೆ ಅಡಿಗಿಸಿಟ್ಟಿದ್ದ 26 ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿದೆ. ಇದರ ವಿವರಣೆಯಲ್ಲಿ, ದೆಹಲಿ ಪೊಲೀಸ್ ಅಧಿಕಾರಿಗಳು ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಪ್ಪದ ದಪ್ಪ ಪದರಗಳ ಕೆಳಗೆ ಬಚ್ಚಿಟ್ಟಿದ್ದ 26 ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೂರ್ವ ದೆಹಲಿಯ ಗಾಜಿಪುರ ರಸ್ತೆಯಲ್ಲಿ ಕಾರು ಮತ್ತು ಇಬ್ಬರು ಶಸ್ತ್ರಾಸ್ತ್ರ ವ್ಯಾಪಾರಿಗಳಿಂದ ಬಂದೂಕುಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದೆ. ಈ ವೀಡಿಯೋ ಜೊತೆಗೆ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ನಾವು ಈ ವೇಳೆ ಕಂಡುಕೊಂಡಿದ್ದೇವೆ.
ಸೆಪ್ಟೆಂಬರ್ 28, 2019ರ ದಿ ಪಯೊನೀರ್ ವರದಿಯಲ್ಲಿ, ಪ್ರಕರಣದ ಬಗ್ಗೆ ದೆಹಲಿ ಪೊಲೀಸ್ ವಿಶೇಷ ದಳ ಡಿಸಿಪಿ ಪ್ರಮೋದ್ ಕುಶ್ವಾಹ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದನ್ನು ಉಲ್ಲೇಖಿಸಲಾಗಿದೆ. ಮಧ್ಯಪ್ರದೇಶದಿಂದ ಇಬ್ಬರು ಅಕ್ರಮ ಪಿಸ್ತೂಲ್ ತಲುಪಿಸಲು ಘಾಜಿಪುರಕ್ಕೆ ಆಗಮಿಸುತ್ತಾರೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿದ ಮೇರೆಗೆ ಬಲೆ ಬೀಸಲಾಗಿದ್ದು, ವಾಹನವನ್ನು ಅಡ್ಡಗಟ್ಟಿದ ನಂತರ ಪೊಲೀಸರು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ನಿವಾಸಿಗಳಾದ ಜೀತೇಂದ್ರ ಮತ್ತು ರಾಜ್ ಬಹದ್ದೂರ್ ಅವರನ್ನು ಬಂಧಿಸಲಾಗಿದೆ. ತುಪ್ಪದ ಕ್ಯಾನ್‌ಗಳಲ್ಲಿ ಪಿಸ್ತೂಲ್‌ಗಳು ಮತ್ತು ಅಷ್ಟೇ ಸಂಖ್ಯೆಯ ಮ್ಯಾಗಜೀನ್‌ಗಳನ್ನು ಬಚ್ಚಿಡಲಾಗಿತ್ತು. ಹೆಚ್ಚಿನ ವಿವರಗಳನ್ನು ಪಡೆಯಲು ವಿಶೇಷ ದಳದ ತಂಡವು ಇಬ್ಬರನ್ನು ಮತ್ತಷ್ಟು ವಿಚಾರಣೆ ನಡೆಸುತ್ತದೆ ಎಂದು ಡಿಸಿಪಿ ತಿಳಿಸಿದ್ದಾರೆ ಎಂದಿದೆ.
ಸೆಪ್ಟೆಂಬರ್ 26, 2019ರ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ “ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಪ್ಪದ ದಪ್ಪ ಪದರಗಳ ಕೆಳಗೆ ಬಚ್ಚಿಟ್ಟಿದ್ದ 26 ಪಿಸ್ತೂಲ್‌ಗಳನ್ನು ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರು ಶಸ್ತ್ರಾಸ್ತ್ರ ವ್ಯಾಪಾರಿಗಳನ್ನು ಪೂರ್ವ ದೆಹಲಿಯ ಗಾಜಿಪುರ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇಬ್ಬರು ಬಂಧಿತ ವ್ಯಕ್ತಿಗಳಾದ ಜಿತೇಂದರ್ ಮತ್ತು ಅವರ ಸೋದರ ಮಾವ ರಾಜ್ ಬಹದ್ದೂರ್ ಅವರು ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿ ದೆಹಲಿ-ಎನ್‌ಸಿಆರ್‌ನಲ್ಲಿ ಅಪರಾಧಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಸೆಲ್) ಪ್ರಮೋದ್ ಸಿಂಗ್ ಕುಶ್ವಾಹ್ ಹೇಳಿದ್ದಾರೆ. “ಅವರು .32 ಬೋರ್ ಪಿಸ್ತೂಲ್‌ಗಳನ್ನು R8,000-12,000 ಕ್ಕೆ ಖರೀದಿಸುತ್ತಾರೆ ಮತ್ತು ಅವುಗಳನ್ನು ದೆಹಲಿ-NCR ನಲ್ಲಿ R25,000-30,000 ಗೆ ಮಾರಾಟ ಮಾಡುತ್ತಾರೆ” ಎಂದು DCP ಹೇಳಿದರು. ಜಿತೇಂದರ್ ಈ ಹಿಂದೆ ಮಧ್ಯಪ್ರದೇಶದಲ್ಲಿ ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಡಿಸಿಪಿ ಕುಶ್ವಾಹ್ ಹೇಳಿದ್ದಾರೆ, ಆದರೆ ಇಲ್ಲಿ ಹೆಚ್ಚಿನ ಲಾಭಾಂಶದ ಕಾರಣ ದೆಹಲಿಯಲ್ಲಿರುವ ಅಪರಾಧಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ನಿರ್ಧರಿಸಿದರು ಎಂದಿದೆ.
ಕೋಮು ಹೇಳಿಕೆಗಳೊಂದಿಗೆ ಪಿಸ್ತೂಲ್ ವಶಪಡಿಸಿದ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಮಾರ್ಚ್ 4, 2020ರಂದು ಪಿಐಬಿ ಮಾಡಿರುವ ಟ್ವೀಟ್ ಅನ್ನೂ ನಾವು ಗಮನಿಸಿದ್ದೇವೆ.
ಮಾಧ್ಯಮ ವರದಿಗಳಲ್ಲಿ ಪಿಸ್ತೂಲ್ ಸಾಗಿಸುತ್ತಿದ್ದ ಬಂಧಿತ ಆರೋಪಿಗಳು ಜಿತೇಂದರ್ ಮತ್ತು ರಾಜ್ ಬಹದ್ದೂರ್ ಎಂದು ಕಂಡುಬಂದಿದೆ. ಇವರು ಮುಸ್ಲಿಂ ಸಮುದಾಯಕ್ಕೆ ಸೇರಿದವರದಲ್ಲ ಎಂದು ಗುರುತಿಸಿದ್ದೇವೆ.
Conclusion
ಈ ಸತ್ಯಶೋಧನೆಯ ಅನ್ವಯ ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬ ಹೇಳಿಕೆ ತಪ್ಪಾಗಿದೆ. ಬಂಧಿತರು ಇಸ್ಲಾಂ ಧರ್ಮೀಯರಲ್ಲ ಎಂದು ಕಂಡುಬಂದಿದೆ.
Result: False
Our Sources
YouTube Video By News Nation, Dated: September 27, 2019
Report By Dailypioneer, Dated: September 28, 2019
Report By Hindustantimes, Dated: September 26, 2019
X Post By PIB, Dated March 04, 2020
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.