Authors
ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆ, ಕೇರಳದಲ್ಲಿ ಹಿಂದೂ ಯುವತಿಗೆ ಕಿರುಕುಳ, ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬ ಕೋಮು ಆಯಾಮದ ಹೇಳಿಕೆಗಳು ಈ ವಾರವೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದಾಗ ಹೇಳಿಕೆಗಳು ಸುಳ್ಳು ಎಂದು ಕಂಡುಬಂದಿದೆ. ಇದರೊಂದಿಗೆ ವಿವಾದಿತ ಸಂಭಾಲ್ ಮಸೀದಿ ಸರ್ವೆಗೆ ಸಂಬಂಧಿಸಿದಂತೆ, ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಶಿವಲಿಂಗ, ಸುದರ್ಶನ ಚಕ್ರ ಪತ್ತೆಯಾಗಿದೆ , ತೆಂಗಿನ ನೀರು ಮತ್ತು ನಿಂಬೆ ಹಣ್ಣಿನ ರಸದಿಂದ ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ ಎಂಬ ಹೇಳಿಕೆಗಳೂ ಇದ್ದವು. ಇವುಗಳ ಬಗ್ಗೆಯೂ ನ್ಯೂಸ್ಚೆಕರ್ ಪರಿಶೀಲನೆ ನಡೆಸಿದಾಗ ಸುಳ್ಳು ಹೇಳಿಕೆಗಳು ಎಂದು ಕಂಡುಬಂದಿವೆ.
ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆಯಾಗಿದೆ ಎಂದು ಹತ್ರಾಸ್ ವೀಡಿಯೋ ಹಂಚಿಕೆ!
ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆಯಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ವೈರಲ್ ವೀಡಿಯೋ ಬಾಂಗ್ಲಾದೇಶದದ್ದಲ್ಲ, ಜುಲೈ ತಿಂಗಳಲ್ಲಿ ಹತ್ರಾಸ್ನಲ್ಲಿ ನಡೆದ ಕಾಲ್ತುಳಿತದಿಂದ ಸುಮಾರು 122 ಜನರು ಸಾವನ್ನಪ್ಪಿದ ಘಟನೆಯದ್ದಾಗಿದೆ ಎಂದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಕೇರಳದಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಮ್ ವ್ಯಕ್ತಿಯನ್ನು ಹಿಂದೂ ಯುವತಿಯರ ಗುಂಪು ಥಳಿಸಿದೆಯೇ?
ಕೇರಳದಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಮ್ ವ್ಯಕ್ತಿಯನ್ನು ಹಿಂದೂ ಯುವತಿಯರ ಗುಂಪೇ ಥಳಿಸಿದೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಮಹಿಳೆಯರು ವ್ಯಕ್ತಿಗೆ ಥಳಿಸಿದ ಪ್ರಕರಣ
ಇರಿಙಾಲಕುಡದ ಕ್ರೈಸ್ತ ಸಮುದಾಯದ ಎಂಪರರ್ ಎಮ್ಯಾನುಯೆಲ್ ಚರ್ಚ್ ನಲ್ಲಿನ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ ಹೊರತು ಹಿಂದೂ-ಮುಸ್ಲಿಂ ಕೋಮುಗಳ ಕುರಿತಾದ್ದಲ್ಲ ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬುದು ನಿಜವೇ?
ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಪಿಸ್ತೂಲ್ ಸಾಗಿಸುತ್ತಿದ್ದ ಬಂಧಿತ ಆರೋಪಿಗಳು ಜಿತೇಂದರ್ ಮತ್ತು ರಾಜ್ ಬಹದ್ದೂರ್ಸ ಅವರಾಗಿದ್ದು ಮುಸ್ಲಿಂ ಸಮುದಾಯಕ್ಕೆ ಸೇರಿದವರದಲ್ಲ ಎಂದು ಗುರುತಿಸಿದ್ದೇವೆ. ಈ ಕುರಿತ ವರದಿ ಇಲ್ಲಿದೆ
ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಶಿವಲಿಂಗ, ಸುದರ್ಶನ ಚಕ್ರ ಪತ್ತೆಯಾಗಿದೆಯೇ?
ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಶಿವಲಿಂಗ, ಸುದರ್ಶನ ಚಕ್ರ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ ಪತ್ತೆಯಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಗಳು ಸುಳ್ಳು. ಕರ್ನಾಟಕದಲ್ಲಿ ರಾಯಚೂರಿನಲ್ಲಿ ದೊರಕಿದ ಪ್ರಾಚೀನ ಪ್ರತಿಮೆಗಳ ಫೊಟೋಗಳನ್ನು ಈಗ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ತೆಂಗಿನ ನೀರು ಮತ್ತು ನಿಂಬೆ ಹಣ್ಣಿನ ರಸದಿಂದ ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ ಎನ್ನುವುದು ನಿಜವೇ?
ತೆಂಗಿನ ನೀರು ಮತ್ತು ನಿಂಬೆ ಹಣ್ಣಿನ ರಸದಿಂದ ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ತೆಂಗಿನ ನೀರು ಮತ್ತು ನಿಂಬೆ ರಸವು ಮೂತ್ರಪಿಂಡದ ಕಲ್ಲು ತಡೆಗಟ್ಟುವಿಕೆಗೆ ಸಂಭಾವ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಅದನ್ನು ಕುಡಿಯುವುದು ಚಿಕಿತ್ಸೆಯಲ್ಲ. ಈ ಸಂಯೋಜನೆಯು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ ಎಂಬ ಹೇಳಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.