Authors
Claim
ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ
Fact
ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎನ್ನುವುದು ನಿಜವಲ್ಲ, ಬೋಗ್ರಾ ಸದರ್‌ನ ಕ್ಷಿದ್ರಧಾಮ ಮಧ್ಯಪಾರ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ
ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬಾಂಗ್ಲಾದೇಶ :- ಬೋಗ್ರಾ ಜಿಲ್ಲೆಯ ಉಪಗ್ರಾಮಾ ಯೂನಿಯನ್ ನಲ್ಲಿ ಜಿಹಾದಿಗಳು ಖಿದ್ರಾ ಗ್ರಾಮ ಗೆ ಬೆಂಕಿ ಹಚ್ಚಿದ್ದಾರೆ, ಜಿಹಾದಿ ಕ್ರೈಂ” ಎಂದಿದೆ.
ಈ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಈ ವೀಡಿಯೋದಲ್ಲಿ ತೋರಿಸಿದ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ಕಂಡುಬಂದಿದೆ.
Also Read: ಉತ್ತರಪ್ರದೇಶದ ಮಹಿಳೆ 24 ಮಕ್ಕಳನ್ನು ಹೊಂದಿದ್ದಾಳೆ ಎಂಬ ವೀಡಿಯೋ ಹಿಂದಿನ ಸತ್ಯವೇನು?
Fact Check/Verification
ಸತ್ಯಶೋಧನೆಗಾಗಿ ನಾವು ಕೀಫ್ರೇಂಗಳನ್ನು ತೆಗೆದು ಅವುಗಳನ್ನು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಡಿಸೆಂಬರ್ 7, 2024ರಂದು ಎಂಎಚ್ಆರ್ ಟೆಕ್ ಬಾಂಗ್ಲಾ ಹೆಸರಿನ ಯೂಟ್ಯೂಬ್ ಚಾನೆಲ್ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದಕ್ಕೆ “ಬೋಗ್ರಾ ಸದರ್‌ನ ಉಪಗ್ರಾಮ ಒಕ್ಕೂಟದ ಕ್ಷಿದ್ರಧಾಮ ಗ್ರಾಮದಲ್ಲಿ ಬೆಂಕಿ ಅವಘಡದಿಂದ 5 ಕುಟುಂಬಗಳು ಸಂಪೂರ್ಣ ನಿರ್ಗತಿಕವಾಗಿವೆ.” (ಬಾಂಗ್ಲಾ ಭಾಷೆಯಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆ ನೀಡಲಾಗಿದೆ.
ಇನ್ನಷ್ಟು ತನಿಖೆ ನಡೆಸಿದಾಗ ಫೇಸ್‌ಬುಕ್ ನಲ್ಲೂ ಡಿಸೆಂಬರ್ 7, 2024ರಂದು ಅರ್ಮಾನ್ ಹುಸೇನ್ ಡಾಲರ್ (আরমান হোসেন ডলার) ಹೆಸರಿನ ಖಾತೆಯಿಂದ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಪೋಸ್ಟ್ ಮಾಡಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಇದಕ್ಕೆ ನೀಡಿರುವ ವಿವರಣೆಯಲ್ಲೂ “ಡಿಸೆಂಬರ್ 7, ಶನಿವಾರ, ಬೋಗ್ರಾ ಸದರ್ ಮೇಲ್ದಂಡೆಯ ಉಪಗ್ರಾಮ ಒಕ್ಕೂಟದ ಕ್ಷಿದ್ರಾಧಾಮ ಗ್ರಾಮದ ಮಧ್ಯಪಾರದಲ್ಲಿ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು 5 ಕುಟುಂಬಗಳು ಕಂಗಾಲಾಗಿದ್ದವು.” (ಬಾಂಗ್ಲಾ ಭಾಷೆಯಿಂದ ಅನುವಾದಿಸಲಾಗಿದೆ) ಎಂದು ಬರೆಯಲಾಗಿದೆ.
ಡಿಸೆಂಬರ್ 7, 2024ರ ಕರೋಟಾ.ಕಾಮ್.ಬಿಡಿಯ ವರದಿ ಪ್ರಕಾರ, “ಬೋಗ್ರಾ ಸದರ್‌ನ ಕ್ಷಿದ್ರಧಾಮ ಮಧ್ಯಪಾರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ 7 ಕುಟುಂಬಗಳ ಎಲ್ಲವೂ ಸುಟ್ಟು ಭಸ್ಮವಾಗಿವೆ. ಬೋಗ್ರಾ ಅಗ್ನಿಶಾಮಕ ಸೇವಾ ಕಚೇರಿ ಮೂಲಗಳ ಪ್ರಕಾರ, ಇಂದು ಶನಿವಾರ (ಡಿಸೆಂಬರ್ 7) ಮಧ್ಯಾಹ್ನ 5 ಗಂಟೆ ಸುಮಾರಿಗೆ ಆ ಪ್ರದೇಶದ ಅಬು ಬಕ್ಕರ್ ಮತ್ತು ಫಜಲುರ್ ರೆಹಮಾನ್ ಅವರ ಮನೆಯ ಮೇಲೆ ಹಾದು ಹೋಗಿರುವ ಗ್ರಾಮೀಣ ವಿದ್ಯುತ್ ಕಂಬದಲ್ಲಿ ವಿದ್ಯುತ್ ಕಿಡಿ ಕಾಣಿಸಿಕೊಂಡಿದೆ. ಕಿಡಿಯಿಂದ ಬೆಂಕಿ ಹೊತ್ತಿಕೊಂಡಿತು ಮತ್ತು ಮನೆಗೆ ಬೆಂಕಿ ಹೊತ್ತಿಕೊಂಡಿತು, ಇದು ಇಬ್ಬರ ಮನೆಗೆ ಹೊಂದಿಕೊಂಡಿರುವ ಹಲವಾರು ಮನೆಗಳನ್ನು ಸುಟ್ಟುಹಾಕಿತು. ಬೆಂಕಿಯಲ್ಲಿ ಆ ಮನೆಗಳ ಪೀಠೋಪಕರಣ ಸೇರಿದಂತೆ ಹಲವು ವಸ್ತುಗಳು ಸುಟ್ಟು ಭಸ್ಮವಾಗಿವೆ. ಇದರಿಂದ 8ರಿಂದ 10 ಲಕ್ಷ ರೂಪಾಯಿ ನಷ್ಟವಾಗಿದೆ.” ಎಂದಿದೆ. (ಬಾಂಗ್ಲಾ ಭಾಷೆಯಿಂದ ಅನುವಾದಿಸಲಾಗಿದೆ)
ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅವಘಡ ಸಂಭವಿಸಿದೆ ಎಂದು ಗೊತ್ತಾಗಿದೆ.
Also Read: ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?
Result: False
Our Sources
Facebook post By Arman Husain Dollar, Dated: December 7, 2024
YouTube Video By MHR Tech Bangla, December 7, 2024
Report By karatoa.com.bd, Dated: December 7, 2024
(Inputs from Sayeed Joy Newschecker Bangladesh)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.