Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಹನುಮಾನ್ ಮೂರ್ತಿಗೆ ಆರತಿ ಮಾಡುತ್ತಿರುವ ಅಸಾದುದ್ದೀನ್ ಓವೈಸಿ
ಹನುಮಾನ್ ಮೂರ್ತಿಗೆ ಅಸಾದುದ್ದೀನ್ ಓವೈಸಿ ಆರತಿ ಮಾಡುತ್ತಿರುವ ವೀಡಿಯೋ ಎಐ ಮೂಲಕ ಮಾಡಿದ್ದಾಗಿದೆ
ಅಖಿಲ ಭಾರತ ಮಜ್ಲಿಸ್-ಎ-ಮುತ್ತಹಿದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಹನುಮಾನ್ ಮೂರ್ತಿಗೆ ಆರತಿ ಮಾಡುತ್ತಿದ್ದಾರೆ. ಆದರೆ ಈ ವೀಡಿಯೋ ನಿಜವಾದ್ದಲ್ಲ, ಎಐ (ಕೃತಕ ಬುದ್ಧಿಮತ್ತೆ) ಮೂಲಕ ಸೃಷ್ಟಿಸಲಾಗಿದೆ ಎಂದು ನ್ಯೂಸ್ಚೆಕರ್ ತನಿಖೆಯಲ್ಲಿ ತಿಳಿದುಬಂದಿದೆ.
ಈ ವಿಡಿಯೋವನ್ನು ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಿ. ಇದೇ ರೀತಿಯ ಇತರ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಅಸಾದುದ್ದೀನ್ ಓವೈಸಿ ಆರತಿ ಪ್ರದರ್ಶನ ನೀಡುತ್ತಿರುವ ವೀಡಿಯೋವನ್ನು ಎಚ್ಚರಿಕೆಯಿಂದ ನೋಡಿದಾಗ ಅನೇಕ ಅಸಹಜತೆಗಳು ಕಂಡುಬಂದಿವೆ. ಈ ಕಾರಣಕ್ಕೆ ನೈಜವಲ್ಲ ಮತ್ತು ಎಐ ಮೂಲಕ ಮಾಡಲ್ಪಟ್ಟಿದೆ ಎಂದು ಸೂಚಿಸುತ್ತದೆ. ಮೊದಲನೆಯದಾಗಿ, ಕ್ಯಾಮೆರಾ ಆಂಗಲ್ ಒಂದೇ ಸ್ಥಳದಲ್ಲಿದ್ದರೂ ಆರತಿ ಮಾಡುತ್ತಿರುವ ಸ್ಥಳ ಬದಲಾಗುತ್ತದೆ. ಉದಾಹರಣೆಗೆ ಓವೈಸಿ ಎಡಭಾಗದಿಂದ ಆರತಿ ಮಾಡುವುದನ್ನು ತೋರಿಸುತ್ತದೆ. ಈ ದೃಶ್ಯ ಝೂಮ್ ಔಟ್ ಆಗಿ ಕ್ಯಾಮೆರಾ ಆಂಗಲ್ ಮೇಲ್ಭಾಗಕ್ಕೆ ಚಲಿಸುತ್ತಿದ್ದಂತೆ ಓವೈಸಿ ಎದುರಿಂದ-ಹನುಮಾನ್ ಮೂರ್ತಿ ಹಿಂದಿನಿಂದ ವೀಡಿಯೋ ತೆಗೆದಂತೆ ಕಾಣುತ್ತದೆ. ಓವೈಸಿ ಅವರ ಕೈಗಳ ಚಲನೆಯನ್ನು ಹೊರತುಪಡಿಸಿ, ಅವರ ಮುಖಭಾವದಲ್ಲಿ ಯಾವುದೇ ಬದಲಾವಣೆ ಇಲ್ಲ. ಪುರೋಹಿತರು ಮತ್ತು ಇತರರ ವಿಷಯದಲ್ಲೂ ಇದೇ ರೀತಿ ಇದೆ. ಇದಲ್ಲದೆ, ಇನ್ನು ‘ಹನುಮಾನ್ ಮಂದಿರ’ ಬದಲಿಗೆ ‘ಹನುಮಾನ್ ಮೀದಾರ’ ಎಂದು ಬರೆಯಲಾಗಿದೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ ವೀಡಿಯೋ ಕೆಳಭಾಗದಲ್ಲಿ ಲೋಗೋ ಇದ್ದು ಇದು ಗೂಗಲ್ ನ ಎಐ ಮಾದರಿ ‘ಜೆಮಿನಿ’.ಹೋಲುತ್ತದೆ. ಜೆಮಿನಿ ಎಐ ಬಳಸಿ ಫೋಟೋ ಅಥವಾ ವೀಡಿಯೋವನ್ನು ರಚಿಸಿದರೆ ಮಾತ್ರ ಈ ಲೋಗೋ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಜೆಮಿನಿ ಚಾಟ್ ಬಾಟ್ ಮೂಲಕ ಈ ವೀಡಿಯೋವನ್ನು ಹುಡುಕಿದಾಗ ವೀಡಿಯೋವನ್ನು ಗೂಗಲ್ ಎಐ ಮಾದರಿಯಿಂದ ರಚಿಸಲಾಗಿದೆ ಎಂದು ದೃಢಪಡಿಸಿದೆ.

ಇದಲ್ಲದೆ, ಎಐ ಪತ್ತೆ ಶೋಧಕ ವಾಸ್ ಇಟ್ ಎಐ ಸಹ ಇದನ್ನು ಎಐ ಮೂಲಕ ಮಾಡಿದ್ದು ಎಂದು ಹೇಳಿದೆ. ಹೈವ್ ಮಾಡರೇಷನ್ ಎಐ ಸಾಧ್ಯತೆ 99.9%ರಷ್ಟು ಇದೆ ಎಂದಿದೆ.

ಅಸಾದುದ್ದೀನ್ ಓವೈಸಿ ಅವರು ದೇವಾಲಯಕ್ಕೆ ಭೇಟಿ ನೀಡುವುದು ಅಥವಾ ಆರತಿ ಮಾಡುವುದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಸಹ ನಾವು ಹುಡುಕಿದ್ದೇವೆ, ಆದರೆ ಇದನ್ನು ದೃಢೀಕರಿಸುವ ಯಾವುದೇ ಸುದ್ದಿ ನಮಗೆ ಸಿಗಲಿಲ್ಲ. ಒಂದು ವೇಳೆ ಓವೈಸಿ ದೇಗುಲ ಭೇಟಿ ಮಾಡಿ ಆರತಿ ಮಾಡಿದ್ದಾದರೆ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿತ್ತು.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹನುಮಾನ್ ಆರತಿ ಮಾಡುವ ವೈರಲ್ ವಿಡಿಯೋ ನಿಜವಲ್ಲ, ಇದು ಎಐನಿಂದ ಮಾಡಿದ್ದು ಎನ್ನುವುದು ಸ್ಪಷ್ಟವಾಗಿದೆ
Our Sources
Gemini Chatbot
Was it Ai
Hive Moderation Tool
Self Analysis
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Mohammed Zakariya
December 11, 2025
Ishwarachandra B G
November 24, 2025
Vasudha Beri
November 10, 2025