ಗುರುವಾರ, ಡಿಸೆಂಬರ್ 19, 2024
ಗುರುವಾರ, ಡಿಸೆಂಬರ್ 19, 2024

ನಮ್ಮ ಬಗ್ಗೆ

ಸಮಾಜದಲ್ಲಿ ನಕಲಿ ಸುದ್ದಿ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಭೇದಿಸಲು ನ್ಯೂಸ್‌ಚೆಕರ್‌ನಲ್ಲಿ ಗುರಿಯನ್ನು ಹೊಂದಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿರುವ ಸಾರ್ವಜನಿಕ ರಂಗದ ವ್ಯಕ್ತಿಗಳು, ಹೆಸರಾಂತ ವ್ಯಕ್ತಿಗಳು, ಮಾಧ್ಯಮಗಳು ಮತ್ತು ಬಳಕೆದಾರರ ಹೇಳಿಕೆಗಳನ್ನು ಪರಿಶೀಲಿಸುವ ಮೂಲಕ ನಾವು ಸತ್ಯವನ್ನು ಹೊರತರುತ್ತೇವೆ. ಗುಪ್ತ ಅಜೆಂಡಾಗಳು, ಪ್ರೇರಿತ ತಪ್ಪು ಮಾಹಿತಿ ಮತ್ತು ಸುಳ್ಳು ಪ್ರಚಾರಗಳನ್ನು ಬಹಿರಂಗಪಡಿಸುವುದರೊಂದಿಗೆ ನಾವು ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಸತ್ಯವನ್ನು ತಿಳಿಸಲು ಮತ್ತು ಶಿಕ್ಷಣವನ್ನು ನೀಡಲು ಬಯಸುತ್ತೇವೆ.

ನಮ್ಮ ಉದ್ದೇಶ ನಿಷ್ಪಕ್ಷಪಾತವಾಗಿದ್ದು ನಾವು ಸತ್ಯಕ್ಕೆ ಮಾತ್ರ ನಿಷ್ಠರಾಗಿದ್ದು, ಜನರಿಗೆ ಅಥವಾ ಪಕ್ಷಗಳಿಗೆ ನಿಷ್ಠರಾಗಿಲ್ಲ. ನಮ್ಮ ಸತ್ಯ ಶೋಧನೆಯ ಪರಿಸರ ವ್ಯವಸ್ಥೆ ಬೆಳೆಯುತ್ತಲೇ ಇದ್ದರೂ, ಲೆಕ್ಕವಿಲ್ಲದಷ್ಟು ಸಮರ್ಥನೆಗಳನ್ನು ಪರಿಶೀಲಿಸಲು ಸಾಧ್ಯವಾಗದೇ ಹೋಗುತ್ತಿದೆ. ಇಂತಹ ಅಂತರವನ್ನು ತುಂಬಲು ನಾವು ಅಸ್ತಿತ್ವದಲ್ಲಿದ್ದೇವೆ.

ನಾವು ಒಂದು ಬೇಡಿಕೆಯ ಸೇವೆಯಾಗಿ ಸತ್ಯ ಶೋಧನೆಯ ಪ್ರವರ್ತಕರಾಗಲು ಮತ್ತು ಆ ಪರಿಕಲ್ಪನೆ ಮೇಲೆ ಕೆಲಸ ಮಾಡಲು ಆರಂಭಿಸಿದ್ದೇವೆ. ನಾವು ಅಳವಡಿಸಿದ ಯಾವುದೇ ಭಾಷೆಯಲ್ಲಿ ಯಾರಾದರೂ ನಮಗೆ ಕ್ಲೈಮ್‌ಗಳನ್ನು ಕಳುಹಿಸಬಹುದು. ಅವರಿಗಾಗಿ ನಾವು ಸತ್ಯಾಸತ್ಯತೆಯನ್ನ ಪರಿಶೀಲಿಸುತ್ತೇವೆ. ಇದನ್ನು ನಾವು ವಾಟ್ಸ್ಯಾಪ್‌ ನಂತಹ ಮೆಸೇಜಿಂಗ್‌ ಅಪ್ಲಿಕೇಶನ್‌ ಗಳ ಮೂಲಕ ಮಾಡುತ್ತೇವೆ. ಇದು ಇನ್ನೂ ಹೆಚ್ಚು ಕೆಲಸವನ್ನು ಮಾಡಲು ಮತ್ತು ಸತ್ಯದ ಶೋಧನೆ ಎನ್ನುವುದನ್ನು ನಿಜವಾಗಿಯೂ ನಾವು ಮುಖ್ಯ ಭೂಮಿಗೆ ಕೊಂಡೊಯ್ಯುವಂತೆ ಮಾಡುತ್ತದೆ.

ಸತ್ಯ ಶೋಧನೆಗೆ ಕ್ಲೈಮ್‌ಗಳನ್ನು ನಮಗೆ ಕಳುಹಿಸಲು ನಾವು ಓದುಗರನ್ನು ಸ್ವಾಗತಿಸುತ್ತೇವೆ.ಅಥವಾ ಪ್ರಕಟಿಸಿದ ಸತ್ಯ ಶೋಧನೆಯಲ್ಲಿ ಲೋಪಗಳು ಕಂಡುಬಂದಿದ್ದರೆ, ದಯವಿಟ್ಟು checkthis@newschecker.in ಅಥವಾ ವಾಟ್ಸ್ಯಾಪ್‌ ಸಂಖ್ಯೆ 9999499044 ಸಂಪರ್ಕಿಸಿ.

ನ್ಯೂಸ್‌ಚೆಕರ್‌ ಎಂಬುದು ದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಎನ್‌ಸಿಮೀಡಿಯಾ ನೆಟ್‌ವರ್ಕ್ಸ್ ಪ್ರೈವೆಟ್‌ ಲಿಮಿಟೆಡ್‌ನ ಸ್ವತಂತ್ರ ಸತ್ಯ ಶೋಧನೆಯ ಉಪಕ್ರಮವಾಗಿದೆ. ಎನ್‌ಸಿ ಮೀಡಿಯಾ ನೆಟ್‌ವರ್ಕ್ ಭಾರತ ಸರ್ಕಾರದ ಕಾರ್ಪೊರೆಟ್‌ ವ್ಯವಹಾರಗಳ ಸಚಿವಾಲಯದಲ್ಲಿ ಖಾಸಗಿ ಕಂಪೆನಿಯಾಗಿ ನೋಂದಾಯಿಸಲ್ಪಟ್ಟಿದ್ದು ಕಾರ್ಪೊರೆಟ್‌ ಗುರುತು (CIN) U92490DL2019PTC353700 ಹೊಂದಿದೆ. ನಮ್ಮ ಇತ್ತೀಚಿನ ಹಣಕಾಸು ರಿಟರ್ನ್ಸ್‌ ಸೇರಿದಂತೆ ಎಲ್ಲ ವಿವರಗಳು ಎಮ್‌ಸಿಎ ವೆಬ್‌ಸೈಟ್‌ನಲ್ಲಿ website ಲಭ್ಯವಿದೆ.

ಕೆಲವು ಸಾಮಾಜಿಕ ಮಾಧ್ಯಮಗಳು ಮತ್ತು ಮೆಸೇಜಿಂಗ್‌ ಫ್ಲಾಟ್‌ಫಾರ್ಮ್‌ಗಳಿಗೆ ಮೂರನೇ ಸತ್ಯ ಶೋಧಕರಾಗಿಯೂ ನಾವು ಕೆಲಸ ಮಾಡುತ್ತೇವೆ. ನಾವು ಸೇವೆಗಳನ್ನು ನೀಡಿದ್ದಕ್ಕೆ ಶುಲ್ಕವನ್ನು ಸ್ವೀಕರಿಸುತ್ತೇವೆ ಮತ್ತು ಯಾವುದೇ ರೀತಿಯ ಹಣವನ್ನು ಸ್ವೀಕರಿಸುವುದಿಲ್ಲ. ಅಥವಾ ರಾಜಕಾರಣಿಗಳು/ರಾಜಕೀಯ ಪಕ್ಷಗಳು ಅಥವಾ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದಿಲ್ಲ. ಕೋವಿಡ್‌-19 ಸತ್ಯ ಶೋಧನೆಯ ಕೆಲಸವನ್ನು ಅಳೆಯಲು ನಾವು ಐಎಫ್‌ಸಿಎನ್ ನಿಂದ ಸಹ ನಾವು ಅನುದಾನವನ್ನು ಸ್ವೀಕರಿಸಿದ್ದೇವೆ. 2021-22ನೇ ವರ್ಷದಲ್ಲಿ ನಮ್ಮ ಆದಾಯದ ಶೇ.5ಕ್ಕಿಂತ ಹೆಚ್ಚು ಕೊಡುಗೆ ನೀಡಿದ ಸಂಸ್ಥೆಗಳಲ್ಲಿ ಇವುಗಳೂ ಸೇರಿವೆ:

  • ಮೆಟಾ ಇಂಕ್‌
  • ಮೊಹಲ್ಲಾ ಟೆಕ್‌ ಪ್ರೈವೆಟ್‌ ಲಿ.
  • ಬೈಟ್‌ಡಾನ್ಸ್ ಪ್ರೈವೆಟ್‌ ಲಿ.