ಶುಕ್ರವಾರ, ಏಪ್ರಿಲ್ 26, 2024
ಶುಕ್ರವಾರ, ಏಪ್ರಿಲ್ 26, 2024

ತತ್ವ ಸಂಹಿತೆ

  • ಪಕ್ಷಾತೀತ ಮತ್ತು ನ್ಯಾಯಸಮ್ಮತ ಬದ್ಧತೆ

ಸಂಶಯಾಸ್ಪದ ಪೋಸ್ಟ್‌ಗಳು, ತಪ್ಪು ಮಾಹಿತಿ ಅಥವಾ ಸುಳ್ಳು ಕ್ಲೈಮುಗಳ ಬಗ್ಗೆ ನಾವು ನಿರಂತರವಾಗಿ ಸಾಮಾಜಿಕ ಜಾಲತಾಣಗಳನ್ನು ಹಿಂಬಾಲಿಸುತ್ತೇವೆ. ನಮ್ಮ ಆಯ್ಕೆ ಪ್ರಕ್ರಿಯೆಯು ವಿವಿಧ ಅಂಶಗಳನ್ನು ಆಧರಿಸಿದೆ. ಇದರಲ್ಲಿ ವರದಿಯೊಳಗೆ ಹಕ್ಕು ಸಾಧಿಸಿದ ಸಾಕ್ಷ್ಯದ ಪ್ರಮಾಣ ಅಥವಾ ಸಾರ್ವಜನಿಕ ಚರ್ಚೆಯನ್ನು ರೂಪಿಸಲು ಕಾರಣವಾದದ್ದು, ಲೇಖನದ ಸಂಭಾವ್ಯ ಪ್ರಸ್ತುತತೆ, ಮೂಲ ಗಾತ್ರ ಮತ್ತು ಅದರ ಅಸ್ತಿತ್ವದಲ್ಲಿರುವ ವ್ಯಾಪ್ತಿಗೆ ಸಂಬಂಧಿಸಿದಂತೆ ಇರಲಿದೆ.

ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಮೂಲಗಳು ರಾಜಕಾರಣಿಗಳು, ಸೆಲೆಬ್ರೆಟಿಗಳು, ಖ್ಯಾತ ವ್ಯಕ್ತಿಗಳು, ಪ್ರಭಾವಿಗಳು, ಸುಳ್ಳು ಪ್ರಚಾರ, ಉತ್ತೇಜನಕಾರಿ ಸಂದೇಶಗಳು ಅಥವಾ ಹ್ಯಾಶ್‌ಟ್ಯಾಗ್‌ಗಳಿಗೆ ಸಂಬಂಧಿಸಿದ ಕ್ಲೈಮ್‌ಗಳಾಗಿರುತ್ತವೆ

ಎನ್‌ಸಿ ಮೀಡಿಯಾ ನೆಟ್‌ವರ್ಕ್ಸ್‌ನ ಎಲ್ಲ ಉದ್ಯೋಗಿಗಳು ಬಲವಾದ ಪಕ್ಷೇತರ ಷರತ್ತನ್ನು ಹೊಂದಿರುವ ನೀತಿ ಸಂಹಿತೆಗೆ ಸಹಿ ಮಾಡಿರುತ್ತಾರೆ. ನಾವು ಯಾವುದೇ ವಿಚಾರಗಳಲ್ಲಿ ಪಕ್ಷ ವಹಿಸುವುದು, ವಕಾಲತ್ತು ವಹಿಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.

  • ಪಾರದರ್ಶಕತೆ

ನ್ಯೂಸ್‌ ಚೆಕರ್‌ ಸುದ್ದಿ ಲೇಖನಗಳನ್ನು ವಿವರವಾಗಿ ವಿವರಿಸುವುದರೊಂದಿಗೆ ಕ್ಲೇಮ್‌ಗಳನ್ನು ಹೇಗೆ ಖಚಿತಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಮತ್ತು ಸತ್ಯ ಬಯಲಿಗೆಳೆದದ್ದನ್ನು ಹೇಳುತ್ತದೆ. ಶೋಧನೆಗಳನ್ನು ಸ್ವತಃ ನಮ್ಮ ಓದುಗರು ಪರಿಶೀಲಿಸುವಂತಾಗಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ನ್ಯೂಸ್‌ಚೆಕರ್ ಎಲ್ಲ ಮೂಲಗಳನ್ನು ವಿವರವಾಗಿ ಒದಗಿಸುತ್ತದೆ. ವೈಯಕ್ತಿಕ ಭದ್ರತೆಯ ಸಂಗತಿಗಳನ್ನು ಹೊರತುಪಡಿಸಿ ಓದುಗರು ಇಂತಹ ನಮ್ಮ ಕೆಲಸವನ್ನು ಪುನರಾವರ್ತಿಸಬಹುದು. ಅಂತಹ ಸಂದರ್ಭಗಳಲ್ಲಿ ನ್ಯೂಸ್‌ಚೆಕರ್‌ ಸಾಧ್ಯವಾದಷ್ಟು ಹೆಚ್ಚಿನ ವಿವರಗಳನ್ನು ಒದಗಿಸುತ್ತದೆ ಮತ್ತು ಅನೇಕ ಮೂಲಗಳಿಂದ ವಿವರಗಳನ್ನು ತರಲು ಯತ್ನಿಸುತ್ತದೆ. ಇದರಿಂದ ಓದುಗರು ಪ್ರತಿ ಶೋಧನೆಯನ್ನೂ ಪರಿಶೀಲಿಸಬಹುದು.

  • ಸಂಸ್ಥೆ ಮತ್ತು ಹೂಡಿಕೆಯಲ್ಲಿ ಪಾರದರ್ಶಕತೆ

ತನ್ನದೇ ಆದ ವಿಶೇಷ ತಂಡವನ್ನು ಹೊಂದಿರುವ ನ್ಯೂಸ್‌ಚೆಕರ್‌, ಎನ್‌ಸಿ ಮೀಡಿಯಾ ನೆಟ್‌ವರ್ಕ್‌ ಅಡಿಯಲ್ಲಿರುವ ಒಂದು ಸ್ವತಂತ್ರ್ಯ ಸತ್ಯ ಶೋಧನಾ ಉಪಕ್ರಮವಾಗಿದೆ. ಎನ್‌ಸಿ ಮೀಡಿಯಾ ನೆಟ್‌ವರ್ಕ್‌ ಎನ್ನುವುದು ತಂತ್ರಜ್ಞಾನ ಚಾಲಿತ ವಿಷಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದು ಸ್ವಯಂ ಹೂಡಿಕೆಯ ಸಂಸ್ಥೆಯಾಗಿದೆ. ಎನ್‌ಸಿ ಮೀಡಿಯಾ ನೆಟ್‌ವರ್ಕ್‌ ಕಕ್ಷಿದಾರರೊಂದಿಗೆ ಕಾರ್ಯನಿರ್ವಹಿಸುವಾಗ ಕಕ್ಷಿದಾರರು ಸಂಸ್ಥೆಯ ಸಂಪಾದಕೀಯ ನೀತಿ ಮತ್ತು ಕಾರ್ಯಾಚರಣೆಗಳಲ್ಲಿ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಭಾರತೀಯ ಸಾಮಾಜಿಕ ಜಾಲತಾಣಗಳಿಗಾಗಿ ನ್ಯೂಸ್‌ಚೆಕರ್‌ ಸತ್ಯ ಶೋಧನೆ ಸೇವೆಗಳನ್ನು ಒದಗಿಸುತ್ತದೆ. ಇಂತಹ ಸೇವೆಗಳಿಗೆ ಸಂಭಾವನೆಯನ್ನು ಪಡೆಯುತ್ತದೆ. ನ್ಯೂಸ್‌ ಚೆಕರ್‌ನ ಸಂಪಾದಕೀಯ ಕಾರ್ಯಾಚರಣೆಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ

  • ಸಂಸ್ಥೆ ಮತ್ತು ಹೂಡಿಕೆಯಲ್ಲಿ ಪಾರದರ್ಶಕತೆ

ತನ್ನದೇ ಆದ ವಿಶೇಷ ತಂಡವನ್ನು ಹೊಂದಿರುವ ನ್ಯೂಸ್‌ಚೆಕರ್‌, ಎನ್‌ಸಿ ಮೀಡಿಯಾ ನೆಟ್‌ವರ್ಕ್‌ ಅಡಿಯಲ್ಲಿರುವ ಒಂದು ಸ್ವತಂತ್ರ್ಯ ಸತ್ಯ ಶೋಧನಾ ಉಪಕ್ರಮವಾಗಿದೆ. ಎನ್‌ಸಿ ಮೀಡಿಯಾ ನೆಟ್‌ವರ್ಕ್‌ ಎನ್ನುವುದು ತಂತ್ರಜ್ಞಾನ ಚಾಲಿತ ವಿಷಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದು ಸ್ವಯಂ ಹೂಡಿಕೆಯ ಸಂಸ್ಥೆಯಾಗಿದೆ. ಎನ್‌ಸಿ ಮೀಡಿಯಾ ನೆಟ್‌ವರ್ಕ್‌ ಕಕ್ಷಿದಾರರೊಂದಿಗೆ ಕಾರ್ಯನಿರ್ವಹಿಸುವಾಗ ಕಕ್ಷಿದಾರರು ಸಂಸ್ಥೆಯ ಸಂಪಾದಕೀಯ ನೀತಿ ಮತ್ತು ಕಾರ್ಯಾಚರಣೆಗಳಲ್ಲಿ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಭಾರತೀಯ ಸಾಮಾಜಿಕ ಜಾಲತಾಣಗಳಿಗಾಗಿ ನ್ಯೂಸ್‌ಚೆಕರ್‌ ಸತ್ಯ ಶೋಧನೆ ಸೇವೆಗಳನ್ನು ಒದಗಿಸುತ್ತದೆ. ಇಂತಹ ಸೇವೆಗಳಿಗೆ ಸಂಭಾವನೆಯನ್ನು ಪಡೆಯುತ್ತದೆ. ನ್ಯೂಸ್‌ ಚೆಕರ್‌ನ ಸಂಪಾದಕೀಯ ಕಾರ್ಯಾಚರಣೆಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ.

  • ವಿಧಾನದ ಪಾರದರ್ಶಕತೆ

ನ್ಯೂಸ್‌ಚೆಕರ್‌ ವಿಧಾನವನ್ನು ತಿಳಿಸಲು ಬದ್ಧವಾಗಿದ್ದು ಇದನ್ನು ನಾವು ನಕಲಿ ಸುದ್ದಿ ಅಥವಾ ನಕಲಿ ಕ್ಲೈಮ್‌ಗಳನ್ನು ತೊಡೆದುಹಾಕಲು ಬಳಸುತ್ತೇವೆ. ಆಯ್ಕೆ ಮಾಡುವುದರಿಂದ ಪ್ರಕಟಿಸುವವರೆಗೆ ನಾವು ನಮ್ಮ ಓದುಗರು ಸತ್ಯ ಪರಿಶೀಲನೆಗೆ ಕ್ಲೈಮ್‌ಗಳನ್ನು ಕಳುಹಿಸಲು ಪ್ರೋತ್ಸಾಹಿಸುತ್ತೇವೆ. ಜೊತೆಗೆ ನಾವು ಸತ್ಯ ಪರೀಕ್ಷೆಯನ್ನು ಹೇಗೆ ಮಾಡುತ್ತೇವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ಎಲ್ಲ ವಿವರಗಳನ್ನು ಒದಗಿಸುತ್ತೇವೆ.

  • ಪಾರದರ್ಶಕ ತಿದ್ದುಪಡಿ ನೀತಿ

ಈ ಸಾಮಾಜಿಕ ಮಾಧ್ಯಮದ ಜಗತ್ತಿನಲ್ಲಿ ಸುದ್ದಿಗಳು ಅಥವಾ ಮಾಹಿತಿಗಳು ಬದಲಾಗುತ್ತಲೇ ಇರುತ್ತವೆ ಎಂಬ ಅಂಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಇದರ ಪರಿಣಾಮ ಸುದ್ದಿಗಳನ್ನು ನಿರಂತರವಾಗಿ ನವೀಕರಿಸಬೇಕಾಗುತ್ತದೆ. ಒಂದು ವೇಳೆ ನಮ್ಮ ಕಡೆಯಿಂದ ತಪ್ಪುಗಳಾಗಿದ್ದಲ್ಲಿ, ನಾವು ಕೂಡಲೇ ಅದನ್ನುಒಪ್ಪಿಕೊಂಡು ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಸಾಧ್ಯವಾದಷ್ಟು ವೇಗವಾಗಿ ನಮ್ಮ ಓದುಗರಿಗೆ ಸುದ್ದಿಯ ಸರಿಪಡಿಸಿದ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಮತ್ತು ಪಾರದರ್ಶಕವಾಗಿ ನಾವು ಪ್ರಕ್ರಿಯೆಯನ್ನು ಪುನರಾವರ್ತಿಸುವುದರೊಂದಿಗೆ ನಮ್ಮ ಸಂಶೋಧನೆಗಳನ್ನು ಪ್ರಸ್ತುತ ಪಡಿಸುತ್ತೇವೆ.