ಶುಕ್ರವಾರ, ಮಾರ್ಚ್ 29, 2024
ಶುಕ್ರವಾರ, ಮಾರ್ಚ್ 29, 2024

ತಿದ್ದುಪಡಿಗಳು ಮತ್ತು ದೂರುಗಳು

ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸತ್ಯ ಶೋಧನಾ ಸಂಸ್ಥೆ ನಮ್ಮದಾಗಿದೆ. ಪರಿಶೀಲಿಸದೆ ಬಿಟ್ಟರೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನ ಹೊಂದಿದ ಕ್ಲೈಮ್‌ಗಳು ಅಥವಾ ಹೇಳಿಕೆಗಳನ್ನು ನಾವು ವಿವರವಾಗಿ ಪರಿಶೀಲಿಸುತ್ತೇವೆ. ನಮ್ಮ ವೆಬ್‌ಸೈಟ್‌ನಲ್ಲಿ ನಾವು ಪ್ರಕಟಿಸುವ ಎಲ್ಲ ವರದಿಗಳು ಎರಡು ಹಂತಗಳ ಪರಿಶೀಲನೆಯ ನಂತರ ಪ್ರಕಟಗೊಳ್ಳುತ್ತವೆ. ಮೊದಲ ಹಂತವೆಂದರೆ ನಮ್ಮ ನಮ್ಮ ಸತ್ಯ ಶೋಧಕರು ತಮ್ಮ ಸುದ್ದಿಯನ್ನು ಗುಣಮಟ್ಟದ ಪರಿಶೀಲನೆಗೆ ಕಳುಹಿಸುತ್ತಾರೆ ಮತ್ತು ಅದನ್ನು ಪ್ರಕಟಿಸುವ ಮೊದಲು ಅದು ಗುಣಮಟ್ಟ ಪರೀಕ್ಷಕರ ಅನುಮೋದನೆಯನ್ನು ಪಡೆದುಕೊಳ್ಳುತ್ತದೆ.

ಪ್ರಕ್ರಿಯೆ

ಸುದ್ದಿಯಲ್ಲಿ ಹೆಚ್ಚಿನ ಸ್ಪಷ್ಟಪಡಿಸುವಿಕೆ, ತಪ್ಪುಗಳು, ಲೋಪ ಸ್ಪಷ್ಟೀಕರಣ ಅಥವಾ ಯಾವುದೇ ಬದಲಾವಣೆ ಆಗಬೇಕು ಎಂದು ನೀವು ಭಾವಿಸಿದರೆ, ದಯವಿಟ್ಟು ನಮಗೆ ತಿಳಿಸಿ. ನಮ್ಮ ಕೆಲಸವನ್ನು ಸುಧಾರಿಸಲು ಸಹಾಯ ಮಾಡುವ ಯಾವುದೇ ಸಲಹೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನಾವು ತ್ವರಿತವಾಗಿ ಕಾರ್ಯನಿರ್ವಹಿಸಲು ದಯವಿಟ್ಟು ಪ್ರತಿಕ್ರಿಯೆ, ತಿದ್ದುಪಡಿಯಾಗಬೇಕಾದ ಅಂಶಗಳು, ದೂರುಗಳು ಅಥವಾ ಸಲಹೆಗಳನ್ನು ಸ್ಪಷ್ಟವಾದ ಪ್ರತಿಕ್ರಿಯೆಯೊಂದಿಗೆ ಸಾಧ್ಯವಾದರೆ, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳು ಅಥವಾ ಉಲ್ಲೇಖಗಳೊಂದಿಗೆ checkthis@newschecker.in ಗೆ ಕಳುಹಿಸಿರಿ. ಈ ಮೂಲಕ ಕಳುಹಿಸಲಾದ ಸಲ್ಲಿಕೆಗಳನ್ನು ನಿತ್ಯವೂ ಪರಿಶೀಲಿಸಲಾಗುತ್ತದೆ.

ಪ್ರತಿ ಕಾಮೆಂಟ್‌ ಮತ್ತು ಪ್ರತಿಕ್ರಿಯೆಗಳನ್ನು ನ್ಯೂಸ್ ಚೆಕರ್‌ನಲ್ಲಿ ಇಬ್ಬರು ಪರಿಶೀಲಿಸುತ್ತಾರೆ. ಕಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳನ್ನು ನೋಡುವ ಜವಾಬ್ದಾರಿಯನ್ನು ಹಿರಿಯ ಸಿಬ್ಬಂದಿಯೊಬ್ಬರು ಹೊಂದಿದ್ದರೆ, ಅದರ ಬಗ್ಗೆ ನಾವು ಏನು ಮಾಡಬೇಕು ಎಂಬುದರ ಬಗ್ಗೆ, ಇನ್ನೊಬ್ಬ ಹಿರಿಯ ಸಿಬ್ಬಂದಿ ಪರಿಶೀಲಿಸುತ್ತಾರೆ. ಇದರೊಂದಿಗೆ ನಾವೇನಾದರೂ ಪ್ರಮುಖವಾದ್ದನ್ನು ಬಾಕಿ ಉಳಿಸಿಕೊಂಡಿದ್ದೇವಾ ಎಂಬುದರೊಂದಿಗೆ ಎಲ್ಲ ಕಮೆಂಟ್ಸ್‌ ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಾರೆ. ಸಾಮಾನ್ಯವಾಗಿ ನಾವು ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದ ತಕ್ಷಣ ಲೇಖನದಲ್ಲಿ ಬದಲಾವಣೆ ಮಾಡುತ್ತಿದ್ದರೆ ನಿಮಗೆ ತಿಳಿಸುತ್ತೇವೆ.ಇದರೊಂದಿಗೆ ನಾವು ಬದಲಾವಣೆಯನ್ನು ಮಾಡಲು ನಿರ್ಧರಿಸಿದರೆ ಅದನ್ನು ಲೇಖನದಲ್ಲಿ ಎತ್ತಿ ತೋರಿಸಲಾಗುತ್ತದೆ.

  • ನೈಜಸ್ಥಿತಿ ಕುರಿತಾದ ದೋಷದ ಸಂದರ್ಭದಲ್ಲಿ ವರದಿಗೆ ಟಿಪ್ಪಣಿಯನ್ನು ಲಗತ್ತಿಸಲಾಗುತ್ತದೆ ಮತ್ತು ಏನನ್ನು ಬದಲಾಯಿಸಲಾಗಿದೆ ಎಂಬುದರ ವಿವರಣೆಯೊಂದಿಗೆ “ಕರೆಕ್ಷನ್‌” ಎಂದು ಗುರುತು ಹಾಕಲಾಗುತ್ತದೆ
  • ಸ್ಪಷ್ಟೀಕರಣಗಳು ಅಥವಾ ನವೀಕರಣಗಳ ಸಂದರ್ಭದಲ್ಲಿ ಏನನ್ನು ಬದಲಾಯಿಸಲಾಗಿದೆ ಎಂಬುದನ್ನು ವಿವರಣೆಯೊಂದಿಗೆ ಲಗತ್ತಿಸಲಾಗುತ್ತದೆ ಮತ್ತು “ಅಪ್ಡೇಟ್‌” ಎಂದು ಗುರುತು ಹಾಕಲಾಗುತ್ತದೆ.

ಯಾವುದೇ ತಿದ್ದುಪಡಿಗಳೊಂದಿಗೆ ಕಾಮೆಂಟ್‌ ಮಾಡಲು ಅಥವಾ ನಮಗೆ ಬರೆಯಲು ಓದುಗರನ್ನು ಪ್ರೋತ್ಸಾಹಿಸಲಾಗುತ್ತದೆ. ಅಂತಹ ಎಲ್ಲ ಸಂವಹನಗಳನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಅವು ಮಾನ್ಯವೆಂದು ಕಂಡುಬಂದಲ್ಲಿ ಸಂಬಂಧಿತ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಪ್ರತಿ ಪುಟದಲ್ಲಿರುವ “+” ಬಟನ್‌ ಓದುಗರು ನಮಗೆ ಪ್ರತಿಕ್ರಿಯೆಗಳನ್ನು ಅಥವಾ ದೂರುಗಳನ್ನು ಕಳುಹಿಸಲು ಅನುವು ಮಾಡುತ್ತದೆ.

ಅಂತಿಮವಾಗಿ ನೀವು ವರದಿಯ ಬಗ್ಗೆ ದೂರು ನೀಡಿದರೂ ನಮ್ಮ ಪ್ರತಿಕ್ರಿಯೆಯಿಂದ ಸಂತೋಷವಾಗದೇ ಇದ್ದರೆ, ನಾವು ಆಂತರಿಕ ಪರಿಶೀಲನೆಯನ್ನು ನಡೆಸುತ್ತೇವೆ ಮತ್ತು ಅಗತ್ಯವಿದ್ದರೆ, ನಮ್ಮ ಸಲಹಾ ಮಂಡಳಿಯು ದೂರನ್ನು ಪರಿಶೀಲಿಸಲು ಸ್ವತಂತ್ರ ವ್ಯಕ್ತಿಯನ್ನು ನೇಮಿಸಬಹುದಾಗಿದೆ.


ನಮ್ಮ ಪ್ರತಿಕ್ರಿಯೆ ಬಗ್ಗೆ ನೀವು ಸಮಾಧಾನ ಹೊಂದಿರದೇ ಇದ್ದರೆ, ನೀವು ಐಎಫ್‌ಸಿಎನ್‌ಗೆ ಈ ಲಿಂಕ್‌ ಮೂಲಕ ಬರೆಯಬಹುದು:

https://ifcncodeofprinciples.poynter.org/complaints-policy