ಹಿಂದೂಗಳಲ್ಲದವರನ್ನು ದೇಗುಲ ಆಡಳಿತಕ್ಕೆ ನೇಮಿಸುವಂತಿಲ್ಲ: ಸುಪ್ರೀಂ ತೀರ್ಪು?

“ಹಿಂದೂ ಅಲ್ಲದವರನ್ನು ಭಾರತದ ಯಾವುದೇ ಹಿಂದೂ ದೇವಾಲಯದ ಯಾವುದೇ ಆಡಳಿತ ಹಾಗೂ ಇತರ ಕಾರ್ಯಗಳಿಗೆ ನೇಮಿಸುವಂತಿಲ್ಲ ಎಂದು  ಸುಪ್ರೀಂ ಕೋರ್ಟ್‌ ಹೇಳಿದೆ,” ಈ ಆದೇಶವನ್ನು ನ್ಯಾ.ಇಂದು ಮಲ್ಹೋತ್ರ ಅವರು ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ಸ್ಕ್ರೀನ್‌ಶಾಟ್‌ ಇಲ್ಲಿದೆ. ಈ ಕುರಿತ ಇನ್ನೊಂದು ಲಿಂಕ್‌ ಇಲ್ಲಿದೆ.

Supreem Court of India ruled other than Hindus not allowed in Temple administration

Fact check

ಈ ಪೋಸ್ಟ್‌ ಕುರಿತು ನಾವು ಪರಿಶೀಲನೆಗೆ ತೊಡಗಿದ್ದು, ನಾನ್‌ ಹಿಂದೂ, ಟೆಂಪಲ್‌ ಅಡ್ಮಿನಿಸ್ಟ್ರೇಶನ್‌, ಸುಪ್ರೀಂ ಕೋರ್ಟ್‌, ಇಂದು ಮಲ್ಹೋತ್ರ ಎಂದು ಗೂಗಲ್‌ ನಲ್ಲಿ ಕೀವರ್ಡ್‌ ಸರ್ಚ್ ನಡೆಸಿದ್ದು, ಹಿಂದೂ ದೇಗುಲದ ಆಡಳಿತ ಹಾಗೂ ಇತರ ಕಾರ್ಯಗಳಿಗೆ ಹಿಂದೂಗಳಲ್ಲದವರನ್ನು ನೇಮಿಸುವಂತಿಲ್ಲ ಎಂಬುದಕ್ಕೆ ಪೂರಕವಾದ ಮಾಹಿತಿಗಳು ಸಿಕ್ಕಿಲ್ಲ. 

ಇದರೊಂದಿಗೆ ಕೋರ್ಟ್‌ ಆದೇಶದ ಕುರಿತ ಪರಿಶೀಲನೆಗೆ ಇಂಡಿಯಾ ಕಾನೂನ್‌.ಆರ್ಗ್ ತಾಣದಲ್ಲಿ ಮ್ಯಾನೇಜ್‌ಮೆಂಟ್‌ ಆಫ್‌ ಟೆಂಪಲ್ಸ್‌ ನಾನ್‌ ಹಿಂದೂಸ್‌ ಎಂದು ಕೀ ವರ್ಡ್‌ ಸರ್ಚ್ ನಡೆಸಲಾಗಿದೆ. ಇದರಲ್ಲಿ ಹಲವು ದೇಗುಲಗಳ ಆಡಳಿತಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಟ್‌ಗಳು ನೀಡಿದ ಆದೇಶಗಳು ಕಂಡು ಬಂದಿರುತ್ತವೆ. ಆದರೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್‌ ನೀಡಿದ ಯಾವುದೇ ಆದೇಶಗಳು ಕಂಡು ಬಂದಿರುವುದಿಲ್ಲ. 

Also read: ಮಂಗಳೂರು ಸ್ಫೋಟ ಪ್ರಕರಣದಲ್ಲಿ ಆರೋಪಿಯೊಂದಿಗೆ ಇನ್ನೊಬ್ಬನೂ ಇದ್ದನೇ?

ಹಿಂದೂ ದೇಗುಲದ ಆಡಳಿತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆದೇಶ ಬಂದಿದೆ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ಹರಿದಾಡುತ್ತಿದೆ. ಆದರೆ ಪೋಸ್ಟ್‌ನಲ್ಲಿ ಹೇಳಿರುವ ನ್ಯಾಯಾಧೀಶರಾದ ಇಂದು ಮಲ್ಹೋತ್ರಾ ಅವರು ಸುಪ್ರೀಂ ಕೋರ್ಟ್‌ನ ಸೇವೆಯಿಂದ 2021 ಮಾರ್ಚ್ 13 ರಂದು ನಿವೃತ್ತರಾಗಿದ್ದಾರೆ. ಇದರ ಮಾಹಿತಿಯನ್ನು ಇಲ್ಲಿ ನೋಡಬಹುದು.

Conclusion

ಈ ಶೋಧನೆಗಳ ಪ್ರಕಾರ, ಸುಪ್ರೀಂ ಕೋರ್ಟ್‌ ಹಿಂದೂ ದೇಗುಲದ ಆಡಳಿತಕ್ಕೆ ಸಂಬಂಧಿಸಿದಂತೆ ಹಿಂದೂಯೇತರರನ್ನು ನೇಮಿಸುವಂತೆ, ಆಡಳಿತದ ಚುಕ್ಕಾಣಿ ನೀಡುವಂತಿಲ್ಲ ಎಂದು ಹೇಳಲಾಗಿದೆ ಎನ್ನುವುದು ತಪ್ಪಾಗಿದೆ. 

Result: False

Our sources
We tried to contact Justice Indu Malhotra regarding the claim.


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.