Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನಾಳೆ ಸಂಜೆಯಿಂದ ಕರ್ನಾಟಕ ಲಾಕ್ ಡೌನ್ ಎಂಬ ಬ್ರೇಕಿಂಗ್ ಸುದ್ದಿಯ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದರ ಬಗ್ಗೆ ನ್ಯೂಸ್‌ಚೆಕರ್ ಶೋಧ ನಡೆಸಿದಾಗ 2021ರ ವೀಡಿಯೋವನ್ನು ಈಗ ಎಚ್‌ಎಂಪಿವಿ ವೈರಸ್ ಹರಡುತ್ತಿರುವ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Also Read: ತಿರುಪತಿ ಕಾಲ್ತುಳಿತದ ಸಂದರ್ಭ ಮಗುವಿನ ಶವವನ್ನು ಬೈಕಿನಲ್ಲಿ ಸಾಗಿಸಲಾಯಿತು ಎನ್ನುವುದು ಸುಳ್ಳು!
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಲಾಕ್ ಡೌನ್ ಕುರಿತಂತೆ ಯಾವುದೇ ಸುದ್ದಿ ವರದಿಗಳು ಕಂಡುಬಂದಿಲ್ಲ.
ಆ ಬಳಿಕ ನಾವು ಹೆಚ್ಚಿನ ಶೋಧ ನಡೆಸಿದ್ದು, ಈ ವೇಳೆ ಕೋವಿಡ್ ಸಂದರ್ಭ 2021ರಲ್ಲಿ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಗೆ ಸಂಬಂಧಿಸಿ ಟಿವಿ9 ಕನ್ನಡ ಏಪ್ರಿಲ್ 26, 2021ರಂದು ಪೋಸ್ಟ್ ಮಾಡಿದ ಯೂಟ್ಯೂಬ್ ವರದಿಯನ್ನು ಗಮನಿಸಿದ್ದೇವೆ. “Karnataka Announces 15 Days Lockdown | 15 ದಿನಗಳ ಕಾಲ ಕರ್ನಾಟಕ ಲಾಕ್ ಡೌನ್” ಶೀರ್ಷಿಕೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಜೊತೆಗೆ ನಾಳೆಯಿಂದ 15 ದಿನಗಳ ಕಾಲ ಲಾಕ್ ಡೌನ್ – 15 ದಿನಗಳ ಕಾಲ ಕರ್ನಾಟಕ ಲಾಕ್ ಡೌನ್ – 15 ದಿನಗಳ ಬಳಿಕ ಪರಿಸ್ಥಿತಿ ಹತೋಟಿಗೆ ಬರದಿದ್ರೆ – ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ – ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗೆ ವಿನಾಯಿತಿ ಎಂದು ವಿವರಣೆಯಲ್ಲಿದೆ.
ವೀಡಿಯೋದಲ್ಲಿ ಕೋವಿಡ್ ಹಿನ್ನೆಲೆ ಸಚಿವ ಸಂಪುಟ ಸಭೆ ನಿರ್ಣಯದಂತೆ ಲಾಕ್ ಡೌನ್ ಗೆ ಉದ್ದೇಶಿಸಲಾಗಿದೆ ಎಂದಿದೆ. ವೈರಲ್ ವೀಡಿಯೋವನ್ನು ನಾವು ಪರಿಶೀಲಿಸಿದ ವೇಳೆ ಟಿವಿ9 ಕನ್ನಡದ ಈವೀಡಿಯೋ ಗೆ ಸಾಮ್ಯತೆ ಇರುವುದು ಕಂಡುಬಂದಿದೆ. ಜೊತೆಗೆ ಈ ಬ್ರೇಕಿಂಗ್ ಸುದ್ದಿಯ ವೀಡಿಯೋ ಎಡಿಟ್ ಮಾಡಿ ಎಚ್ಎಂಪಿವಿ ವೈರಸ್ ಹರಡಿಕೆ ಹಿನ್ನೆಲೆ ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ಇದಕ್ಕೆ ಪೂರಕವಾಗಿ ನಾವು ಶೋಧ ನಡೆಸಿದಾಗ ಮಾಧ್ಯಮ ವರದಿಗಳಲ್ಲಿ ಏಪ್ರಿಲ್ 27, 2021ರಿಂದ 14 ದಿನ ಲಾಕ್ ಡೌನ್ ಗೆ ಸರ್ಕಾರ ನಿರ್ಧರಿಸಿರುವುದು ಗೊತ್ತಾಗಿದೆ.
ಏಪ್ರಿಲ್ 26, 2021ರಂದು ದಿ ನ್ಯೂಸ್ ಮಿನಿಟ್ ವರದಿಯಲ್ಲಿ “ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್-19 ಬಿಕ್ಕಟ್ಟನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಬೆಂಗಳೂರು ನಗರ ಸೇರಿದಂತೆ ಇಡೀ ರಾಜ್ಯವು ಏಪ್ರಿಲ್ 27 ರ ರಾತ್ರಿಯಿಂದ ಎರಡು ವಾರಗಳವರೆಗೆ ಸಂಪೂರ್ಣ ಲಾಕ್‌ಡೌನ್‌ಗೆ ಹೋಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಏಪ್ರಿಲ್ 26 ರಂದು ಘೋಷಿಸಿದರು. ಭಾನುವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ 34,000 ಕೋವಿಡ್-19 ಪ್ರಕರಣಗಳು ದಾಖಲೆಯ ಗರಿಷ್ಠ ದಾಖಲಾಗಿರುವುದರಿಂದ ಸೋಮವಾರ ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.” ಎಂದಿದೆ.
ಏಪ್ರಿಲ್ 27, 2021ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ, “ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣ, ಕರ್ನಾಟಕ ಸರ್ಕಾರವು ಮಂಗಳವಾರ ಸಂಜೆಯಿಂದ ರಾಜ್ಯದಲ್ಲಿ 14 ದಿನಗಳ ‘ಕರೋನಾ ಕರ್ಫ್ಯೂ’ಗೆ ಆದೇಶಿಸಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಪ್ರಸ್ತುತ ವಾರಾಂತ್ಯದ ಕರ್ಫ್ಯೂನಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.” ಎಂದಿದೆ.
ಆ ಬಳಿಕ ನಾವು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯದ ಮುಖ್ಯ ಕಾರ್‍ಯದರ್ಶಿಯವರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಪಡೆದ ಬಳಿಕ ನಾವು ಈ ಲೇಖನವನ್ನು ಪರಿಷ್ಕರಿಸಲಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಹೊಸದಾಗಿ ಯಾವುದೇ ಲಾಕ್ ಡೌನ್ ಘೋಷಣೆಯಾಗಿಲ್ಲ. 2021ರಲ್ಲಿ ಕೋವಿಡ್ ಸಮಯದಲ್ಲಿ ಘೋಷಣೆಯಾದ ಲಾಕ್ ಡೌನ್ ಕುರಿತ ಟಿವಿ ವರದಿಯ ಬ್ರೇಕಿಂಗ್ ಸುದ್ದಿಯನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Also Read: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
Our Sources
You Tube Video By Tv9 Kannada, Dated: April 26, 2021
Report By The News Minute, Dated: April 26, 2021
Report By The Indian Express, Dated: April 27, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.