Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ
ವೈರಲ್ ವೀಡಿಯೋ ವಿಯೆಟ್ನಾಂನದ್ದಾಗಿದ್ದು, ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕಾಣಿಸಿಕೊಂಡವರು ಸಹೋದರಿಯರಾಗಿದ್ದಾರೆ. ಇಬ್ಬರೂ ಮಕ್ಕಳು ಬೆಳವಣಿಗೆ ಕುಂಠಿತ ಸಮಸ್ಯೆಯೊಂದಿಗೆ ಜನಿಸಿದವರಾಗಿದ್ದಾರೆ
ಪಾಕಿಸ್ತಾನದಲ್ಲಿ 12 ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಪಾಕಿಸ್ತಾನದಲ್ಲಿ 11 ವರ್ಷದ ಬಾಲಕಿಯೊಬ್ಬಳು 60 ವರ್ಷದ #ಮುಲ್ಲಾನ ಮದುವೆಯಾಗಿ 12 ವರ್ಷದವಳಿದ್ದಾಗ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ” ಎಂದಿದೆ.

ಈ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ಪಾಕಿಸ್ತಾನದ ವೀಡಿಯೋವಲ್ಲ, ಬದಲಾಗಿ, ಬೆಳವಣಿಗೆ ಕುಂಠಿತಗೊಂಡು ಜನನವಾದ ವಿಯೆಟ್ನಾಂ ಸಹೋದರಿಯಬ್ಬರ ವೀಡಿಯೋ ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ https://www.jn.pt/ ಎಂಬ ವೆಬ್ ಸೈಟ್ ನಲ್ಲಿ ಪ್ರಕಟಗೊಂಡ ಸತ್ಯಶೋಧನೆ ಲೇಖನವೊಂದು ಲಭ್ಯವಾಗಿದೆ. ಇದರಲ್ಲಿ ಈ ವೀಡಿಯೋ ಬೆಳವಣಿಗೆ ಕುಂಠಿತಗೊಂಡ ವಿಯೆಟ್ನಾಂ ಸೋದರಿಯರದ್ದು ಎಂದಿದೆ. (ಪೋರ್ಚುಗೀಸ್ ಭಾಷೆಯಿಂದ ಅನುವಾದಿಸಲಾಗಿದೆ)
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ, ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಆಗಸ್ಟ್ 9, 2024 ರ ಟಿಕ್ ಟಾಕ್ ಪೋಸ್ಟ್ ಒಂದನ್ನು ನೋಡಿದ್ದೇವೆ. ಅದರಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ನೋಡಿದ್ದೇವೆ.

ಈ ವೀಡಿಯೋದ ವಿವರಣೆಯನ್ನು ವಿಯೆಟ್ನಾಂ ಭಾಷೆಯಲ್ಲಿ ಬರೆಯಲಾಗಿದ್ದು, “ಅಕ್ಕ 700 ಗ್ರಾಂ ತೂಕ ಮತ್ತು ತಂಗಿ 900 ಗ್ರಾಂ ತೂಕ. ಅಮ್ಮನ ಇಬ್ಬರು ಮುದ್ದಾದ ದೇವತೆಗಳು ಇಬ್ಬರೂ ಈಗ ದೊಡ್ಡವರಾಗಿದ್ದಾರೆ ಮತ್ತು ತಮ್ಮ ತಾಯಿಯನ್ನು ಅರ್ಥಮಾಡಿಕೊಂಡಿದ್ದಾರೆ.” ಎಂದಿದೆ. (ಅನುವಾದಿಸಲಾಗಿದೆ)
ಇದೇ ವೀಡಿಯೋದಲ್ಲಿ Long An Pediatrics Hospital · Tan An (ಅನುವಾದಿಸಲಾಗಿದೆ) ಎಂದು ಲೊಕೇಶನ್ ಟ್ಯಾಗ್ ಮಾಡಲಾಗಿದ್ದು ಅದು ವಿಯೆಟ್ನಾಂನ ಒಂದು ಮಕ್ಕಳ ಆಸ್ಪತ್ರೆ ಎಂಬುದನ್ನು ಕಂಡುಕೊಂಡಿದ್ದೇವೆ.

ಅಕ್ಟೋಬರ್ 10, 2024ರ ಇನ್ನೊಂದು ಪೋಸ್ಟ್ ನಲ್ಲಿ baongoc._.93 ಅವರು ಇಬ್ಬರು ಮಕ್ಕಳು ಸಹೋದರಿಯರು ಎಂದು ಬರೆದುಕೊಂಡಿದ್ದಾರೆ (ಅನುವಾದಿಸಲಾಗಿದೆ)

ಆದ್ದರಿಂದ ಈ ಸತ್ಯಶೋಧನೆಯಲ್ಲಿ ತಿಳಿದುಬರುವುದೇನೆಂದರೆ, ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡ ಇಬ್ಬರು ಅಕ್ಕ ತಂಗಿಯರಾಗಿದ್ದಾರೆ. ಮತ್ತು ಇಬ್ಬರೂ ಮಕ್ಕಳು ಬೆಳವಣಿಗೆ ಕುಂಠಿತಗೊಂಡು ಜನಿಸಿದವರಾಗಿದ್ದಾರೆ.
ಪುರಾವೆಗಳ ಪ್ರಕಾರ, ಪಾಕಿಸ್ತಾನದಲ್ಲಿ 12 ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿರುವ ವೀಡಿಯೋ ತಪ್ಪಾಗಿದೆ. ಇದು ವಿಯೆಟ್ನಾಂ ಮೂಲದ ವೀಡಿಯೋ ಆಗಿದ್ದು, ವೀಡಿಯೋದಲ್ಲಿ ಕಂಡುಬರುವ ಇಬ್ಬರು ಸಹೋದರಿಯರಾಗಿದ್ದಾರೆ.
Our Sources
Article by .jn.pt, Dated: September 3, 2025
Tiktok Post By baongoc._.93, Dated: August 9, 2024