Authors
Claim
ಉತ್ತರಾಖಂಡದ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ ತಂಡವನ್ನು ತೋರಿಸುವ ಚಿತ್ರ.
ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಅನೇಕ ಪ್ರಕಾಶನಗಳು ತಮ್ಮ ದೆಹಲಿ ಆವೃತ್ತಿಯಲ್ಲಿ ಈ ಚಿತ್ರವನ್ನು ಪ್ರಕಟಿಸಿದ್ದು, ಈ ಚಿತ್ರವನ್ನು ಪಿಟಿಐಗೆ ಕ್ರೆಡಿಟ್ ಮಾಡಿವೆ ಮತ್ತು ದೈನಿಕ್ ಭಾಸ್ಕರ್ ತಮ್ಮ ಫೇಸ್ಬುಕ್ ಪುಟದಲ್ಲಿ ಈ ಚಿತ್ರವನ್ನು ಪ್ರಕಟಿಸಿದೆ.
Also Read: ಮುಸ್ಲಿಂ ಮಹಿಳೆ ಭಗವದ್ಗೀತೆ ಓದಿ ಹಿಂದೂ ಧರ್ಮ ಒಪ್ಪಿ ರಾಧೆ ಆದಳು ಎನ್ನುವುದು ಹೌದೇ?
Fact
ಈ ಚಿತ್ರದಲ್ಲಿ ತಂಡದ ಕೆಲವರ ಮುಖಗಳನ್ನು ತೀಡಿದಂತೆ ಕಂಡಿರುವುದು, ಮತ್ತು ತುಸು ವ್ಯತ್ಯಾಸಗೊಳಿಸಿದಂತೆ ಕಂಡಿರುವುದು ನಮ್ಮ ಅನುಮಾನಗಳನ್ನು ಹೆಚ್ಚಿಸಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದು, ಕೆಲವು ಅಸಂಗತೆಗಳನ್ನು ಗುರುತಿಸಿದ್ದೇವೆ. ಎತ್ತಿದ ಕೈಗಳು, ತೋರಿಸಿದ ಬೆರಳುಗಳು, ಕಣ್ಣುಗಳು ಹೊಂದಿಕೆಯಾಗುವಂತೆ ಇಲ್ಲ ಎಂದು ಗುರುತಿಸಿದ್ದೇವೆ. ಈ ಚಿತ್ರವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ರಚಿಸಲಾಗಿದೆ ಎಂದು ನಮಗೆ ಬಹುತೇಕ ಖಚಿತವಾಗಿದೆ.
ಚಿತ್ರದಲ್ಲಿ ಕೆಲವು ಪುರುಷರ ಕಣ್ಣುಗಳು ಸ್ಪಷ್ಟವಾಗಿಲ್ಲ ಇದನ್ನು ತಿದ್ದಿದಂತೆ ಇರುವುದು ನಮ್ಮ ಅನುಮಾನ ಮತ್ತಷ್ಟು ಬಲವಾಗಲು ಕಾರಣವಾಯಿತು. ನಮ್ಮ ಅನುಮಾನ ದೃಢೀಕರಿಸಲು ನಾವು ಹೈವ್ ಎಐ ಡಿಟೆಕ್ಟರ್ನಲ್ಲಿ ಚಿತ್ರವನ್ನು ಪರಿಶೀಲಿಸಿದ್ದೇವೆ. ಇದು ಚಿತ್ರ ಎಐ ಹೌದೇ ಅಲ್ಲವೇ ಎಂದು ಪರಿಶೀಲಿಸುವ ವ್ಯವಸ್ಥೆಯಾಗಿದ್ದು, ಇದರಲ್ಲಿ ಚಿತ್ರ ಶೇ.99ರಷ್ಟು ಎಐ ನಿಂದ ಮಾಡಲಾಗಿದೆ ಎಂದು ಹೇಳಿದೆ. ಇದು ನಮ್ಮ ಅನುಮಾನವನ್ನು ಮತ್ತಷ್ಟು ದೃಢಪಡಿಸಿದೆ.
Also Read: ಸರ್ಕಾರಿ ಬಸ್‌ಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಚಿತ್ರದ ಮೂಲವನ್ನು ಕಂಡುಹಿಡಿಯಲು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ಸಹ ನಡೆಸಿದ್ದೇವೆ, ಆದರೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ನ್ಯೂಸ್‌ಚೆಕರ್ ಅನಂತರ ಕೀವರ್ಡ್ ಸರ್ಚ್ ನಡೆಸಿದ್ದು, ಅನ್ಶುಲ್ ಸಕ್ಸೇನಾ (@AskAnshul) ಅವರ ಟ್ವೀಟ್ಗೆ ಕರೆದೊಯ್ದಿದೆ. ಇದು ರಕ್ಷಣಾ ಕಾರ್ಯಾಚರಣೆಯ ಕಲಾಕೃತಿಯನ್ನು ಹೊಂದಿತ್ತು. ನಾವು ಕಾಮೆಂಟ್ ವಿಭಾಗವನ್ನು ಸ್ಕ್ಯಾನ್ ಮಾಡಿದಾಗ, ಬಳಕೆದಾರ (@TheKhelIndia) ವೈರಲ್ ಅನ್ನು ಹೋಲುವ ಮತ್ತೊಂದು ಚಿತ್ರದ ಬಗ್ಗೆ ಕಾಮೆಂಟ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ, ಇದು ‘ಎಕ್ಸ್ ಕ್ಲೂಸಿವ್ ಮೈಂಡ್ಸ್’ ನ ವಾಟರ್ ಮಾರ್ಕ್ ಅನ್ನು ಹೊಂದಿದೆ.
‘ಎಕ್ಸ್ ಕ್ಲೂಸಿವ್ ಮೈಂಡ್ಸ್’ ಪುಟವನ್ನು ಪರಿಶೀಲಿಸಿದಾಗ, ಈ ಪುಟದಲ್ಲಿ ಅಂತಹ ಚಿತ್ರಗಳ ಸರಣಿಯನ್ನೇ ಟ್ವೀಟ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ ಮತ್ತು ಚಿತ್ರವು ಎಐ ರಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Also Read: ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?
Result: False
Our Sources
Result by Hive AI detector
Tweet by @Exclusicev_Minds, dated November 29, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.