Fact Check: ಬಾಂಗ್ಲಾದೇಶದ ಅಶಾಂತಿ ಬಗ್ಗೆ ಪ.ಬಂಗಾಳದ ಕಾಳಿ ವಿಸರ್ಜನೆ ವೀಡಿಯೋ ಸಂಬಂಧ ಕಲ್ಪಿಸಿ ಕೋಮು ಹೇಳಿಕೆಯೊಂದಿಗೆ ವೈರಲ್!

ಕಾಳಿ ಬಾಂಗ್ಲಾದೇಶ, ವಿಸರ್ಜನೆ, ದೇಗುಲ ಮೇಲೆ ದಾಳಿ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಬಾಂಗ್ಲಾದೇಶದಲ್ಲಿ ಮುಸ್ಲಿಮರು ಕಾಳಿ ದೇಗುಲದ ಮೇಲೆ ದಾಳಿ ಮಾಡಿದ್ದಾರೆ

Fact
ವೈರಲ್ ವೀಡಿಯೋ ಬಗ್ಗೆ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಕಾಳಿ ದೇಗುಲದ ಮೇಲೆ ದಾಳಿ ಮಾಡಿದ್ದಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ಇದು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ಸುಲ್ತಾನ್‌ಪುರ ಗ್ರಾಮದಲ್ಲಿ ಕಾಳಿ ಪೂಜೆಯ ಬಳಿಕ 12 ವರ್ಷಗಳಿಗೊಮ್ಮೆ ನಡೆಯುವ ವಿಸರ್ಜನೆಯ ಪ್ರಕ್ರಿಯೆಯ ವೀಡಿಯೋವಾಗಿದೆ

ಬಾಂಗ್ಲಾದೇಶದಲ್ಲಿ ಅಶಾಂತಿ ಇರುವಂತೆಯೇ, ಪಶ್ಚಿಮ ಬಂಗಾಳದ ಕಾಳಿ ವಿಗ್ರಹ ವಿಸರ್ಜನೆಯ ಹಂತದ ವೀಡಿಯೋ ಒಂದನ್ನು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇಸ್ಕಾನ್ ಸನ್ಯಾಸಿ ಚಿನ್ಮೋಯ್ ದಾಸ್ ಬಂಧನದ ನಂತರ ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ, ಇದರ ಪರಿಣಾಮವಾಗಿ ಹಿಂದೂ ದೇವಾಲಯಗಳು ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿಗಳು ನಡೆದಿವೆ. ಇದರ ನಂತರ, ಕಾಳಿ ವಿಗ್ರಹವನ್ನು ಧ್ವಂಸಗೊಳಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಇದು ಬಾಂಗ್ಲಾದೇಶದ ಹಿಂದೂ ದೇವಾಲಯದ ಮೇಲೆ ಮುಸ್ಲಿಮರು ನಡೆಸಿದ ದಾಳಿಯನ್ನು ತೋರಿಸುತ್ತದೆ ಎಂದು ಹಲವರು ಹೇಳಿದ್ದಾರೆ. 

ಒಬ್ಬ ಎಕ್ಸ್ ಬಳಕೆದಾರರು, “ನಿನ್ನೆ ಬಾಂಗ್ಲಾದೇಶದಲ್ಲಿ, ಮುಸ್ಲಿಮರು ಕಾಳಿಬರಿ ಅಂದರೆ ಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿದರು ಮತ್ತು ಕಾಳಿ ಮಾತೆ ಮತ್ತು ಹಿಂದೂ ದೇವರುಗಳು ಮತ್ತು ದೇವತೆಗಳ ವಿಗ್ರಹಗಳನ್ನು ನಾಶಪಡಿಸಿದರು. ದೇವಸ್ಥಾನದ ಒಳಗೆ ಇದ್ದ ಹಿಂದೂ ಭಕ್ತರನ್ನು ಥಳಿಸಲಾಗಿದೆ. 20ಕ್ಕೂ ಹೆಚ್ಚು ಹಿಂದೂ ಭಕ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದ ಬಗ್ಗೆ ಇಡೀ ಜಗತ್ತು ಮೌನವಾಗಿದೆ. ಎಂದು ಬರೆದಿದ್ದಾರೆ.

Also read: ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ ಎಂದ ಈ ವೀಡಿಯೋ ನಿಜಕ್ಕೂ ಭಾರತದ್ದು!

Fact Check: ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ಪ.ಬಂಗಾಳದ ಕಾಳಿ ವಿಸರ್ಜನೆ ವೀಡಿಯೋ ಕೋಮು ಹೇಳಿಕೆಯೊಂದಿಗೆ ವೈರಲ್!

Fact Check/Verification

ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ನಾವು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಅಕ್ಟೋಬರ್ 21, 2024 ರಂದು ಬಂಗಾಳಿ ಮಾಧ್ಯಮ ದೈನಿಕ್ ಸ್ಟೇಟ್ಸ್‌ಮನ್‌ ಪ್ರಕಟಿಸಿದ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ಖಂಡಘೋಷ್ ಬ್ಲಾಕ್‌ನಲ್ಲಿರುವ ಸುಲ್ತಾನ್‌ಪುರದಲ್ಲಿ ಕಾಳಿ ಪೂಜೆ 600 ವರ್ಷಗಳಿಂದ ನಡೆಯುತ್ತಿದೆ. ಪ್ರತಿ 12 ವರ್ಷಗಳಿಗೊಮ್ಮೆ, ವಿಗ್ರಹದ ವಿಸರ್ಜನೆ ಪ್ರಕ್ರಿಯೆಯಾಗಿ ಅದನ್ನು ತೆಗೆದು ಮುಳುಗಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಗ್ರಾಮಸ್ಥರು ಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮತ್ತು ಸಂಪೂರ್ಣ ವಿಸರ್ಜನಾ ಪ್ರಕ್ರಿಯೆಯನ್ನು ನಿರ್ವಹಿಸುತ್ತಾರೆ ಎಂದಿದೆ.

Fact Check: ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ಪ.ಬಂಗಾಳದ ಕಾಳಿ ವಿಸರ್ಜನೆ ವೀಡಿಯೋ ಕೋಮು ಹೇಳಿಕೆಯೊಂದಿಗೆ ವೈರಲ್!

ಹೆಚ್ಚಿನ ಹುಡುಕಾಟ ನಡೆಸಿದಾಗ ಸುಲ್ತಾನ್‌ಪುರ್ ಕಿರಣ್ಮೋಯಿ ಪಥಗಾರ್ ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಮತ್ತೊಂದು ವೀಡಿಯೋದಲ್ಲಿ ಮಾಧ್ಯಮ ವರದಿಯೊಂದಿಗೆ ಪ್ರಕಟಿಸಲಾದ ಚಿತ್ರಕ್ಕೆ ಹೊಂದಾಣಿಕೆ ಇರುವುದನ್ನು ಕಂಡಿದ್ದೇವೆ. ಈ ಪೋಸ್ಟ್‌ನಲ್ಲಿ, “12 ವರ್ಷಗಳ ಸಂಪ್ರದಾಯ, ಕಾಳಿಮಾತಾ ನಿರಂಜನ್. ಮಾ ಪ್ರತಿಮಾ ಅವರಿಗೆ ವಿದಾಯ ಹೇಳಲು ಕೆಲವು ಕ್ಷಣಗಳನ್ನು ತೆಗೆದುಕೊಳ್ಳೋಣ. ಸ್ಥಳ: ಸುಲ್ತಾನ್‌ಪುರ್, ಖಂಡಘೋಷ್, ಪೂರ್ವ ಬುರ್ದ್ವಾನ್. ಆಯೋಜಿಸಿದವರು: ಸುಲ್ತಾನ್‌ಪುರ್ ಕಿರಣ್ಮೋಯಿ ಪಥಗಾರ್ ಮತ್ತು ಸುಲ್ತಾನ್‌ಪುರದ ಗ್ರಾಮಸ್ಥರು ಎಂದಿದೆ.

Fact Check: ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ಪ.ಬಂಗಾಳದ ಕಾಳಿ ವಿಸರ್ಜನೆ ವೀಡಿಯೋ ಕೋಮು ಹೇಳಿಕೆಯೊಂದಿಗೆ ವೈರಲ್!

ವೈರಲ್ ವೀಡಿಯೋದಲ್ಲಿ ತೋರಿಸಿರುವ ದೇವಾಲಯದ ಗೋಡೆಯ ಚಹರೆಯು ಆ ವರದಿಯಲ್ಲಿ ಪ್ರಕಟವಾದ ಫೋಟೋದೊಂದಿಗೆ ಹೊಂದಿಕೆಯಾಗುವುದನ್ನೂ ನಾವು ಕಂಡುಕೊಂಡಿದ್ದೇವೆ.

Fact Check: ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ಪ.ಬಂಗಾಳದ ಕಾಳಿ ವಿಸರ್ಜನೆ ವೀಡಿಯೋ ಕೋಮು ಹೇಳಿಕೆಯೊಂದಿಗೆ ವೈರಲ್!

ಆ ಬಳಿಕ ಸುಲ್ತಾನ್‌ಪುರ ಕಾಳಿ ಪೂಜೆಯ ಸಂಘಟಕರಲ್ಲಿ ಒಬ್ಬರಾದ ಕಾರ್ತಿಕ್ ದತ್ತಾ ಅವರನ್ನು ನ್ಯೂಸ್‌ಚೆಕರ್ ಸಂಪರ್ಕಿಸಿದೆ. “ಇದು ನಮ್ಮ ಆಚರಣೆ. ನಮ್ಮ ಗ್ರಾಮದ ಹಿಂದೂ ಜನರು 12 ವರ್ಷಗಳಿಗೊಮ್ಮೆ ಈ ಆಚರಣೆಯನ್ನು ಮಾಡುತ್ತಿದ್ದಾರೆ. ವಿಸರ್ಜನೆಯ ದಿನದಂದು ಕಾಳಿಯ ವಿಗ್ರಹವನ್ನು ಭಕ್ತರು ಈ ರೀತಿಯಲ್ಲಿ ಮಾಡುತ್ತಾರೆ. ಈ ಬಾರಿಯೂ ಹಾಗೆಯೇ ಮಾಡಿದರು. ನಮ್ಮ ವಿಸರ್ಜನೆಯ ವೀಡಿಯೋವನ್ನು ಕೋಮು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ಸುಳ್ಳು. ಇಂತಹ ಕ್ರಮಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದಿದ್ದಾರೆ.

Conclusion

ಸತ್ಯಶೋಧನೆಯ ಪ್ರಕಾರ ಈ ವಿಡಿಯೋ ಬಾಂಗ್ಲಾದೇಶದದ್ದಲ್ಲ, ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ಸುಲ್ತಾನ್‌ಪುರ ಗ್ರಾಮದಿಂದ ಬಂದಿದ್ದು,ಕಾಳಿ ವಿಸರ್ಜನೆಯದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.

Also Read: ಬಾಂಗ್ಲಾದೇಶದ ಹಳ್ಳಿಗಳಲ್ಲಿ ಹಿಂದೂಗಳನ್ನು ಮುಸ್ಲಿಮರು ಕೊಲ್ಲುತ್ತಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?

Our Sources
Report by Dainik Statesman, Dated: October 21, 2024

Telephonic conversation with Kartic Dutta, Organiser, Sultanpur Kali Puja

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.