Monday, December 22, 2025

Fact Check

Fact Check: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?

Written By Ishwarachandra B G, Edited By Pankaj Menon
Dec 17, 2024
banner_image

Claim
ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆ

Fact
ಮೋದಿ, ಅಮಿತ್ ಶಾ ರಾಜನಾಥ್ ಸಿಂಗ್ ಅವರನ್ನುದ್ದೇಶಿಸಿ ಎಚ್ಚರಿಕೆ ರೂಪದಲ್ಲಿ ಮಾತನಾಡಿದವರು ಬಾಂಗ್ಲಾ ದೇಶದ ಮಾಜಿ ಲೆಫ್ಟಿನೆಂಟ್ ಕರ್ನಲ್.ಮನೀಶ್ ದೆವಾನ್ ಅವರಾಗಿದ್ದಾರೆ. ಇವರು ಸೇನಾ ಮುಖ್ಯಸ್ಥರಲ್ಲ

ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ನಲ್ಲಿ ಕಂಡುಬಂದ ಈ ಪೋಸ್ಟ್ ನಲ್ಲಿ, “ಭಾರತದವಿರುದ್ದ ಹೊರಡಲು ಸಿದ್ದ ಎಂದು ಬೊಗುಳುತ್ತಿರುವ ಬಾಂಗ್ಲಾದೇಶ ಸೇನಾ ಜನರಲ್” ಎಂದಿದೆ.

ಇದೇ ರೀತಿಯ ಹೇಳಿಕೆ ಇಲ್ಲಿ ಕಂಡುಬಂದಿದೆ.

ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ. ಬಾಂಗ್ಲಾದೇಶದ ಮಾಜಿ ಕರ್ನಲ್ ಒಬ್ಬರು ನೀಡಿದ ಹೇಳಿಕೆಯನ್ನು ಸೇನಾ ಮುಖ್ಯಸ್ಥರು ಹೇಳಿದ್ದಾರೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

Also Read: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾರನ್ನು ವ್ಯಕ್ತಿಯೊಬ್ಬ ನಿಂದಿಸಿದ್ದಾನೆ ಎನ್ನಲಾದ ವೀಡಿಯೋ ಹಿಂದಿನ ಸತ್ಯವೇನು?

Fact Chek/Verification

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.

ಈ ವೇಳೆ ಡಿಸೆಂಬರ್ 7, 2024ರಂದು ಇನ್‌ಸ್ಟಾಗ್ರಾಂನಲ್ಲಿ ಎಬಿಪಿ ಆನಂದ ಟಿವಿ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ನೀಡಿದ ವಿವರಣೆಯಲ್ಲಿ, ‘ಮೋದಿಜಿ ನಾವು ಈಗ ತುಂಬಾ ಬಲಿಷ್ಠರಾಗಿದ್ದೇವೆ’ ಎಂದು ಬಾಂಗ್ಲಾದೇಶದ ಮಾಜಿ ಸೇನಾ ಮುಖ್ಯಸ್ಥರು ಪ್ರಧಾನಿಗೆ ಎಚ್ಚರಿಕೆ ನೀಡಿದರು ಎಂದಿದೆ. (ಬಾಂಗ್ಲಾದಿಂದ ಅನುವಾದಿಸಲಾಗಿದೆ)

Fact Check: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?

ಆ ಬಳಿಕ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಡಿಸೆಂಬರ್ 7, 2024ರಂದು ದಿ ಫೈನಾನ್ಷಿಯಲ್ ಎಕ್ಸ್ಪ್ರೆಸ್‌ ಬಿಡಿ ಪ್ರಕಟಿಸಿದ ವರದಿಯಲ್ಲಿ, ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತು ಅಗರ್ತಲಾದಲ್ಲಿನ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್‌ನ ಮೇಲಿನ ಇತ್ತೀಚಿನ ದಾಳಿಯ ನಡುವೆ, ನಿವೃತ್ತ ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಸಮಾನತೆಯ ಆಧಾರದ ಮೇಲೆ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ, ಅವರು ಭಾರತದ ಕಡೆಗೆ “ವಿಧೇಯ ನಿಲುವು” ತಳೆಯದೆ ದೂರವಿರುವಂತೆ ಹೇಳಿದ್ದಾರೆ ಎಂದಿದೆ. ಇದೇ ವರದಿಯಲ್ಲಿ, ಆಗಸ್ಟ್ 5 ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಜಿ ಮಿಲಿಟರಿ ಅಧಿಕಾರಿಗಳು ನಿರ್ವಹಿಸಿದ ಪಾತ್ರವನ್ನು ಎತ್ತಿ ತೋರಿಸುತ್ತಾ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮನೀಶ್ ದೆವಾನ್ ಅವರು, “ಇಂದು, ನಾವು ಭಾರತೀಯ ಪ್ರಾಬಲ್ಯದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸಲು ಮತ್ತೊಮ್ಮೆ ಒಟ್ಟುಗೂಡಿದ್ದೇವೆ.” ಭಾರತದ ಆಡಳಿತಾರೂಢ ಸರಕಾರವನ್ನು ಉದ್ದೇಶಿಸಿ ಮಾತನಾಡಿದ ಅವರು, “ಮೋದಿಜಿ, ಅಮಿತ್‌ಜಿ ಮತ್ತು ರಾಜನಾಥ್‌ಜೀ, ನೀವು 1972ರಲ್ಲಿ ನೋಡಿದ ಬಾಂಗ್ಲಾದೇಶ ಸೇನೆ ಈಗ ಇಲ್ಲ. ನಾವು ಈಗ ಯಾವುದೇ ಶತ್ರುವನ್ನು ಎದುರಿಸಲು ಸಿದ್ಧರಿದ್ದೇವೆ. ನಮ್ಮನ್ನು ಬೆದರಿಸಲು ಪ್ರಯತ್ನಿಸಬೇಡಿ. ನಾವು ಕೇವಲ ಸಶಸ್ತ್ರ ಪಡೆಗಳಲ್ಲ; ನಾವು 170 ಮಿಲಿಯನ್ ಜನರು, ಮತ್ತು ಗಡಿಯಲ್ಲಿ ನಿಮ್ಮನ್ನು ತಡೆಯಲು ನಾವು ಒಟ್ಟಾಗಿ ನಿಲ್ಲುತ್ತೇವೆ. ಎಂದಿದೆ.

Fact Check: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?

ಈ ಪ್ರಕಾರ, ವೈರಲ್ ಆಗಿರುವ ವೀಡಿಯೋದಲ್ಲಿರುವ ಹೇಳಿಕೆಗೆ ಮತ್ತು ಲೆ.ಕ.ಮನೀಶ್ ದಿವಾನ್ ಅವರ ಹೇಳಿಕೆಗೂ ಸಾಮ್ಯತೆ ಇರುವುದನ್ನು ನಾವು ಗುರುತಿಸಿದ್ದೇವೆ.

ಡಿಸೆಂಬರ್ 7, 2024ರ ಜಮುನ ಟಿವಿ ಯೂಟ್ಯೂಬ್‌ ವೀಡಿಯೋದಲ್ಲಿ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಾವಳಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋದಲ್ಲಿ ನೀಡಲಾದ ವಿವರಣೆಯಲ್ಲಿ “ಸರ್ಕಾರಕ್ಕೆ ಮಂಡಿಯೂರುವ ವಿದೇಶಾಂಗ ನೀತಿ ಬೇಕಿಲ್ಲ. ಸಮಾನತೆಯ ಆಧಾರದ ಮೇಲೆ ವಿದೇಶಾಂಗ ನೀತಿ ನಿಂತಿರಬೇಕು. ನಾನು ಭಾರತದ ಜನರಿಗೆ ಹೇಳಲು ಬಯಸುತ್ತೇನೆ, ನೀವು ಶತ್ರುಗಳಲ್ಲ, ನೀವು ಸ್ನೇಹಿತರೇ. ಆದರೆ, ಭಾರತೀಯ ಕೇಸರಿ ಸೇನೆಗೆ ಯಾವುದೇ ಅವಕಾಶ ನೀಡುವುದಿಲ್ಲ. ಸಶಸ್ತ್ರ ಪಡೆಗಳು ಯಾವಾಗಲೂ ಜನರೊಂದಿಗೆ ಇರುತ್ತವೆ ಮತ್ತು ಯಾವಾಗಲೂ ಇರುತ್ತವೆ. ಯಾವುದೇ ಅಗತ್ಯ ಬಿದ್ದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ. ಯಾವುದೇ ಆಂತರಿಕ ಮತ್ತು ಅಂತರಾಷ್ಟ್ರೀಯ ಪಿತೂರಿಯನ್ನು ನಿಲ್ಲಿಸಲು ನಾವು ಬಯಸುತ್ತೇವೆ ನಾವು 72 ದಶಕದ ಸೈನ್ಯವಲ್ಲ. ಯಾವುದೇ ಶತ್ರುವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಗಡಿಯಲ್ಲಿ ಯಾವುದೇ ದುಷ್ಕೃತ್ಯವನ್ನು ನಾವು ತಡೆಯಬಹುದು ಎಂದು ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾರೆ” ಎಂದಿದೆ. ಈ ವೀಡಿಯೋದ ಮೂಲಕವೂ ಮೋದಿ, ಅಮಿತ್ ಶಾ ಅವರಿಗೆ ಎಚ್ಚರಿಕೆ ರೂಪದಲ್ಲಿ ಮಾತನಾಡಿದವರು ಮಾಜಿ ಲೆ.ಕ.ಮನೀಶ್ ದೆವಾನ್ ಅವರಾಗಿದ್ದಾರೆ ಎಂದು ಗೊತ್ತಾಗಿದೆ.

ಡಿಸೆಂಬರ್ 7, 2024ರ ಶೊಮೊಯೆರಲೊ ವರದಿ ಪ್ರಕಾರ, ನಿವೃತ್ತ ಮಾಜಿ ಸೇನಾಧಿಕಾರಿಗಳು ಭಾರತದ ಆಕ್ರಮಣದ ವಿರುದ್ಧ ರಾಷ್ಟ್ರೀಯ ಏಕತೆಗೆ ಕರೆ ನೀಡಿದ್ದಾರೆ. ಯಾವುದೇ ಭಾರತೀಯ ಪಿತೂರಿಯನ್ನು ಎದುರಿಸಲು ಒಗ್ಗಟ್ಟಿನಿಂದ ಇರಬೇಕೆಂದು ಅವರು ದೇಶವಾಸಿಗಳನ್ನು ಒತ್ತಾಯಿಸಿದರು. ಭಾರತದಲ್ಲಿನ ಬಾಂಗ್ಲಾದೇಶ ರಾಯಭಾರ ಕಚೇರಿಯ ಮೇಲೆ ಇತ್ತೀಚೆಗೆ ನಡೆದ ದಾಳಿ ಮತ್ತು ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಿರುವುದು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕೆ ‘ಬೆದರಿಕೆ’ ಎಂದು ಪರಿಗಣಿಸುವಂತೆ ಸಶಸ್ತ್ರ ಪಡೆಗಳ ಮಾಜಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದಿದೆ.

Fact Check: ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?

ಇದೇ ರೀತಿಯ ವರದಿಗಳನ್ನು ನಾವು ಇಲ್ಲಿ ಇಲ್ಲಿ, ಇಲ್ಲಿ ನೋಡಿದ್ದೇವೆ.

Conclusion

ಈ ಸಾಕ್ಷ್ಯಗಳ ಆಧಾರದಲ್ಲಿ ಮೋದಿ, ಅಮಿತ್ ಶಾ ರಾಜನಾಥ್ ಸಿಂಗ್ ಅವರನ್ನುದ್ದೇಶಿಸಿ ಎಚ್ಚರಿಕೆ ರೂಪದಲ್ಲಿ ಮಾತನಾಡಿದವರು ಬಾಂಗ್ಲಾ ದೇಶದ ಮಾಜಿ ಲೆಫ್ಟಿನೆಂಟ್ ಕರ್ನಲ್.ಮನೀಶ್ ದೆವಾನ್ ಅವರಾಗಿದ್ದಾರೆ. ಇವರು ಸೇನಾ ಮುಖ್ಯಸ್ಥರಲ್ಲ ಎಂದು ತಿಳಿದುಬಂದಿದೆ.

Also Read: ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಶಿವಲಿಂಗ, ಸುದರ್ಶನ ಚಕ್ರ ಪತ್ತೆಯಾಗಿದೆಯೇ?

Result: False

.Our Sources
Instagram Post By ABP Ananda, Dated: December 7, 2024

Report By Financial Express B D, Dated: December 7, 2024

YouTube Video By Jamuna TV, Dated: December 7, 2024

Report By shomoyeralo, Dated: December 7, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,658

Fact checks done

FOLLOW US
imageimageimageimageimageimageimage