Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಬಾಂಗ್ಲಾದೇಶದ ಘರ್ಷಣೆಯಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಅವರನ್ನು ಹತ್ಯೆ ಮಾಡಲಾಗಿದೆ
Fact
ಬಾಂಗ್ಲಾದೇಶದ ಘರ್ಷಣೆಯಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವುದು ತಪ್ಪಾಗಿದೆ, ಛತ್ತಗ್ರಾಮದಲ್ಲಿ ಬರ್ಬರವಾಗಿ ಹತ್ಯೆಯಾದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರು ಚಿನ್ಮೋಯ್ ದಾಸ್ ಅವರ ಪರ ವಕೀಲರಲ್ಲ
ಬಾಂಗ್ಲಾದೇಶದ ರಾಷ್ಟ್ರೀಯ ಧ್ವಜವನ್ನು ಅವಮಾನಿಸಿದ ಆರೋಪದಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ಬಂಧಿಸಿದ ನಂತರ ಬಾಂಗ್ಲಾದೇಶದಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಂಡಿದೆ . ಅವರಿಗೆ ಜಾಮೀನು ನಿರಾಕರಿಸಲಾಗಿದ್ದು, ನಂತರದ ಘರ್ಷಣೆಯಲ್ಲಿ ಸೈಫುಲ್ ಇಸ್ಲಾಂ ಅಲಿಫ್ ಎಂಬ ವಕೀಲರು ಹತ್ಯೆಯಾಗಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ, ರಿಪಬ್ಲಿಕ್ , ಫಸ್ಟ್‌ಪೋಸ್ಟ್ ಮತ್ತು ಆಪ್ ಇಂಡಿಯಾ, ಕನ್ನಡ ದುನಿಯಾ ಅನೇಕ ಸುದ್ದಿವಾಹಿನಿಗಳು ಹಿಂದೂ ಅರ್ಚಕರ ಪರ ವಾದಿಸುತ್ತಿದ್ದ ವಕೀಲರು ಘರ್ಷಣೆಯಲ್ಲಿ ಕೊಲ್ಲಲ್ಪಟ್ಟರು ಎಂದು ವರದಿ ಮಾಡಿವೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಆರೋಪ ವ್ಯಾಪಕವಾಗಿತ್ತು.
ಬಂಗಾಳಿ ಭಾಷೆಯಲ್ಲಿ “ಚಿನ್ಮೋಯ್ ಕೃಷ್ಣ ದಾಸ್,” “ವಕೀಲರು” ಮತ್ತು “ಮೃತರು” ಎಂಬ ಪದಗಳನ್ನು ಬಳಸಿ ಗೂಗಲ್ ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ ನವೆಂಬರ್ 27, 2024 ರಂ ವ್ಯೂಸ್ ಬಾಂಗ್ಲಾದೇಶದ ವರದಿ ಲಭ್ಯವಾಗಿದೆ. . ಬಾಂಗ್ಲಾದೇಶದ ಮುಖ್ಯ ಸಲಹೆಗಾರರ ಪತ್ರಿಕಾ ವಿಭಾಗದ ಹೇಳಿಕೆಯನ್ನು ಉಲ್ಲೇಖಿಸಿ, ಅದು ಇಸ್ಕಾನ್ ಅರ್ಚಕರನ್ನು ಪ್ರತಿನಿಧಿಸುವ ಸಾವಿನ ಕುರಿತಾದ ಹೇಳಿಕೆಗಳು ಸುಳ್ಳು ಎಂದಿದೆ.
ನಾವು ನಂತರ ಬಾಂಗ್ಲಾದೇಶ CA ಪ್ರೆಸ್ ವಿಂಗ್ ಫ್ಯಾಕ್ಟ್ಸ್‌ನ ಅಧಿಕೃತ ಫೇಸ್‌ಬುಕ್ ಖಾತೆಯನ್ನು ನೋಡಿದ್ದೇವೆ ಮತ್ತು ಕ್ಲೈಮ್‌ಗೆ ಸಂಬಂಧಿಸಿದ ಸಂಪೂರ್ಣ ಹೇಳಿಕೆಯನ್ನು ಕಂಡುಕೊಂಡಿದ್ದೇವೆ.
“ಇಂದು ಛತ್ತಗ್ರಾಮದಲ್ಲಿ ಬರ್ಬರವಾಗಿ ಹತ್ಯೆಯಾದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರು ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಕೆಲವು ಭಾರತೀಯ ಮಾಧ್ಯಮಗಳು ಹೇಳುತ್ತಿವೆ. ಈ ಹಕ್ಕು ಸುಳ್ಳು ಮತ್ತು ದುರುದ್ದೇಶಪೂರಿತವಾಗಿ ಹರಡಲಾಗುತ್ತಿದೆ. ಚಿನ್ಮೋಯ್ ಕೃಷ್ಣ ದಾಸ್ ಅವರು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವಕಾಲತ್ತಿನಲ್ಲಿ ವಕೀಲ ಸುಬಾಶಿಶ್ ಶರ್ಮಾ ಅವರನ್ನು ವಕೀಲರು ಎಂದು ಹೇಳಲಾಗಿದೆ.. ಯಾವುದೇ ಪ್ರಚೋದನಕಾರಿ, ಸುಳ್ಳು ವರದಿಯಿಂದ ದೂರವಿರುವಂತೆ ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ, ”ಎಂದು ಪೋಸ್ಟ್ ಹೇಳಿದೆ.
ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ವಕಾಲತ್ತಿನಲ್ಲಿ (ಕಾನೂನು ದಾಖಲೆ) ದಾಸ್ ಅವರ ವಕೀಲ ಎಂದು ಒಬ್ಬ “ಸುಬಾಸಿಶ್ ಶರ್ಮಾ” ಅನ್ನು ಪಟ್ಟಿಮಾಡಲಾಗಿದೆ. ಇದನ್ನು ಕೆಳಗೆ ನೋಡಬಹುದು
ಬಾಂಗ್ಲಾದೇಶದ ಸಿಎಒ – ಮುಖ್ಯ ಸಲಹೆಗಾರರ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಕೂಡ ಇದು ತಪ್ಪು ಮಾಹಿತಿ ಎಂದಿದ್ದಾರೆ. “ಕಳೆದ ರಾತ್ರಿ ಕೊಲ್ಲಲ್ಪಟ್ಟ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರು ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲರಲ್ಲ ಎಂದು ಹೇಳಲು ಸಾಕಷ್ಟು ಸಮಯ ತೆಗೆದುಕೊಂಡಿತು. ಅವರು ಶ್ರೀ ದಾಸ್ ಅವರ ವಕೀಲರಲ್ಲ ಎಂದು ದೃಢೀಕರಿಸಲು ನಾವು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಸೇರಿದಂತೆ ಚಿತ್ತಗಾಂಗ್‌ನಲ್ಲಿ ಅರ್ಧ ಡಜನ್ ವಕೀಲರನ್ನು ಮಾತನಾಡಿದ್ದೇವೆ. ನಾವು PP ಗಳು ಮತ್ತು APP ಗಳ ಪಟ್ಟಿಯನ್ನು ಪಡೆದುಕೊಂಡಿದ್ದೇವೆ. ಅವರ ಹೆಸರು ಇರಲಿಲ್ಲ…” ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸುಬಾಸಿಶ್ ಶರ್ಮಾ ಅವರನ್ನು ಅರ್ಚಲರ ವಕೀಲ ಎಂದು ಗುರುತಿಸಿದ ಬಿಬಿಸಿ ಬಾಂಗ್ಲಾ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ . “ಸನಾತನಿಗಳ ಎಂಟು ಅಂಶಗಳ ಚಳುವಳಿಯನ್ನು ಹತ್ತಿಕ್ಕಲು ಮೂರನೇ ಶಕ್ತಿಯ ಪಿತೂರಿಯಿಂದ ಈ ಬಂಧನ ಸಂಭವಿಸಬಹುದು ಎಂದು ಚಿನ್ಮೋಯ್ ಪ್ರಭು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಸರ್ಕಾರ ತಪ್ಪು ಮಾಡುತ್ತಿದೆ. ಮೂಲಭೂತವಾಗಿ ನಾವು ಯಾವುದೇ ಸರ್ಕಾರಿ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿಲ್ಲ ಎಂದು ಶರ್ಮಾ ಬಿಬಿಸಿ ಬಾಂಗ್ಲಾಗೆ ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಮತ್ತು ಹೇಳಿಕೆ ಕುರಿತಂತೆ ಸ್ಪಷ್ಟನೆ ಕೋರಿ ನ್ಯೂಸ್‌ಚೆಕರ್ ಸುಬಾಶಿಶ್ ಅವರನ್ನು ಸಂಪರ್ಕಿಸಿದೆ. ಅವರ ಪ್ರತಿಕ್ರಿಯೆ ಸ್ವೀಕರಿಸಿದ ಬಳಿಕ ಲೇಖನವನ್ನು ನವೀಕರಿಸಲಾಗುವುದು.
ಈ ಸತ್ಯಶೋಧನೆಯ ಪ್ರಕಾರ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಪರ ವಕೀಲರನ್ನು ಬಾಂಗ್ಲಾದೇಶದಲ್ಲಿ ಕೊಲ್ಲಲಾಗಿದೆ ಎಂಬ ವೈರಲ್ ಹೇಳಿಕೆ ಸುಳ್ಳು.
Our Sources
Facebook Post By CA Press Wing Facts, Dated: November 26, 2024
Facebook Post By @shafiqul.alam.71216, Dated: November 26, 2024
Report By BBC Bangla, Dated: November 26, 2024
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.