Authors
Claim
ತೆಂಗಿನ ನೀರು ಮತ್ತು ನಿಂಬೆ ಹಣ್ಣಿನ ರಸದಿಂದ ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ
Fact
ತೆಂಗಿನ ನೀರು ಮತ್ತು ನಿಂಬೆ ರಸವು ಮೂತ್ರಪಿಂಡದ ಕಲ್ಲು ತಡೆಗಟ್ಟುವಿಕೆಗೆ ಸಂಭಾವ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಅದನ್ನು ಕುಡಿಯುವುದು ಚಿಕಿತ್ಸೆಯಲ್ಲ. ಈ ಸಂಯೋಜನೆಯು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ ಎಂಬ ಹೇಳಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ
ತೆಂಗಿನ ನೀರು ಮತ್ತು ನಿಂಬೆ ಹಣ್ಣಿನ ರಸದಿಂದ ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ತೆಂಗಿನ ನೀರಿಗೆನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿದರೆ ಒಂದೇ ದಿನದಲ್ಲಿ ಮೂತ್ರಪಿಂಡದ ಕಲ್ಲುಗಳು ನಿವಾರಣೆಯಾಗುತ್ತವೆ” ಎಂದಿದೆ.
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದ, ಇದು ತಪ್ಪಾದ ಹೇಳಿಕೆ ಎಂದು ಕಂಡುಕೊಂಡಿದ್ದೇವೆ.
Fact Check/Verification
ನಿಂಬೆ ರಸದೊಂದಿಗೆ ತೆಂಗಿನ ನೀರು ಕೇವಲ ಒಂದೇ ದಿನದಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದೇ?
ಇಲ್ಲ, ನಿಂಬೆ ರಸದೊಂದಿಗೆ ಬೆರೆಸಿದ ತೆಂಗಿನ ನೀರು ಕೇವಲ ಒಂದು ದಿನದಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಮೂತ್ರಪಿಂಡದ ಕಲ್ಲುಗಳು ಗಟ್ಟಿಯಾದ ನಿಕ್ಷೇಪಗಳಾಗಿವೆ ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಇವುಗಳು ಖನಿಜಗಳು ಮತ್ತು ಲವಣಗಳಿಂದ ಮಾಡಲ್ಪಟ್ಟಿದೆ. 2018 ರ ಅಧ್ಯಯನದ ಪ್ರಕಾರ ಮೂತ್ರಪಿಂಡದ ಕಲ್ಲುಗಳು ಸುಲಭವಾಗಿ ಕರಗುವುದಿಲ್ಲ ಎಂದು ಹೇಳುತ್ತದೆ. ಮತ್ತು ಯಾವುದೇ ಸರಳ ಆಹಾರಕ್ಕೆ ಅವುಗಳನ್ನು ಒಡೆಯುವ ಸಾಮರ್ಥ್ಯವಿದೆ ಎಂದು ಸಾಬೀತಾಗಿಲ್ಲ. ತೆಂಗಿನ ನೀರು ಮತ್ತು ನಿಂಬೆ ರಸವು ಕೆಲವು ರೀತಿಯಲ್ಲಿ ಮೂತ್ರಪಿಂಡದ ಕಲ್ಲುಗಳ ವಿಚಾರದಲ್ಲಿ ನಿರ್ವಹಣೆಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ಸಾಕಷ್ಟು ನೀರಿನಂಶವನ್ನು ಇರುವಂತೆ ಮಾಡುವ ಮತ್ತು ಮೂತ್ರದ ಸಂಯೋಜನೆಯನ್ನು ಬದಲಾಯಿಸುವ ಮೂಲಕ ಕೆಲಸ ಮಾಡುತ್ತದೆ. ಆದರೆ ಅವುಗಳು ಕಲ್ಲುಗಳನ್ನು ಕರಗಿಸಲು ಸಾಧ್ಯವಿಲ್ಲ. ಕಲ್ಲು ತೆಗೆಯಲು ಔಷಧಿಗಳು ಅಥವಾ ಲಿಥೊಟ್ರಿಪ್ಸಿಯಂತಹ ಕಾರ್ಯವಿಧಾನಗಳಂತಹ ಸರಿಯಾದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ.
ತೆಂಗಿನ ನೀರು ಮೂತ್ರಪಿಂಡದ ಕಲ್ಲು ಉಂಟಾಗುವುದನ್ನು ತಡೆಯುತ್ತದೆಯೇ ಅಥವಾ ನಿರ್ವಹಣೆಗೆ ಪೂರಕವೇ?
ಆಹಾರ ಮತ್ತು ಪೋಷಣೆ ಕುರಿತ ತಜ್ಞರಾದ ಡಾ.ಸ್ವಾತಿ ದವೆ ಅವರು ಹೇಳುವ ಪ್ರಕಾರ, ತೆಂಗಿನ ನೀರು ಸಾಕಷ್ಟು ನೀರಿನಂಶ ದೇಹದಲ್ಲಿರುವುದಕ್ಕೆ ಪೂರಕವಾಗಿದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಮುಖ್ಯವಾಗಿದೆ, ಆದರೆ ಅದು ನೇರವಾಗಿ ಅವುಗಳನ್ನು ಕರಗಿಸುವುದಿಲ್ಲ.
ತೆಂಗಿನ ನೀರು ಜಲಸಂಚಯನದ ನೈಸರ್ಗಿಕ ಮೂಲವಾಗಿದೆ, ಮತ್ತು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಚೆನ್ನಾಗಿ ನೀರಿನಂಶ ಇರುವಂತೆ ಮಾಡುವಲ್ಲಿ ಪ್ರಮುಖ ಅಂಶವಾಗಿದೆ. ಸರಿಯಾದ ಜಲಸಂಚಯನವು ಮೂತ್ರವನ್ನು ದುರ್ಬಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಲ್ಲುಗಳನ್ನು ರೂಪಿಸುವ ಖನಿಜಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ತೆಂಗಿನ ನೀರು ಮೂತ್ರದ ಸಂಯೋಜನೆಯ ಮೇಲೆ ಪ್ರಭಾವ ಬೀರುವ ಮೂಲಕ ಮೂತ್ರಪಿಂಡದಲ್ಲಿ ಸ್ಫಟಿಕ ರಚನೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಆದಾಗ್ಯೂ, ಈ ಪರಿಣಾಮವು ಅಸ್ತಿತ್ವದಲ್ಲಿರುವ ಕಲ್ಲುಗಳನ್ನು ಕರಗಿಸುವುದಕ್ಕೆ ಸಮವಾದ್ದಲ್ಲ.
ಮೂತ್ರಪಿಂಡದ ಕಲ್ಲು ನಿರ್ವಹಣೆಯಲ್ಲಿ ನಿಂಬೆ ರಸವು ಯಾವ ಪಾತ್ರವನ್ನು ವಹಿಸುತ್ತದೆ?
ಅಹಮದಾಬಾದ್ ನ ಮಧುಮೇಹ ಶಿಕ್ಷಣ ತಜ್ಞರು, ಹಿರಿಯಆಹಾರ ತಜ್ಞೆ, ಹರಿತಾ ಅಧ್ವರ್ಯು ಅವರು ಹೇಳುವಂತೆ “ನಿಂಬೆ ರಸವು ಕೆಲವು ರೀತಿಯ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಮತ್ತೆ ಅದು ಅವುಗಳನ್ನು ಕರಗಿಸುವುದಿಲ್ಲ.”
ನಿಂಬೆ ರಸವು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಮೂತ್ರದ ಕ್ಯಾಲ್ಸಿಯಂಗೆ ಬಂಧಿಸುತ್ತದೆ ಮತ್ತು ಕಲ್ಲುಗಳ ರಚನೆಯನ್ನು ತಡೆಯುತ್ತದೆ. ಮೂತ್ರಪಿಂಡದ ಕಲ್ಲುಗಳಲ್ಲಿ ಸಾಮಾನ್ಯ ವಿಧವಾದ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳಿಗೆ ಗುರಿಯಾಗುವ ಜನರಿಗೆ ಇದು ವಿಶೇಷವಾಗಿ ಸಹಾಯಕವಾಗಿದೆ. ನಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರದಲ್ಲಿ ಸಿಟ್ರೇಟ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಕಲ್ಲಿನ ರಚನೆಯಾಗುವುದನ್ನು ಕಡಿಮೆಮಾಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಆದಾಗ್ಯೂ, ನಿಂಬೆ ರಸವು ಈಗಾಗಲೇ ರೂಪುಗೊಂಡ ಕಲ್ಲುಗಳನ್ನು ಒಡೆಯಲು ಅಥವಾ ಕರಗಿಸಲು ಸಾಧ್ಯವಿಲ್ಲ.
ಮೂತ್ರಪಿಂಡದ ಕಲ್ಲು ಸಮಸ್ಯೆಗೆ ತೆಂಗಿನ ನೀರು ಮತ್ತು ನಿಂಬೆ ರಸವನ್ನು ಬಳಸುವುದರಿಂದ ಯಾವುದೇ ಅಪಾಯವಿದೆಯೇ?
ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ತೆಂಗಿನ ನೀರು ಅಥವಾ ನಿಂಬೆ ರಸದ ಅತಿಯಾದ ಸೇವನೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಮತ್ತು ದೊಡ್ಡ ಪ್ರಮಾಣದಲ್ಲಿ ಕುಡಿಯುವುದು ಅಸಮತೋಲನಕ್ಕೆ ಕಾರಣವಾಗಬಹುದು, ವಿಶೇಷವಾಗಿ ಮೂತ್ರಪಿಂಡದ ಸಮಸ್ಯೆ ಇರುವವರಿಗೆ ತೊಂದರೆಯಾಗಬಹುದು. ನಿಂಬೆ ರಸ ಹೆಚ್ಚಿನದಿಂದ ಆಸಿಡ್ ರಿಫ್ಲೆಕ್ಸ್ ಆಗಬಹುದು. ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಸಮಸ್ಯೆಯಾಗಬಹುದು. ಸಮತೋಲಿತ ಆಹಾರದ ಭಾಗವಾಗಿ ಈ ಪಾನೀಯಗಳನ್ನು ಮಿತವಾಗಿ ಸೇವಿಸಬೇಕು. ಮೂತ್ರಪಿಂಡದ ಕಲ್ಲಿನ ಸಮಸ್ಯೆ ಹೊಂದಿದ್ದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ಮೂತ್ರಪಿಂಡದ ಕಲ್ಲುಗಳನ್ನು ನಿರ್ವಹಿಸಲು ಅಥವಾ ಚಿಕಿತ್ಸೆ ನೀಡಲು ಉತ್ತಮ ಮಾರ್ಗ ಯಾವುದು?
ಮೂತ್ರಪಿಂಡದ ಕಲ್ಲಿನ ಸಮಸ್ಯೆ ಹೊಂದಿದ್ದರೆ, ಕೆಲವು ವೈಜ್ಞಾನಿಕ ಸಲಹೆಗಳು ಇಲ್ಲಿವೆ:
- ಸಾಕಷ್ಟು ನೀರು: ಸಾಕಷ್ಟು ನೀರು ಕುಡಿಯುವುದು ಮೂತ್ರವನ್ನು ದುರ್ಬಲಗೊಳಿಸಲು ಸಹಾಯ ಮಾಡುತ್ತದೆ, ಇದರಿಂದ ಕಲ್ಲುಗಳ ರಚನೆ ಕಷ್ಟವಾಗುತ್ತದೆ. ದಿನಕ್ಕೆ ಕನಿಷ್ಠ 2-3 ಲೀಟರ್ ದ್ರವಾಹಾರ ಸೇವನೆ ಮಾಡಿ.
- ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಸೇವನೆ: ಹೆಚ್ಚಿನ ಕ್ಯಾಲ್ಸಿಯಂ ಅಥವಾ ಆಕ್ಸಲೇಟ್ ಕಲ್ಲಿನ ರಚನೆಯನ್ನು ಉತ್ತೇಜಿಸುತ್ತದೆ. ಪಾಲಕ್, ಬೀಜಗಳು ಮತ್ತು ಚಾಕೊಲೇಟ್‌ಗಳಂತಹ ಆಹಾರಗಳಲ್ಲಿ ಆಕ್ಸಲೇಟ್‌ಗಳು ಅಧಿಕವಾಗಿರುತ್ತವೆ, ಆದ್ದರಿಂದ ಅವುಗಳನ್ನು ಮಿತವಾಗಿ ತಿನ್ನಬೇಕು.
- ಉಪ್ಪು ಮತ್ತು ಪ್ರಾಣಿ ಪ್ರೋಟೀನ್ ಅನ್ನು ಕಡಿಮೆ ಮಾಡಿ: ಹೆಚ್ಚಿನ ಸೋಡಿಯಂ ಮತ್ತು ಅತಿಯಾದ ಮಾಂಸ ಸೇವನೆಯಿಂದ ಕಲ್ಲಿನ ಅಪಾಯ ಹೆಚ್ಚಾಗಿದೆ.
- ಸಿಟ್ರೇಟ್ ಭರಿತ ಆಹಾರಗಳನ್ನು ಸೇರಿಸಿ: ನಿಂಬೆ ರಸದೊಂದಿಗೆ, ಕಿತ್ತಳೆಯಂತಹ ಇತರ ಸಿಟ್ರಸ್ ಹಣ್ಣುಗಳು ಸಿಟ್ರೇಟ್ ಮಟ್ಟವನ್ನು ಹೆಚ್ಚಿಸಬಹುದು, ಇದು ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ವೈದ್ಯಕೀಯ ಸಲಹೆ: ಕಲ್ಲುಗಳ ರಚನೆಯನ್ನು ತಡೆಗಟ್ಟಲು ಅಥವಾ ಸಣ್ಣ ಕಲ್ಲುಗಳು ನಿವಾರಣೆಯಾಗಲು ಔಷಧಗಳನ್ನು ವೈದ್ಯರು ಶಿಫಾರಸು ಮಾಡಬಹುದು. ದೊಡ್ಡ ಅಥವಾ ಹೆಚ್ಚು ಸಮಸ್ಯೆಯಿರು ಕಲ್ಲುಗಳಿಗೆ, ವೈದ್ಯಕೀಯ ವಿಧಾನಗಳು ಬೇಕಾಗಬಹುದು.
ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮೂತ್ರಕೋಶ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞರಾಗಿರುವ, ಡಾ ಗಣೇಶ್ ಶ್ರೀನಿವಾಸ ಪ್ರಸಾದ್ ಪಿ ಅವರೊಂದಿಗೆ ನಾವು ಮಾತನಾಡಿದಾಗ, “ಮೂತ್ರಪಿಂಡದ ಕಲ್ಲುಗಳು ರೂಪುಗೊಂಡ ನಂತರ, ಅವುಗಳನ್ನು ತೆಗೆದುಹಾಕಲು ವೈದ್ಯಕೀಯ ಮಧ್ಯಸ್ಥಿಕೆಯು ಸಾಮಾನ್ಯವಾಗಿ ಅಗತ್ಯವಾಗಿರುತ್ತದೆ, ಆದರೆ ಹೊಸ ಕಲ್ಲುಗಳು ಸೃಷ್ಟಿಯಾಗುವುದನ್ನು ಅಪಾಯವನ್ನು ಕಡಿಮೆ ಮಾಡಲು ಮಾರ್ಗಗಳಿವೆ ಎಂದು ಅವರು ವಿವರಿಸಿದ್ದಾರೆ. ಕಲ್ಲಿನ ಗಾತ್ರ ಅವಲಂಬಿಸಿ ಚಿಕಿತ್ಸೆಯು ಬದಲಾಗುತ್ತದೆ ಮತ್ತು ತೆಂಗಿನ ನೀರು ಮತ್ತು ನಿಂಬೆ ರಸವು ಅವುಗಳನ್ನು ತಡೆಯುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಬದಲಾಗಿ, ದೇಹದಲ್ಲಿ ಸಾಕಷ್ಟು ನೀರಿನಂಶ ಹೊಂದುವುದು, ಉಪ್ಪನ್ನು ಕಡಿಮೆ ಮಾಡುವುದು, ಕ್ಯಾಲ್ಸಿಯಂ ಭರಿತ ಆಹಾರಗಳನ್ನು ತಿನ್ನುವುದು, ಹೆಚ್ಚಿನ ಆಕ್ಸಲೇಟ್ ಆಹಾರವನ್ನು ತಪ್ಪಿಸುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ. ಯೂರಿಕ್ ಆಸಿಡ್ ಕಲ್ಲುಗಳಿಗೆ ಒಳಗಾದವರು, ಮಾಂಸ, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಸೀಮಿತಗೊಳಿಸುವುದು, ಮದ್ಯ ಮತ್ತು ಧೂಮಪಾನವನ್ನು ತಪ್ಪಿಸುವುದು ಅದರ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದಿದ್ದಾರೆ.
Conclusion
ತೆಂಗಿನ ನೀರು ಮತ್ತು ನಿಂಬೆ ರಸವು ಮೂತ್ರಪಿಂಡದ ಕಲ್ಲು ತಡೆಗಟ್ಟುವಿಕೆಗೆ ಸಂಭಾವ್ಯ ಪ್ರಯೋಜನಗಳನ್ನು ಹೊಂದಿರುವ ಆರೋಗ್ಯಕರ ಆಯ್ಕೆಗಳಾಗಿದ್ದರೂ, ಅದು ಚಿಕಿತ್ಸೆಯಲ್ಲ. ಈ ಸಂಯೋಜನೆಯು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ ಎಂಬ ಹೇಳಿಕೆಯು ವೈಜ್ಞಾನಿಕ ಪುರಾವೆಯನ್ನು ಹೊಂದಿಲ್ಲ. ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಜಲಸಂಚಯನ, ಆಹಾರದ ಹೊಂದಾಣಿಕೆಗಳು ಮತ್ತು ಕೆಲವೊಮ್ಮೆ ವೈದ್ಯಕೀಯ ಸಲಹೆ ಸೇರಿದಂತೆ ಬಹುಮುಖಿ ವಿಧಾನದ ಅಗತ್ಯವಿದೆ.
Result: False
Our Sources
Overview: Kidney stones – InformedHealth.org – NCBI Bookshelf
Geobiology reveals how human kidney stones dissolve in vivo – PMC
Coconut Water: An Unexpected Source of Urinary Citrate – PMC
Fresh lemon juice supplementation for the prevention of recurrent stones in calcium oxalate nephrolithiasis: A pragmatic, prospective, randomised, open, blinded endpoint (PROBE) trial – PMC
Is coconut water good for heart health?- THIP Media
Eating, Diet, & Nutrition for Kidney Stones – NIDDK
Six Easy Ways to Prevent Kidney Stones | National Kidney Foundation
(This article has been published in collaboration with THIP Media)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.