Authors
Claim
ಬಾಂಗ್ಲಾ ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆ
Fact
ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆ ತಪ್ಪಾಗಿದೆ. ಬಾಂಗ್ಲಾ ರಾಜಕಾರಣಿ ಮತ್ತು ಕ್ರಿಕೆಟಿಗ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. “ಬಾಂಗ್ಲಾದೇಶದ ಹಿಂದೂ ಆಟಗಾರ ಲಿಟ್ಟನ್ ದಾಸ್ ಮನೆ ಗಲಭೆಯಲ್ಲಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ..” ಎಂಬ ಹೇಳಿಕೆಯನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್
ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ನೋಡಬಹುದು. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Fact Check/Verification
ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಹಿಂದೂ ಎಂಬ ಕಾರಣಕ್ಕೆ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಹೇಳಿಕೆಯನ್ನು ಪರಿಶೀಲಿಸಲು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಗಳನ್ನು ಮಾಡಿದ್ದೇವೆ. ಈ ವೇಳೆ ಬೆಂಕಿಗೆ ಆಹುತಿಯಾದ ಮನೆ ಲಿಟನ್ ಕುಮಾರ್ ದಾಸ್ ಅವರದ್ದಲ್ಲ, ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮತ್ತು ಅವಾಮಿ ಲೀಗ್ ಸಂಸದ ಮಶ್ರಫೆ ಬಿನ್ ಮೊರ್ತಾಜಾ ಅವರದ್ದು ಎಂದು ತಿಳಿದುಬಂದಿದೆ. ಈ ಕುರಿತ ವರದಿಯನ್ನು ಪ್ರೊಥೋಮ್ ಅಲೋ, ಢಾಕಾ ಟ್ರಿಬ್ಯೂನ್ ಮತ್ತು ಯುಎನ್ಬಿಯಲ್ಲಿ ನೋಡಬಹುದು.
ಇದೇ ವೇಳೆ ವೈರಲ್ ಹೇಳಿಕೆಗಳಲ್ಲಿ ಕಂಡುಬಂದ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಆ ಫೊಟೋ ಯುಎನ್ಬಿಯ ‘ಮಶ್ರಾಫೆ ಅವರ ನರೈಲ್ ಹೌಸ್ ಆನ್ ಫೈರ್’ ಎಂಬ ವರದಿಯಲ್ಲಿ ಪ್ರಕಟವಾದ ಚಿತ್ರವನ್ನು ಹೋಲುತ್ತದೆ ಎಂದು ತೋರಿಸುತ್ತದೆ.
ಇದಲ್ಲದೆ, ಅನೇಕ ಕೀವರ್ಡ್ ಹುಡುಕಾಟಗಳ ನಂತರ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಿದ ಘಟನೆಯ ಬಗ್ಗೆ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶವನ್ನು ತೊರೆಯಬೇಕಾಯಿತು. ಅಂದಿನಿಂದ, ದೇಶಾದ್ಯಂತ ಹಿಂಸಾಚಾರ ಮತ್ತು ಸಾವುನೋವುಗಳು, ವಿಧ್ವಂಸಕತೆ, ಲೂಟಿ ಮತ್ತು ದಾಳಿಯ ಘಟನೆಗಳು ಬೆಳಕಿಗೆ ಬಂದಿವೆ. ಅದೇ ಸಮಯದಲ್ಲಿ, ಅಲ್ಪಸಂಖ್ಯಾತರ ಮೇಲಿನ ದಾಳಿಯ ಹಕ್ಕು ಸಾಮಾಜಿಕ ಮಾಧ್ಯಮಗಳ ಮೂಲಕವೂ ಹರಡಿತು.
ವಿವಿಧ ವರದಿಗಳ ಪ್ರಕಾರ, ಅವಾಮಿ ಲೀಗ್ನ ವಿವಿಧ ಪಕ್ಷದ ಕಚೇರಿಗಳನ್ನು ದೇಶಾದ್ಯಂತ ಧ್ವಂಸಗೊಳಿಸಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ. ಬಾಂಗ್ಲಾ ರಾಜಕಾರಣಿ ಮತ್ತು ಕ್ರಿಕೆಟಿಗ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆ ಮತ್ತು ಶಕೀಬ್ ಅವರ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅವಾಮಿ ಲೀಗ್ ಪರ ನಾಯಕರ ಮನೆಗಳ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ. ವರದಿಯನ್ನು ಕಾಲೇರ್ ಕಾಂತಾ, ನಯಾ ದಿಗಂತ ಮತ್ತು ಜುಗಂಟೋರ್ ಗಳಲ್ಲಿ ನೋಡಬಹುದು. ನಯಾ ದಿಗಂತದ ವರದಿಯ ಪ್ರಕಾರ, ದೇಶಾದ್ಯಂತ 31 ಜನರು ಸಾವನ್ನಪ್ಪಿದ್ದಾರೆ ಮತ್ತು 817 ಜನರು ಗಾಯಗೊಂಡಿದ್ದಾರೆ. ಆದಾಗ್ಯೂ, ಯಾವುದೇ ಮಾಧ್ಯಮ ವರದಿ ಅಥವಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ (ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್) ಲಿಟನ್ ಕುಮಾರ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ.
Also Read: ವಯನಾಡ್ ದುರಂತ ಎಂದು ಎಐ ಫೋಟೋ ಹಂಚಿಕೆ
Conclusion
ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆ ತಪ್ಪಾಗಿದೆ. ಬಾಂಗ್ಲಾ ರಾಜಕಾರಣಿ ಮತ್ತು ಕ್ರಿಕೆಟಿಗ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
Result: False
Our Sources
Report By Prothom Alo, Dated: August 05, 2024
Report By Dhaka tribune, Dated: August 05, 2024
Report By UNB, Dated: August 05, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಬಾಂಗ್ಲಾದೇಶದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.