Authors
Claim
ಫೋಟೋ ತೆಗೆಸಿಕೊಳ್ಳುತ್ತಿರುವ ಯುವತಿಯೊಬ್ಬಳನ್ನು ಮೊಸಳೆ ನುಂಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಟ್ವೀಟರ್ ಕ್ಲೇಮಿನಲ್ಲಿ “ಸಿಕ್ಕ ಸಿಕ್ಕ ಸೆಲ್ಪಿ ತೆಗೆದುಕೊಳ್ಳುವುದು, ಪೊಟೊ ತೆಗೆಸಿಕೊಳ್ಳುವ ಪರಿಣಾಮ ತುಂಬಾ ಅನಾಹುತಗಳಿಗೆ ಕಾರಣವಾಗಿದೆ. ಪೋಟೋಗಳ ಹುಚ್ಚು ತುಂಬಾ ಹೆಚ್ಚಾಗುತ್ತಿದೆ. ಅಪಾಯಗಳನ್ನು ನಾವೇ ತಂದು ಹಾಕಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ” ಎಂದು ಹೇಳಲಾಗಿದೆ. ಈ ಟ್ವೀಟ್ ಇಲ್ಲಿದೆ.
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ವೀಡಿಯೋದ ಸ್ಕ್ರೀನ್ ಗ್ರ್ಯಾಬ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಕ್ಲಬ್ 93.7 ವೆಬ್‌ಸೈಟ್ ನಲ್ಲಿ ಜೂನ್ 12, 20104ರಂದು ಕಂಡುಬಂದ ವರದಿಯ ಪ್ರಕಾರ “ಇದೊಂದು ಹಳೆಯ ಜಾಹೀರಾತಿನ ದೃಶ್ಯವಾಗಿದೆ”
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯೋಗೇಶ್ ಅಗರ್‌ವಾಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಪ್ಟೆಂಬರ್ 22, 2016ರಂದು ಅಪ್ಲೋಡ್ ಮಾಡಿರುವ ಇದೇ ವೀಡಿಯೋ ಲಭ್ಯವಾಗಿದೆ. ಜೊತೆಗೆ ವೈರಲ್ ವೀಡಿಯೋ ಮತ್ತು ವೀಡಿಯೋಕ್ಕೆ ಸಾಮ್ಯತೆ ಕಂಡುಬಂದಿದೆ. ಈ ವೀಡಿಯೋದಲ್ಲಿ “A crocodile eat a woman river bank Amazing Advertisement for a bag product” ಹೆಸರಿನ ಶೀರ್ಷಿಕೆಯಲ್ಲಿ ಇದೊಂದು ಬ್ಯಾಗ್‌ನ ಅದ್ಭುತ ಜಾಹೀರಾತು ಎಂದು ಹೇಳಲಾಗಿರುವುದು ಮತ್ತಷ್ಟು ಶೋಧನೆ ನಡೆಸಲು ಕಾರಣವಾಯಿತು.
Also Read: ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆಯನ್ನು ಅಮೆರಿಕನ್ ಶೋದಲ್ಲಿ ಬಾಲಕರು ಹಾಡಿದ್ದಾರೆಯೇ? ಇಲ್ಲ, ಇದು ಸುಳ್ಳು
ಅದರಂತೆ ಯೂಟ್ಯೂಬ್ ನಲ್ಲಿ ನಾವು ಸರ್ಚ್ ನಡೆಸಿದ್ದು, ಮೂಲ ವೀಡಿಯೋ ಹೊಂದಿದ ಯೂಟ್ಯೂಬ್ ಚಾನೆಲ್ Preview PH ಅನ್ನು ನಾವು ಶೋಧಿಸಿದ್ದೇವೆ.
“How Not To Instagram” ಶೀರ್ಷಿಕೆಯಡಿಯಲ್ಲಿ ವೀಡಿಯೋ ನೀಡಲಾಗಿದೆ. “ಇದು 2013 ಸೆಪ್ಟೆಂಬರ್ ಸಂಚಿಕೆಯ ಪ್ರೀವ್ಯೂ ಮ್ಯಾಗಝೀನ್ ನ #imapreviewgirl ಎಂಬ ಕ್ಯಾಂಪೇನ್ ಆಗಿದೆ. ಸಿನೆಮಾ ರಂಗದ ನಮ್ಮ ಸ್ನೇಹಿತರ ಬಳಿ ಈ ಬಗ್ಗೆ ಪ್ರತಿಕ್ರಿಯಿಸಲು ಕೇಳಿಕೊಂಡಿದ್ದೇವೆ” ಎಂದು ವಿವರಣೆಯಲ್ಲಿದೆ.
ಈ ಸತ್ಯಶೋಧನೆಯ ಪ್ರಕಾರ, ಇದು ಬ್ಯಾಗ್ ಒಂದಕ್ಕಾಗಿ ತಯಾರು ಮಾಡಿರುವ ಜಾಹೀರಾತು. ಸಿಕ್ಕ ಸಿಕ್ಕಲ್ಲಿ ಫೊಟೋ ತೆಗೆಯುವುದರಿಂದ ಅನಾಹುತವಾಗಿದೆ ಎನ್ನುವುದು ಸುಳ್ಳು ಕ್ಲೇಮ್ ಆಗಿದೆ.
Result: False
Our Sources
Report By 93.7, Dated: June 12, 2023
YouTube Video By Yogesh Agarwal Dated: September 22, 2016
YouTube Video By How Not To Instagram Dated: October 3, 2013
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.