Authors
Claim
ನಟಿ ರಶ್ಮಿಕಾ ಮಂದಣ್ಣ ಕೆಂಪು ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡಿದ ವೀಡಿಯೋ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ಡೀಪ್ ಫೇಕ್ ವೀಡಿಯೋ ಎಂದು ನ್ಯೂಸ್ ಚೆಕರ್ ಕಂಡುಕೊಂಡಿದೆ.
Also Read: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?
Fact
ಸತ್ಯಶೋಧನೆಯ ಭಾಗವಾಗಿ ವೀಡಯೋವನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದ ಹಲವು ಫ್ರೇಂಗಳಲ್ಲಿ, ಮಹಿಳೆಯ ಚಲನೆಗಳು ಅಸ್ವಾಭಾವಿಕ ಮತ್ತು ವೀಡಿಯೋದಲ್ಲಿ ಒಂದು ರೀತಿ ಕೃತವಾಗಿರುವುದನ್ನು ನ್ಯೂಸ್‌ಚೆಕರ್ ಗಮನಿಸಿದೆ. ವಿಶೇಷವಾಗಿ ವಿಶೇಷವಾಗಿ ಕಣ್ಣುಗಳ ಸುತ್ತ ಕೃತಕ ರೂಪ ಇರುವುದನ್ನು ಗಮನಿಸಲಾಗಿದೆ.
ನಂತರ ನಾವು ವೀಡಿಯೋವನ್ನು ಎಐ ಪತ್ತೆ ಸಾಧನವಾದ ಟ್ರೂಮೀಡಿಯಾ ಮೂಲಕ ಪರೀಕ್ಷೆಗೆ ಮುಂದಾಗಿದ್ದೇವೆ. ಅದು ಈ ವೇಳೆ ಇದನ್ನು ತಿರುಚಲ್ಪಟ್ಟ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದೆ, ಅಲ್ಲದೇ ವೀಡಿಯೋವನ್ನು “ಹೆಚ್ಚು ಅನುಮಾನಾಸ್ಪದ” ಎಂದು ಗುರುತಿಸಿದೆ.
ನ್ಯೂಸ್ ಚೆಕರ್ ಕೂಡ ಭಾಗವಾಗಿರುವ ತಪ್ಪು ಮಾಹಿತಿ ಕಾಂಬ್ಯಾಟ್ ಅಲೈಯನ್ಸ್ (ಎಂಸಿಎ) ನ ಡೀಪ್ಫೇಕ್ಸ್ ಅನಾಲಿಸಿಸ್ ಯುನಿಟ್ (ಡಿಎಯು) ಹಲವಾರು ಡೀಪ್ ಫೇಕ್ ಪತ್ತೆ ಸಾಧನಗಳ ಮೂಲಕ ವೈರಲ್ ವೀಡಿಯೋದ ಪರೀಕ್ಷೆಯನ್ನು ನಡೆಸಿದೆ ಮತ್ತು ಎಐ ಬಳಸಿ ವೀಡಿಯೋವನ್ನು ತಿರುಚಲಾಗಿದೆ ಎಂದು ಕಂಡುಕೊಂಡಿರುವ ತಜ್ಞರೊಂದಿಗೆ ಮಾತುಕತೆ ನಡೆಸಿದೆ. ಈ ಬಗ್ಗೆ ಡಿಜಿಟಲ್ ವಿಧಿವಿಜ್ಞಾನ ಮತ್ತು ಎಐ ಪತ್ತೆಯಲ್ಲಿ ಪರಿಣತಿ ಹೊಂದಿರುವ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕ ಡಾ.ಹನಿ ಫರೀದ್ ಅವರು ಈ ವೀಡಿಯೋ ಫೇಸ್ ಸ್ವಾಪ್ ಡೀಪ್ ಫೇಕ್ ಆಗಿದೆ ಎಂದು ಡಿಎಯುಗೆ ತಿಳಿಸಿದ್ದಾರೆ
ನಂತರ ನಾವು ಕೀಫ್ರೇಮ್ಗಳ ಮೂಲಕ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಕೊಲಂಬಿಯಾದ ಸ್ಯಾಂಟಂಡರ್ ಮೂಲದ ರೂಪದರ್ಶಿ ಆಗಿರುವ ಡೇನಿಯೆಲಾ ವಿಲ್ಲಾರಿಯಲ್ ಏಪ್ರಿಲ್ 19 ರಂದು ಪೋಸ್ಟ್ ಮಾಡಿದ ಮೂಲ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು.
ಮೂಲ ವೀಡಿಯೋವನ್ನು (ಎಡ) ವೈರಲ್ ವೀಡಿಯೋದೊಂದಿಗೆ (ಬಲ) ಹೋಲಿಕೆ ಮಾಡಿದರೆ ಅದು ಡಿಜಿಟಲ್ ಆಗಿ ತಿರುಚಲಾದ ಅದೇ ವೀಡಿಯೋ ಎಂಬುದು ಖಚಿತವಾಗುತ್ತದೆ. ಈ ಬಗ್ಗೆ ನಾವು ನಾವು ಡೇನಿಯೆಲಾ ವಿಲ್ಲಾರಿಯಲ್ ಅವರನ್ನು ಸಂಪರ್ಕಿಸಿದ್ದು, ಅವರ ಪ್ರತಿಕ್ರಿಯೆಯನ್ನು ಪಡೆದ ಬಳಿಕ ಈ ಲೇಖನವನ್ನು ನವೀಕರಿಸಲಿದ್ದೇವೆ.
Also Read: ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನುವುದು ನಿಜವೇ?
Result: Altered Media
Our Sources
TrueMedia deepfake detection tool
Instagram post, Daniela Villareal, Dated: April 19, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.