Authors
Claim
ಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆ
Fact
ಈ ವೈರಲ್ ವೀಡಿಯೋ ತೆಲಂಗಾಣದ ಹುಜುರಾಬಾದ್ ಕ್ಷೇತ್ರದ್ದು ಮತ್ತು ಇದು 2021ರದ್ದು
ಮುಂಬರುವ ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಹಣವನ್ನು ವಿತರಿಸುತ್ತಿರುವುದನ್ನು ತೋರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವೀಡಿಯೋದಲ್ಲಿ ಮಹಿಳೆಯೊಬ್ಬರು ಆಡಳಿತಾರೂಢ ಬಿಜೆಪಿಯ ಚಿಹ್ನೆಯನ್ನು ಹೊಂದಿರುವ ಲಕೋಟೆಯನ್ನು ಹಿಡಿದುಕೊಂಡು ಅದರೊಳಗಿಂದ 2,000 ರೂ.ಗಳ ನೋಟುಗಳನ್ನು ಹೊರತೆಗೆದು ಎಣಿಸುವುದು ಕಂಡುಬಂದಿದೆ.
ಮೇ.10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ವೀಡಿಯೋ ಹರಿದಾಡುತ್ತಿದೆ.
ಸತ್ಯಶೋಧನೆಯ ವೇಳೆ ಇದು ಕರ್ನಾಟಕ ಚುನಾವಣೆಗೆ ಸಂಬಂಧಿಸಿಲ್ಲ ಆದರೆ ವಾಸ್ತವವಾಗಿ ತೆಲಂಗಾಣದ ಹುಜುರಾಬಾದ್ನಿಂದ ಬಂದಿದೆ ಮತ್ತು 2021ರ ಹುಜರಾಬಾದ್ ಉಪ ಚುನಾವಣೆ ಹೊತ್ತಿನದ್ದು ಎಂದು ತಿಳಿದುಬಂದಿದೆ.
ಇಂತಹ ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check/Verification
ಸತ್ಯ ಶೋಧನೆಗಾಗಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ 2021 ರ ಹಲವಾರು ಪೋಸ್ಟ್‌ಗಳು ಲಭ್ಯವಾಗಿವೆ. ಕಂಡುಕೊಂಡಿದ್ದೇವೆ, ಮತಕ್ಕಾಗಿ ಬಿಜೆಪಿ ಹಣ ವಿತರಿಸುತ್ತಿದೆ ಎಂದು ಹೇಳುವ ವೀಡಿಯೋ ವಾಸ್ತವವಾಗಿ 2021 ರಲ್ಲಿ ನಡೆದ ತೆಲಂಗಾಣದ ಹುಜುರಾಬಾದ್ ಉಪಚುನಾವಣೆಯಿಂದ ಬಂದಿದೆ ಎಂದು ಕಂಡುಬಂದಿದೆ.
ಅಕ್ಟೋಬರ್ 29, 2021 ರಂದು ಇಂಡಿಯಾ ಅಹೆಡ್ ನ್ಯೂಸ್ ತನ್ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡ ಅಂತಹ ಒಂದು ಪೋಸ್ಟ್ ಇಲ್ಲಿದೆ.
ವೈರಲ್ ವೀಡಿಯೊದಲ್ಲಿ ಕರೆನ್ಸಿ ನೋಟುಗಳನ್ನು ಹೊಂದಿರುವ ಲಕೋಟೆಯಲ್ಲಿರುವ ವ್ಯಕ್ತಿಯ ಫೋಟೋವನ್ನು ನಾವು ‘ಗೂಗಲ್ ಲೆನ್ಸ್’ ನಲ್ಲಿ ಹುಡುಕಿದ್ದು, ಅದು ಬಿಜೆಪಿ ನಾಯಕ ಇಟಾಲಾ ರಾಜೇಂದರ್ ಅವರನ್ನು ತೋರಿಸಿದೆ.
ಕೀ ವರ್ಡ್ ಸರ್ಚ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕರ್ನಾಟಕದ ಸಾಮಾಜಿಕ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂಡಿ ಕರೀಮ್ ಅವರು ಅಕ್ಟೋಬರ್ 28, 2021 ರಂದು ಇದೇ ರೀತಿಯ ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ. “ವಿಶ್ವದ ಅತ್ಯಂತ ಶ್ರೀಮಂತ ಪಕ್ಷವಾದ ಬಿಜೆಪಿ ತೆಲಂಗಾಣದ ಹುಜುರಾಬಾದ್ನಲ್ಲಿ ಪ್ರತಿ ಮತಕ್ಕೆ 10,000 ರೂಪಾಯಿಗಳನ್ನು ನೀಡುತ್ತಿದೆ ಮತ್ತು ಬಿಜೆಪಿ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಜನರು ಇನ್ನೂ ಭಾವಿಸುತ್ತಾರೆ” ಎಂದು ಕರೀಂ ಟ್ವೀಟ್ನಲ್ಲಿ ಆರೋಪಿಸಿದ್ದಾರೆ.
Also Read: ಲವ್ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್ ವೀಡಿಯೋ ತಯಾರಕರಿಂದ ಲವ್ ಜಿಹಾದ್ ಆರೋಪ ನಿರಾಕರಣೆ
ವೈರಲ್ ವೀಡಿಯೋಗಿಂತ ಈ ವೀಡಿಯೋ ತುಸು ಭಿನ್ನವಾಗಿದ್ದರೂ ಅದು ಇಟಾಲಾ ರಾಜೇಂದರ್ ಅವರ ಚಿತ್ರವನ್ನು ಹೊಂದಿರುವ ಅದೇ ಲಕೋಟೆಯನ್ನು ತೋರಿಸಿರುವುದು ಇದರಲ್ಲಿ ಕಂಡುಬಂದಿದೆ.
ನವೆಂಬರ್ 2, 2021 ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಭೂ ಕಬಳಿಕೆ ಆರೋಪದ ನಂತರ ಹುಜುರಾಬಾದ್ ಶಾಸಕ ಮತ್ತು ಸಚಿವ ಈಟಾಲ ರಾಜೇಂದ್ರ ಅವರನ್ನು ತೆಲಂಗಾಣ ಕ್ಯಾಬಿನೆಟ್ನಿಂದ ತೆಗೆದುಹಾಕಲಾಗಿದೆ. ಇದರ ನಂತರ, ರಾಜೇಂದ್ರ ಜೂನ್ ನಲ್ಲಿ ರಾಜೀನಾಮೆ ನೀಡಿದರು. ಇದು ಉಪಚುನಾವಣೆಗೆ ಕಾರಣವಾಯಿತು. ರಾಜೇಂದರ್ ಅವರು ಟಿಆರ್ಎಸ್ ತೊರೆದು ಬಿಜೆಪಿಗೆ ಸೇರಿದರು ಮತ್ತು ಬಿಜೆಪಿ ಟಿಕೆಟ್ನಲ್ಲಿ ಮರುಚುನಾವಣೆ ಬಯಸಿದ್ದರು. ಅವರು 90,533 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದರು.
ಹೀಗಾಗಿ ಬಿಜೆಪಿ ಮತಕ್ಕಾಗಿ ಹಣವನ್ನು ಹಂಚುತ್ತಿದೆ ಎಂಬ ಆರೋಪವು ಕರ್ನಾಟಕದ್ದಲ್ಲ ಎಂದು ನಾವು ತೀರ್ಮಾನಿಸಿದ್ದೇವೆ.
Conclusion
ಕರ್ನಾಟಕದಲ್ಲಿ ಮತಕ್ಕಾಗಿ ಬಿಜೆಪಿ ಹಣ ಹಂಚುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ತೆಲಂಗಾಣದಿಂದ ಬಂದಿದೆ ಎಂದು ನಾವು ತೀರ್ಮಾನಿಸಬಹುದು.
Result: False
Our Sources
Tweet by India Ahead News Dated: October 29, 2021
News report by Hindustan Times Dated: November 2,2021
Tweet by MD Kareem Dated: October 28, 2021
Official Facebook page of Eatala Rajender
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.