Authors
Claim:
ಕುಳಿತುಕೊಳ್ಳಲೂ ಸೋನಿಯಾ ಗಾಂಧಿ ಅನುಮತಿಗಾಗಿ ಕಾಯುತ್ತಿದ್ದ ಮಲ್ಲಿಕಾರ್ಜುನ ಖರ್ಗೆ
Fact:
ವೈರಲ್ ವೀಡಿಯೋ ಹುಬ್ಬಳ್ಳಿ ಕಾಂಗ್ರೆಸ್ ರಾಲಿಯದ್ದಾಗಿದ್ದು, ಇದರಲ್ಲಿ ಸೋನಿಯಾ ಗಾಂಧಿಯವರು ಭಾಷಣ ಮುಗಿಸಿ ಬರುವಾಗ ಖರ್ಗೆ ನಿಂತಿದ್ದರು, ಬಳಿಕ ಅವರನ್ನು ಭಾಷಣಕ್ಕಾಗಿ ವೇದಿಕೆಗೆ ಕರೆಯಲಾಗಿತ್ತು.
ಕಾಂಗ್ರೆಸ್‌ನ ಅಧ್ಯಕ್ಷರಾದರೂ, ಮಲ್ಲಿಕಾರ್ಜುನ ಖರ್ಗೆಯವರು ಕುಳಿತುಕೊಳ್ಳಲೂ ಸೋನಿಯಾ ಗಾಂಧಿ ಅನುಮತಿ ಬೇಕು ಎಂಬರ್ಥದಲ್ಲಿ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕರ್ನಾಟಕ ಚುನಾವಣೆ ಸಂದರ್ಭದಲ್ಲೇ ಈ ಕ್ಲೇಮ್ ಅನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಸೋನಿಯಾ ಗಾಂಧಿ ಮತ್ತು ಇತರ ನಾಯಕರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ನಿಂತೇ ಇರುತ್ತಾರೆ. ಆ ಹೊತ್ತಿನಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸೋನಿಯಾ ಗಾಂಧಿ ಅವರ ಅನುಮೋದನೆಗಾಗಿ ಖರ್ಗೆ ಕಾಯುತ್ತಿದ್ದಾರೆ ಮತ್ತು ಮೇ 10 ರಂದು ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಮುಂಬರುವ ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಈ ವೀಡಿಯೊವನ್ನು ಟ್ವಿಟರ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಿಜೆಪಿಯ ಅಮಿತ್ ಮಾಳವೀಯ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, “ಜಂಜೀರ್ ಚಿತ್ರದ ಪ್ರಸಿದ್ಧ ಸಂಭಾಷಣೆಯನ್ನು ನನಗೆ ನೆನಪಿಸುತ್ತದೆ… जब तक बैठने को नहीं कहा जाए, शराफ़त से खड़े रहो… (ಹಾಗೆ ಮಾಡಲು ನಿಮಗೆ ಹೇಳುವವರೆಗೂ ಕುಳಿತುಕೊಳ್ಳಬೇಡಿ)… ಕಾಂಗ್ರೆಸ್ ಗೆ ಮತ ಹಾಕಿದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪ್ರಾಕ್ಸಿ ಮೂಲಕ ಕರ್ನಾಟಕವನ್ನು ನಡೆಸಲು ಅವಕಾಶ ನೀಡುವುದು ಎಂದರ್ಥ. ಅದಕ್ಕೆ ಅವಕಾಶ ನೀಡಬೇಡಿ, ಕರ್ನಾಟಕ. ನೀವು ತುಂಬಾ ಸ್ವಾಭಿಮಾನಿ… 10 ರಂದು ಬುದ್ಧಿವಂತಿಕೆಯಿಂದ ಮತ ಚಲಾಯಿಸಿ. ” ಎಂದು ಬರೆದುಕೊಂಡಿದ್ದಾರೆ.
ಇದೇ ಕ್ಲೇಮ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check/ Verification
ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಪರಿಶೀಲನೆ ನಡೆಸಿದಾಗ ವೈರಲ್ ತುಣುಕನ್ನು ಕರ್ನಾಟಕದ ಹುಬ್ಬಳ್ಳಿಯಲ್ಲಿ 6 ರ ಮೇ 2023 ರಂದು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭಾಷಣ ಮಾಡಿದ ರಾಲಿಯಿಂದ ಪಡೆದಿರುವುದು ಗೊತ್ತಾಗಿದೆ.
Also Read: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?
ಖರ್ಗೆ ಅವರು ಕುಳಿತುಕೊಳ್ಳಲು ಸೋನಿಯಾ ಗಾಂಧಿಯವರ “ಅನುಮತಿ” ಗಾಗಿ ಕಾಯುತ್ತಿದ್ದಾರೆ ಎಂದು ತೋರಿಸಲು ಹಂಚಿಕೊಳ್ಳಲಾದ ವೈರಲ್ ತುಣುಕನ್ನು ಇದೇ ಸುಮಾರು 22:30 ನಿಮಿಷಗಳ ವೀಡಿಯೋದಿಂದ ತೆಗೆದುಕೊಂಡಿರುವುದನ್ನು ನಾವು ಗಮನಿಸಿದ್ದೇವೆ.
ಆದಾಗ್ಯೂ, ವೀಡಿಯೋದ ಸುದೀರ್ಘ ಆವೃತ್ತಿಯಲ್ಲಿ, ಸೋನಿಯಾ ಗಾಂಧಿ ತಮ್ಮ ಆಸನವನ್ನು ತೆಗೆದುಕೊಂಡ ಕೆಲವು ಸೆಕೆಂಡುಗಳ ನಂತರ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಸಭಿಕರನ್ನುದ್ದೇಶಿಸಿ ಮಾತನಾಡಲು ವೇದಿಕೆಯ ಕಡೆಗೆ ಚಲಿಸುತ್ತಿರುವುದನ್ನು ಕಾಣಬಹುದು. ಇದಲ್ಲದೆ, ಖರ್ಗೆ ಅವರ ಹೆಸರನ್ನು ಘೋಷಿಸಿದ ಕೂಡಲೇ, ಸೋನಿಯಾ ಗಾಂಧಿ ಸೇರಿದಂತೆ ವೇದಿಕೆಯಲ್ಲಿ ಕುಳಿತ ಪ್ರತಿಯೊಬ್ಬರೂ ಎದ್ದು ನಿಲ್ಲುವುದನ್ನು ಕಾಣಬಹುದು.
ಇದಲ್ಲದೆ, ಕಾರ್ಯಕ್ರಮ ನಿರೂಪಕರು ಖರ್ಗೆ ಅವರನ್ನು ವೇದಿಕೆಗೆ ಕರೆಯುವ ಮೂಲ ಆಡಿಯೋವನ್ನು ವೈರಲ್ ತುಣುಕಿನಲ್ಲಿ ಮ್ಯೂಟ್ ಮಾಡಲಾಗಿದೆ.
ಖರ್ಗೆ ಅವರು ಸೋನಿಯಾ ಗಾಂಧಿಯವರ ಅನುಮೋದನೆಗಾಗಿ ಕಾಯುತ್ತಿಲ್ಲ, ಬದಲಿಗೆ ಸೋನಿಯಾ ಗಾಂಧಿಯವರು ಭಾಷಣ ಮುಗಿಸುತ್ತಿದ್ದಂತೆ ಎದ್ದು ನಿಂತುಕೊಂಡಿದ್ದ ಖರ್ಗೆಯವರು, ಬಳಿಕ ತಮ್ಮನ್ನು ಭಾಷಣೆಕ್ಕೆ ವೇದಿಕೆಗೆ ಆಹ್ವಾನಿಸುತ್ತಿದ್ದಂತೆ ಅಲ್ಲಿಂದ ಹೋಗಿದ್ದಾರೆ ಎಂಬುದನ್ನು ಮೂಲ ವೀಡಿಯೋ ಸ್ಪಷ್ಟಪಡಿಸುತ್ತದೆ.
Also Read: ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ? ಈ ಹೇಳಿಕೆ ಸುಳ್ಳು
Conclusion
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ರಾಲಿಯ ವೀಡಿಯೊದ ತುಣುಕು ಆವೃತ್ತಿಯನ್ನು ಹಂಚಿಕೊಳ್ಳಲಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತುಕೊಳ್ಳಲು ಸೋನಿಯಾ ಗಾಂಧಿ ಅವರ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿರುವುದು ತಪ್ಪಾಗಿದೆ.
Result: Missing Context
Our Sources
YouTube Video By Indian National Congress, Dated May 6, 2023
Self Analysis
ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು ಇಲ್ಲಿ ಓದಬಹುದು.
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.