ಬ್ರಿಟನ್‌ ಪಿಎಂ ರಿಷಿ ಸುನಕ್‌ ಮನೆಯಲ್ಲಿ ಸಂಕ್ರಾಂತಿಗೆ ಬಾಳೆ ಎಲೆ ಊಟ ಹಾಕಲಾಗಿತ್ತೇ?

ಬ್ರಿಟನ್‌ ಪಿಎಂ, ರಿಷಿ ಸುನಕ್‌, ಸಂಕ್ರಾಂತಿ, ಬಾಳೆ ಎಲೆ ಊಟ

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ನಿವಾಸದಲ್ಲಿ ಸಂಕ್ರಾಂತಿ ಸಂದರ್ಭ ಬಾಳೆ ಎಲೆ ಊಟ ಹಾಕಲಾಗಿತ್ತು ಎಂದು ವೀಡಿಯೋವೊಂದು ವೈರಲ್‌ ಆಗಿದೆ.

ಈ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕ್ಲೇಮ್‌ ಒಂದರಲ್ಲಿ “ಭಾರತೀಯ ಸಂಸ್ಕೃತಿ ಲಂಡನ್‌ನಲ್ಲಿ. ಲಂಡನ್‌ನಲ್ಲಿ ಸಂಕ್ರಾಂತಿ ಸಂಭ್ರಮ-ಮಕರ ಸಂಕ್ರಮಣದ ಪ್ರಯುಕ್ತ ಪೊಂಗಲ್ ಊಟ ಹಾಕಿಸಿದ ರಿಷಿ ಸುನಕ್. ನಾವು ನಮ್ಮ ದೇಶದಲ್ಲೇ ನಮ್ಮ ಸಂಸ್ಕೃತಿ,ಸಂಪ್ರದಾಯ ಮತ್ತು ನಾಗರಿಕತೆಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಜೀವನ ನಡೆಸುತ್ತಿದೇವೆ” ಎಂದು ಹೇಳಲಾಗಿದೆ.

ಬ್ರಿಟನ್‌ ಪಿಎಂ, ರಿಷಿ ಸುನಕ್‌, ಸಂಕ್ರಾಂತಿ, ಬಾಳೆ ಎಲೆ ಊಟ,

ವಿವಿಧ ಮಾಧ್ಯಮಗಳೂ ಸೇರಿದಂತೆ ಹಲವರು ಈ ವೀಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆ ನಡೆಸಿದಾಗ ಇದೊಂದು ತಪ್ಪು ಕ್ಲೇಮ್‌ ಎನ್ನುವುದು ತಿಳಿದುಬಂದಿದೆ.

Fact Check/ Verification

ರಿಷಿ ಸುನಕ್‌ ಅವರು ಊಟ ಹಾಕಿಸಿದ್ದಾರೆ ಎಂಬ ಈ ವೈರಲ್‌ ವೀಡಿಯೋದ ಪೋಸ್ಟ್‌ ಒಂದನ್ನು ಕೂಲಂಕಷ ಪರಿಶೀಲನೆ ನಡೆಸಿದಾಗ, ಕಮೆಂಟ್‌ ಒಂದರಲ್ಲಿ ಇದು ಒಂಟಾರಿಯೋ, ಕೆನಡಾದಲ್ಲಿ ನಡೆದ ಕಾರ್ಯಕ್ರಮದ ವೀಡಿಯೋ ಕೆನಡಾದ್ದಲ್ಲ ಎಂದು ಹೇಳಲಾಗಿರುವುದನ್ನು ಗುರುತಿಸಲಾಗಿದೆ.

ಇದನ್ನು ಆಧಾರವಿಟ್ಟುಕೊಂಡು ಕೀವರ್ಡ್‌ ಸರ್ಚ್ ನಡೆಸಲಾಗಿದೆ. “Pongal Canada” ಎಂದು ಸರ್ಚ್ ನಡೆಸಿದ್ದು ಈ ವೀಡಿಯೋ ಕೆನಡಾದ ಒಂಟಾರಿಯೋದಲ್ಲಿ ನಡೆದಿದ್ದು ಎಂಬುದಕ್ಕೆ ಸಾಕ್ಷಿಯಾಗಿ ಹಲವು ವೀಡಿಯೋಗಳು ಶೇರ್ ಆಗಿರುವುದು ಕಂಡುಬಂದಿದೆ.

Also Read: ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಚಿರತೆ ಕಾಣಿಸಿಕೊಂಡಿದೆಯೇ?

ಇದರೊಂದಿಗೆ @berryonline ಎಂಬ ದೃಢೀಕೃತ ಟ್ವಿಟರ್‌ ಅಕೌಂಟ್‌ನಿಂದ ಟ್ವೀಟ್‌ ಒಂದನ್ನು ಗುರುತಿಸಲಾಗಿದ್ದು, ಅದರಲ್ಲಿ ವೈರಲ್‌ ವೀಡಿಯೋದ ಸಾಮ್ಯತೆ ಇರುವ ವೀಡಿಯೋ ಕಂಡುಬಂದಿದೆ. ಆ ಟ್ವಿಟರ್‌ ಅಕೌಂಟ್‌ನ ಮಾಹಿತಿ ಪ್ರಕಾರ ಅದು ಕೆನಡಾದ ಒಂಟಾರಿಯೋ ಮೂಲದ,  ಕಿಚನರ್‌ ನಗರದ ಮೇಯರ್ ಬೆರಿ ವೆರ್ಬಾವೊನಿಕ್‌ ಎಂಬವರದ್ದಾಗಿದೆ.

ಈ ವೈರಲ್‌ ವೀಡಿಯೋದಲ್ಲಿ ಗುರುತಿಸಿದ ಪ್ರಕಾರ, ವೆರ್ಬಾವೊನಿಕ್‌ ಅವರೂ ವೀಡಿಯೋದಲ್ಲಿ ಕಾಣಸಿಗುತ್ತಾರೆ. ಈ ಕುರಿತ ಟ್ವಿಟರ್‌ ಪೋಸ್ಟ್‌ನಲ್ಲಿ ವೆರ್ಬಾವೊನಿಕ್‌ ಅವರು “ಕಳೆದ ರಾತ್ರಿ @waterlootamils ಆಯೋಜನೆ ಮಾಡಿದ  ಥಾಯ್‌ ಪೊಂಗಲ್‌ ಸಂಭ್ರಮದ ಇನ್ನಷ್ಟು ಚಿತ್ರಗಳು. ಇದರಲ್ಲಿ ಭಾಗಿಯಾಗುವ ಗೌರವ ನನಗೆ ಸಿಕ್ಕಿದೆ” ಎಂದು ಬರೆದುಕೊಂಡಿದ್ದಾರೆ. ಅಂದರೆ ಇದು ಕೆನಡಾದ ವೀಡಿಯೋ ಆಗಿದ್ದು ಬ್ರಿಟನ್‌ನದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಈ ವೀಡಿಯೋದ ಮೂಲದ ಬಗ್ಗೆ ನಾವು ಇನ್ನಷ್ಟು ಪರಿಶೀಲನೆ ನಡೆಸಿದ್ದು, ಈ ವೇಳೆ ತಮಿಳ್‌ ಕಲ್ಚರ್‌ ವಾಟರ್ಲೂ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್‌ ಮಾಡಲಾಗಿದೆ.

ವೀಡಿಯೋವನ್ನು ಜನವರಿ 15ರಂದು ಪೋಸ್ಟ್‌ ಮಾಡಲಾಗಿದ್ದು “TCA Tamil Thai Pongal Celebration (Tamil Thanksgiving) region of Waterloo politicians, Regional Chair City Mayors, councilors and Police Chief and staff. ಎಂದು ಕ್ಯಾಪ್ಷನ್‌ ಹಾಕಲಾಗಿದೆ.

Conclusion

ಈ ಸತ್ಯಶೋಧನೆ ಪ್ರಕಾರ, ಕೆಲವು ಅಧಿಕಾರಿಗಳು, ಪೊಲೀಸರು, ದಕ್ಷಿಣ ಭಾರತೀಯ ಊಟವನ್ನು ಬಾಳೆ ಎಲೆಯಲ್ಲಿ ಮಾಡುತ್ತಿರುವುದು ರಿಷಿ ಸುನಕ್‌ ಅವರ ಮನೆಯಲ್ಲಿ ಅಲ್ಲ, ಅದು ಕೆನಡಾದ ಒಂಟಾರಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಬುದು ಖಚಿತವಾಗಿದೆ.

Result: False

Our Sources
Facebook Post by Tamil Culture Waterloo Region, Dated: January 15, 2023
Twitter Post by @berryonline, Dated: Jan 16, 2023

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.