Authors
Claim
ತೈವಾನ್ ನಲ್ಲಿ ಭೂಕಂಪ ವೇಳೆ ಕುಸಿದು ಬೀಳುತ್ತಿರುವ ಬಹುಮಡಿ ಕಟ್ಟಡಗಳು ಎಂದು ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋದ ಸತ್ಯಶೋಧನೆಯನ್ನು ನಾವು ನಡೆಸಿದ್ದು ಇವುಗಳು ತೈವಾನ್ ಭೂಕಂಪಕ್ಕೆ ಸಂಬಂಧಿಸಿದ್ದಲ್ಲ ಎಂದು ಕಂಡುಬಂದಿದೆ.
Also Read: ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ?
ಇಂತಹ ಪೋಸ್ಟ್ ಗಳ ಆರ್ಕೈವ್ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact
ಸತ್ಯಶೋಧನೆಯ ಭಾಗವಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ವೀಡಿಯೋವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ವೀಡಿಯೋ ವಾಸ್ತವವಾಗಿ ಎರಡು ತುಣುಕುಗಳನ್ನು ಸೇರಿಸಿ ಮಾಡಿದ್ದಾಗಿದೆ ಎಂದು ಗೊತ್ತಾಗಿದೆ. ಬಳಿಕ ಅದರ ಕೀಫ್ರೇಮ್ ಗಳನ್ನು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದ್ದು, ಫೆಬ್ರವರಿ 7, 2023 ರ ಫಿಯಾಜ್ ಅಲಿ ಅವರ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಟರ್ಕಿಯಲ್ಲಿ 2023 ರ ಭೂಕಂಪವನ್ನು ತೋರಿಸುವ ಇದೇ ವೀಡಿಯೋ ವೈರಲ್ ವೀಡಿಯೋದಲ್ಲಿ ಶೇರ್ ಮಾಡಲಾಗಿದೆ.
ಯೂಟ್ಯೂಬ್ ವೀಡಿಯೋ, ಎರಡನೇ ವೈರಲ್ ವೀಡಿಯೋದ್ದಕ್ಕಿಂತ ಸುದೀರ್ಘವಾಗಿದೆ. ನಾವು ಅದನ್ನು ವೈರಲ್ ವೀಡಿಯೋದೊಂದಿಗೆ ಹೋಲಿಕೆ ಮಾಡಿದ್ದು, ಎರಡೇ ಕ್ಲಿಪ್ ಅದೇ ಕಟ್ಟಡ ಕುಸಿತವನ್ನು ಬೇರೆ ಕೋನದಿಂದ ತೋರಿಸಿದೆ ಎಂದು ಕಂಡುಕೊಂಡಿದ್ದೇವೆ.
Also Read: ಸಂಸದ ಡಿ.ಕೆ. ಸುರೇಶ್ ಪೊಲೀಸರಿಗೆ ಆವಾಜ್ ಹಾಕಿದ ಹಳೆ ವೀಡಿಯೋ ಹಂಚಿಕೆ
ನಂತರ, ನಾವು ಯೂಟ್ಯೂಬ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇದು ಫೆಬ್ರವರಿ 7, 2023 ರ ಸಿಬಿಎಸ್ ನ್ಯೂಸ್ ವೀಡಿಯೋವನ್ನು ತೋರಿಸಿದೆ. “ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸೋಮವಾರ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಟರ್ಕಿಯ ಸ್ಯಾನ್ಲಿಯುರ್ಫಾ ಪ್ರಾಂತ್ಯದಲ್ಲಿ ಕಟ್ಟಡ ಕುಸಿದ ಕ್ಷಣವನ್ನು ವೀಡಿಯೋ ತೋರಿಸುತ್ತದೆ. ಭೂಕಂಪದಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಫೆಬ್ರವರಿ 6, 2023 ರಂದು ದಿ ಗಾರ್ಡಿಯನ್ ನ ಮತ್ತೊಂದು ವೀಡಿಯೊ ವರದಿಯು ವೈರಲ್ ಕ್ಲಿಪ್ ಅನ್ನು ಒಳಗೊಂಡಿದೆ ಮತ್ತು “7.8 ತೀವ್ರತೆಯ ಭೂಕಂಪದ ನಂತರದ ಸಮಯದಲ್ಲಿ ಸ್ಯಾನ್ಲರ್ಫಾ ಪ್ರಾಂತ್ಯದ ಹ್ಯಾಲಿಯೆ ಜಿಲ್ಲೆಯಲ್ಲಿ ಸೋಮವಾರ ಕನಿಷ್ಠ ಒಂದು ಕಟ್ಟಡ ಕುಸಿದಿದೆ” ಎಂದು ಸ್ಥಳೀಯ ಉರ್ಫಾ ಟಿವಿ ಬಿಡುಗಡೆ ಮಾಡಿದ ವೀಡಿಯೋ ಕ್ಲಿಪ್ಪಿಂಗ್ ಗಳು ತೋರಿಸಿವೆ.
ತೈವಾನ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದಾಗಿ ಕಟ್ಟಡ ಕುಸಿತವನ್ನು ತೋರಿಸಲು ಒಂದು ವರ್ಷಕ್ಕೂ ಹೆಚ್ಚು ಹಳೆಯ, ಟರ್ಕಿಯ ವಿದ್ಯಮಾನ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ನಾವು ತೀರ್ಮಾನಿಸಬಹುದು.
Also Read: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
Result: False
Our Sources:
YouTube Video By CBS News, Dated: February 7, 2023
YouTube Video By Guardian, Dated: February 6, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.