Fact Check: ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದು ನಿಜವೇ?

ಹಸಿ ಮೂಲಂಗಿ, ಮಜ್ಜಿಗೆ ಮೂಲವ್ಯಾಧಿ

Claim
ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ

Fact
ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಮಜ್ಜಿಗೆ, ಮೂಲಂಗಿಯನ್ನು ಉತ್ತಮ ಆಹಾರದ ಅಭ್ಯಾಸವಾಗಿ ಸೇವಿಸಬಹುದು

ಹಸಿ ಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ.

Fact Check: ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದು ನಿಜವೇ?

ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಈ ಹೇಳಿಕೆ ತಪ್ಪು ಎಂದು ಕಂಡುಬಂದಿದೆ.

Also Read: ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆಯೇ, ಸತ್ಯ ಏನು?

Fact Check/Verification

ಪೈಲ್ಸ್ / ಮೂಲವ್ಯಾಧಿ ಎಂದರೇನು?

ಮೂಲವ್ಯಾಧಿಯನ್ನು ಪೈಲ್ಸ್ ಎಂದೂ ಕರೆಯುತ್ತಾರೆ. ಗುದನಾಳ ಮತ್ತು ಗುದದ್ವಾರದ ಸುತ್ತ ಊದಿಕೊಂಡ ರಕ್ತನಾಳಗಳು ಮನುಷ್ಯರಲ್ಲಿ ಅಸ್ವಸ್ಥತೆ ಮತ್ತು ನೋವನ್ನು ಉಂಟುಮಾಡುತ್ತವೆ. ತುರಿಕೆ, ನೋವು, ಗುದದ್ವಾರದ ಬಳಿ ಉಂಡೆಗಳ ರೀತಿ ಸಂರಚನೆ, ರಕ್ತಸ್ರಾವ ಮೂಲವ್ಯಾಧಿಯ ಲಕ್ಷಣಗಳಾಗಿವೆ. ಮಲಬದ್ಧತೆ, ಭಾರ ಎತ್ತುವಿಕೆ, ದೀರ್ಘಕಾಲದ ಅತಿಸಾರ, ಅಥವಾ ಕರುಳಿನ ಚಲನೆಯ ಸಮಯದಲ್ಲಿ ಆಯಾಸಗೊಳ್ಳುವಂತಹ ಅಂಶಗಳಿಂದಾಗಿ ಗುದನಾಳದಲ್ಲಿ ಒತ್ತಡ ಹೆಚ್ಚಾಗಿ ಈ ಸ್ಥಿತಿಯು ಉಂಟಾಗುತ್ತದೆ. ಇದಕ್ಕೆ ಕಾರಣವಾಗುವ ಇತರ ಅಂಶಗಳೆಂದರೆ ಗರ್ಭಧಾರಣೆ, ವಯಸ್ಸಾಗುವಿಕೆ, ಸ್ಥೂಲಕಾಯತೆ ಮತ್ತು ಆಹಾರ ಪದ್ಧತಿಗಳಾಗಿವೆ.

ಪೈಲ್ಸ್ ತಡೆಗಟ್ಟಲು, ವೈದ್ಯರು ಸಾಮಾನ್ಯವಾಗಿ ಆಹಾರದ ಬದಲಾವಣೆಗಳನ್ನು ಶಿಫಾರಸು ಮಾಡುತ್ತಾರೆ, ವಿಶೇಷವಾಗಿ ಮಲವನ್ನು ಮೃದುಗೊಳಿಸುವ ಮತ್ತು ಅವುಗಳನ್ನು ಸುಲಭವಾಗಿ ಹಾದುಹೋಗುವ ಫೈಬರ್-ಭರಿತ ಆಹಾರಗಳ ಸೇವನೆಯನ್ನು ಹೆಚ್ಚಿಸುತ್ತಾರೆ. ಚೆನ್ನಾಗಿ ಜಲಸಂಚಯನ ಕೂಡ ಮುಖ್ಯವಾಗಿದೆ.  

ಮೂಲವ್ಯಾಧಿ ಕಡಿಮೆಯಾಗಲು ಆಹಾರವು ಸಹಾಯ ಮಾಡುತ್ತದೆಯೇ?

ಪೈಲ್ಸ್ ಅನ್ನು ಗುಣಪಡಿಸುವಲ್ಲಿ ಆಹಾರದ ಪರಿಣಾಮವು ರೋಗದ ಸ್ಥಿತಿಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಆಹಾರದಲ್ಲಿ ಹೊಂದಾಣಿಕೆ ಮಾಡುವುದು ರೋಗ ಲಕ್ಷಣ ನಿವಾರಣೆಗೆ ಸಹಾಯ ಮಾಡುತ್ತದೆ. ಆರೋಗ್ಯ ವೃತ್ತಿಪರರು ಸಾಮಾನ್ಯವಾಗಿ ಪೈಲ್ಸ್ ಅನ್ನು ಗುಣಪಡಿಸಲು ಅಥವಾ ನಿರ್ವಹಿಸಲು ಆಹಾರದ ಬದಲಾವಣೆಗಳನ್ನು ಶಿಫಾರಸು ಮಾಡುತ್ತಾರೆ. ಹೆಚ್ಚಾಗಿ ನಾರಿನಂಶದ ಆಹಾರಗಳನ್ನು ಸೇವಿಸುವುದರಿಂದ ಮಲ ಮೃದುವಾಗುತ್ತದೆ ಮತ್ತು ಅವುಗಳು ಸುಲಭವಾಗಿ  ವಿಸರ್ಜನೆಗೆ ಸಹಾಯ ಮಾಡುತ್ತದೆ. ನೀರು ಮತ್ತು ಇತರ ದ್ರವಗಳೊಂದಿಗೆ ಜಲಸಂಚಯನದ ಸ್ಥಿತಿಯಲ್ಲಿರುವುದು ಆಹಾರದಲ್ಲಿರುವ ನಾರಿನ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ದೆಹಲಿಯ ಆಕಾಶ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶರದ್ ಮಲ್ಹೋತ್ರಾ ಅವರ ಪ್ರಕಾರ ರೋಗಲಕ್ಷಣಗಳನ್ನು ನಿರ್ವಹಿಸುವಲ್ಲಿ ಆಹಾರದ ಬದಲಾವಣೆಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ. ಮಲಬದ್ಧತೆಯನ್ನು ತಡೆಗಟ್ಟಲು ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ಇತರ ಫೈಬರ್ ಭರಿತ ಆಹಾರಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಅಲ್ಲದೇ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಹೆಚ್ಚಿನ ಸಂಸ್ಕರಿತ ಆಹಾರವನ್ನು ಸೇವಿಸುವುದು ಉತ್ತಮವಲ್ಲ ಎಂದು ಹೇಳುತ್ತಾರೆ. 

ಹೆಚ್ಚುವರಿಯಾಗಿ, ಫೈಬರ್ ಸೇವನೆಯನ್ನು ಹೆಚ್ಚಿಸುವುದು, ವಿರೇಚಕಗಳನ್ನು ಬಳಸುವುದು, ಮಲಬದ್ಧತೆಗೆ ಕಾರಣವಾಗುವ ಔಷಧಿಗಳನ್ನು ತಪ್ಪಿಸುವುದು ಮತ್ತು ಪೈಲ್ಸ್‌ಗೆ ಸಂಬಂಧಿಸಿದ ಊದಿಕೊಂಡ ರಕ್ತನಾಳಕ್ಕೆ ಚುಚ್ಚುಮದ್ದು ಅಥವಾ ಶಸ್ತ್ರಚಿಕಿತ್ಸೆಯಂತಹ ವೈದ್ಯಕೀಯ ವಿಧಾನಗಳನ್ನು ಪರಿಗಣಿಸುವಂತಹ ವಿವಿಧ ಚಿಕಿತ್ಸಾ ಆಯ್ಕೆಗಳನ್ನು ಅವರು ಹೇಳಿದ್ದಾರೆ.

ಮೂಲಂಗಿ ಮತ್ತು ಮಜ್ಜಿಗೆ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆಯೇ?

ಈ ಆಹಾರದ ಸಂಯೋಜನೆ ಮತ್ತು ಮೂಲವ್ಯಾಧಿಯನ್ನು ಗುಣಪಡಿಸುವಲ್ಲಿ ಅದರ ಪಾತ್ರದ ಬಗ್ಗೆ ಹೇಳುವ ಯಾವುದೇ ಸಂಶೋಧನಾ ಪ್ರಬಂಧವನ್ನು ನಾವು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮೂಲವ್ಯಾಧಿ ಮತ್ತು ಮಜ್ಜಿಗೆಯನ್ನು ಮೂಲವ್ಯಾಧಿಗೆ ಆಹಾರದ ನಿರ್ವಹಣೆಯ ಭಾಗವಾಗಿ ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ, ಆದರೆ ಅವುಗಳು ಚಿಕಿತ್ಸೆಯಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಮೂಲಂಗಿ ನಾರಿನಂಶವನ್ನು ಹೊಂದಿರುತ್ತದೆ ಮತ್ತು ತಂಪಾಗಿಡುವ ಪರಿಣಾಮವನ್ನು ಹೊಂದಿದೆ ಇದು ಮಲಬದ್ಧತೆಯಂತಹ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಮಜ್ಜಿಗೆ, ವಿಶೇಷವಾಗಿ ಮಸಾಲೆಗಳಿಲ್ಲದೆ ಸೇವಿಸಿದಾಗ ದೇಹಕ್ಕೆ ಹಿತವಾಗಿ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಆದಾಗ್ಯೂ, ಪೈಲ್ಸ್ ಗುಣಪಡಿಸಲು ಆಹಾರದ ಬದಲಾವಣೆಗಳು, ಜೀವನಶೈಲಿ ಮಾರ್ಪಾಡುಗಳು ಮತ್ತು ಕೆಲವೊಮ್ಮೆ ಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ವೈದ್ಯಕೀಯ ಚಿಕಿತ್ಸೆಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಹಸಿ ಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.

Also Read: ಒಣದ್ರಾಕ್ಷಿ ನೀರು ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆಯೇ?

Result: False

Our Sources
Definition & Facts of Hemorrhoids

Hemorrhoids: From basic pathophysiology to clinical management

Response Of Radish (Raphanus Sativus L.) To Various Doses Of Phosphorous And Potassium Fertilizers

Conversation with Dr. Sharad Malhotra, Gastroenterologist at Akash Hospital Delhi

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.