Authors
Claim
ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಪ್ರಜಾವಾಣಿ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ” ಎಂದು ಹೇಳಿದೆ.
ಈ ಪೋಸ್ಟ ಅನ್ನು ಎಕ್ಸ್ ನಲ್ಲಿ ಮಾಡಿದ ಬಳಿಕ ಡಿಲೀಟ್ ಮಾಡಲಾಗಿದೆ. ಜೊತೆಗೆ ಟ್ವೀಟ್ ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.
Also Read: ಇಸ್ರೇಲ್ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?
ಮಿಡ್ ಡೇ, ಡೆಕ್ಕನ್ ಹೆರಾಲ್ಡ್, ಫಸ್ಟ್ ಪೋಸ್ಟ್ ಮುಂತಾದ ಹಲವಾರು ಮಾಧ್ಯಮಗಳಲ್ಲಿಯೂ ಅವರು ನಿಧನರಾಗಿದ್ದಾರೆ ಎಂಬ ವರದಿಗಳನ್ನು ನಾವು ಗಮನಿಸಿದ್ದೇವೆ.
Fact
ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಪತ್ರಕರ್ತೆ ಸೀಮಾ ಚಿಸ್ತಿ ಅವರ ಟ್ವೀಟ್ ಅನ್ನು ನ್ಯೂಸ್ಚೆಕರ್ ಕಂಡುಕೊಂಡಿದೆ, ಅಲ್ಲಿ ಅವರು ಸುದ್ದಿಯನ್ನು ನಕಲಿ ಎಂದು ಕರೆದಿದ್ದಾರೆ.
ಸೇನ್ ಅವರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಪ್ರತಿಚಿ ಟ್ರಸ್ಟ್ ಅನ್ನು ಸಂಪರ್ಕಿಸಿದ್ದೇವೆ. ಅಲ್ಲಿ ಅಮರ್ತ್ಯ ಸೇನ್ ಮತ್ತು ಅವರ ಮಗಳು ಅಂತರಾ ಸೇನ್ ಟ್ರಸ್ಟಿಗಳಾಗಿದ್ದಾರೆ. ಟ್ರಸ್ಟ್ ಆಡಳಿತಾಧಿಕಾರಿ ಸೌಮಿಕ್ ಮುಖರ್ಜಿ ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, “ನಾನು ಅಮೆರಿಕದಲ್ಲಿರುವ ಪ್ರೊಫೆಸರ್ ಸೇನ್ ಅವರ ಹಿರಿಯ ಮಗಳೊಂದಿಗೆ ಮಾತನಾಡಿದ್ದೇನೆ, ಈ ಸುದ್ದಿ ಸುಳ್ಳು ಮತ್ತು ಪ್ರೊಫೆಸರ್ ಸೇನ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ” ಎಂದು ಹೇಳಿದ್ದಾರೆ.
ನ್ಯೂಸ್ ಚೆಕರ್ ಜೊತೆ ಮಾತನಾಡಿದ ಅಮರ್ತ್ಯ ಸೇನ್ ಅವರ ಹಿರಿಯ ಮಗಳು ಅಂತರಾ ಸೇನ್ ಕೂಡ ಇದು ನಕಲಿ ಎಂದು ದೃಢಪಡಿಸಿದ್ದಾರೆ. “ಪ್ರೊಫೆಸರ್ ಸೇನ್ ಚೆನ್ನಾಗಿದ್ದಾರೆ. ನಾನು ಕೇಂಬ್ರಿಡ್ಜ್ ನಲ್ಲಿ ಅವರೊಂದಿಗೆ ಇದ್ದೇನೆ. ಚಿಂತಿಸಬೇಡಿ. ಇದು ಸುಳ್ಳು ಸುದ್ದಿ” ಎಂದು ಅವರು ಹೇಳಿದ್ದಾರೆ.
ಅವರ ಮಗಳು ನಂದನಾ ಸೇನ್ ಕೂಡ ಟ್ವೀಟ್ ಮಾಡಿ, “ಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು ಆದರೆ ಇದು ಸುಳ್ಳು ಸುದ್ದಿ ಬಾಬಾ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ನಾವು ಕೇಂಬ್ರಿಡ್ಜ್ ನಲ್ಲಿ ಕುಟುಂಬದೊಂದಿಗೆ ಒಂದು ಅದ್ಭುತ ವಾರವನ್ನು ಕಳೆದಿದ್ದೇವೆ – ಕಳೆದ ರಾತ್ರಿ ನಾವು ವಿದಾಯ ಹೇಳಿದಾಗ ಅವರ ಅಪ್ಪುಗೆ ಎಂದಿನಂತೆ ಬಲವಾಗಿತ್ತು! ಅವರು ಹಾರ್ವರ್ಡ್ನಲ್ಲಿ ವಾರಕ್ಕೆ 2 ಕೋರ್ಸ್ ಗಳನ್ನು ಕಲಿಸುತ್ತಿದ್ದಾರೆ. ಅವರು ಪುಸ್ತಕದ ಕೆಲಸದಲ್ಲಿ ಎಂದಿನಂತೆ ಕಾರ್ಯನಿರತವಾಗಿದ್ದಾರೆ” ಎಂದಿದ್ದಾರೆ.
Also Read: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಅಮರ್ತ್ಯಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ತಪ್ಪಾಗಿದೆ.
Result: False
Our Source
Conversation with Antara Sen, daughter of Prof Amartya Sen
Conversation with Soumik Mukherjee, administrative officer, Pratichi trust
Tweet by Nandana Sen, Dated: October 10, 2023
(ಈ ಲೇಖನ ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಗೊಂಡಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.