Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕುತುಬ್ ಮಿನಾರ್ ನಲ್ಲಿರುವ ಕಬ್ಬಿಣ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆ
Fact
ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ಫೊಟೋ ರಾಜಸ್ಥಾನದ ಭರತ್ ಪುರದ ಜವಾಹರ್ ಭುರ್ಜ್ ಎಂಬ ಲೋಹಸ್ತಂಭದ್ದಾಗಿದೆ
ಕುತುಬ್ ಮಿನಾರ್ ಪ್ರದೇಶದಲ್ಲಿ ಇರುವ ಕಬ್ಬಿಣದ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆ ಇದರಿಂದ ಸತ್ಯ ತಿಳಿಯುತ್ತದೆ ಎಂಬಂತೆ ಕಂಬವೊಂದರ ಫೋಟೋವನ್ನುಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಪ್ ನಲ್ಲಿ ಕಂಡುಬಂದಿರುವ ಈ ಹೇಳಿಕೆಯಲ್ಲಿ “ಕುತುಬ್ಮಿನಾರ್ ನಿರ್ಮಿಸಿದ್ದು ಮೊಘಲರು ಅಂತಾ ಇತಿಹಾಸದಲ್ಲಿ ಬರೆಯಲಾಗಿತ್ತು !! ಆದ್ರೆ ಅಲ್ಲಿ ಇರುವ ಕಬ್ಬಿಣದ ಕಂಬದ ಮೇಲೆ ಯಾರ ಹೆಸರಿದೆ ಎಂದೂ ಸ್ವಲ್ಪ ಜೂಮ್ ಮಾಡಿ ನೋಡಿದರೆ ನೈಜ ಸತ್ಯ ಸಂಗತಿ ತಿಳಿಯಲಿದೆ. ಇದು 1500 ವರ್ಷಗಳ ಹಿಂದಿನ ವರಾಹಮಿಹಿರನ ಕಾಲದ ವಿಷ್ಣು ಸ್ಥಂಭ.. ನಮ್ಮ ದೇಶದ ಇತಿಹಾಸವನ್ನು ಬರೆದ ಇತಿಹಾಸ ತಜ್ಞರ ಕಣ್ಣುಗಳಿಗೆ ಇದು ಕಾಣಲಿಲ್ಲ ಕಣ್ಣು ಕುರುಡಾಗುವಷ್ಟು ಮೊಘಲರು ಎಂಜಲು ತಿನ್ನಿಸಿರಬೇಕು ಡೋಂಗಿ ಇತಿಹಾಸ ತಜ್ಞರಿಗೆ ಯಾರೋ ಸ್ಥಾಪಿಸಿದ ಪರಂಪರೆಯನ್ನು ತಮ್ಮದು ಎಂದೂ ಇಲ್ಲಿವರೆಗೆ ಹೇಳಿಕೊಂಡ ನಕಲಿಗಳಿಗೆ ನಾಚಿಕೆಯಾಗಬೇಕು.” ಎಂದಿದೆ.
Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಬಲವಂತದ ಮತಾಂತರ? ಈ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ

ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಪ್ ಟಿಪ್ ಲೈನ್ (+91-9999499044)ಗೆ ಮನವಿ ಮಾಡಿಕೊಂಡಿದ್ದು ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ಫೊಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫ್ಲಿಕ್ಕರ್ ನಲ್ಲಿ ಅಕ್ಟೋಬರ್ 19, 2009ರಂದು ಡೇವಿಡ್ ರಾಸ್ ಎಂಬವರು ಅಪ್ ಲೋಡ್ ಮಾಡಿರುವ ಚಿತ್ರ ಲಭ್ಯವಾಗಿದೆ. ಇದರಲ್ಲಿ ಐರನ್ ಪಿಲ್ಲರ್ ಭರತ್ ಪುರ ಫೋರ್ಟ್, ಭರತ್ ಪುರ ಇಂಡಿಯಾ ಎಂದು ಬರೆದಿದ್ದಾರೆ. ಈ ಫೊಟೊ ಮತ್ತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಫೊಟೋವನ್ನು ನೋಡಿದಾಗ ಎರಡೂ ಒಂದೇ ರೀತಿಯಾಗಿರುವುದು ಕಂಡುಬಂದಿದೆ.

ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಹಿಸ್ಟರಿ ಎನ್ಸೈಕ್ಲೋಪೀಡಿಯಾ ನವೆಂಬರ್ 3, 2021ರಂದು ಮಾಡಿರುವ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ “ರಾಜಸ್ಥಾನದ ಭರತ್‌ಪುರ ಕೋಟೆಯಲ್ಲಿ (ಕಬ್ಬಿಣದ ಕೋಟೆ) ಕಬ್ಬಿಣದ ಕಂಬವನ್ನು ಭರತ್‌ಪುರದ ಜಾಟ್ ಆಡಳಿತಗಾರರು ನಿರ್ಮಿಸಿದ್ದಾರೆ. ಮಹಾರಾಜ ಸೂರಜ್ ಮಾಲ್ (1707-1763) ರ ಅಡಿಯಲ್ಲಿ ಜಾಟ್ ಸಾಮ್ರಾಜ್ಯವು ತನ್ನ ಉತ್ತುಂಗವನ್ನು ತಲುಪಿತು, ಅವರು ಸಾಮ್ರಾಜ್ಯದಾದ್ಯಂತ ಹಲವಾರು ಕೋಟೆಗಳು ಮತ್ತು ಅರಮನೆಗಳನ್ನು ನಿರ್ಮಿಸಿದರು ಮತ್ತು ಲೋಹಗಢ್ ಕೋಟೆಯು ಪ್ರಬಲವಾಗಿದೆ.” ಎಂದಿದೆ.
ಇನ್ನು ಇದಕ್ಕೆ ಸಂಬಂಧಿಸಿ ದೈನಿಕ್ ಭಾಸ್ಕರ್ ಡಿಸೆಂಬರ್ 25, 2021ರಂದು ಮಾಡಿರುವ ಫೇಸ್‌ಬುಕ್ ಪೋಸ್ಟ್ ಕೂಡ ಗಮನಿಸಿದ್ದೇವೆ. ಇದರಲ್ಲಿ ಲೋಹಸ್ತಂಭದಲ್ಲಿ ಬರೆದಿರುವ ರಾಜರ ಹೆಸರುಗಳ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ.

ಭರತ್ ಪುರದ ಲೋಹಸ್ತಂಭದ ಬಗ್ಗೆ ನವೆಂಬರ್ 26, 2018ರ ನೇಹಾ ವೀಡಿಯೋ ಫಿಲ್ಮ್ ಪ್ರೊಡಕ್ಷನ್ ಯೂಟ್ಯೂಬ್ ವೀಡಿಯೋವನ್ನೂ ನಾವು ಗಮನಿಸಿದ್ದೇವೆ. ಇದರ ವಿವರಣೆಯಲ್ಲಿ “ಜವಾಹರ್ ಬುರ್ಜ್ ಭಾರತ್‌ಪುರವನ್ನು ಮಹಾರಾಜ ಸೂರಜ್ ಮಾಲ್ ನಿರ್ಮಿಸಿದನು (A.D. 1756-63) ಆದರೆ ಅದರ ಮೇಲಿನ ರಚನೆಗಳನ್ನು (A.D. 1764-68) ಮಹಾರಾಜ ಜವಾಹರ್ ಸಿಂಗ್ ಅವರು ದೆಹಲಿಯ ವಿಜಯದ ಸ್ಮಾರಕದಲ್ಲಿ ರಚಿಸಿದರು” ಎಂದಿದೆ.
ಈ ವಿವರಣೆಗಳ ಪ್ರಕಾರ, ಕುತುಬ್ ಮಿನಾರ್ ನಲ್ಲಿರುವ ಲೋಹಸ್ತಂಭದಲ್ಲಿ ಹಿಂದೂ ರಾಜರ ಹೆಸರಿದೆ ಎಂಬಂತೆ ನೀಡಿದ ಹೇಳಿಕೆಯು ತಪ್ಪಾಗಿದೆ ಎಂದು ತಿಳಿದುಬಂದಿದೆ. ತಪ್ಪು ಹೇಳಿಕೆಯೊಂದಿಗೆ ಹಂಚಿಕೊಂಡಿರುವ ಫೋಟೋ ರಾಜಸ್ಥಾನದ ಭರತ್ ಪುರದ ಜವಾಹರ್ ಭುರ್ಜ್ ಎಂಬ ಲೋಹಸ್ತಂಭದ್ದಾಗಿದೆ.
Also Read: ಸೆ.30ರಂದು ಎಲ್ಲ ಪ್ಲ್ಯಾನ್ ಹಿಂತೆಗೆದುಕೊಳ್ಳುವುದಾಗಿ ಹೇಳಿದ ಎಲ್‌ಐಸಿ ಸುತ್ತೋಲೆ ನಕಲಿ
Our Sources
Image By David Ross, Dated October 19, 2009
Tweet By History Encyclopedia, Dated November 3, 2021
Facebook Post By Dainik Bhaskar, Dated December 25, 2021
YouTube Video By Neha Video Film Production, Dated November 26, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.