Authors
Claim
ತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ, ಅಪಾರ ಪ್ರಮಾಣದ ಜಿನ್ನಾಭರಣ ಪತ್ತೆ
Fact
ತಿರುಪತಿ ದೇಗುಲದ ಪುರೋಹಿತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಪತ್ತೆಯಾದ ಚಿನ್ನಾಭರಣಗಳು ಇದಲ್ಲ, ಆಭರಣದ ಅಂಗಡಿಯೊಂದರಿಂದದ ದರೋಡೆಯಾದ ಆಭರಣಗಳನ್ನು ವಶಪಡಿಸಿಕೊಂಡ ನಂತರ ವೆಲ್ಲೂರು ಪೊಲೀಸರು ಪತ್ರಿಕಾಗೋಷ್ಠಿಯ ಸಂದರ್ಭದ ದೃಶ್ಯಗಳಾಗಿವೆ
ತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಅಪಾರ ಪ್ರಮಾಣದ ಚಿನ್ನ, ಹಣ ಪತ್ತೆಯಾಗಿದೆ ಎಂಬಂತೆ ಹೇಳಿಕೆಯೊಂದನ್ನು ವೀಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ಗಳಲ್ಲಿ “ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ , ಹಾಗೂ ವಜ್ರ ಎಷ್ಟು ಗೊತ್ತಾ ? 128 ಕೆಜಿ ಚಿನ್ನ , 150 ಕೋಟಿ ಕ್ಯಾಶ್ , 70 ಕೋಟಿ ಬೆಲೆಯ ವಜ್ರ ದಾನ ಮಾಡುವಾಗ ಈಗಲಾದರೂ ಸ್ವಲ್ಪ ಯೋಚಿಸಿ. ಹಣ , ಚಿನ್ನ , ವಜ್ರ ದೇವರಿಗೆ ಬೇಕೇ ? ಒಬ್ಬರ ಹತ್ತಿರ ಇಷ್ಟು ಸಿಕ್ಕಿದೆ ಅಂದಮೇಲೆ , ಇನ್ನು ಉಳಿದ 15 ಪುರೋಹಿತರ ಮನೆಯಲ್ಲಿ ಎಷ್ಟು ಇರಬಹುದು” ಎಂದಿದೆ.
Also Read: ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ
ಇದೇ ರೀತಿಯ ಹೇಳಿಕೆಗಳನ್ನು ನಾವು ಇಲ್ಲಿ, ಇಲ್ಲಿ ನೋಡಿದ್ದೇವೆ.
ಇದೇ ರೀತಿಯ ಹೇಳಿಕೆಗಳು ವಾಟ್ಸಾಪ್ ನಲ್ಲೂ ಹರಿದಾಡುತ್ತಿದ್ದು, ಅದನ್ನು ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್
(+91-9999499044) ಗೆ ಮನವಿ ಮಾಡಿದ್ದಾರೆ. ಅದರಂತೆ ಅದನ್ನು ಸತ್ಯಶೋಧನೆಗೆ ಸ್ವೀಕರಿಸಲಾಗಿದೆ.
Fact Check/Verification
ನ್ಯೂಸ್‌ಚೆಕರ್ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಇನ್‌ವಿಡ್ ಟೂಲ್ ಅನ್ನು ಬಳಸಿಕೊಂಡು ಹುಡುಕಾಟ ನಡೆಸಿದೆ. ಈ ವೇಳೆ ತಮಿಳುನಾಡಿನ ವೆಲ್ಲೂರಿನ ಆಭರಣ ಮಳಿಗೆಯಲ್ಲಿ ನಡೆದ ದರೋಡೆಗೆ ಸಂಬಂಧಿಸಿದ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯಲ್ಲಿ ಪ್ರಕಟಗೊಂಡ ಇದೇ ರೀತಿಯ ಚಿತ್ರವನ್ನು ನೋಡಿದ್ದೇವೆ.
ಡಿಸೆಂಬರ್ 22, 2021ರ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಪ್ರಕಾರ, ವೆಲ್ಲೂರಿನ ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿ ಸ್ಟೋರ್ ರೂಂ ಅನ್ನು ಡಿಸೆಂಬರ್ 15, 2021 ರಂದು ದರೋಡೆ ಮಾಡಲಾಗಿತ್ತು ಮತ್ತು ಬಂಧನದ ನಂತರ ಪ್ರಕರಣವನ್ನು ಭೇದಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. 8 ಕೋಟಿ ಮೌಲ್ಯದ 15.9 ಕೆಜಿ ಚಿನ್ನಾಭರಣ ಮತ್ತು ವಜ್ರಗಳನ್ನು ಓದುಕತ್ತೂರಿನ ಸಮಾಧಿ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯೂಟ್ಯೂಬ್‌ನಲ್ಲಿ ‘ವೆಲ್ಲೂರ್ ಜ್ಯುವೆಲ್ಲರಿ ರಾಬರಿ’, ‘ವೆಲ್ಲೂರ್ ದರೋಡೆ’, ‘ಜೋಸ್ ಅಲುಕ್ಕಾಸ್ ದರೋಡೆ’ ಮುಂತಾದ ಕೀವರ್ಡ್‌ಗಳನ್ನು ಹುಡುಕಿದಾಗ, ಡಿಸೆಂಬರ್ 22, 2021ರಂದು ಬಿಬಿಸಿ ನ್ಯೂಸ್ ತಮಿಳು ಪೋಸ್ಟ್ ಮಾಡಿದ ವೀಡಿಯೊವನ್ನು ನಾವು ನೋಡಿದ್ದೇವೆ, ಅದೇ ದೃಶ್ಯಗಳನ್ನು ಹೊಂದಿರುವ ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಡಿಸೆಂಬರ್ 20, 2024ರ ತಮಿಳು ಸಮಯಂ ವರದಿಯಲ್ಲಿ, ಜೋಸ್ ಅಲುಕಾಸ್ ಅಂಗಡಿಯಲ್ಲಿ ಚಿನ್ನಾಭರಣ ಸೇರಿದಂತೆ ದೋಚಿದ್ದ ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಎಂದಿದೆ. ಇದರೊಂದಿಗೆ ವೈರಲ್ ವೀಡಿಯೋ ಹೋಲುವ ಫೋಟೋವನ್ನೂ ನಾವು ವರದಿಯಲ್ಲಿ ಪತ್ತೆ ಮಾಡಿದ್ದೇವೆ.
ಡಿಸೆಂಬರ್ 21, 2021ರ ತಮಿಳುನಾಡು ಪೊಲೀಸರ ಎಕ್ಸ್ ಪೋಸ್ಟ್ ನಲ್ಲಿ, ವೆಲ್ಲೂರು ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ 10 ಕೋಟಿ ಮೌಲ್ಯದ 15.9 ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿದ್ದು, ಘಟನೆ ನಡೆದ 5 ದಿನಗಳಲ್ಲಿ ವೆಲ್ಲೂರು ಜಿಲ್ಲಾ ವಿಶೇಷ ಪಡೆಗಳು ಪತ್ತೆ ಮಾಡಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸಿ.ಶೈಲೇಂದ್ರ ಬಾಬು ಇ.ಕೆ.ಪಿ. ಪ್ರಶಂಸಿದ್ದಾರೆ (ಅನುವಾದಿಸಲಾಗಿದೆ)
Conclusion
ತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ ಎಂದು ಹೇಳುವ ವೈರಲ್ ವೀಡಿಯೊ ತಪ್ಪುದಾರಿಗೆಳೆಯುವಂತಿದೆ. ಇದು ಆಭರಣದ ಅಂಗಡಿಯೊಂದರಿಂದದ ದರೋಡೆಯಾದ ಆಭರಣಗಳನ್ನು ವಶಪಡಿಸಿಕೊಂಡ ನಂತರ ವೆಲ್ಲೂರು ಪೊಲೀಸರು ಪತ್ರಿಕಾಗೋಷ್ಠಿಯ ಸಂದರ್ಭದ ದೃಶ್ಯಗಳಾಗಿವೆ.
Also Read: ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?
Result: Partly False
Our Sources
Report By Indian Express, Dated: December 22, 2021
YouTube Video By BBC News Tamil, Dated: December 22, 2021
Report By Tamil Samayam, Dated: December 20, 2021
X post By Tamilnadu Police, Dated: December 21, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.