Fact Check: ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿಯೇ?

ಇಂಧನ, ಇಂಡಿಯನ್‌ ಆಯಿಲ್‌, ಗರಿಷ್ಠ ಭರ್ತಿ,

Claim
ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿ

Fact
ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿಯಲ್ಲ. ಇದು ತಪ್ಪು ಕ್ಲೇಮ್‌

ವಾಹನಗಳ ಟ್ಯಾಂಕ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಇಂಧನ ತುಂಬುವುದು ಅಪಾಯಕಾರಿ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇಂತಹ ಕ್ಲೇಮ್‌ ಒಂದು ಫೇಸ್‌ಬುಕ್‌ನಲ್ಲಿ ಕಂಡುಬಂದಿದ್ದು, ಅದರಲ್ಲಿ ಹೀಗೆ ಹೇಳಲಾಗಿದೆ. “ಇಂಡಿಯನ್‌ ಆಯಿಲ್‌ ಎಚ್ಚರಿಕೆ ನೀಡಿದೆ, ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ. ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್‌ ತುಂಬಬೇಡಿ. ಇದು ಇಂಧನ ಟ್ಯಾಂಕ್‌ನಲ್ಲಿ ಸ್ಪೋಟಕ್ಕೆ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್‌ ಇಂಧನವನ್ನು ತುಂಬಿಸಿ ಮತ್ತು ಗಾಳಿಗೆ ಜಾಗವನ್ನು ಇರಿಸಿ. ಈ ವಾರ ಗರಿಷ್ಠ ಪೆಟ್ರೋಲ್‌ ತುಂಬಿದ ಕಾರಣ 5 ಸ್ಫೋಟ ಅಪಘಾತಗಳು ಸಂಭವಿಸಿವೆ. ದಯವಿಟ್ಟು ಪೆಟ್ರೋಲ್‌ ಟ್ಯಾಂಕ್‌ ಅನ್ನು ದಿನಕ್ಕೆ ಒಮ್ಮೆ ತೆರೆಯಿರಿ ಮತ್ತು ಒಳಗೆ ನಿರ್ಮಿಸಲಾದ ಅನಿಲವು ಹೊರಗೆ ಬರಲು ಬಿಡಿ. ಗಮನಿಸಿ ಈ ಸಂದೇಶವನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಮತ್ತು ಎಲ್ಲರಿಗೂ ಕಳುಹಿಸಿ, ಇದರಿಂದ ಜನರು ಈ ಅಪಘಾತವನ್ನು ತಪ್ಪಿಸಬಹುದು. ಧನ್ಯವಾದಗಳು.” ಎಂದಿದೆ. 

ಇಂಡಿಯನ್‌ ಆಯಿಲ್‌, ಬೇಸಗೆ, ಗರಿಷ್ಠ ಇಂಧನ ಭರ್ತಿ, ಅಪಾಯಕಾರಿ
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್‌

ನ್ಯೂಸ್‌ಚೆಕರ್‌ ಈ ಪೋಸ್ಟ್‌ ಅನ್ನು ಸತ್ಯ ಶೋಧನೆಗೆ ಒಳಪಡಿಸಿದ್ದು ಇದು ತಪ್ಪು ಎಂದು ತಿಳಿದುಬಂದಿದೆ. 

Fact Check/ Verification

ಸತ್ಯ ಶೋಧನೆಗಾಗಿ, ಗೂಗಲ್‌ ಕೀವರ್ಡ್‌ ಸರ್ಚ್ ನಡೆಸಲಾಗಿದ್ಉದ, ಈ ವೇಳೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಮಾಡಲಾರ ಟ್ವೀಟ್‌ ಒಂದು ಕಂಡು ಬಂದಿದೆ. ಅದರಲ್ಲಿ ಈ ವೈರಲ್‌ ಪೋಸ್ಟ್‌ಗೆ ಸ್ಪಷ್ಟೀಕರಣವನ್ನು ನೀಡಲಾಗಿದೆ. ಈ ಸ್ಪಷ್ಟೀಕರಣವನ್ನು ಇಂಡಿಯನ್‌ ಆಯಿಲ್‌ ಜೂನ್‌ 3 2019ರಂದು ನೀಡಿದ್ದು, ಅಂದರೆ ಆ ಹಿಂದೆಯೂ ಇಂಥದ್ದೇ ಪೋಸ್ಟ್‌ ವೈರಲ್‌ ಆಗಿರುವುದು ಖಚಿತಪಟ್ಟಿದೆ. 

ಕೀವರ್ಡ್ ಹುಡುಕಾಟವನ್ನು ನಡೆಸಿದ ನಂತರ, ನ್ಯೂಸ್‌ಚೆಕರ್ 3 ಜೂನ್ 2019 ರಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಪರಿಶೀಲಿಸಿದ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಿದ ಟ್ವೀಟ್ ಅನ್ನು ಕಂಡುಹಿಡಿದಿದೆ, ಅದು ವೈರಲ್ ಪೋಸ್ಟ್‌ಗೆ ಸ್ಪಷ್ಟೀಕರಣವನ್ನು ನೀಡಿತು, ಅದು ಈ ಹಿಂದೆಯೂ ವೈರಲ್ ಆಗಿತ್ತು.

ಈ ಹೇಳಿಕೆಯ ಪ್ರಕಾರ “ಇಂಡಿಯನ್ ಆಯಿಲ್‌ ಎಚ್ಚರಿಕೆ ನೀಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳಿವೆ. ತಾಪಮಾನ ಹೆಚ್ಚಳದ ಕಾರಣ  ದಯವಿಟ್ಟು ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬಬೇಡಿ ತೊಟ್ಟಿಯ; ಇದು ಇಂಧನ ತೊಟ್ಟಿಯಲ್ಲಿ ಸ್ಫೋಟವನ್ನು ಉಂಟುಮಾಡುತ್ತದೆ. ಪೆಟ್ರೋಲ್ ಬೇಕಿದ್ದರೆ ಅರ್ಧ ಟ್ಯಾಂಕ್ ತುಂಬಿಸಿ ಉಳಿದದ್ದನ್ನು ಗಾಳಿಯಾಡಲು ಬಿಡಿ. ಇಂಡಿಯನ್ ಆಯಿಲ್ ಈ ಹೇಳಿಕೆಯನ್ನು ನಿರಾಕರಿಸಲು ಮತ್ತು ಈ ಕೆಳಗಿನಂತೆ ಸ್ಪಷ್ಟಪಡಿಸಲು ಬಯಸುತ್ತದೆ, ”ಎಂದು ಹೇಳಿಕೆಯಲ್ಲಿದೆ. 

Also Read: ಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಈ ವೈರಲ್ ಫೋಟೋ ನಿಜವೇ?

“ಆಟೋಮೊಬೈಲ್ ತಯಾರಕರು ತಮ್ಮ ವಾಹನಗಳನ್ನು ಕಾರ್ಯಕ್ಷಮತೆಯ ಅಗತ್ಯತೆಗಳು, ಹಕ್ಕುಗಳು ಮತ್ತು ಸುತ್ತುವರಿದ ಪರಿಸ್ಥಿತಿಗಳ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುರಕ್ಷತಾ ಅಂಶಗಳ ಪ್ರಕಾರ ನಿರ್ಮಿಸುತ್ತಾರೆ. ಪೆಟ್ರೋಲ್/ಡೀಸೆಲ್ ವಾಹನಗಳಿಗೆ ಇಂಧನ ಟ್ಯಾಂಕ್‌ನಲ್ಲಿ ಸೂಚಿಸಲಾದ ಗರಿಷ್ಠ ಪ್ರಮಾಣವು ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಚಳಿಗಾಲ ಅಥವಾ ಬೇಸಗೆಯನ್ನು ಲೆಕ್ಕಿಸದೆ, ತಯಾರಕರು ನಿರ್ದಿಷ್ಟಪಡಿಸಿದ ರೀತಿ ಗರಿಷ್ಠ ಮಿತಿವರೆಗೆ ವಾಹನಗಳಲ್ಲಿ ಇಂಧನವನ್ನು ತುಂಬುವುದು ಸಂಪೂರ್ಣ ಸುರಕ್ಷಿತವಾಗಿದೆ” ಎಂದು ಹೇಳಿಕೆಯಲ್ಲಿದೆ.  

ಇದರೊಂದಿಗೆ ಇಂಡಿಯನ್‌ ಆಯಿಲ್‌ ಫೇಸ್‌ಬುಕ್ಕಿನಲ್ಲೂ 9 ಎಪ್ರಿಲ್‌ 2022 ರಂದು ಈ ಕುರಿತು ಸ್ಪಷ್ಟನೆ ನೀಡಿದ್ದು ವದಂತಿ ಸುಳ್ಳು ಎಂದು ಹೇಳಿದೆ. 

ಫೇಸ್‌ಬುಕ್‌ನಲ್ಲಿ ಇಂಡಿಯನ್‌ ಆಯಿಲ್‌ ಸ್ಪಷ್ಟೀಕರಣ

ಎಪ್ರಿಲ್‌ 11, 2022ರ ವೇಳೆಗೆ ನ್ಯೂಸ್‌ಚೆಕರ್‌,  ಇದೇ ರೀತಿಯ ಪೋಸ್ಟ್‌ ಸಂಬಂಧವಾಗಿ, ಅಖಿಲ ಭಾರತೀಯ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟದ ಉಪಾಧ್ಯಕ್ಷ ಶಬರಿನಾಥ್‌ ಅವರನ್ನು  ಸಂಪರ್ಕಿಸಿದ್ದು, ಅವರು ಈ ಕ್ಲೇಮ್‌ನಲ್ಲಿ ಹೇಳಲಾದ ಅಂಶಗಳನ್ನು ನಿರಾಕರಿಸಿದ್ದಾರೆ. “ವಾಹನ ತಯಾರಕರು, ಇಂಧನ ಆವಿಯಾಗುವುದನ್ನು ಗಮನದಲ್ಲಿರಿಸಿ, ಇಂಧನ ಟ್ಯಾಂಕ್‌ನ ಪೂರ್ಣ ಸಾಮರ್ಥ್ಯವನ್ನು ನಿರ್ಧರಿಸುತ್ತಾರೆ. ಇದರರ್ಥ 50 ಲೀಟರ್‌ ಪೂರ್ಣ ಟ್ಯಾಂಕ್‌ ಸಾಮರ್ಥ್ಯದ ವಾಹನವು ವಾಸ್ತವವಾಗಿ 55 ಲೀಟರ್‌ ವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಆದರೆ 50 ಲೀಟರ್‌ ನಂತರ ಫಿಲ್ಟರ್‌ ಇದ್ದು, ಫುಲ್‌ಟ್ಯಾಂಕ್‌ ಸಾಮರ್ಥ್ಯ ಎಂದು ಪರಿಗಣಿಸಲಾಗುತ್ತದೆ. ಆ ಫಿಲ್ಟರ್‌ವರೆಗೆ ಮಾತ್ರ ಇಂಧನ ತುಂಬಿಸಬಹುದು” ಎಂದು ಅವರು ಹೇಳಿದ್ದಾರೆ. 

Conclusion

 ಈ ಸತ್ಯಶೋಧನೆಯ ಪ್ರಕಾರ, ಬೇಸಗೆಯಲ್ಲಿ ವಾಹನಗಳಿಗೆ ಟ್ಯಾಂಕ್‌ ಪೂರ್ತಿ ಇಂಧನ ತುಂಬಿಸುವುದು ಅಪಾಯಕಾರಿ ಎನ್ನುವುದು ತಪ್ಪಾದ ಕ್ಲೇಮ್‌ ಆಗಿದೆ. 

Results: False

Our Source:

Tweet by Indian Oil Corporation Ltd, Dated: June 3, 2019

Facebook Post by Indian Oil Corporation Ltd, Dated: April 9, 2022

Telephone Conversation with Federation of All-India Petroleum Traders (FAIPT)