Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಇತ್ತೀಚಿಗೆ ಭಾರತ ಮತ್ತು ಚೀನಾ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಆದ ಒಪ್ಪಂದದ ಪ್ರಕಾರ (ಇದನ್ನು ನಂತರ ಪ್ರಧಾನಿ ಶ್ರೀ ಮೋದಿ ಮತ್ತು ಚೀನಾ ಅಧ್ಯಕ್ಷ ಷೀ ಜಿಂಪಿಂಗ್ ಕಜ಼ಾನ್ ಸಮ್ಮೇಳನದಲ್ಲಿ ಅನುಮೋದಿಸಿದ್ದಾರೆ) ಭಾರತದ ಮತ್ತು ಚೀನೀಯರ ಹೆಚ್ಚುವರಿ ಸೈನಿಕರು ಗಡಿ ಭಾಗದಿಂದ ಹಿಂದಿರುಗಿ ಹೋಗಲು ಶುರು ಮಾಡಿದ್ದಾರೆ. ಅಂತಹ ಒಂದು ಕಾರ್ಯಕ್ರಮದಲ್ಲಿ ಭಾರತ ಚೀನೀ ಸೈನಿಕರು ಪರಸ್ಪರ ಔತಣ ಕೂಟ ಏರ್ಪಡಿಸಿ ನಂತರ ಜೊತೆಯಾಗಿ ‘ಜೈ ಶ್ರೀ ರಾಮ್’ ಘೋಷಣೆ ಮೊಳಗಿಸಿ ತಮ್ಮ ವಾಪಾಸಾತಿಯನ್ನು ಶುರು ಮಾಡಿದ್ದಾರೆ!“
ಗೂಗಲ್ ನಲ್ಲಿ ಚೀನ-ಭಾರತ ಪಡೆಗಳ ವಾಪಸಾತಿ ಕುರಿತಾಗಿ ಕೀ ವರ್ಡ್ ಸರ್ಚ್ ಮಾಡಿದ್ದು, ಅಕ್ಟೋಬರ್ 25, 2024 ರ ಎಕನಾಮಿಕ್ ಟೈಮ್ಸ್ ವರದಿ ಲಭ್ಯವಾಗಿದೆ. ಗಡಿಯ ಎರಡೂ ಬದಿಗಳಲ್ಲಿನ ಸೈನಿಕರು ಪೂರ್ವ ಲಡಾಖ್ ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಲ್ಲಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.
“ಉಭಯ ದೇಶಗಳ ನಡುವಿನ ಒಪ್ಪಂದಗಳ ಪ್ರಕಾರ, ಭಾರತೀಯ ಪಡೆಗಳು ಆಯಾ ಪ್ರದೇಶಗಳಲ್ಲಿನ ಹಿಂದಿನ ಸ್ಥಳಗಳಿಗೆ ಉಪಕರಣಗಳನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿವೆ” ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದೆ.
ಅನಂತರ ನಾವು ಗೂಗಲ್ ಲೆನ್ಸ್ನಲ್ಲಿ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ಪಡೆದು ಹುಡುಕಾಟ ನಡೆಸಿದ್ದೇವೆ. ಅದು ಜನವರಿ 22, 2024 ರ @chatterjeea330 ಅವರ ಎಕ್ಸ್ ಪೋಸ್ಟ್ಗೆ ನಮ್ಮನ್ನು ಕರೆದೊಯ್ಯಿತು. ಭಾರತ ಮತ್ತು ಚೀನಾದ ಸೈನಿಕರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವುದನ್ನು ತೋರಿಸುವ ಅದೇ ವೀಡಿಯೋವನ್ನು ಅದು ಹೊಂದಿತ್ತು.
ಇದರೊಂದಿಗೆ 2024 ರ ಜನವರಿಯಲ್ಲಿ @theaffairsinternational2108 ಅವರು ಪೋಸ್ಟ್ ಮಾಡಿದ ಯೂಟ್ಯೂಬ್ ವೀಡಿಯೋದಲ್ಲಿಯೂ ವೈರಲ್ ಕ್ಲಿಪ್ ಹೊಂದಿರುವುದನ್ನುನಾವು ನೋಡಿದ್ದೇವೆ.
ಜನವರಿ 23, 2024 ರಂದು ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ‘ಜೈ ಶ್ರೀ ರಾಮ್’ ಎಂಬ ಹಿಂದೂ ಘೋಷಣೆಯನ್ನು ಕೂಗುತ್ತಿರುವ ದಿನಾಂಕವಿಲ್ಲದ ವೀಡಿಯೋ ವೈರಲ್ ಆಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದಿನದಂದು ಈ ವೀಡಿಯೋ ಹೊರಬಂದಿದೆ. ವೈರಲ್ ವೀಡಿಯೋಗೆ ಭಾರತೀಯ ಸೇನೆಯಾಗಲೀ ಅಥವಾ ಚೀನಾದ ಮಿಲಿಟರಿಯಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ.
ಇದೇ ರೀತಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಜನವರಿ 2024 ರಲ್ಲಿ ವೀಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ನ್ಯೂಸ್ ಚೆಕರ್ ಸ್ವತಂತ್ರವಾಗಿ ಈ ವೀಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ನಡೆದ ಪಡೆಗಳ ಹಿಂತೆಗೆತದ ಸಂದರ್ಭದ ವೀಡಿಯೋ ಇದಲ್ಲ ಎಂಬುದು ಸ್ಪಷ್ಟವಾಗಿದೆ.
Our Sources
X Post By @chatterjeea330, Dated: January 22, 2024
YouTube Video By @theaffairsinternational2108, Dated: January 23, 2024
YouTube Video By Hindustan Times, Dated: January 23, 2024
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.