Authors
Claim
ಕಂಗನಾ ರಾಣಾವತ್ ಕೆನ್ನೆಯಲ್ಲಿ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಏಟಿನ ಗುರುತು ಇದೆ
Fact
ವೈರಲ್ ಆಗುತ್ತಿರುವ ಕೆನ್ನೆಯಲ್ಲಿ ಏಟಿನ ಗುರುತು ಇರುವ ಫೋಟೋ, ನಟಿ ಮತ್ತು ಸಂಸದೆ ಕಂಗನಾ ರಾಣಾವತ್ ಅವರದ್ದಲ್ಲ
ಇತ್ತೀಚೆಗೆ ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸದರಾಗಿ ಆಯ್ಕೆಯಾದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ನಂತರ ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಮಂದ್ ಮಹಿವಾಲ್ ಗ್ರಾಮದ ನಿವಾಸಿಯಾದ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಲಾಗಿದೆ.
ಘಟನೆಯ ನಂತರ, ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರ ವೀಡಿಯೋ ಒಂದು ಹರಿದಾಡಿದ್ದು, ಇದರಲ್ಲಿ ಕಂಗನಾ ರಾಣಾವತ್ ಅವರು ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಚಳವಳಿಯಲ್ಲಿ ತೊಡಗಿರುವ ಪಂಜಾಬ್‌ನ ಮಹಿಳೆಯರ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಾರೆ, ಪಂಜಾಬ್‌ನ ಮಹಿಳೆಯರು ಹಣಕ್ಕಾಗಿ ರೈತರ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ. ಆದರೆ ಆಂದೋಲನಕಾರರಲ್ಲಿ ಅವರ ತಾಯಿಯೂ ಇದ್ದರು ಎಂದು ಕುಲ್ವಿಂದರ್ ಸಮರ್ಥಿಸಿಕೊಂಡಿದ್ದರು.
Also Read: ಯಾದಗಿರಿಯಲ್ಲಿ ದರ್ಗಾ ನಿರ್ಮಿಸಲು ರೈತನ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂಬ ಸುಳ್ಳು ಪೋಸ್ಟ್ ವೈರಲ್
ಈ ಪ್ರಕರಣ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ವಾದಗಳು ಹುಟ್ಟಿಕೊಂಡಿವೆ. ಕೆಲವರು ಕಂಗನಾ ರಣಾವತ್ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಕೆಲವರು ಕುಲ್ವಿಂದರ್ ಕೌರ್ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಏತನ್ಮಧ್ಯೆ, ಕೆನ್ನೆಯ ಮೇಲೆ ಹೊಡೆದ ಗುರುತು ಇರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಹಂಚಿಕೊಳ್ಳುವಾಗ, ಇದು ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರ ಚಿತ್ರ ಎಂದು ಹೇಳಲಾಗುತ್ತಿದೆ.
ಅಂತಹ X ಪೋಸ್ಟ್‌ಗಳ ಆರ್ಕೈವ್ ಅನ್ನು ಇಲ್ಲಿ ನೋಡಿ .
“ಅವಳು ಗೆದ್ದದ್ದು ಕಮಲದ ಗುರುತಲ್ಲಿ, ಆದರೆ ಕೆನ್ನೆ ಮೇಲೆ ಬಿದ್ದದ್ದು ಹಸ್ತದ ಗುರುತಂತೆ”, ಹೇಳಿಕೆಯೊಂದಿಗೂ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.
Fact Check/Verification
ಈ ಚಿತ್ರವನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫೋಟೋ ಜುಲೈ 12, 2015ರ ‘Neverholdyourtongue’ ಹೆಸರಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಲೇಖನದಲ್ಲಿ ಮೂಲ ಮತ್ತು ಪೂರ್ಣ ಚಿತ್ರವನ್ನು ಅಪ್‌ಲೋಡ್ ಮಾಡಿರುವುದು ನಮಗೆ ಕಂಡುಬಂದಿದೆ. ಆದಾಗ್ಯೂ, ಈ ಫೋಟೋಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಲೇಖನದಲ್ಲಿ ಹಂಚಿಕೊಂಡಿಲ್ಲ.
ಈ ಚಿತ್ರವನ್ನು 2006 ರಲ್ಲಿ ಮತ್ತೊಂದು ವೆಬ್‌ಸೈಟ್ ಕೂಲ್‌ಮಾರ್ಕೆಟಿಂಗ್ ಥಿಂಕ್ಸ್ ಸಹ ಹಂಚಿಕೊಂಡಿದೆ. ವೈರಲ್ ಆಗುತ್ತಿರುವ ಚಿತ್ರಕ್ಕೂ ಈ ಚಿತ್ರಕ್ಕೂ ಸಾಕಷ್ಟು ಸಾಮ್ಯತೆಗಳಿವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಅದನ್ನು ಈ ಕೆಳಗೆ ನೋಡಬಹುದು.
ಈ ಫೋಟೋವನ್ನು ರಷ್ಯಾದ ವೆಬ್‌ಸೈಟ್ ಕೂಡ ಹಂಚಿಕೊಂಡಿದೆ , ಆದರೆ ಫೋಟೋಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆ ಲೇಖನದಲ್ಲಿ ಹಂಚಿಕೊಳ್ಳಲಾಗಿಲ್ಲ.
Also Read: ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆಯೇ?
Conclusion
ವೈರಲ್ ಆಗುತ್ತಿರುವ ಹಕ್ಕು ಸುಳ್ಳಿನಿಂದ ಕೂಡಿದೆ ಎಂಬುದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ. ವೈರಲ್ ಆಗುತ್ತಿರುವ ಚಿತ್ರ, ನಟಿ ಮತ್ತು ಸಂಸದೆ ಕಂಗನಾ ರಾಣಾವತ್ ಅವರದ್ದಲ್ಲ ಎಂದು ತಿಳಿದುಬಂದಿದೆ.
Result: False
Our Sources
Image uploaded on coolmarketingthoughts, Dated: 31 May 2006
Image uploaded on neverholdyourtongue, Dated: 12 July 2015
Self Analysis
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಪಂಜಾಬಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.