Authors
Claim
ರಾಜ್ಯ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳನ್ನು ಏರಿಸುತ್ತಿದೆ
Fact
ರಾಜ್ಯ ಸರ್ಕಾರ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ದರಗಳನ್ನು ಏರಿಸುತ್ತಿಲ್ಲ, ಬದಲಾಗಿ ಮೋಟಾರು ವಾಹನ ತರಬೇತಿ ಶಾಲೆಗಳ ಶುಲ್ಕಗಳನ್ನು ಪರಿಷ್ಕರಿಸಿ ಆದೇಶಿಸಿದೆ
ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ ಡ್ರೈವಿಂಗ್ ಲೈಸೆನ್ಸ್ ದರಗಳನ್ನು ಏರಿಸುತ್ತಿದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವಾಟ್ಸಾಪಿನಲ್ಲಿ ಕಂಡುಬಂದ ಈ ಪೋಸ್ಟ್ ನಲ್ಲಿ “ಡೈವಿಂಗ್ ಲೈಸೆನ್ಸ್ ದರ ಹೆಚ್ಚಿಸುತ್ತಿರುವ ರಾಜ್ಯ ಸರ್ಕಾರ ಹಿಂದಿನ ದರ ಹೊಸ ದರ ಕಾರು ಚಾಲನಾ,ದರ 4,000 ರಿಂದ 7,000ರೂ, ದ್ವಿಚಕ್ರ ವಾಹನಗಳ ದರ 2,200 ರಿಂದ 3,000ರೂ, ಆಟೋ ರಿಕ್ಷಾ 3,000 ರಿಂದ 4,000ರೂ ಬೃಹತ್ ಸಾರಿಗೆ ವಾಹನ 6,000 ರಿಂದ 9,000ರೂ, ಕಾರ್ ಡ್ರೈವಿಂಗ್ ಲೈಸೆನ್ಸ್ ಗೆ ಕನಿಷ್ಠ 8,500 ಖರ್ಚು ಮಾಡಬೇಕಿದೆ, ಇದು ಗಿಂಬಳ ಬಿಟ್ಟು, ಬಿಟ್ಟಿ ಯೋಜನೆ ಆಸೆ ತೋರಿಸಿ ಪಾಕೆಟ್ ಗೆ ಕತ್ರಿ ಹಾಕುತ್ತಿದೆ ಕಾಂಗ್ರೇಸ್” ಎಂದಿದೆ.
Also Read: ರಕ್ತದ ಸಹಾಯವಾಣಿ 104 ಪರಿಚಯಿಸಲಾಗಿದೆಯೇ, ಇಲ್ಲ ಇದು ಸುಳ್ಳು!
ಈ ಕುರಿತು ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ಟಿಪ್ ಲೈನ್‌ಗೆ ಬಳಕೆದಾರರೊಬ್ಬರು ದೂರನ್ನು ಸಲ್ಲಿಸಿದ್ದು, ನಾವು ಅದನ್ನು ಸ್ವೀಕರಿಸಿದ್ದೇವೆ.
Fact Check/ Verification
ಸತ್ಯಶೋಧನೆಗಾಗಿ ನಾವು ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ವಿಧಿಸಲಾಗುವ ದರಗಳ ಪರಿಶೀಲನೆ ಮಾಡಿದ್ದೇವೆ. ಈ ವೇಳೆ ಕಲಿಕಾ ಚಾಲನೆ ಪರವಾನಗಿಗೆ ₹150, ಚಾಲನಾ ಪರವಾನಗಿ ದರ ₹200, ಅಂತಾರಾಷ್ಟ್ರೀಯ ಚಾಲನಾ ಪರವಾನಗಿಗೆ ₹1000, ಹೆಚ್ಚುವರಿ ದರ್ಜೆಯ ವಾಹನದ ಚಾಲನಾ ಪರವಾನಗಿಗೆ ₹500, ಚಾಲನಾ ಪರವಾನಗಿ ನವೀಕರಣಕ್ಕೆ ₹200 ಎಂದಿರುವುದನ್ನು ನೋಡಿದ್ದೇವೆ. ರಾಜ್ಯ ಸಾರಿಗೆ ಇಲಾಖೆ ವೆಬ್‌ಸೈಟ್ ನಲ್ಲಿ ಈ ವಿವರಗಳು ಲಭ್ಯವಿವೆ.
Also Read : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?
ಇನ್ನು ಚಾಲನಾ ಪರವಾನಗಿ ಸಂಬಂಧಿಸಿ ದರ ಏರಿಕೆ ಆದ ಬಗ್ಗೆಯೂ ನಾವು ಶೋಧ ನಡೆಸಿದ್ದೇವೆ. ಅದರಂತೆ ಕೆಲವು ವರದಿಗಳನ್ನೂ ನಾವು ಗಮನಿಸಿದ್ದೇವೆ.
ಎಪ್ರಿಲ್ 11, 2018ರ ಸುವರ್ಣ ನ್ಯೂಸ್ ವರದಿ ಪ್ರಕಾರ, “ನೂತನ ವರ್ಷದ ಖುಷಿಯಲ್ಲಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ವಾಹನ ಪರವಾನಗಿ, ಎಲ್ಎಲ್ಆರ್ ಪರವಾನಗಿ ಪಡೆಯಲು ಮೊದಲಿನ ದರಕ್ಕಿಂತ 6 ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ 2016ರ ಡಿ.29ರಿಂದ ಅನ್ವಯವಾಗುವಂತೆ ಪರಿಷ್ಕರಣೆಯ ಆದೇಶ ಹೊರಡಿಸಿದೆ.” ಎಂದಿದೆ. ಇದೇ ವರದಿಯಲ್ಲಿ ಚಾಲನೆ ಪರವಾನಗಿಯನ್ನು ₹200 ಗೆ ಏರಿಸಲಾಗಿದೆ ಮತ್ತು ಕಲಿಕಾ ಚಾಲನಾ ಪರವಾನಗಿಗೆ ₹150 ಎಂದಿರುವುದನ್ನು ನೋಡಿದ್ದೇವೆ.
ಜನವರಿ 7, 2017ರ ಇಟಿ ಆಟೋ ವರದಿಯಲ್ಲಿ, ಚಾಲನಾ ಪರವಾನಗಿ ದರ 5 ಪಟ್ಟು ಏರಿಕೆಯಾಗಿದೆ ಎಂದಿದೆ. “ಸಾರಿಗೆ ಸಚಿವಾಲಯವು ಚಾಲನಾ ಪರವಾನಗಿಯ ದರವನ್ನು ₹40ರಿಂದ ₹200 ಗೆ ಏರಿಕೆ ಮಾಡಿದೆ, ಇದರೊಂದಿಗೆ ಹೆಚ್ಚುವರಿ ದರ್ಜೆಯ ವಾಹನದ ಚಾಲನಾ ಪರವಾನಗಿ ದರವನ್ನು ₹200 ರಿಂದ ₹500 ಕ್ಕೆ ಏರಿಕೆ ಮಾಡಲಾಗಿದೆ ಎಂದಿದೆ.
ಹೆಚ್ಚಿನ ಸ್ಪಷ್ಟನೆಗಾಗಿ ನಾವು ಉಡುಪಿಯ ಪ್ರಾದೇಶಿಕ ಸಾರಿಗೆ ಆಯುಕ್ತರಾದ ರವಿಶಂಕರ್ ಪಿ. ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ದರಗಳು ಏರಿಕೆಯಾಗಿಲ್ಲ, ಆದರೆ ಸರ್ಕಾರವು ಇತ್ತೀಚಿಗೆ ವಾಹನ ಚಾಲನಾ ತರಬೇತಿ ಶುಲ್ಕ ಏರಿಕೆಗೆ ಅನುವು ಮಾಡಿದೆ ಎಂದು ತಿಳಿಸಿದ್ದಾರೆ.
ಆ ಪ್ರಕಾರ ನಾವು ವರದಿಗಳನ್ನು ಶೋಧಿಸಿದ್ದು, ಡಿಸೆಂಬರ್ 14, 2023ರ ಟೈಮ್ಸ್ ಆಫ್ ಇಂಡಿಯಾ ವರದಿ ಲಭ್ಯವಾಗಿದೆ. ಆ ಪ್ರಕಾರ “ರಾಜ್ಯದಲ್ಲಿ ಚಾಲನಾ ತರಬೇತಿ ಶಾಲೆಗಳ ಶುಲ್ಕಗಳನ್ನು ಪರಿಷ್ಕರಿಸಲು ಸರ್ಕಾರ ಅನುವು ಮಾಡಿದೆ. ಇದರಿಂದ ಕಾರು ಚಾಲನೆ ತರಬೇತಿ ಶುಲ್ಕ ₹4 ಸಾವಿರಗಳಿಂದ ₹7 ಸಾವಿರ ಗಳಿಗೆ ಏರಿಕೆಯಾಗಲಿದೆ. ಸಾರಿಗೆ ವಾಹನ ತರಬೇತಿ ಶುಲ್ಕ ₹6 ಸಾವಿರ ದಿಂದ ₹9 ಸಾವಿರ ಕ್ಕೆ ಏರಿಕೆಯಾಗಲಿದೆ ದ್ವಿಚಕ್ರ ವಾಹನಗಳ ತರಬೇತಿ ಶುಲ್ಕ ₹2200 ರಿಂದ ₹3 ಸಾವಿರಗಳಿಗೆ ಏರಿಕೆಯಾಗಲಿದೆ, ಇದು ಜನವರಿ 1 2021ರಿಂದ ಜಾರಿಗೆ ಬರಲಿದೆ ಎಂದಿದೆ. ಅಲ್ಲದೇ ಇಲಾಖೆ ನಿಗದಿ ಪಡಿಸಿದ ಶುಲ್ಕದ ಹೊರತಾಗಿ ಚಾಲನಾ ಪರವಾನಗಿ ಪಡೆಯಲು ಅಭ್ಯರ್ಥಿಗಳು ಜಿಎಸ್‌ಟಿ ಮತ್ತು ಇತರ ಶುಲ್ಕಗಳನ್ನು ಭರಿಸಬೇಕು. ವಾಹನ ತರಬೇತಿ ಶಾಲೆಗಳ ರಾಜ್ಯ ಒಕ್ಕೂಟದ ಆಗ್ರಹದ ಮೇರೆಗೆ ಸರ್ಕಾರ ಶುಲ್ಕಗಳನ್ನು ಪರಿಷ್ಕರಿಸಿದೆ ಎಂದು ಸಾರಿಗೆ ವಿಭಾಗದ ಹೆಚ್ಚವರಿ ಆಯುಕ್ತ ಸಿ.ಮಲ್ಲಿಕಾರ್ಜುನ ಅವರು ಹೇಳಿದ್ದಾರೆ” ಎಂದಿದೆ.
ಡಿಸೆಂಬರ್ 15, 2023ರ ಟಿವಿ 9 ವರದಿಯಲ್ಲಿ “ಚಾಲನಾ ತರಬೇತಿಯ ಪರಿಷ್ಕೃತ ಶುಲ್ಕ 2024ರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿಯನ್ನ ಪ್ರಕಟಿಸಿದೆ. ಹೊಸ ವರ್ಷಕ್ಕೆ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೋಳ್ಳೋಣ ಅಂತಿದ್ದವರಿಗೆ ಸಾರಿಗೆ ಇಲಾಖೆ ದರ ಏರಿಕೆಯ ಶಾಕ್ ಕೊಟ್ಟಿದೆ. ಪರಿಷ್ಕೃತ ದರವು, ಮೋಟಾರ್ ಸೈಕಲ್ ಈ ಹಿಂದೆ 2,200 ರೂ. ಇದ್ದುದನ್ನು ಈಗ 3,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆಟೋರಿಕ್ಷಾಗಳ ಚಾಲನಾ ತರಬೇತಿಗೆ 3000 ರೂ. ಇದ್ದುದನ್ನು 4000 ರೂ.ಗೆ ಹೆಚ್ಚಿಸಲಾಗಿದೆ. ಲಘು ಮೋಟಾರ್ಗಳಿಗೆ 4000 ರೂ. ಇದ್ದುದನ್ನು 7000 ರೂ.ಹೆ ಏರಿಕೆ ಮಾಡಲಾಗಿದೆ. ಸಾರಿಗೆ ವಾಹನಗಳ ತರಬೇತಿ ದರವನ್ನು 6000 ರೂ.ನಿಂದ 9000 ರೂ.ಗೆ ಪರಿಷ್ಕರಿಸಲಾಗಿದೆ.” ಎಂದಿದೆ.
Conclusion
ಆದ್ದರಿಂದ ಈ ಸಾಕ್ಷ್ಯಾಧಾರಗಳ ಪ್ರಕಾರ, ಸರ್ಕಾರ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್) ಕುರಿತ ದರಗಳನ್ನು ಪರಿಷ್ಕರಿಸಿಲ್ಲ ಬದಲಾಗಿ ಮೋಟಾರು ವಾಹನ ತರಬೇತಿ ಶಾಲೆಗಳ ತರಬೇತಿ ಶುಲ್ಕಗಳನ್ನು ಪರಿಷ್ಕರಿಸಲು ಅನುಮತಿ ನೀಡಿದೆ. ಆದ್ದರಿಂದ ಕ್ಲೇಮ್ ತಪ್ಪಾದ ಸಂದರ್ಭವಾಗಿದೆ.
Also Read: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?
Result: Missing Context
Our Source
Website of Karnataka state transport department
Report By Suvarna News, Dated: April 11, 2018
Report By Economic times Auto, Dated: January 7, 2017
Report By Times Of India, Dated: December 14, 2023
Report By Tv9 Kannada, Dated: December 15, 2023
Conversation with Ravishankar P., Regional Transport officer Udupi
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.