Authors
Claim
ಕುಂಭಕರ್ಣನ ಖಡ್ಗವೊಂದು ಪುರಾತತ್ವ ಶೋಧನೆಯಲ್ಲಿ ದೊರೆತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ” ಎಂದಿದೆ. ಇದೇ ರೀತಿಯ ಪೋಸ್ಟ್ ಫೇಸ್ ಬುಕ್ ನಲ್ಲಿಯೂ ಕಂಡುಬಂದಿದೆ. ಅದು ಇಲ್ಲಿದೆ.
ಈ ಕುರಿತು ಸತ್ಯಶೋಧನೆ ನಡೆಸುವಂತೆ ವಾಟ್ಸಾಪ್ ಟಿಪ್ ಲೈನ್ ಗೆ (+91-9999499044) ಬಳಕೆದಾರರೊಬ್ಬರು ಮನವಿಯನ್ನು ಸಲ್ಲಿಸಿದ್ದು ಅದನ್ನು ಅಂಗೀಕರಿಸಲಾಗಿದೆ.
Fact
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಖಡ್ಗ ಶೋಧ ವೇಳೆ ಸಿಕ್ಕಿದ ಸುದ್ದಿಯ ಬಗ್ಗೆ ಹುಡುಕಿದ್ದೇವೆ. ಆದರೆ ಅಂತಹ ಯಾವುದೇ ವಿಶ್ವಾಸರ್ಹ ಸುದ್ದಿಗಳು ಕಂಡುಬಂದಿಲ್ಲ
ಮೇ 9, 2024ರ ಜಪಾನ್ ಟೈಮ್ಸ್ ವರದಿಯೊಂದರಲ್ಲಿ ಜಪಾನ್ ನ ನರಾ ಎಂಬಲ್ಲಿ ಟೊಮಿಯೊ ಮರಿಯಾಮಾ ಸಮಾಧಿಯಲ್ಲಿ 2022ರಲ್ಲಿ ಅತಿ ದೊಡ್ಡ ಖಡ್ಗವೊಂದು ಪತ್ತೆಯಾಗಿತ್ತು, ಇದು ನಾಲ್ಕನೇ ಶತಮಾನದ್ದಾಗಿದೆ ಎಂದು ಹೇಳಲಾಗಿದೆ ಎಂದಿದೆ. ಈ ಖಡ್ಗ 25X12 ಇಂಚಿನಷ್ಟು ದೊಡ್ಡದಾಗಿತ್ತು. ಈ ಸುದ್ದಿಯಲ್ಲಿ ಕುಂಭಕರ್ಣನ ಖಡ್ಗ ಎಂಬ ಬಗ್ಗೆ ಯಾವುದೇ ಉಲ್ಲೇಖಗಳು ಕಂಡುಬಂದಿಲ್ಲ.
ಆ ಬಳಿಕ ನಾವು ವೈರಲ್ ಆಗಿರುವ ಫೊಟೋಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಕಾಣುವ ವ್ಯಕ್ತಿಗಳ ಮುಖವು ಅಸ್ಪಷ್ಟವಾಗಿರುವುದನ್ನು ಗುರುತಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಫೋಟೋಗಳ ಸತ್ಯಾಸತ್ಯತೆ ತಿಳಿಯಲು ಅವುಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಶೋಧಕಗಳಲ್ಲಿ ಪರಿಶೀಲಿಸಲು ನಿರ್ಧರಿಸಿದ್ದೇವೆ.
ಆ ಪ್ರಕಾರ ನಾವು ಎಐ ಶೋಧಕಗಳ ಮೂಲಕ ಫೊಟೋಗಳನ್ನು ಪರಿಶೀಲಿಸಲು ಮುಂದಾಗಿದ್ದೇವೆ.
ಟ್ರೂ ಮೀಡಿಯಾ ಮೂಲಕ ವೈರಲ್ ಆಗಿರುವ ನಾಲ್ಕೂ ಫೊಟೋಗಳನ್ನು ಪರಿಶೀಲಿಸಿದ್ದೇವೆ. ಈ ವೇಳೆ ಫೋಟೋಗಳು ಎಐ ಮೂಲಕ ರಚಿತವಾಗಿವೆ ಎಂಬುದನ್ನು ಅದು ಹೇಳಿದೆ.
ಇಲ್ಯುಮಿನೇಟರಿ ಮೂಲಕ ಪರಿಶೀಲಿಸಿದಾಗ, ಅದರಲ್ಲೂ ವೈರಲ್ ಫೊಟೋಗಳು ಎಐನಿಂದ ಮಾಡಲ್ಪಟ್ಟಿದೆ ಎಂದು ಖಚಿತಪಡಿಸಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪರಿಶೋಧಕಗಳ ಮೂಲಕ ಶೋಧ ನಡೆಸಿದಾಗ ವೈರಲ್ ಫೊಟೋಗಳು ಎಐನಿಂದ ಮಾಡಲ್ಪಟ್ಟಿವೆ ಎಂದು ಹೇಳಿವೆ. ಆದ್ದರಿಂದ ಕುಂಭಕರ್ಣನ ಖಡ್ಗ ಸಿಕ್ಕಿದೆ ಎಂಬ ಹೇಳಿಕೆ ತಪ್ಪು ಇದು ತಿರುಚಿದ ಫೋಟೋ ಎಂದು ನ್ಯೂಸ್‌ಚೆಕರ್ ಕಂಡುಕೊಂಡಿದೆ.
Result: Altered Photo
Our Sources
Report By Japan times, Dated May 9 2024
Illuminarty AI detector
True Media AI detector
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.