Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ವಂದೇ ಭಾರತ್ ರೈಲಿನ ಕಿಟಕಿ ಗಾಜುಗಳನ್ನು ಒಡೆಯುವ ವೀಡಿಯೋ- ಜಿಹಾದಿಗಳಿಂದ ಭಾರತೀಯ ರೈಲ್ವೇ ಮೇಲೆ ದಾಳಿ
Fact
ಯಾರೂ ಉದ್ದೇಶಪೂರ್ವಕವಾಗಿ ರೈಲಿನ ಕಿಟಕಿಯ ಗಾಜನ್ನು ಒಡೆಯುತ್ತಿಲ್ಲ. ಬದಲಾಗಿ, ಅಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಆದ್ದರಿಂದ ಜಿಹಾದಿಗಳಿಂದ ಭಾರತೀಯ ರೈಲ್ವೇ ಮೇಲೆ ದಾಳಿ ಎನ್ನುವುದು ತಪ್ಪಾಗಿದೆ
ವಂದೇ ಭಾರತ್ ರೈಲಿನ ಕಿಟಕಿ ಗಾಜುಗಳನ್ನು ಒಡೆಯುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಾಟ್ಸಾಪ್ ನಲ್ಲಿ ಕಂಡುಬಂದಿರುವ ಹೇಳಿಕೆಯಲ್ಲಿ, ಜಿಹಾದಿಗಳಿಂದ ಭಾರತೀಯ ರೈಲ್ವೇ ಮೇಲೆ ದಾಳಿ ಎಂದಿದೆ.
ಸತ್ಯಶೋಧನೆ ನಡೆಸುವಂತೆ ಬಳಕೆದಾರರು ನ್ಯೂಸ್ ಚೆಕರ್ ವಾಟ್ಸಾಪ್ ಟಿಪ್ ಲೈನ್ ಗೆ (+91-9999499044) ಮನವಿ ಮಾಡಿದ್ದು, ಇದನ್ನು ತನಿಖೆಗೆ ಅಂಗೀಕರಿಸಲಾಗಿದೆ.
ಸತ್ಯಶೋಧನೆಯಲ್ಲಿ ಕಂಡುಬಂದಂತೆ ಇದು ಭಾರತೀಯ ರೈಲ್ವೇ ಮೇಲೆ ದಾಳಿ ಮಾಡಿದ ಘಟನೆಯಲ್ಲ, ಗ್ಲಾಸ್ ನಿರ್ವಹಣೆಯ ಕೆಲಸ ಆ ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದಾಗ, ಟ್ರೈನ್ಸ್ ಆಫ್ ಇಂಡಿಯಾ ಎಂಬ ಎಕ್ಸ್ ಖಾತೆಯು ವೀಡಿಯೋವನ್ನು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ, “ವ್ಯಕ್ತಿಯು ರೈಲಿಗೆ ಹಾನಿ ಮಾಡುತ್ತಿಲ್ಲ, ಆದರೆ ನಿರ್ವಹಣಾ ಡಿಪೋದಲ್ಲಿ ಈಗಾಗಲೇ ಹಾನಿಗೊಳಗಾದ ಗಾಜನ್ನು ಒಡೆದು ಹೊಸ ಗಾಜನ್ನು ಬದಲಾಯಿಸುತ್ತಿದ್ದಾನೆ, ಗಾಜು ರೈಲಿನ ಮೇಲೆ ಅಂಟಿಕೊಂಡಿರುವುದರಿಂದ ಅದನ್ನು ಮೊದಲು ಒಡೆಯಬೇಕು ಎಂದಿದೆ.
ಇದರೊಂದಿಗೆ ಫೇಸ್‌ಬುಕ್‌ನಲ್ಲಿ ಬಳಕೆದಾರರೊಬ್ಬರು ಇನ್ ಸ್ಟಾಗ್ರಾಂನಲ್ಲಿ ವಂದೇ ಭಾರತ್ ರೈಲಿನ ಕಿಟಕಿ ಗಾಜನ್ನು ಒಡೆಯುವ ವ್ಯಕ್ತಿಯ ಇನ್‌ಸ್ಟಾ ಗ್ರಾಂ ಪ್ರೊಫೈಲ್ ಲಿಂಕ್ ಎಂದು ಒಂದು ಲಿಂಕನ್ನು ಅವರು ಹಂಚಿಕೊಂಡಿದ್ದಾರೆ.
ಅದರಂತೆ ನಾವು ಇನ್‌ಸ್ಟಾ ಗ್ರಾಂನಲ್ಲಿ signare_mahi_manish ಪ್ರೊಫೈಲ್ ವೀಕ್ಷಿಸಿದ್ದು, ಅಲ್ಲಿ ರೈಲಿನ ಗಾಜು ಒಡೆಯುವ ಯಾವುದೇ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನ್ನು ಸ್ಕ್ಯಾನ್ ಮಾಡಿದ್ದೇವೆ ಆದರೆ ಗಾಜು ಒಡೆಯುವ ಯಾವುದೇ ವೀಡಿಯೋ ಕಂಡು ಬಂದಿಲ್ಲ.
ಆದಾಗ್ಯೂ, ಇಂಡಿಯಾ ಟುಡೇ ಪ್ರಕಾರ, ಸೆಪ್ಟೆಂಬರ್ 10 ರಂದು ಈ ಖಾತೆಯಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ನ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಲ್ಲಿ ವೈರಲ್ ವೀಡಿಯೋದ ಸ್ಕ್ರೀನ್ ಶಾಟ್ ಕೂಡ ಸೇರಿದೆ. ಈ ಖಾತೆ ಬಿಹಾರದ ಆರಾ ನಿವಾಸಿ ಮನೀಶ್ ಕುಮಾರ್ ಎಂಬವರದ್ದಾಗಿದೆ. ಮನೀಶ್ ಕುಮಾರ್ ಪ್ರಸ್ತುತ ಅಹಮದಾಬಾದ್ನಲ್ಲಿದ್ದು, ರೈಲ್ವೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಒಂದೇ ಆದರೂ ಈ ಬಗ್ಗೆ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದಿದೆ. ಆ ಬಳಿಕ ನಾವು ರೈಲ್ವೇ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ.
ಅಹ್ಮದಾಬಾದ್ ನ ವೆಸ್ಟರ್ನ್ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರದೀಪ್ ಶರ್ಮಾ ಅವರು ನ್ಯೂಸ್ ಚೆಕರ್ ನೊಂದಿಗೆ ಮಾತನಾಡಿ, “ವಂದೇ ಭಾರತ್‌ನ ಗಾಜು ಒಡೆಯುವ ವೈರಲ್ ವೀಡಿಯೋ ಅಹಮದಾಬಾದ್-ಮುಂಬೈ ವಂದೇ ಭಾರತ್‌ನ ಇಂಟೆಗ್ರೇಟೆಡ್ ಕೋಚಿಂಗ್ ಡಿಪೋ ಕಂಕಾರಿಯಾದ್ದಾಗಿದೆ. ವಂದೇ ಭಾರತ್‌ನ ಕಿಟಕಿ ಗಾಜನ್ನು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟಫ್‌ನೆಡ್ ಗ್ಲಾಸ್‌ನಿಂದ ಮಾಡಲಾಗಿದ್ದು, ಯಾವುದೇ ವಸ್ತು ಹೊಡೆದರೆ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ, ನಿರ್ವಹಣೆ ಸಮಯದಲ್ಲಿ ಕಿಟಕಿಯ ಗಾಜಿನಲ್ಲಿ ಬಿರುಕು ಕಂಡುಬಂದರೆ ಅದನ್ನು ಸರಿಪಡಿಸಲಾಗುತ್ತದೆ. ಸುತ್ತಿಗೆಯ ಸಹಾಯದಿಂದ ಅದನ್ನು ಒಡೆದು ತೆಗೆಯಲಾಗುತ್ತದೆ. ಗುತ್ತಿಗೆ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದು, ಈ ವೀಡಿಯೋವನ್ನು ಮತ್ತೊಬ್ಬ ಗುತ್ತಿಗೆ ಕಾರ್ಮಿಕರು ಮಾಡಿದ್ದಾರೆ. ರೈಲ್ವೇ ಆವರಣದಲ್ಲಿ ವೀಡಿಯೋಗ್ರಫಿ ನಿಷೇಧಿಸಲಾಗಿದ್ದು ಆದರೂ ನಿಯಮ ಉಲ್ಲಂಘಿಸಿ ವೀಡಿಯೋಗ್ರಫಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಗುತ್ತಿಗೆ ಕಾರ್ಮಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದ ನಿಯಮಗಳ ಪ್ರಕಾರ ಒಪ್ಪಂದದ ನಿಯಮಗಳನ್ನು ಪಾಲಿಸದ ಗುತ್ತಿಗೆದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಸತ್ಯಶೋಧನೆಯಲ್ಲಿ ಕಂಡುಬಂದಂತೆ ಯಾರೂ ಉದ್ದೇಶಪೂರ್ವಕವಾಗಿ ರೈಲಿನ ಕಿಟಕಿಯ ಗಾಜನ್ನು ಒಡೆಯುತ್ತಿಲ್ಲ. ಬದಲಾಗಿ, ಅಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಆದ್ದರಿಂದ ಜಿಹಾದಿಗಳಿಂದ ಭಾರತೀಯ ರೈಲ್ವೇ ಮೇಲೆ ದಾಳಿ ಎನ್ನುವುದು ತಪ್ಪಾಗಿದೆ.
Our Sources
X post By Trains of India Dated September 10, 2024
Pradeep Sharma, Senior Public Relations Officer, Western Railways Ahmedabad
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.