Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
“ಮಿ.ಬೀನ್” ವೃದ್ಧರಾಗಿ ಹಾಸಿಗೆ ಹಿಡಿದಿದ್ದಾರೆ
Fact
“ಮಿ.ಬೀನ್” ನಟ ರೋವರ್ ಆಟ್ಕಿನ್ಸನ್ ಅವರು ವೃದ್ಧಾಪ್ಯದಿಂದ ಹಾಸಿಗೆ ಹಿಡಿದಿಲ್ಲ. ವೈರಲ್ ಫೊಟೋ ತಂತ್ರಜ್ಞಾನದ ಮೂಲಕ ತಿರುಚಿದ ಚಿತ್ರವಾಗಿದೆ
ಮಿಸ್ಟರ್ ಬೀನ್ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದ ರೋವರ್ ಆಟ್ಕಿನ್ಸನ್ ಅವರು ವೃದ್ಧಾಪ್ಯದಿಂದ ಹಾಸಿಗೆ ಹಿಡಿದಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಫೊಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ನಮ್ಮ ಬಾಲ್ಯದಲ್ಲಿ ನಮ್ಮನ್ನು ರಂಜಿಸಿರುವ ಮಿಸ್ಟರ್ ಬೀನ್ ಈಗ ವೃದ್ಧರಾಗಿದ್ದಾರೆ ಎಷ್ಟು ಬೇಗ ಮುಗಿದು ಹೋಯ್ತಲ್ಲ ನಮ್ಮ ಬಾಲ್ಯ” ಎಂದಿದೆ.
Also Read: ಹೊಗೇನಕಲ್ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್

ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಹಾಸಿಗೆ ಹಿಡಿದಿರುವ ಅಟ್ಕಿನ್ಸನ್ ಅವರ ಚಿತ್ರದ ಬಗ್ಗೆ ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ. ಈ ವೇಳೆ ಜನವರಿ 30, 2020 ರ ಮಿರರ್ ವರದಿ ಲಭ್ಯವಾಗಿದೆ. “75 ವರ್ಷದ ಬ್ಯಾರಿ ಬಾಲ್ಡರ್ಸ್ಟೋನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅವರು ಮತ್ತು ಅವರ ಪತ್ನಿ ತಮ್ಮ ಕಷ್ಟಪಟ್ಟು ಸಂಪಾದಿಸಿದ ಸಾವಿರಾರು ಉಳಿತಾಯವನ್ನು ಅವರ ಆರೈಕೆಯ ಬಿಲ್ ಪಾವತಿಸಲು ಖರ್ಚು ಮಾಡಬೇಕಾಯಿತು” ಎಂದು ವರದಿಯು ವಿವರಿಸಿದೆ.

“ಅವರ ಎಲ್ಲಾ ಆರೈಕೆಗಳಿಗೆ ಸಂಪೂರ್ಣ ಹಣ ಪಾವತಿಯನ್ನು ನಿರಾಕರಿಸಿದ ದಿನದಂದು ಚಿತ್ರವು ಅವರನ್ನು ತೋರಿಸುತ್ತದೆ … ಆ ನಿರ್ಧಾರವನ್ನು ತೆಗೆದುಕೊಂಡ ಮರುದಿನ, ಎರಡು ಅರ್ಜಿಗಳ ಮೇಲ್ಮನವಿಯನ್ನು ಎತ್ತಿಹಿಡಿಯಲಾಯಿತು, 75 ವರ್ಷದ ಅವರು ನಿಧನರಾದರು. ಬಾಲ್ಡರ್ ಸ್ಟೋನ್ ನಿರಂತರ ಆರೋಗ್ಯ ಯೋಜನೆಯಡಿ ವಾರಕ್ಕೆ £ 150 ಗೆ ಅರ್ಹತೆ ಪಡೆದರು. “ಆ ಅಂಕಿಅಂಶವು ಅವರ ಆರೈಕೆಯ ವೆಚ್ಚದ ಸಣ್ಣ ಶೇಕಡಾವಾರು ಮಾತ್ರ ಒಳಗೊಂಡಿದೆ ಮತ್ತು ಇದರರ್ಥ ದಂಪತಿಗಳ ಉಳಿತಾಯ ಮತ್ತು ಪಿಂಚಣಿಗೆ ತೀವ್ರ ಹೊಡೆತ ಬಿದ್ದಿದೆ. ಈಸ್ಟ್ ಚೆಷೈರ್ ಕ್ಲಿನಿಕಲ್ ಕಮಿಷನಿಂಗ್ ಗ್ರೂಪ್ (ಸಿಸಿಜಿ) ಬ್ಯಾರಿ ಅವರು ಪೂರ್ಣ ಧನಸಹಾಯಕ್ಕೆ ಅರ್ಹರಲ್ಲ ಎಂದು ಹೇಳಿದೆ, ಇದು ಅವರ ಎಲ್ಲಾ ಆರೈಕೆ ಅಗತ್ಯಗಳಿಗೆ ಪಾವತಿ ಮಾಡುತ್ತಿತ್ತು ” ಎಂದು ಅದು ಹೇಳಿದೆ.
ಮಿರರ್ ವರದಿಯಲ್ಲಿ ಕಾಣಿಸಿಕೊಂಡಿರುವಂತೆ ಅಟ್ಕಿನ್ಸನ್ ಅವರ ಫೋಟೋವನ್ನು ಬಾಲ್ಡರ್ ಸ್ಟೋನ್ ಅವರ ಛಾಯಾಚಿತ್ರದೊಂದಿಗೆ ಹೋಲಿಸಿದಾಗ, ನಟ ಹಾಸಿಗೆ ಹಿಡಿದಿರುವಂತೆ ಕಾಣಲು ವೈರಲ್ ಚಿತ್ರವನ್ನು ತಿರುಚಲಾಗಿದೆ ಎಂದು ನಾವು ತೀರ್ಮಾನಿಸಬಹುದು

ಬಾಲ್ಡರ್ ಸ್ಟೋನ್ ಅವರ ಅದೇ ರೀತಿಯ ಛಾಯಾಚಿತ್ರಗಳನ್ನು ಹೊತ್ತ ಮ್ಯಾಂಚೆಸ್ಟರ್ ಈವ್ನಿಂಗ್ ನ್ಯೂಸ್ ವರದಿ ಕೂಡ ಲಭ್ಯವಾಗಿದೆ. “73 ವರ್ಷದ ಮರ್ಲಿನ್ (ಅವರ ಪತ್ನಿ) ತನ್ನ ಪತಿಯ ಆರೋಗ್ಯವು ‘ಹದಗೆಟ್ಟ’ ನಂತರ ಈ ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರೂ, ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರು ಹೇಳುತ್ತಾರೆ.” “ಆ ಚಿತ್ರವು ನನ್ನನ್ನು ಕಾಡುತ್ತದೆ, ಆದರೆ ಅವರು ಎಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಅವರು ತಿಳಿದುಕೊಳ್ಳಬೇಕು ಎಂದು ನಾನು ಭಾವಿಸಿದ್ದರಿಂದ ನಾನು ಅದನ್ನು ತೆಗೆದೆ, ಅವರು ತುಂಬಾ ಭಯಾನಕವಾಗಿ ಕಾಣುತ್ತಿದ್ದರು” ಎಂದು ಅವರು ಹೇಳಿದರು.

ಆನ್ ಲೈನ್ ಪರಿಕರಗಳ ಮೂಲಕ ಫೋಟೋಗಳ ‘ಫೇಸ್ ಸ್ವಾಪಿಂಗ್’
ಅನೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳು ಬಳಕೆದಾರರಿಗೆ ಛಾಯಾಚಿತ್ರ ಅಥವಾ ವೀಡಿಯೋದಲ್ಲಿ ವ್ಯಕ್ತಿಯ ಮುಖವನ್ನು ಇನ್ನೊಂದರ ಮೇಲೆ ಕಾಣುವಂತೆ ಮಾಡಲು ಅನುವು ಮಾಡಿಕೊಂಡುತ್ತದೆ. “ಫೇಸ್ ಸ್ವೈಪಿಂಗ್” ಎಂದು ಕರೆಯುವ ಈ ತಂತ್ರವನ್ನು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮುಖವನ್ನು ಸಿಗರೇಟ್ ಎಳೆಯುತ್ತಿರುವ ಮಹಿಳೆಯನ್ನು ತೋರಿಸುವ ಫೋಟೋದ ಜೊತೆಗೆ ಮಾರ್ಫಿಂಗ್ ಮಾಡಲಾಗಿದೆ. ಇದನ್ನು ನ್ಯೂಸ್ ಚೆಕರ್ ಬಹಿರಂಗಪಡಿಸಿದೆ.
ವಯಸ್ಸಾದ ವ್ಯಕ್ತಿಯೊಬ್ಬರ ಮೂಲ ಫೊಟೋದ ಮೇಲೆ ಆಟ್ಕಿನ್ಸನ್ ಅವರ ಮುಖವನ್ನು ಕಾಣುವಂತೆ ಮಾಡಲು ನ್ಯೂಸ್ಚೆಕರ್ ಅಂತಹ ಎಐ ಆಧಾರಿತ ಫೇಸ್ ಸ್ವಾಪಿಂಗ್ಸಾಧನವನ್ನು ಬಳಸಿದೆ (ಪ್ರದರ್ಶನ ಉದ್ದೇಶಕ್ಕಾಗಿ ಮಾತ್ರ), ಮತ್ತು ಪರಿಣಾಮವಾಗಿ ಚಿತ್ರವು ವೈರಲ್ ಫೊಟೋಕ್ಕೆ ಹೋಲುತ್ತದೆ ಎಂದು ಕಂಡುಕೊಂಡಿದ್ದೇವೆ.

ವಿಶೇಷವೆಂದರೆ, ಮಿಸ್ಟರ್ ಬೀನ್ ನಟ ಇತ್ತೀಚೆಗೆ ಜುಲೈ 7, 2024 ರಂದು ಫಾರ್ಮುಲಾ ಒನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ನಟನ ಅನೇಕ ಫೋಟೋಗಳು ಅವರು ದೈಹಿಕವಾಗಿ ಉತ್ತಮವಾಗಿರುವುದನ್ನು ತೋರಿಸುತ್ತದೆ ಇವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
Also Read: ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎನ್ನುವ ಹೇಳಿಕೆ ಸತ್ಯವೇ?
ಆದ್ದರಿಂದ ಮಿಸ್ಟರ್ ಬೀನ್ ನಟ ರೋವರ್ ಆಟ್ಕಿನ್ಸನ್ ಅವರು ಹಾಸಿಗೆ ಹಿಡಿದಿದ್ದಾರೆ ಎಂಬಂತೆ ತೋರಿಸಲಾದ ಫೊಟೋ ತಂತ್ರಜ್ಞಾನದ ನೆರವಿನಿಂದ ತಿರುಚಿದ ಫೋಟೋ ಎಂದು ಕಂಡುಬಂದಿದೆ.
Our Sources:
Report By Mirror, Dated: January 30, 2020
Report By Manchester Evening News, Dated: January 30, 2020
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.