Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಬಪ್ಪನಾಡು ದೇಗುಲದ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದರು
Fact
ಬಪ್ಪನಾಡು ದೇಗುಲದಲ್ಲಿ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದಾರೆ ಎನ್ನಲಾದ ವಾಹನ ಮುಸ್ಲಿಮರದ್ದಲ್ಲ, ಅದು ಜಾತ್ರೆಗೆ ಬಂದ ವ್ಯಾಪಾರಿಗಳದ್ದಾಗಿತ್ತು
ಬಪ್ಪನಾಡಿನಲ್ಲಿ ದೇವರ ರಥ ಬರುವ ದಾರಿಗೆ ಅಡ್ಡಲಾಗಿ ಮುಸ್ಲಿಮರು ವಾಹನಗಳನ್ನು ಇಟ್ಟಿದ್ದು ಅದನ್ನು ಹಿಂದೂ ಭಕ್ತರು ಎತ್ತಿ ಆಚೆಗೆ ಹಾಕಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಹಲವಾರು ವಿನಂತಿಗಳ ನಂತರವೂ ಮುಸ್ಲಿಂ ತನ್ನ ಕಾರನ್ನು ರಥಕ್ಕಾಗಿ ಪಕ್ಕಕ್ಕೆ ಸರಿಸಲು ನಿರಾಕರಿಸಿದಾಗ ಕರ್ನಾಟಕದ ಹಿಂದೂ ಭಕ್ತರು ಈ ರೀತಿ ಪ್ರತಿಕ್ರಿಯಿಸಿದರು. ಏಕತೆಯ ಶಕ್ತಿ.” ಎಂದಿದೆ.
Also Read: ಕನಿಮೋಳಿಯವರನ್ನು ಊರಿಗೆ ಬಾರದಂತೆ ತಡೆಯಲಾಗಿದೆ ಎಂಬ ಹೇಳಿಕೆ ನಿಜವೇ?

ಈ ವೀಡಿಯೋದ ಬಗ್ಗೆ ನಾವು ಸತ್ಯಶೋಧ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಮೊದಲು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮದ ವರದಿಗಳು ಲಭ್ಯವಾಗಿವೆ.
ಎಪ್ರಿಲ್ 41, 2024ರಂದು ದೈಜಿವರ್ಲ್ಡ್ ವರದಿಯಲ್ಲಿ “ದೇವರ ರಥ ಹೋಗುವ ದಾರಿಯಲ್ಲಿದ್ದ ವಾಹನಗಳನ್ನು ಭಕ್ತರು ಜಖಂ ಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಇತ್ತೀಚೆಗೆ ನಡೆದಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಜಾತ್ರೆಯಲ್ಲಿ ದೇವರ ರಥ ಹೋಗುವ ದಾರಿಯಲ್ಲಿ ವಾಹನಗಳನ್ನ ಪಾರ್ಕ್ ಮಾಡಲಾಗಿತ್ತು. ಹೀಗಾಗಿ ರಥ ಹೋಗಲು ಸ್ಥಳವಿಲ್ಲದಂತೆ ಆಗಿತ್ತು. ಈ ಕಾರಣದಿಂದ ರಥ ಹೋಗಲು ದಾರಿ ಮಾಡುವ ಉದ್ದೇಶದಿಂದ ಭಕ್ತರು ಪಾರ್ಕ್ ಮಾಡಿದ ಕಾರು, ರಿಕ್ಷಾ , ಬೈಕ್ ಗಳನ್ನು ಬದಿಗೆ ದೂಡಿ ಹಾಕಿದ್ದು, ಇದರಿಂದಾಗಿ ವಾಹನಗಳೂ ಜಖಂಗೊಂಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.” ಎಂದಿದೆ.

ಎಪ್ರಿಲ್ 4, 2024ರ ದಿ ಮಂಗಳೂರು ಮಿರರ್ ವರದಿಯಲ್ಲಿ “ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ರಥ ಹೋಗುವ ದಾರಿಯಲ್ಲಿ ಕೆಲವರು ವಾಹನಗಳನ್ನ ಪಾರ್ಕ್ ಮಾಡಿದ್ದರು. ಇದರಿಂದಾಗಿ ದೇವರ ರಥ ಚಲಿಸಲು ಸಮಸ್ಯೆ ಉಂಟಾಗಿತ್ತು, ಈ ಹಿನ್ನಲೆ ರಥಕ್ಕೆ ಹೋಗಲು ದಾರಿ ಮಾಡುವ ಸಲುವಾಗಿ ಭಕ್ತರು, ಪಾರ್ಕ್ ಮಾಡಿದ ಕಾರು, ರಿಕ್ಷಾ , ಬೈಕ್‌ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ವಾಹನಗಳನ್ನು ಬದಿಗೆ ದೂಡಿ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.” ಎಂದಿದೆ.+

Also Read: ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ?
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವರದಿಗಳಲ್ಲೆಲ್ಲೂ ಮುಸ್ಲಿಮರು ರಥ ಸಾಗುವ ದಾರಿಯಲ್ಲಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿದ ಬಗ್ಗೆ ಹೇಳಿಲ್ಲ ಎಂದು ನಾವು ಗಮನಿಸಿದ್ದೇವೆ.
ಆ ಬಳಿಕ ನಾವು ವೈರಲ್ ವೀಡಿಯೋಗಳಲ್ಲಿ ಕಾಣುವಂತೆ, ಕಾರನ್ನು ದಾರಿಯಿಂದ ಎತ್ತಿ ಅಡಿ ಮೇಲಾಗಿಸುವುದನ್ನು ಗಮನಿಸಿದ್ದೇವೆ ಮತ್ತು ಆ ಕಾರಿನ ನಂಬರನ್ನು ನೋಡಿದ್ದೇವೆ. ಆ ಕಾರಿನ ನೋಂದಣಿ ಸಂಖ್ಯೆಯ ಬಗ್ಗೆ ಶೋಧ ನಡೆಸಿದ ವೇಳೆ ಅದು ಬೆಂಗಳೂರಿನ ಕಾರಾಗಿದ್ದು ಮುಸ್ಲಿಮರಿಗೆ ಸೇರಿದ್ದಲ್ಲ ಎಂದು ಕಂಡುಕೊಂಡಿದ್ದೇವೆ.


ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ನಾವು ಮೂಲ್ಕಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ ಚೆಕರ್ ಜೊತೆಗೆ ಮಾತನಾಡಿ “ಬಪ್ಪನಾಡು ದೇವಸ್ಥಾನದ ಜಾತ್ರ ಸಂದರ್ಭ ರಥ ಸಾಗುವ ದಾರಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ಕೆಲವರು ಅವುಗಳನ್ನು ಅಲ್ಲಿಂದ ತೆರವುಗೊಳಿಸುವ ಯತ್ನ ಮಾಡಿದ್ದು ಕೆಲವು ವಾಹನಗಳಿಗೆ ಹಾನಿಯಾಗಿವೆ. ಈ ವಾಹನಗಳು ಮುಸ್ಲಿಮರಿಗೆ ಸೇರಿದ್ದಲ್ಲ. ಅದು ಜಾತ್ರೆಯ ಸಂತೆ ವ್ಯಾಪಾರಿಗಳಿಗೆ ಸಂಬಂಧಿಸಿದ್ದಾಗಿತ್ತು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಯಾವುದೇ ಪ್ರಕರಣ, ದೂರು, ದಾಖಲಾಗಿಲ್ಲ” ಎಂದು ತಿಳಿಸಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಹಲವು ಬಾರಿ ವಿನಂತಿ ಮಾಡಿದ್ದರೂ, ಮುಸ್ಲಿಂ ವ್ಯಕ್ತಿ ತನ್ನ ಕಾರನ್ನು ರಥಕ್ಕಾಗಿ ಪಕ್ಕಕ್ಕೆ ಸರಿಸಲು ನಿರಾಕರಿಸಿದಾಗ ಕರ್ನಾಟಕದ ಹಿಂದೂ ಭಕ್ತರು ಈ ರೀತಿ ಪ್ರತಿಕ್ರಿಯಿಸಿದರು ಎನ್ನುವ ಹೇಳಿಕೆಯು ತಪ್ಪಾಗಿದೆ.
Also Read: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
Our Sources
Report By Daijiworld, Dated: April 4, 2024
Report By Themangaloremirror.in, Dated: April 4, 2024
Website of RTO Vehicle Information
Conversation with Mulki police station, Mulki
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.