Fact Check: ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?

Authors

Vasudha noticed the growing problem of mis/disinformation online after studying New Media at ACJ in Chennai and became interested in separating facts from fiction. She is interested in learning how global issues affect individuals on a micro level. Before joining Newschecker’s English team, she was working with Latestly.

Pankaj Menon

Claim
ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿ

Fact
ಡಿ.ಕೆ.ಶಿವಕುಮಾರ್, ಚಂದ್ರಬಾಬು ನಾಯ್ಡು ಭೇಟಿ 2023ರದ್ದಾದರೆ, ನಿತೀಶ್‌, ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಸಂಚರಿಸಿದ ವಿದ್ಯಮಾನ ಇತ್ತೀಚಿನದ್ದು. ನಿತೀಶ್‌-ತೇಜಸ್ವಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು ರಾಜಕೀಯ ಚರ್ಚೆಗಳಿಗೆ ಕಾರಣವಾಗಿತ್ತು. ಆ ಬಳಿಕ ನಿತೀಶ್ ಎನ್‌ಡಿಎ ಬೆಂಬಲಿಸುವ ಪತ್ರವನ್ನು ನೀಡಿದ್ದರು

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಎನ್ ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರ ನಡೆಸಲು ಆರಂಭಿಸಿದೆ.

ಇದರ ಬೆನ್ನಲ್ಲೇ ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ನಾಯಕರು, ಐಎನ್‌ಡಿ ಒಕ್ಕೂಟದ ನಾಯಕರನ್ನು ಭೇಟಿಯಾಗಿದ್ದಾರೆ ಎಂಬಂತೆ ಹೇಳಲಾಗುತ್ತಿದೆ. ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್‌ ಕುಮಾರ್ ಮತ್ತು ಆರ್‍‌ಜೆಡಿ ನಾಯಕ ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

Fact Check: ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?

ಈ ವೀಡಿಯೋಗಳ ಸತ್ಯಶೋಧನೆಯನ್ನು ನಾವು ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

Fact Check/Verification

ವೀಡಿಯೋ 1

ಈ ವೀಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಅವರು ಚಂದ್ರಬಾಬು ನಾಯ್ಡು ಅವರನ್ನು ವಿಮಾನ ನಿಲ್ದಾಣವೊಂದರಲ್ಲಿ ಕೈ ಹಿಡಿದು ಮಾತನಾಡುತ್ತಿರುವ ದೃಶ್ಯವಿದೆ.

ಇದರ ಬಗ್ಗೆ ಸತ್ಯಶೋಧನೆಗೆ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಡಿಸೆಂಬರ್ 2023 ರ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಲಭ್ಯವಾಗಿದೆ. ವೈರಲ್‌ ಆಗಿರುವ ವೀಡಿಯೋದ ದೃಶ್ಯಗಳನ್ನು ಈ ವರದಿಯಲ್ಲೂ ಇದ್ದು ಇದರಲ್ಲಿ, ಇಬ್ಬರೂ ರಾಜಕಾರಣಿಗಳು  ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿರುವುದಾಗಿ ಇದೆ.

Fact Check: ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?

ನಾಯ್ಡು ಅವರು ತಮ್ಮ ತವರು ಕ್ಷೇತ್ರವಾದ ಕುಪ್ಪಂಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಇಬ್ಬರೂ ಭೇಟಿಯಾದರು, ಶಿವಕುಮಾರ್ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನಾಗ್ಪುರಕ್ಕೆ ತೆರಳುತ್ತಿದ್ದರು. ಶಿವಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವೀಡಿಯೋ ವೈರಲ್ ಆಗಿದೆ” ಎಂದು ವರದಿ ಹೇಳಿದೆ.

ಇದೇ ರೀತಿಯ ವರದಿಯನ್ನು ಎಎನ್‌ಐ ಡಿಸೆಂಬರ್ 28, 2023ರಂದು ಪ್ರಕಟಿಸಿರುವುದನ್ನು ನಾವು ಗಮನಿಸಿದ್ದೇವೆ.

Fact Check: ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?

ಡಿಸೆಂಬರ್ 2023 ರಲ್ಲಿ ಕಾಂಗ್ರೆಸ್ ನಾಯಕ ಮತ್ತು ಟಿಡಿಪಿ ಮುಖ್ಯಸ್ಥರ ನಡುವಿನ ಮಾತುಕತೆ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಿಬಿಎನ್ ಪುತ್ರ ನಾರಾ ಲೋಕೇಶ್, ಈ ಸಭೆ ಕಾಕತಾಳೀಯವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಅರ್ಥವನ್ನು ಕಾಣಬಾರದು ಎಂದು ಹೇಳಿದ್ದರು. “ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ?… ಅವರು ಚಂದ್ರಬಾಬು ಅವರನ್ನು ಭೇಟಿ ಮಾಡಿದರು, ಆದರೆ ಇದು ಭಾರತ ಬಣದೊಂದಿಗೆ ಮೈತ್ರಿಯನ್ನು ಸೂಚಿಸುವುದಿಲ್ಲ” ಎಂದು ಅವರು ಉಲ್ಲೇಖಿಸಿದ್ದಾರೆ.

Fact Check: ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?

ಆದ್ದರಿಂದ ಡಿ.ಕೆ. ಶಿವಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ನಡುವಿನ ಭೇಟಿ 2023ರದ್ದಾಗಿದ್ದು, ಎನ್‌ಡಿಎ ಮೈತ್ರಿಕೂಟದ ಪಾಲುದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎನ್ನುವ ಹೇಳಿಕೆ ಈಗಿನ ಸಂದರ್ಭಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.

ವೀಡಿಯೋ 2

ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ನಾಯಕ ತೇಜಸ್ವಿಯಾದವ್ ಅವರು ಒಂದೇ ವಿಮಾನದಲ್ಲಿ ಪ್ರಯಾಣಿಸಿದ ವೀಡಿಯೋ ಇದಾಗಿದೆ. ಈ ವೀಡಿಯೋ ಬಗ್ಗೆ ನಾವು ಗೂಗಲ್‌ ಕೀ ವರ್ಡ್ ಸರ್ಚ್ ನಡೆಸಿದ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಜೂನ್ 5, 2024ರ ದಿ ಹಿಂದೂ ವರದಿ ಪ್ರಕಾರ, ಎನ್ ಡಿಎ ಮತ್ತು ಐಎನ್‌ಡಿಐಎಯ ಪ್ರತ್ಯೇಕ ಸಭೆಗಾಗಿ ಪಾಟ್ನಾ ವಿಮಾನ ನಿಲ್ದಾಣದಿಂದ ಇಬ್ಬರೂ ಬಿಹಾರದ ಪಾಟ್ನಾದಿಂದ ದಿಲ್ಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದರು ಎಂದಿದೆ.

Fact Check: ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?

ಇದೇ ರೀತಿಯ ವರದಿಗಳನ್ನು ನಾವು ಇಲ್ಲಿ ಇಲ್ಲಿ ಕಂಡುಕೊಂಡಿದ್ದೇವೆ.

ಈ ಪ್ರಕಾರ, ನಿತೀಶ್‌ ಮತ್ತು ತೇಜಸ್ವಿ ಅವರು ಒಂದೇ ವಿಮಾನದಲ್ಲಿ ಸಂಚರಿಸಿದ್ದು, ಆರಂಭದಲ್ಲಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿತ್ತು. ಬಳಿಕ ನಿತೀಶ್‌ ಅವರು ಎನ್ ಡಿಎ ಬೆಂಬಲಿಸಿ ಪತ್ರ ನೀಡಿದ್ದರು ಎಂಬುದನ್ನು ಕಂಡುಕೊಂಡಿದ್ದೇವೆ.

Conclusion

ಈ ಸತ್ಯಶೋಧನೆಯ ಪ್ರಕಾರ, ವೀಡಿಯೋಗಳ ಜೊತೆಗೆ ನೀಡಲಾದ ಹೇಳಿಕೆಯು ತಪ್ಪಾದ ಸಂದರ್ಭದ್ದು ಎಂದು ಕಂಡುಕೊಂಡಿದ್ದೇವೆ. ಡಿ.ಕೆ.ಶಿವಕುಮಾರ್, ಚಂದ್ರಬಾಬು ನಾಯ್ಡು ಭೇಟಿ 2023ರದ್ದಾದರೆ, ನಿತೀಶ್‌, ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಸಂಚರಿಸಿದ ವಿದ್ಯಮಾನ ಇತ್ತೀಚಿನದ್ದು ಎಂದು ಕಂಡುಬಂದಿದೆ.

Result: Missing Context

Our Sources
Report By The New Indian Express, Dated: December 30, 2023

X Post By ANI, Dated: December 28, 2023

Report By NDTV, Dated: December 29, 2023

Report By The Hindu, Dated, June 5, 2024

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.