Authors
Claim
ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಬೆಂಕಿಯಲ್ಲಿ ಸ್ನಾನ ಮಾಡುತ್ತಿರುವ ಸಾಧು
Fact
ಈ ಹೇಳಿಕೆ ತಪ್ಪಾಗಿದೆ. ವೈರಲ್ ವೀಡಿಯೋ ಪ್ರಯಾಗ್ ರಾಜ್ ಮಹಾಕುಂಭಮೇಳದ್ದಲ್ಲ
ಜನವರಿ 13, 2025 ರಂದು, ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ಪ್ರಾರಂಭವಾಗಿದೆ. ಮಹಾಕುಂಭವನ್ನು ತಲುಪುವ ಕೆಲವು ಸಾಧು ಸಂತರು ತಮ್ಮ ವಿಶಿಷ್ಟ ಗುರುತಿನಿಂದಾಗಿ ಅವರು ಜನರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಎಲ್ಲೋ ಒಂದು ಕಡೆ ‘ಧಾನ್ಯ ಬಾಬಾ’ ತಲೆಯ ಮೇಲೆ ಧಾನ್ಯಗಳನ್ನು ಬೆಳೆಯುತ್ತಿರುವ ಚಿತ್ರ ವೈರಲ್ ಆಗುತ್ತಿದ್ದರೆ, ‘ಚಾವಿ ಬಾಬಾ’ ಮತ್ತು ಟಾರ್ಜಾನ್ ಬಾಬಾ ಬಗ್ಗೆ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ, ಸಂತರೊಬ್ಬರು ಮಹಾಕುಂಭದಲ್ಲಿ ಅಗ್ನಿ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಬೆಂಕಿ ಹತ್ತಿಕೊಂಡ ಕಟ್ಟಿಗೆ ಮೇಲೆ ಮಲಗಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಂತ ಬೆಂಕಿಯಲ್ಲಿ ಮಲಗಿರುವ ಮೂರು ನಿಮಿಷಗಳ ವೀಡಿಯೋವನ್ನು ಜನವರಿ 2025 ರ ಎಕ್ಸ್ ಪೋಸ್ಟ್(ಆರ್ಕೈವ್) ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ, ಆ ಸಂತ ಸುಡುವ ಕಟ್ಟಿಗೆಗಳ ಮೇಲೆ ಮಲಗುತ್ತಾರೆ ಮತ್ತು ಅಲ್ಲಿಂದ ಎದ್ದು ನಿಲ್ಲುತ್ತಾರೆ. ಈ ಪೋಸ್ಟ್ ನಲ್ಲಿ “ಮಹಾಕುಂಭದಲ್ಲಿ ಮಹಾಶಾಂತ್ ಅವರ ಅಗ್ನಿ ಸ್ನಾನ …. ಇದನ್ನು ಯಾರು ನೋಡ್ತಾರೋ ನೋಡ್ತಾ ಇರಿ…” ಎಂದಿದೆ.
ಮತ್ತೊಂದು ಪೋಸ್ಟ್ನಲ್ಲಿ (ಆರ್ಕೈವ್) ವೈರಲ್ ವೀಡಿಯೋ ಜೊತೆ ಇರುವ ಹೇಳಿಕೆಯಲ್ಲಿ“ಪ್ರಯಾಗ್ರಾಜ್ #MahaKumbh2025 (ಮಹಾಕುಂಭ) ಕ್ಕೆ ಬಂದ ಸಿದ್ಧ ಸಂತ ಮಹಾರಾಜ್ ಗಂಗಾ ಮಾತೆಯಲ್ಲಿ ಸ್ನಾನ ಮಾಡುವ ಮೊದಲು ಬೆಂಕಿಯಲ್ಲಿ ಸ್ನಾನ ಮಾಡಿದರು. ಈ ಅದ್ಭುತ ದೃಶ್ಯವನ್ನು ನೋಡಿದ ಬಿಬಿಸಿಯ ಪತ್ರಕರ್ತ ಭಾವಪರವಶರಾದರು. ನಿನ್ನೆ, ಬಿಬಿಸಿ ಇದನ್ನು ತನ್ನ ಚಾನೆಲ್ ನಲ್ಲಿ ಪ್ರಸಾರ ಮಾಡಿತು.” ಎಂದಿದೆ. ಇಂತಹ ಇತರ ಪೋಸ್ಟ್ ಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಿ.
Also Read: ಕಾಡ್ಗಿಚ್ಚಿಗೆ ಅಮೆರಿಕದ ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನುವುದು ನಿಜವಲ್ಲ!
Fact Check/Verification
ವೈರಲ್ ಪೋಸ್ಟ್ ಗಳ ಬಗ್ಗೆ ಸತ್ಯಶೋಧನೆ ನಡೆಸಲು ನಾವು, ಕೀವರ್ಡ ಗಳನ್ನು ಬಳಸಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದೇವೆ. ಈ ಸಮಯದಲ್ಲಿ, ಈ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳನ್ನು ನಾವು ಕಂಡುಹಿಡಿಯಲಾಗಿಲ್ಲ.
ಆ ಬಳಿಕ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಮಾರ್ಚ್ 23, 2011 ರಂದು ಪ್ರಕಟಿಸಿದ ಯೂಟ್ಯೂಬ್ ಪೋಸ್ಟ್ ನಲ್ಲಿ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಆಗಿರುವ ವೀಡಿಯೋ ಮಹಾಕುಂಭ 2025 ರದ್ದಲ್ಲ ಎಂದು ಇದು ಸ್ಪಷ್ಟಪಡಿಸಿದೆ. ಈಯೂಟ್ಯೂಬ್ ವೀಡಿಯೋದ ಶೀರ್ಷಿಕೆಯು ಇದನ್ನು ‘ದಿ ಫೈರ್ ಯೋಗಿ’ ಎಂಬ ಸಾಕ್ಷ್ಯಚಿತ್ರ ಎಂದು ವಿವರಿಸುತ್ತದೆ.
ಬಳಿಕ ನಾವು ‘ದಿ ಫೈರ್ ಯೋಗಿ ಡಾಕ್ಯುಮೆಂಟರಿ’ ಎಂಬ ಕೀವರ್ಡ್ ಗಳೊಂದಿಗೆ ಗೂಗಲ್ ಸರ್ಚ್ ಮಾಡಿದ್ದೇವೆ. ಈ ಸಮಯದಲ್ಲಿ, 2008 ಮತ್ತು 2009 ರಲ್ಲಿ ಹಂಚಿಕೊಳ್ಳಲಾದ ಇತರ ಅನೇಕ ಯೂಟ್ಯೂಬ್ ವೀಡಿಯೋಗಳನ್ನು ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ಇದನ್ನು ‘ದಿ ಫೈರ್ ಯೋಗಿ’ ಎಂಬ ಸಾಕ್ಷ್ಯಚಿತ್ರ ಎಂದು ವಿವರಿಸಲಾಗಿದೆ. ವೀಡಿಯೋದ ದೀರ್ಘ ಆವೃತ್ತಿಯಲ್ಲಿ, ಇದು ದಕ್ಷಿಣ ಭಾರತದ ತಂಜಾವೂರಿನಿಂದ ಬಂದಿದೆ ಎಂದು ಹೇಳಲಾಗಿದೆ. ‘ದಿ ಫೈರ್ ಯೋಗಿ’ ಎಂಬ 47 ನಿಮಿಷಗಳ ಸಾಕ್ಷ್ಯಚಿತ್ರದಿಂದ ಈ ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ ಎಂದು ವೀಡಿಯೋದ ವಿವರಣೆಯಲ್ಲಿ ತಿಳಿಸಲಾಗಿದೆ.
ತನಿಖೆಯ ನಂತರ, ಮೈಕ್ ವಾಸನ್ ನಿರ್ದೇಶನದ ‘ದಿ ಫೈರ್ ಯೋಗಿ – ಎ ಸ್ಟೋರಿ ಆಫ್ ಎ ಎಕ್ಸ್ಟ್ರಾರ್ಡಿನರಿ ಜರ್ನಿ’ ಎಂಬ ಶೀರ್ಷಿಕೆಯ ಈ ಸಾಕ್ಷ್ಯಚಿತ್ರದ ಡಿವಿಡಿ ಅಮೆಜಾನ್ ಮತ್ತು ಇ-ಬೇ ವೆಬ್ಸೈಟ್ನಲ್ಲಿಯೂ ಲಭ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಡಿವಿಡಿಯ ಹಿಂಭಾಗದಲ್ಲಿ ಬರೆದಿರುವ ಮಾಹಿತಿಯಲ್ಲಿ, ಅಗ್ನಿ ಯೋಗಿಯ ಹೆಸರನ್ನು ರಾಮಭಾವು ಸ್ವಾಮಿ ಎಂದು ಉಲ್ಲೇಖಿಸಲಾಗಿದೆ.
ತನಿಖೆಯಲ್ಲಿ, ನವೆಂಬರ್ 18, 2009 ರಂದು ಆಜ್ ತಕ್ ಪ್ರಕಟಿಸಿದ ವರದಿಯಲ್ಲಿ ತಂಜಾವೂರು ಅಗ್ನಿ ಯೋಗಿ ರಾಮಭಾವು ಸ್ವಾಮಿಯವರ ವೀಡಿಯೋವನ್ನೂ ನಾವು ನೋಡಿದ್ದೇವೆ. ಈ ವಿಡಿಯೋ ಗುಲ್ಬರ್ಗಾದಿಂದ ಬಂದಿದೆ ಎಂದು ಹೇಳಲಾಗಿದೆ. 2009ರ ನವೆಂಬರ್ 17ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ತಮಿಳುನಾಡಿನ ತಂಜಾವೂರಿನ ರಾಮಭಾವು ಸ್ವಾಮೀಜಿ ಅವರ ಬಗ್ಗೆ ಉಲ್ಲೇಖಿಸಲಾಗಿದೆ.
Conclusion
ಈ ತನಿಖೆಯಿಂದ, ಸಾಧುವೊಬ್ಬರು ಬೆಂಕಿಯಲ್ಲಿ ಮಲಗಿದ ಬೆಂಕಿಯಲ್ಲಿ ಈ ವೀಡಿಯೋ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದಲ್ಲ ಎಂದು ತೀರ್ಮಾನಿಸಲಾಗಿದೆ.
Also Read: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
Result: False
Sources
YouTube video By India Divine, Dated: 8th July 2008
DVD of The Fire Yogi available on e-bay
DVD of The Fire Yogi available on Amazon
Report By Aaj tak, Dated: 18th November 2009
Report By The Times of India, Dated: 17th November 2009
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.