Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಗೋವಾದಲ್ಲಿ ಮುಳುಗುತ್ತಿರುವ ದೋಣಿ ಎಂದ ವೈರಲ್ ವೀಡಿಯೋ
Fact
ಗೋವಾದಲ್ಲಿ ಮುಳುಗುತ್ತಿರುವ ದೋಣಿ ಎಂದು ಹಂಚಿಕೊಂಡಿರುವ ವೀಡಿಯೋಗಳು ನಿಜಕ್ಕೂ ಗೋವಾದ್ದಲ್ಲ, ಅದು ಆಫ್ರಿಕಾದ ಕಾಂಗೋ ದೇಶದ್ದಾಗಿದೆ
ದೋಣಿಯೊಂದು ನೀರಿನಲ್ಲಿ ಮುಳುಗುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಗೋವಾದಲ್ಲಿ ನಡೆದ ದುರಂತದ್ದು ಎಂದು ಹೇಳಲಾಗಿದೆ. ಇದೇ ರೀತಿಯ ವೀಡಿಯೋಗಳನ್ನು ಇಲ್ಲಿ, ಇಲ್ಲಿ ಹಂಚಿಕೊಳ್ಳಲಾಗಿದೆ.


ವೈರಲ್ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಎಂದು ಕಂಡುಕೊಂಡಿದೆ.
Also Read: ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂದ ವೀಡಿಯೋ ಇಂಡೋನೇಷ್ಯಾ ಬೆಂಕಿ ಅವಘಡದ್ದು!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಪ್ರಯಾಣಿಕರು ತುಂಬಿರುವ ದೋಣಿ ಮುಳುಗುತ್ತಿರುವ ಈ ವೀಡಿಯೋ ಗೋವಾದ್ದಲ್ಲ ಬದಲಾಗಿ ಆಫ್ರಿಕಾದ ಕಾಂಗೋ ದೇಶದ್ದು ಎಂದು ಕಂಡುಬಂದಿದೆ.
ಅಲಂಕಾರಾ ಟಿವಿ ಅಕ್ಟೋಬರ್ 4, 2024ರಂದು ಪ್ರಕಟಿಸಿದ ಯೂ ಟ್ಯೂಬ್ ವೀಡಿಯೋದಲ್ಲಿ, “Breaking News! Boat capsize on Lake Kivu in the Democratic Republic of Congo kills at least 78.” ಎಂಬ ಶೀರ್ಷಿಕೆಯನ್ನು ನೋಡಿದ್ದೇವೆ.
ಆ ಪ್ರಕಾರ ಶೋಧವನ್ನು ನಡೆಸಿದ್ದೇವೆ. ಅಲ್ ಜಝೀರಾ ಅಕ್ಟೋಬರ್ 3ರಂದು ಪ್ರಕಟಿಸಿದ ವರದಿಯಲ್ಲಿ ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿವು ಸರೋವರದಲ್ಲಿ ದೋಣಿ ಮುಳುಗಿದ ನಂತರ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ತಿಳಿಸಿದ್ದಾರೆ. ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್ ಜಾಕ್ವೆಸ್ ಪುರಿಸಿ ಗುರುವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಮಾಹಿತಿ ಪ್ರಕಾರ, ಮಗುಚಿದ ದೋಣಿಯಲ್ಲಿ 278 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಎಪಿ ನ್ಯೂಸ್ ಅಕ್ಟೋಬರ್ 4ರಂದು ಪ್ರಕಟಿಸಿದ ವರದಿ ಪ್ರಕಾರ, ಗುರುವಾರ ಕಿವು ಸರೋವರದಲ್ಲಿ ಕಿಕ್ಕಿರಿದು ತುಂಬಿದ್ದ ದೋಣಿಯೊಂದು ಮುಳುಗಿ ಕನಿಷ್ಠ 78 ಜನರನ್ನು ಬಲಿ ತೆಗೆದುಕೊಂಡ ಘಟನೆ ಸೇರಿದಂತೆ ಇತ್ತೀಚಿನ ಎರಡು ದೋಣಿ ಅಪಘಾತಗಳ ಕುರಿತು ಕಾಂಗೋಲೀಸ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದಿದೆ. ಈ ವರದಿಯೊಂದಿಗೆ ವೀಡಿಯೋ ಒಂದನ್ನು ಲಗತ್ತಿಸಲಾಗಿದ್ದು, ಅದು ವೈರಲ್ ಆಗಿರುವ ದೃಶ್ಯಗಳೊಂದಿಗೆ ಸಾಮ್ಯತೆಯನ್ನು ಹೊಂದಿರುವುದನ್ನು ನಾವು ಗುರುತಿಸಿದ್ದೇವೆ.

ಸ್ಕೈ ನ್ಯೂಸ್ ಅಕ್ಟೋಬರ್ 3ರಂದು ಪ್ರಕಟಿಸಿದ ವರದಿಯಲ್ಲೂ ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ಅವರು ಮಾಹಿತಿ ನೀಡಿ, ದೇಶದ ಪೂರ್ವದಲ್ಲಿರುವ ಕಿವು ಸರೋವರದಲ್ಲಿ 278 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದ್ದರಿಂದ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಕನಿಷ್ಠ 10 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರಿಂದ ತುಂಬಿದ್ದ ದೋಣಿಯು ಕಿಟುಕು ಬಂದರಿನಿಂದ ಕೇವಲ ಮೀಟರ್ ದೂರದಲ್ಲಿ ನಿಲುಗಡೆಗೆ ಯತ್ನಿಸುತ್ತಿರುವ ವೇಳೆ ಮುಳುಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ತೆರಳುತ್ತಿತ್ತು ಎನ್ನಲಾಗಿದೆ ಎಂದಿದೆ.

ಇದರೊಂದಿಗೆ ವೈರಲ್ ವೀಡಿಯೋ ಗೋವಾದ್ದಲ್ಲ ಬದಲಾಗಿ ಕಾಂಗೋದ್ದು ಎಂದು ಸ್ಪಷ್ಟಪಡಿಸಿ ಗೋವಾ ಪೊಲೀಸರು ಅಕ್ಟೋಬರ್ 5, 2024ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದನ್ನು ನಾವು ಕಂಡುಕೊಂಡಿದ್ದೇವೆ. ಅದರಲ್ಲಿ, “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಗೋವಾದ ತೀರದಲ್ಲಿ ದೋಣಿಯೊಂದು ಮಗುಚಿ ಬಿದ್ದಿದೆ ಎಂದು ಹೇಳುತ್ತಿದೆ. ಇದು ಸುಳ್ಳು. ಆಫ್ರಿಕಾದ ಕಾಂಗೋದ ಗೋಮಾದಲ್ಲಿ ಈ ಘಟನೆ ನಡೆದಿದೆ. ದಯವಿಟ್ಟು ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ” ಎಂದಿದೆ.
ಈ ಸತ್ಯಶೋಧನೆಯ ಪ್ರಕಾರ, ಗೋವಾದಲ್ಲಿ ಸಂಭವಿಸಿದ ದೋಣಿ ಅವಗಢದ ದೃಶ್ಯ ಎಂದು ಹಂಚಿಕೊಳ್ಳಲಾದ ವೀಡಿಯೋ ಆಫ್ರಿಕಾದ ಕಾಂಗೋ ದೇಶದ್ದಾಗಿದೆ ಈ ವೀಡಿಯೋಗಳನ್ನು ಬಳಸಿ ತಪ್ಪು ಹೇಳಿಕೆಗಳನ್ನುಹಂಚಿಕೊಳ್ಳಲಾಗುತ್ತಿದೆ ಎಂಬುದನ್ನು ನ್ಯೂಸ್ ಚೆಕರ್ ದೃಢಪಡಿಸಿದೆ.
Also Read: ಹಿಜಾಬ್ ಧರಿಸದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವ ಹೇಳಿಕೆ ನಿಜವೇ?
Our Sources
YouTube Video By Alankara TV, Dated: October 4, 2024
Report By AP News, Dated: October 4, 2024
Report By Sky News, Dated: October 3, 2024
X post By Goa police, Dated: October 5, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.