Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಬೆಲೆ ಇಳಿಸಲಾಗಿದೆ
Fact
ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಬೆಲೆ ಇಳಿಸಲಾಗಿದೆ ಎನ್ನುವುದು ಸುಳ್ಳು. ದೇಗುಲ ಟ್ರಸ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬೆಲೆಗಳನ್ನು ಇಳಿಸಲಾಗಿಲ್ಲ ಎಂದು ಹೇಳಿದೆ
ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಮತ್ತು ಲಡ್ಡು ಪ್ರಸಾದದ ಬೆಲೆಗಳನ್ನೂ ಇಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನುಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, “ತಿರುಮಲ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ- ಈ ಹಿಂದೆ 300 ರೂ.ನಿಂದ 200 ರೂ. ಲಡ್ಡು ರೂ.50ರಿಂದರೂ.25ಕ್ಕೆ ಇಳಿಕೆಯಾಗಿದೆ” ಎಂದಿದೆ.
Also Read: ಬಂಟ್ವಾಳ ನದಿಯಲ್ಲಿ ಚಿರತೆ ಮೊಸಳೆ ಹಿಡಿದ ದೃಶ್ಯ ಎಂದ ವೈರಲ್ ವೀಡಿಯೋ ದಕ್ಷಿಣ ಅಮೆರಿಕದ್ದು!
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ತಿರುಪತಿ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಿದ ಕುರಿತ ಸುದ್ದಿಗಳ ಬಗ್ಗೆ ಹುಡುಕಾಡಿದ್ದೇವೆ. ಈ ವೇಳೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.
ಆ ಬಳಿಕ ನಾವು ತಿರುಪತಿ ದೇಗುಲದ ವೆಬ್‌ಸೈಟ್ ನೋಡಿದ್ದು, ಇದರಲ್ಲಿ ಟಿಕೆಟ್ ಬೆಲೆ ₹300 ಇರುವುದಾಗಿ ಇದೆ ಜೊತೆಗೆ ವೈರಲ್ ಹೇಳಿಕೆಯಲ್ಲಿ ತಿಳಿಸಿದಂತೆ ₹200 ಗೆ ಇಳಿಕೆಯಾಗಿಲ್ಲ ಎಂಬುದನ್ನು ಮನಗಂಡಿದ್ದೇವೆ.
ಇದೇ ವಿಚಾರ ಕುರಿತಂತೆ ಟಿಟಿಡಿ ನ್ಯೂಸ್ ಕೂಡ ತಿರುಪತಿ ತಿರುಮಲ ದೇಗುಲ ಟ್ರಸ್ಟ್ ಪ್ರಕಟಣೆಯನ್ನು ಪ್ರಕಟಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳು ಕಂಡುಬಂದಂತೆ ದರ್ಶನ ಟಿಕೆಟ್ ಬೆಲೆ ಮತ್ತು ಲಡ್ಡು ಪ್ರಸಾದದ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಇದೇ ವೇಳೆ ನಾವು ಜೂನ್ 22, 2024ರಂದು ಎಕ್ಸ್ ನಲ್ಲೂ ಟಿಟಿಡಿ ಹೇಳಿಕೆಯನ್ನು ಕಂಡುಕೊಂಡಿದ್ದು, ವಿಶೇಷ ದರ್ಶನದ ಬೆಲೆ ಮತ್ತು ಲಡ್ಡು ಪ್ರಸಾದದ ಬೆಲೆ ಇಳಿಕೆಯಾಗಿದೆ ಎನ್ನುವುದು ಸುಳ್ಳು ಎಂದು ಹೇಳಿದೆ.
ಈ ಸತ್ಯಶೋಧನೆ ಪ್ರಕಾರ ತಿರುಪತಿ ವಿಶೇಷ ದರ್ಶನ ಬೆಲೆ ಮತ್ತು ಲಡ್ಡು ಪ್ರಸಾದದ ಬೆಲೆ ಇಳಿಕೆಯಾಗಿದೆ ಎಂಬ ಹೇಳಿಕೆ ಸುಳ್ಳಾಗಿದೆ.
Also Read: ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯವರ ಪ್ರತಿಮೆ ಅನಾವರಣ ಮಾಡಿದ್ದು ನಿಜವೇ?
Our Sources
Website of Tirupati Tirumala Devasthanams
Report By TTD News, Dated: June 22, 2024
X post By Tirupati Tirumala Devasthanams, Dated: June 22, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.