Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ #Udupi ಎಂದು ಟ್ಯಾಗ್ ಮಾಡಲಾಗಿದ್ದು, ಜೊತೆಗೆ ಇದು ಭ್ರಷ್ಟಾಚಾರ ಕಾರಣದಿಂದ ಕುಸಿದ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ನ್ಯೂಸ್ಚೆಕರ್ ಇದರ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ಭಾರತದಲ್ಲಿ ನಡೆದ ಘಟನೆಯಲ್ಲ, ಬದಲಾಗಿ ಭೂಕಂಪದಿಂದಾಗಿ ಮ್ಯಾನ್ಮಾರ್ ನಲ್ಲಿ ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದ ವಿದ್ಯಮಾನವಾಗಿದೆ ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ವೈರಲ್ ವೀಡಿಯೋದ ಕೀಫ್ರೇಂಗಳನ್ನು ಇನ್ ವಿಡ್ ಮೂಲಕ ತೆಗೆದು ಸರ್ಚ್ ಮಾಡಿದೆ. ಈ ವೇಳೆ ಯೂಟ್ಯೂಬ್ ನಲ್ಲಿ ಮೇ 24, 2025ರಂದು
2025 Sagaing Earthquake Archive ನಲ್ಲಿ ಪ್ರಕಟವಾದ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋದಲ್ಲಿ ಮ್ಯಾನ್ಮಾರ್ನ ಸೇಜಿಯಾಂಗ್ ನಲ್ಲಿ ಅಗ್ನಿಶಾಮಕ ದಳದ ಕೇಂದ್ರಕ್ಕೆ ಹಾನಿಯಾಗಿದೆ ಎಂದಿದೆ.
ಆ ಪ್ರಕಾರ ನಾವು ಇನ್ನಷ್ಟು ಹುಡುಕಾಟ ನಡೆಸಿದ್ದೇವೆ. ಈ ವೇಳೆ ದಿ ಗಾರ್ಡಿಯನ್ ಏಪ್ರಿಲ್ 1, 2025ರಂದು ಪ್ರಕಟಿಸಿದ ವರದಿ ಲಭ್ಯವಾಗಿದೆ. ಇದರಲ್ಲಿ ನೀಡಲಾದ ಕ್ಯಾಪ್ಷನ್ ನಲ್ಲಿ ”ಮ್ಯಾನ್ಮಾರ್ನ ಸಾಗೈಂಗ್ನಲ್ಲಿ ಪ್ರಬಲ ಭೂಕಂಪದ ನಂತರ ಕುಸಿದ ಅಗ್ನಿಶಾಮಕ ಠಾಣೆಯ ಬಳಿ ಜನರು ನಿಂತಿದ್ದಾರೆ.” ಎಂದಿದೆ.

ಅದೇ ರೀತಿ ಮಾರ್ಚ್ 29, 2025ರಂದು ಬಿಬಿಸಿ ಕೂಡ ಮ್ಯಾನ್ಮಾರ್ ಭೂಕಂಪ ಬಗ್ಗೆ ವರದಿ ಪ್ರಕಟಿಸಿದ್ದು, ಅದರಲ್ಲೂ ಸಾಗೈಂಗ್ ನಲ್ಲಿ ಅಗ್ನಿಶಾಮಕ ದಳದ ಕಟ್ಟಡ ಬಿದ್ದ ಬಗ್ಗೆ ಫೊಟೋ-ವರದಿಯನ್ನು ಕೊಡಲಾಗಿದೆ.

ಇದೇ ರೀತಿಯ ವರದಿ ಇಲ್ಲಿ ಇಲ್ಲಿ ನೋಡಬಹುದು.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಅಗ್ನಿಶಾಮಕ ದಳದ ಠಾಣೆಯ ಕಟ್ಟಡ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದ್ದಲ್ಲ ಜೊತೆಗೆ ಭ್ರಷ್ಟಾಚಾರದಿಂದಾಗಿ ಕಳಪೆ ಕಾಮಗಾರಿಯ ಪ್ರಕರಣವೂ ಅಲ್ಲ, ಇದು ಮ್ಯಾನ್ಮಾರ್ ನ ಸಾಗೈಂಗ್ ನಲ್ಲಿ ಭೂಕಂಪದಿಂದಾಗಿ ಕಟ್ಟಡ ಬಿದ್ದಿದೆ ಎನ್ನಲಾಗಿದೆ.
Our Sources
YouTube Video By Sagaing Earthquake Archive, Dated: May 24, 2025
Report By The Guardian Dated April 1, 2025
Report By BBC, Dated: March 29, 2025
Ishwarachandra B G
August 29, 2024
Ishwarachandra B G
May 28, 2024
Ishwarachandra B G
March 11, 2023