Authors
Claim
ಆಂಧ್ರದ ನೆಲ್ಲೂರಿನಲ್ಲಿರುವ 1400 ವರ್ಷ ಹಳೆಯ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆ
Fact
ಇದು ನೆಲ್ಲೂರಿನ ದೇಗುಲದಲ್ಲಿರುವ ಚಿತ್ರವಲ್ಲ, ಮೆಕ್ಸಿಕೋದ ಕಲಾವಿದರೊಬ್ಬರು ಬಿಡಿಸಿದ ಚಿತ್ರವಾಗಿದೆ
ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್ ಆಪರೇಟ್ ಮಾಡುವ ವ್ಯಕ್ತಿಯೊಬ್ಬನ ಶಿಲ್ಪವಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ಗೆ ದೂರು ಬಂದಿದ್ದು, ಸತ್ಯಶೋಧನೆಗೆ ಸ್ವೀಕರಿಸಲಾಗಿದೆ. ಈ ಕುರಿತ ಕ್ಲೇಮಿನಲ್ಲಿ 1400 ವರ್ಷಗಳ ಹಿಂದೆ ಪಲ್ಲವ ರಾಜ ನರಸಿಂಹ ಕಟ್ಟಿಸಿದ ರಂಗನಾಥ ಸ್ವಾಮಿ ದೇಗುಲದ ಕಂಬವೊಂದರಲ್ಲಿ ಶಿಲ್ಪವೊಂದಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಕಂಪ್ಯೂಟರ್ ಆಪರೇಟ್ ಮಾಡುವ ಶಿಲ್ಪವಿದೆ. ನಮ್ಮ ಪೂರ್ವಜರ ಕಲ್ಪನೆ ಅಗಾಧವಾದ್ದಲ್ಲವೇ…’ ಎಂದಿದೆ.
ಸತ್ಯಶೋಧನೆ ವೇಳೆ ಇದು ದೇಗುಲದಲ್ಲಿರುವ ಶಿಲ್ಪವಲ್ಲ, ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಅದು ನಮ್ಮನ್ನು “ಸ್ಟ್ರೇಂಜ್ ಹೊರೈಜನ್ಸ್” ಎಂಬ ವೆಬ್ಸೈಟ್ಗೆ ಕರೆದೊಯ್ದಿದೆ. ಈ ವೆಬ್ ಸೈಟ್ ನಲ್ಲಿ 9, 2006 ರ ಸಂಚಿಕೆಯ ಭಾಗವಾಗಿ ರೌಲ್ ಕ್ರೂಜ್ ಅವರ “ಭವಿಷ್ಯದ ಪೂರ್ವಜರು” ಎಂಬ ಕಲಾಕೃತಿಯನ್ನು ವಿವರಿಸಲಾಗಿದೆ.. ಅಜ್ಟೆಕ್ ಮತ್ತು ಮಾಯನ್ ಕಲೆಯಿಂದ ಸ್ಫೂರ್ತಿ ಪಡೆದ ರೌಲ್ ಅವರ ಕೆಲಸವು ಸಾಂಪ್ರದಾಯಿಕ ಅಂಶಗಳು ವಿಜ್ಞಾನ ಕಾದಂಬರಿ ಮತ್ತು ಅದ್ಭುತ ವಿಷಯಗಳೊಂದಿಗೆ ಬೆರೆಸುತ್ತದೆ ಎಂದು ಅದು ಹೇಳಿದೆ.
ಕ್ರೂಜ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಚಿತ್ರದ ಇನ್ನೊಂದು ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ, “ಮೆಮೊರಿಯಾ ಡೆಲ್ ಫ್ಯೂಚುರೊ, ಫೈಬರ್ಗ್ಗ್ಲಾಸ್ನಲ್ಲಿ ಅಕ್ರಿಲಿಕ್, 2015” ಎಂಬ ಶೀರ್ಷಿಕೆ ಇದಕ್ಕಿದೆ “ಭವಿಷ್ಯದ ನೆನಪು, ಫೈಬರ್ಗ್ಲಾಸ್ನಲ್ಲಿ ಅಕ್ರಿಲಿಕ್, 2015” ಎಂದು ಇದನ್ನು ಅನುವಾದಿಸಲಾಗಿದೆ.
ಅಲ್ಲದೆ, ಈ ಕಲಾಕೃತಿಯನ್ನು “ಕಾಸ್ಮೋಸ್ ಲ್ಯಾಟಿನೋಸ್: ಲ್ಯಾಟಿನ್ ಅಮೆರಿಕ ಮತ್ತು ಸ್ಪೇನ್ ನಿಂದ ವಿಜ್ಞಾನ ಕಾದಂಬರಿಯ ಸಂಕಲನ (ಆರಂಭಿಕ ಕ್ಲಾಸಿಕ್ ಆಫ್ ಸೈನ್ಸ್ ಫಿಕ್ಷನ್)” ಪುಸ್ತಕದ ಮುಖಪುಟವಾಗಿ ಕೂಡ ಪ್ರಕಟಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಇದಕ್ಕಾಗಿ ರೂಜ್ ಕ್ರೂಜ್ ಅವರಿಗೆ ಚಿತ್ರಕೃಪೆಯನ್ನು ಕೊಡಲಾಗಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಇದು ಪಲ್ಲವರ ಕಾಲದಲ್ಲಿ ಕಟ್ಟಲಾದ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಡುಬಂದ ಶಿಲ್ಪವಲ್ಲ, ಬದಲಾಗಿ ಮೆಕ್ಸಿಕನ್ ಕಲಾವಿದರೊಬ್ಬರ ಚಿತ್ರ ಎಂದು ಕಂಡುಬಂದಿದೆ.
Result: False
Our Sources
Website of Strange Horizons
Instagram Post by @racrufi, Dated: September 5, 2018
Amazon.in
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.