ಮೂಡಿಗೆರೆಯ ಚಹಾ ಅಂಗಡಿ ಮಾಲೀಕ ಸೆರೆ ಹಿಡಿದ ದೆವ್ವದ ವೈರಲ್‌ ವೀಡಿಯೋ ನಿಜವೇ? 

ಮೂಡಿಗೆರೆ, ದೆವ್ವ, ವೈರಲ್‌ ವೀಡಿಯೋ

ಮೂಡಿಗೆರೆಯ ಚಹಾ ಅಂಗಡಿ ಮಾಲೀಕ ಸೆರೆ ಹಿಡಿದಿದ್ದಾರೆ ಎನ್ನಲಾದ ವೈರಲ್‌ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಬೇರೆ ಭಾರತೀಯ ಭಾಷೆಯಲ್ಲೂ ಇದೇ ವೀಡಿಯೋದ ಸತ್ಯಾಸತ್ಯತೆ ಪರಿಶೀಲನೆಗೆ ನ್ಯೂಸ್‌ ಚೆಕರ್‌ಗೆ ಬೇರೆ ಭಾಷೆಯಲ್ಲೂ ಮನವಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಚ್ ಮಾಡಿದಾಗ ವಿವಿಧ ಭಾಷೆಗಳಲ್ಲಿ, ವಿವಿಧ ಸ್ಥಳಗಳ ಹೆಸರು ಹಾಕಿ ಈ ವೀಡಿಯೋ ಪೋಸ್ಟ್‌ ಮಾಡಿರುವುದು ಕಂಡುಬಂದಿದೆ. 

ಮೂಡಿಗೆರೆಯ ವೀಡಿಯೋ ಎನ್ನಲಾದ ಫೇಸ್‌ಬುಕ್‌ ಪೋಸ್ಟ್‌
ವೈರಲ್‌ ವೀಡಿಯೋ, ಮೂಡಿಗೆರೆ, ದೆವ್ವ
ತಮಿಳಿನಲ್ಲೂ ವೈರಲ್‌ ಆದ ಅದೇ ದೆವ್ವದ ವೈರಲ್‌ ವೀಡಿಯೋ

Fact Check

ನ್ಯೂಸ್‌ಚೆಕರ್‌ ಈ ವೀಡಿಯೋವನ್ನು ಪರಿಶೀಲನೆಗೆ ಒಳಪಡಿಸಿಲು ಉದ್ದೇಶಿಸಿದ್ದು, ಇದಕ್ಕಾಗಿ ವೀಡಿಯೋದ ಕೀಫ್ರೇಂ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಲಾಗಿದೆ. ಆ ಪ್ರಕಾರ ಇದು ಸತ್ಯ ಘಟನೆಯ ವೀಡಿಯೋ ಅಲ್ಲ, ಬದಲಾಗಿ ಇದೊಂದು ಕಂಪ್ಯೂಟರ್ ಗ್ರಾಫಿಕ್ಸ್‌ ಆಧರಿತ ವೀಡಿಯೋ ಎಂದು ತಿಳಿದುಬಂದಿದೆ. 

ವೀಡಿಯೋವನ್ನು ಯೂಟ್ಯೂಬ್‌ಗೆ Joseph Njovu visuals ಎಂಬ ಚಾನೆಲ್‌ಗೆ 2022 ಆಗಸ್ಟ್‌ 27ರಂದು ಅಪ್‌ಲೋಡ್ ಮಾಡಲಾಗಿದ್ದು, Witch caught on Camera| Vfx breakdown Cinema 4d and after effects ಎಂದು ಟೈಟಲ್‌ ಹಾಕಲಾಗಿದೆ. 

Also Read: ಪ.ಬಂಗಾಳ ಚುನಾವಣೆ ಅಕ್ರಮ ಗುಜರಾತ್ ಗೆ ಲಿಂಕ್‌, ವೀಡಿಯೋ ವೈರಲ್‌

ಆ ನಂತರ 2022 ಸೆಪ್ಟೆಂಬರ್‌ 24ರಂದು ಮತ್ತೆ ಇದೇ ವಿಚಾರ ಕುರಿತಾಗಿ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಡಿಯೋ ಹಾಕಲಾಗಿದೆ. ಅದರಲ್ಲಿ ದೆವ್ವದ ವೀಡಿಯೋ ಹೇಗೆ ತಯಾರಿಸಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಲಾಗಿದೆ. ಅದಕ್ಕೆ VFX tutorial| Witch caught on Camera| Vfx breakdown Cinema 4d and after effects ಎಂದು ಟೈಟಲ್‌ ಹಾಕಲಾಗಿದೆ.  

ಜೋಸೆಫ್‌ ಜೊವು ಯೂಟ್ಯೂಬ್‌ ಚಾನೆಲ್‌ ನ ದೆವ್ವದ ವೀಡಿಯೋ ಗ್ರಾಫಿಕ್ಸ್‌ ಸ್ಕ್ರೀನ್‌ ಶಾಟ್‌

ಈ ಚಾನೆಲ್‌ ನಡೆಸುವ ಜೋಸೆಫ್‌ ಜೊವು ಎಂಬವರು ಝಾಂಬಿಯಾದ ಗ್ರಾಫಿಕ್ಸ್ ಡಿಸೈನರ್‌ ಆಗಿದ್ದು, ಆಫ್ಟರ್‌ ಎಫೆಕ್ಟ್‌, ಕಂಪ್ಯೂಟರ್‌ ಗ್ರಾಫಿಕ್ಸ್‌ಗಳ ಕುರಿತ ಟ್ಯುಟೋರಿಯಲ್‌ ವೀಡಿಯೋ ಪೋಸ್ಟ್‌ ಮಾಡುತ್ತಾರೆ.

Conclusion

ಈ ಸತ್ಯಾನ್ವೇಷಣೆ ಪ್ರಕಾರ ಮೂಡಿಗೆರೆಯ ಚಹಾ ಅಂಗಡಿ ಮಾಲೀಕ ಸೆರೆ ಹಿಡಿದಿದ್ದಾರೆ ಎನ್ನಲಾದ ದೆವ್ವದ ದೃಶ್ಯ ಎನ್ನುವುದು ಒಂದು ಗ್ರಾಫಿಕ್ಸ್‌ ಆಧರಿತ ವೀಡಿಯೋ ಆಗಿದೆ. ಇದು ನೈಜ ದೆವ್ವ ಎನ್ನುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. 

Result: False

Our Sources:
YouTube video, from Joseph Njovu visuals, dated on Aug 27, 2022
YouTube video, from Joseph Njovu visuals, dated on Sep 24, 2022

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.