Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್

ಸೋನಿಯಾ ಸಿಗರೇಟ್ ಎಐ ಚಿತ್ರ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಫೋಟೋ

Fact
ಎಐ ನೆರವಿನಿಂದ ನೈಜ ಚಿತ್ರವನ್ನು ತಿರುಚಿ, ಸೋನಿಯಾ ಗಾಂಧಿ ಎಂಬಂತೆ ರೂಪಿಸಲಾಗಿದೆ

ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವರ ಯೌವನದ ಸಮಯದ ಚಿತ್ರ ಇದು ಎಂಬಂತೆ ಹೇಳಲಾಗುತ್ತಿದೆ. ಈ ಚಿತ್ರವನ್ನು ಎಕ್ಸ್ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು, ಇದರ ಶೀರ್ಷಿಕೆಯಲ್ಲಿ “ಗುರುತಿಸುವ ವ್ಯಕ್ತಿಗೆ 8500 ಖಟಾ ಖಟ್ ಖಟಾ ಖಟ್ ಸಿಗುತ್ತದೆ. ” ಎನ್ನಲಾಗಿದೆ.

2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಕುಟುಂಬದ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ಅಂದರೆ ತಿಂಗಳಿಗೆ ಸುಮಾರು 8,500 ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದಾಗ್ಯೂ, ಜೂನ್ 4 ರಂದು ನಡೆದ ಚುನಾವಣಾ ಫಲಿತಾಂಶದಲ್ಲಿ, ಕಾಂಗ್ರೆಸ್ ಬಹುಮತವನ್ನು ಪಡೆಯಲಿಲ್ಲ ಮತ್ತು ಎನ್ಡಿಎ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿತು. ಈ ಹಿನ್ನೆಲೆಯಲ್ಲಿ ಫೋಟೋ-ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ.

Fact Check/ Verification

ತನಿಖೆಯ ಆರಂಭದಲ್ಲಿ, ನಾವು ವೈರಲ್ ಚಿತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಈ ವೇಳೆ ಮುಖದ ಭಾಗ, ಕೈಗಳು, ಬಟ್ಟೆ ವ್ಯತ್ಯಾಸ ಇರುವುದನ್ನು ನೋಡಿದ್ದೇವೆ. ಕೈಗಳ ನರಗಳು ಹೆಚ್ಚು ಸ್ಪಷ್ಟವಾಗಿದ್ದರೆ, ಮುಖ ಕೃತಕವಾಗಿ ಇರುವ ರೀತಿ ಇದೆ. ಮತ್ತು ಚಿತ್ರದ ಭಾಗಗಳು ಹೊಂದಿಕೆಯಾಗದ ರೀತಿ ಇರುವುದನ್ನು ಗಮನಿಸಿದ್ದೇವೆ.  

Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್

ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಚಿತ್ರದ ಕೆಳಭಾಗ ಎಡ ಮೂಲೆಯಲ್ಲಿ ‘ರೀಮೇಕರ್’  ಎಂದು ವಾಟರ್ ಮಾರ್ಕ್ ಇರುವುದನ್ನು ಗಮನಿಸಿದ್ದೇವೆ.  ರೀಮೇಕರ್  ಎನ್ನುವುದು ಒಂದು ಎಐ ಸಾಧನವಾಗಿದ್ದು, ಫೋಟೋಗಳು ಮತ್ತು ವೀಡಿಯೋಗಳಲ್ಲಿ ಮುಖಗಳನ್ನು ಬದಲಾಯಿಸಲು ಬಳಸಲಾಗುತ್ತದೆ.

Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
ವೈರಲ್‌ ಫೋಟೋ
Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
ರಿಮೇಕರ್ ಎಐ ಉಪಕರಣ

ಈಗ ನಾವು ವೈರಲ್ ಚಿತ್ರದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ 26 ಫೆಬ್ರವರಿ, 2013 ರಂದು Tumblr ನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ವೈರಲ್ ಚಿತ್ರವನ್ನು ಹೋಲುವ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. 2013 ರಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ ಕಾಣಿಸಿಕೊಂಡ ಮಹಿಳೆ ಸೋನಿಯಾ ಗಾಂಧಿ ಅಲ್ಲ ಎಂದು ಗುರುತಿಸಬಹುದು. ಈ ಚಿತ್ರವನ್ನು 2012 ರಲ್ಲಿ ಫರ್ಜಾದ್ ಸರ್ಫರಾಜಿ ಎಂಬ ಛಾಯಾಗ್ರಾಹಕ ತೆಗೆದಿದ್ದು, ಘಝಾಲೆ ಎಂಬ ಮಹಿಳೆಯದ್ದು ಎಂದು ಶೀರ್ಷಿಕೆ ನೀಡಲಾಗಿದೆ. ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ, ಛಾಯಾಗ್ರಾಹಕ ಫರ್ಜಾದ್ ಸರ್ಫರಾಜಿ ಅವರ ಕಾಪಿರೈಟ್ ಗುರುತನ್ನೂ ಕಾಣಬಹುದು.

Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
ನೈಜ ಚಿತ್ರ

ತನಿಖೆಯ ಸಮಯದಲ್ಲಿ, ಪೋರ್ಚುಗೀಸ್ ಕಲೆ ಮತ್ತು ಸಂಸ್ಕೃತಿ ವೆಬ್ಸೈಟ್ dasculturas.com ನಲ್ಲೂ ಈ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಛಾಯಾಗ್ರಾಹಕ ಫರ್ಜಾದ್ ಸರ್ಫರಾಜಿ, ಘಝಾಲೆ ಎಂಬ ಮಹಿಳೆಯ ಈ ಫೋಟೋವನ್ನು 2012 ರಲ್ಲಿ ತೆಗೆದಿದ್ದಾರೆ ಎಂದು ಇದರಲ್ಲಿದೆ. ಇದೇ ರೀತಿ ಇತರ ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಿ.

Fact Check: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
ನೈಜ ಚಿತ್ರ

Conclusion

ಸಾಕ್ಷ್ಯಾಧಾರಗಳ ಪ್ರಕಾರ, ಕೈಯಲ್ಲಿ ಸಿಗರೇಟ್ ಹಿಡಿದಿರುವ ಮಹಿಳೆ ಸೋನಿಯಾ ಗಾಂಧಿ ಅಲ್ಲ ಎಂದು ಗೊತ್ತಾಗಿದೆ. ಎಐ ಉಪಕರಣಗಳ ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ವಾಸ್ತವವಾಗಿ, ಈ ಫೊಟೋ ಘಝಾಲೆ ಎಂಬ ಮಹಿಳೆಯದ್ದಾಗಿದೆ.

Result: Altered Image

Our Sources
AI tool Remaker

Post By Tumblr Dated: 26th February 2013

Image By Portuguese art and culture website dasculturas.com

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.