Authors
Claim
ನಕಲಿ ಗೋಡಂಬಿ ಎಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಗೋಡಂಬಿ ರೀತಿ ಹಿಟ್ಟಿನಿಂದ ಮಾಡುವುದನ್ನು ಈ ವೀಡಿಯೋದಲ್ಲಿ ಕಾಣಬಜಹುದು.
Also Read: ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂದು ಬಾಂಗ್ಲಾ ಮಸೀದಿ ವೀಡಿಯೋ ವೈರಲ್
ಈ ವೀಡಿಯೋದ ಸತ್ಯಾಸತ್ಯತೆ ತಿಳಿಯಲು ನ್ಯೂಸ್‌ಚೆಕರ್ ಮುಂದಾಗಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ಮೊದಲು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ. ಸ್ಪೂನ್ಸ್ ಆಫ್ ಇಂದೋರ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಮಾರ್ಚ್ 16, 2023 ರಂದು ಅಪ್ಲೋಡ್ ಮಾಡಲಾದ ವೀಡಿಯೋವನ್ನು ನಾವು ಗಮನಿಸಿದ್ದೇವೆ. ಇದರಲ್ಲಿ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ನೋಡಿದ್ದೇವೆ. ಆ ಬಳಿಕ ನಾವು ಕಮೆಂಟ್ ಗಳನ್ನು ವೀಕ್ಷಿಸಿದ್ದು, ಇದರಲ್ಲಿ ಬಳಕೆದಾರರು ಇದು ಗೋಂಡಬಿ ರೀತಿಯ ತಿನಿಸು ಎಂದು ಬರೆದಿರುವುದನ್ನು ನೋಡಿದ್ದೇವೆ.
ಈ ಆಧಾರದಲ್ಲಿ ನಾವು ಗೂಗಲ್‌ನಲ್ಲಿ ಗೋಂಡಬಿ ತಿಂಡಿ ತಿನಿಸಿನ ಬಗ್ಗೆ ಸರ್ಚ್ ಮಾಡಿದ್ದು ಈಸಿ ಕುಕ್‌ಬುಕ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಮೇ 15, 2018ರಂದು ಅಪ್ಲೋಡ್ ಮಾಡಲಾದ ಮೈದಾ ಕಾಜು ಎಂಬ ತಿಂಡಿಯ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೋದಲ್ಲಿ ಗೋಡಂಬಿ ತಿನಿಸು ಮಾಡುವ ವಿಧಾನಗಳು, ವೈರಲ್ ವೀಡಿಯೋದ ವಿಧಾನಗಳ ರೀತಿಯೇ ಇರುವುದನ್ನು ಗಮನಿಸಿದ್ದೇವೆ.
Also Read: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ನಿಜವೇ?
ಇನ್ನೂ ಹೆಚ್ಚಿನ ಶೋಧನೆ ನಡೆಸಿದಾಗ ಮೈದಾ ಕಾಜು ಹೆಸರಿನಲ್ಲಿ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವುದನ್ನು ನಾವು ಗಮನಿಸಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಇದು ನಕಲಿ ಗೋಡಂಬಿ ತಯಾರಿಕೆಯ ಕುರಿತ ವೀಡಿಯೋವಲ್ಲ. ಇದು ಮೈದಾ ಕಾಜು ಎಂಬ ತಿಂಡಿಯೊಂದರ ಉತ್ಪಾದನೆ ಕುರಿತ ವೀಡಿಯೋ ಎಂದು ತಿಳಿದುಬಂದಿದೆ.
Result: False
Our Sources
Facebook Post By Spoons of Indor, Dated: March 13, 2023
YouTube Video By EasyCookBook, Dated: May 15, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.