Fact Check: ‘ಶಾಸ್ತ್ರಿ’ ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು ಎಂದ ವೀಡಿಯೋ ನಿಜವೇ?

ಶಾಸ್ತ್ರಿ ಸಿನೆಮಾ ನೂಕುನುಗ್ಗಲು

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ನಟ ದರ್ಶನ್ ಅಭಿನಯದ ‘ಶಾಸ್ತ್ರಿ’ ಸಿನೆಮಾ ಟಿಕೆಟ್ ಪಡೆಯಲು ನೂಕುನುಗ್ಗಲು

Fact
‘ಶಾಸ್ತ್ರಿ’ ಸಿನೆಮಾ ಟಿಕೆಟ್ ಗೆ ಆದ ನೂಕುನುಗ್ಗಲು ಇದಲ್ಲ, ಗುಜರಾತಿನ ಭರೂಚ್ ನಲ್ಲಿರುವ ಹೋಟೆಲ್ ಒಂದರಲ್ಲಿ ಕಂಪೆನಿಯೊಂದರ ಉದ್ಯೋಗ ಸಂದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ರೈಲಿಂಗ್‌ ಗೆ ಹಾನಿಯಾದ ವೀಡಿಯೋ ಇದಾಗಿದೆ

ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅಭಿನಯದ ಸಿನೆಮಾ “ಶಾಸ್ತ್ರಿ” ಮರು ಬಿಡುಗಡೆ ಆಗಿದ್ದು, ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಲಗತ್ತಿಸಲಾಗಿದ್ದು, ಯುವಕರು ನೂಕುನುಗ್ಗಲಿನಲ್ಲಿ ಸ್ಟೀಲ್‌ ತಡೆಯನ್ನು ಮುರಿದಿರುವುದು ಕಂಡುಬಂದಿದೆ.

Also Read: ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟ ಫೋಟೋ ವೈರಲ್

Fact Check: 'ಶಾಸ್ತ್ರಿ' ಸಿನೆಮಾ ಟಿಕೆಟ್ ಗೆ ನೂಕುನುಗ್ಗಲು ಎಂದ ವೀಡಿಯೋ ನಿಜವೇ?
ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮ್

ಇದನ್ನು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು 0.23 ಸೆಕೆಂಡ್ ನ ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದಲ್ಲಿ ಕನ್ನಡವಲ್ಲದೆ ಬೇರೆ ಭಾಷೆಯನ್ನು ಮಾತನಾಡುತ್ತಿರುವುದನ್ನು ಗಮನಿಸಿದ್ದೇವೆ. ಬಳಿಕ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ವೀಡಿಯೋಕ್ಕೆ ಸಂಬಂಧಿಸಿದ ವರದಿಗಳು ಲಭ್ಯವಾಗಿವೆ.

ಜುಲೈ 11, 2024ರ ಒನ್‌ ಇಂಡಿಯಾ ವರದಿ ಪ್ರಕಾರ, 10 ಹುದ್ದೆಗಳಿಗಾಗಿ ಸಾವಿರಕ್ಕೂ ಮಿಕ್ಕಿ ಉದ್ಯೋಗಾಂಕ್ಷಿಗಳು ಗುಜರಾತ್ ನ ಹೋಟೆಲ್‌ ಒಂದರಲ್ಲಿ ಸೇರಿದ್ದು, ರೈಲಿಂಗ್ ಕುಸಿಯಲು ಕಾರಣವಾಗಿದೆ ಎಂದಿದೆ. ಗುಜರಾತ್ ನ ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್‌ನಲ್ಲಿ ಇಂಜಿನಿಯರಿಂಗ್‌ ಕಂಪೆನಿಯೊಂದು ನೇಮಕಾತಿ ನಡೆಸಿದ್ದು, ಭಾರೀ ನೂಕುನುಗ್ಗಲು ಕಾರಣಕ್ಕೆ ರೈಲಿಂಗ್‌ ಮುರಿದಿದೆ ಎಂದಿದೆ.

ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.  ಜುಲೈ 11, 2024ರ ಮನಿ ಕಂಟ್ರೋಲ್‌ ವರದಿ ಪ್ರಕಾರ, ಗುಜರಾತ್  ಭರೂಚ್ ನ ಹೋಟೆಲ್ ನಲ್ಲಿ ನೂರಾರು ಮಂದಿ ಉದ್ಯೋಗ ಸಂದರ್ಶನಕ್ಕಾಗಿ ಆಗಮಿಸಿದ್ದು, ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದೆ. ಥೆರಾಮ್ಯಾಕ್ಸ್ ಎಂಬ ರಾಸಾಯನಿಕ ಕಂಪೆನಿ 10 ಹುದ್ದೆಗಳಿಗೆ ನೇಮಕಾತಿ ನಡೆಸಿದ್ದು, ಯುವಕರು ಭಾರೀ ಪ್ರಮಾಣದಲ್ಲಿ ಆಗಮಿಸಿದ್ದರಿಂದ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಯಿತು ಎಂದಿದೆ. ಈ ವೀಡಿಯೋದಲ್ಲಿ ಅಭ್ಯರ್ಥಿಗಳು ನೇಮಕಾತಿ ಸಂದರ್ಶನ ಹೋಟೆಲ್ ಒಳಗೆ ಪ್ರವೇಶಿಸಲು ಯತ್ನಿಸುವ ವೇಳೆ ರೈಲಿಂಗ್ ವೇಳೆ ಕೆಲವು ಅಭ್ಯರ್ಥಿಗಳು ನಿಂತಿದ್ದು ಅದು ಮುರಿಯಲು ಕಾರಣವಾಯಿತು ಎಂದಿದೆ.

Fact Check: 'ಶಾಸ್ತ್ರಿ' ಸಿನೆಮಾ ಟಿಕೆಟ್ ಗೆ ನೂಕುನುಗ್ಗಲು ಎಂದ ವೀಡಿಯೋ ನಿಜವೇ?
ಮನಿ ಕಂಟ್ರೋಲ್ ವರದಿ

ಜುಲೈ 12ರ ದಿ ಹಿಂದೂ ವರದಿಯಲ್ಲಿ ಗುಜರಾತಿನ ಅಂಕೆಲೇಶ್ವರದಲ್ಲಿ ಥರ್ಮಾಕ್ಸ್ ರಾಸಾಯನಿಕ ಸಂಸ್ಥೆಯು ಭರೂಚ್ ಜಿಲ್ಲೆಯ ತನ್ನ ಸ್ಥಾವರಕ್ಕಾಗಿ ಕೇವಲ ಹತ್ತು ಖಾಲಿ ಹುದ್ದೆಗಳಿಗಾಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಉದ್ಯೋಗ ನೇಮಕಾತಿಗೆ, ನೂರಾರು ಯುವಕರು ಉದ್ಯೋಗ ಸಂದರ್ಶನಕ್ಕೆ ಬಂದಾಗ ಕಾಲ್ತುಳಿತದಂತಹ ಪರಿಸ್ಥಿತಿ ಕಂಡುಬಂದಿದೆ ಎಂದಿದೆ.

Fact Check: 'ಶಾಸ್ತ್ರಿ' ಸಿನೆಮಾ ಟಿಕೆಟ್ ಗೆ ನೂಕುನುಗ್ಗಲು ಎಂದ ವೀಡಿಯೋ ನಿಜವೇ?
ದಿ ಹಿಂದೂ ವರದಿ

Conclusion

ಈ ಪುರಾವೆಗಳ ಪ್ರಕಾರ, ಇದು ಮರು ಬಿಡುಗಡೆ ಆದ ಶಾಸ್ತ್ರಿ ಸಿನೆಮಾ ಟಿಕೆಟ್ ಪಡೆಯಲು ಆದ ನೂಕು ನುಗ್ಗಲಲ್ಲ ಬದಲಾಗಿ ಗುಜರಾತ್ ಕಂಪೆನಿಯೊಂದರ ಉದ್ಯೋಗ ಸಂದರ್ಶನದ ವೇಳೆ ನಡೆದ ನೂಕುನುಗ್ಗಲು ಮತ್ತು ರೈಲಿಂಗ್‌ ತುಂಡಾದ ಘಟನೆಯಾಗಿದೆ ಎಂದು ತಿಳಿದುಬಂದಿದೆ.

Also Read: ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಅಳವಡಿಸಲಾಗಿದೆಯೇ, ನಿಜಾಂಶ ಏನು?

Result: Missing Context

Our Sources
Report By One India, Dated: July 11, 2024

Report By Money Control, Dated: July 12, 2024

Report By The Hindu, Dated: July 12, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.