Authors
Claim
ರಾಜೀವ್ ಗಾಂಧಿ-ಸೋನಿಯಾ ನಿಖಾ ಮಾಡಿಕೊಂಡಿದ್ದಾರೆ
Fact
ರಾಜೀವ್-ಸೋನಿಯಾ ಅವರು ಮುಸ್ಲಿಂ ಸಂಪ್ರದಾಯ ಪ್ರಕಾರ ನಿಖಾ ಮಾಡಿಕೊಂಡಿಲ್ಲ. ಅವರ ವಿವಾಹದ ಬಳಿಕ ನಡೆದ ಫ್ಯಾನ್ಸಿ ಡ್ರೆಸ್ ಪಾರ್ಟಿಯಲ್ಲಿ ಮುಸ್ಲಿಂ ಸಂಪ್ರದಾಯದ ರೀತಿ ಉಡುಗೆ ತೊಟ್ಟು ಫೊಟೋ ತೆಗೆಸಿಕೊಂಡಿದ್ದರು.
ರಾಜೀವ್ ಗಾಂಧಿ-ಸೋನಿಯಾ ಗಾಂಧಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬೇಗಂ ರಾಜೀವ ಫಿರೋಜ ಘಾಂಢಿ ನಿಖಾ ದೃಶ್ಯ” ಎಂದು ಮುಸ್ಲಿಂ ಸಾಂಪ್ರದಾಯಿಕ ಉಡುಪಿನಲ್ಲಿರುವ ಫೊಟೋವನ್ನು ಪೋಸ್ಟ್ ಮಾಡಲಾಗಿದೆ.
Also Read: ನಕಲಿ ಗೋಡಂಬಿ ತಯಾರಿಕೆ ಎಂದ ಈ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ರಾಜೀವ್-ಸೋನಿಯಾ ಅವರ ವಿವಾಹದ ಕುರಿತಂತೆ ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಅಕ್ಟೋಬರ್ 7, 2015ರ ಎನ್‌ಡಿಟಿವಿ ಲೇಖನದಲ್ಲಿ “Rare, Black and White Footage of Sonia-Rajiv Gandhi’s Wedding” ಶೀರ್ಷಿಕೆಯಡಿ ರಾಜೀವ್-ಸೋನಿಯಾ ಅವರ ವಿವಾಹದ ಫೊಟೋಗಳನ್ನು ಹಂಚಿಕೊಳ್ಳಲಾಗಿದೆ.
ಇದೇ ಲೇಖನದಲ್ಲಿ, 1968ರ ರಾಜೀವ್ ವಿವಾಹದ ವೀಡಿಯೋವನ್ನು ಅಸೋಸಿಯೇಟೆಡ್ ಪ್ರೆಸ್ ಆರ್ಕೈವ್ ನಲ್ಲಿದ್ದು, ಅದನ್ನು ಯೂಟ್ಯೂಬ್‌ಗೆ ಬ್ರಿಟಿಷ್ ಮೂವಿ ಟೋನ್ ಅಪ್ಲೋಡ್ ಮಾಡಿದೆ ಎಂದು ಹೇಳಲಾಗಿದೆ.
ಈ ಪ್ರಕಾರ ನಾವು ಯೂಟ್ಯೂಬ್ ವೀಡಿಯೋವನ್ನು ಪರಿಶೀಲಿಸಿದ್ದೇವೆ. ಜುಲೈ 21, 2015ರಂದು ಬ್ರಿಟಿಷ್ ಮೂವಿಟೋನ್ ಇದನ್ನು ಅಪ್‌ಲೋಡ್ ಮಾಡಿದ್ದು, “WEDDING OF RAJIV and SONIA” ಶೀರ್ಷಿಕೆಯಲ್ಲಿದೆ. ಇದರೊಂದಿಗೆ ವಿವರಣೆಯಲ್ಲಿ, ಶ್ರೀಮತಿ ಇಂದಿರಾಗಾಂಧಿಯವರ ಪುತ್ರ, ರಾಜೀವ್ ಮತ್ತು ಸೋನಿಯಾ ಮೈನೋ ಅವರ ವಿವಾಹ ನಡೆಯಿತು ವಿವಾಹದ ವಿವಿಧ ದೃಶ್ಯಗಳು, ಶ್ರೀಮತಿ ಇಂದಿರಾ ಗಾಂಧಿ ಮತ್ತು ಶ್ರೀಮತಿ ವಿಜಯ್ ಲಕ್ಷ್ಮೀ ಪಂಡಿತ್, ಕೇಕ್ ಕತ್ತರಿಸುವುದು, ಭಾರತದ ರಾಷ್ಟ್ರಪತಿ ಡಾ.ಝಾಕಿರ್ ಹುಸೇನ್ ಅವರೊಂದಿಗೆ ನೂತನ ದಂಪತಿ ಎಂದಿದೆ .
ಆಗಸ್ಟ್ 27, 2021ರಂದು ಇಂಡಿಯಾಟೈಮ್ಸ್ ರಾಜೀವ್ ಗಾಂಧಿ ಅವರ ಜನ್ಮದಿನೋತ್ಸವದ ನಿಮಿತ್ತ ಪ್ರಕಟಿಸಿದ “ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬದುಕು, 25 ವಿಶೇಷ ಸಂದರ್ಭಗಳು’ ಎಂಬ ಫೊಟೋ ಗ್ಯಾಲರಿಯಲ್ಲಿ ರಾಜೀವ್-ಸೋನಿಯಾ ಮದುವೆ ಫೊಟೋಗಳು ಇವೆ.
Also Read: ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂದು ಬಾಂಗ್ಲಾ ಮಸೀದಿ ವೀಡಿಯೋ ವೈರಲ್
ಈ ಬಗ್ಗೆ ಇನ್ನಷ್ಟು ನಾವು ಸರ್ಚ್ ಮಾಡಿದ್ದೇವೆ. ಈ ವೇಳೆ ಇಂಡಿಯನ್ ಕಲ್ಚರ್ ವೆಬ್‌ಸೈಟ್ನಲ್ಲಿ ಹಾಕಲಾಗಿರುವ ಫೊಟೋವನ್ನು ಗಮನಿಸಿದ್ದೇವೆ.
ರಾಜೀವ್ ಗಾಂಧಿ ಅವರ ವಿವಾಹದ ಬಳಿಕ ನಡೆದ ಫ್ಯಾನ್ಸಿ ಡ್ರೆಸ್ ಪಾರ್ಟಿ ಎಂದು ಫೋಟೋ ಒಂದನ್ನು ನೀಡಲಾಗಿದೆ. ಇದರಲ್ಲಿ ಕ್ಲೇಮಿನೊಂದಿಗೆ ಹಾಕಲಾಗಿರುವ ಫೋಟೋವನ್ನು ಹೋಲುವ ಫೊಟೋ ಇದೆ.
Conclusion
ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಮುಸ್ಲಿಂ ಸಂಪ್ರದಾಯ ಪ್ರಕಾರ ರಾಜೀವ್ ಗಾಂಧಿ, ಸೋನಿಯಾ ಅವರ ನಿಖಾ ಎನ್ನುವ ಕ್ಲೇಮ್ ತಪ್ಪಾಗಿದೆ.
Result: False
Our Sources
Website of Indian Culture
Report By NDTV, Dated: October 7, 2015
Report By Indiatimes, Dated: August 27, 2021
YouTube Video By British Movie tone, Dated: July 21, 2015
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.