Fact Check: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?

ಶ್ರೀಲಂಕಾ, ಸಂತಾನಹರಣ, ಮುಸ್ಲಿಂ ವೈದ್ಯ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಶ್ರೀಲಂಕಾದ ಮುಸ್ಲಿಂ ವೈದ್ಯನಿಂದ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ

Fact
ಶ್ರೀಲಂಕಾದಲ್ಲಿ 2019 ಏಪ್ರಿಲ್‌ 21ರ ಬಳಿಕ ವೈದ್ಯರೊಬ್ಬರು 4 ಸಾವಿರ ಬೌದ್ಧ ಮಹಿಳೆಯರಿಗೆ ಮೋಸದಿಂದ ಸಂತಾನಹರಣ ಮಾಡಿದ್ದಾರೆ ಎಂಬ ಆರೋಪ ಮಾಧ್ಯಮದಲ್ಲಿ ಕೇಳಿಬಂದಿತ್ತು. ಆ ಬಳಿಕ ಕೋರ್ಟ್ ನಲ್ಲಿ ವೈದ್ಯರ ವಿರುದ್ಧ ಯಾವುದೇ ಪೂರಕ ಸಾಕ್ಷ್ಯಗಳು ಇಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು

ಶ್ರೀಲಂಕಾದ ವೈದ್ಯರೊಬ್ಬರು 4 ಸಾವಿರ ಹಿಂದೂ, ಬೌದ್ಧ ಮಹಿಳೆಯರಿಗೆ ಮಕ್ಕಳಾಗದಂತೆ ಸಿಸೇರಿಯನ್‌ ವೇಳೆ ಗರ್ಭಾಶಯ ಕತ್ತರಿಸಿದ್ದಾರೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಮೆಸೇಜ್‌ನಲ್ಲಿ, “ಶ್ರೀಲಂಕಾದವೈದ್ಯ ಡಾ.ಮಹಮೂದ್ ಶಾಫಿ, ಸುಮಾರು 4000 ಹಿಂದೂ ಮತ್ತು ಬೌದ್ಧ ಮಹಿಳೆಯರಿಗೆ ಮಕ್ಕಳಾಗದಂತೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ಗರ್ಭಾಶಯವನ್ನು ಕತ್ತರಿಸಿ. ಇದು ಹೊಸ ರೀತಿಯ ಜಿಹಾದ್… ಮೆಡಿಕಲ್ ಜಿಹಾದ್?” ಎಂದಿದೆ.

Also Read: ಕೊಯಮತ್ತೂರಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂದ ವೈರಲ್ ಪೋಸ್ಟ್ ಸುಳ್ಳು

Fact Check: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?

ಈ ಸಂದೇಶದ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್‌ ಲೈನ್‌ ಗೆ ಮನವಿ ಬಂದಿದ್ದು, ತನಿಖೆಗಾಗಿ ಅಂಗೀಕರಿಸಲಾಗಿದೆ.

Fact Check: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?

ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಜುಲೈ 5, 2019ರ ಎಎಫ್‌ಪಿ ಫ್ಯಾಕ್ಟ್ ಚೆಕ್ ವರದಿಯಲ್ಲಿ, ಮುಸ್ಲಿಂ ಶಸ್ತ್ರಚಿಕಿತ್ಸಕ ಯಾವುದೇ ಸಂತಾನಹರಣ ಮಾಡಿಲ್ಲ ಎಂದು ಶ್ರೀಲಂಕಾದ ಅಧಿಕಾರಿಗಳು ಕಂಡುಕೊಂಡರು ಎಂದಿದೆ. ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ಬಾಂಬ್ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ ಒಂದು ತಿಂಗಳ ನಂತರ, ಪ್ರಮುಖ ಸ್ಥಳೀಯ ಪತ್ರಿಕೆಯೊಂದು ವರದಿಯನ್ನು ಪ್ರಕಟಿಸಿದ್ದು, ಒಬ್ಬ ಮುಸ್ಲಿಂ ಶಸ್ತ್ರಚಿಕಿತ್ಸಕ ದಾಳಿಗೆ ಸಂಬಂಧಿಸಿರುವ ಭಯೋತ್ಪಾದಕ ಗುಂಪಿನ ಸದಸ್ಯನಾಗಿದ್ದು, 4,000 ಸಿಂಹಳೀಯ ಬೌದ್ಧ ಮಹಿಳೆಯರಿಗೆ ರಹಸ್ಯವಾಗಿ ಸಂತಾನಹರಣ ಮಾಡಿದ್ದಾನೆ ಎಂದು ಹೇಳಿತ್ತು. ಈ ವರದಿಯನ್ನು ಸ್ಥಳೀಯ ಟೆಲಿವಿಷನ್ ಚಾನೆಲ್‌ಗಳು ಎತ್ತಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿವೆ. ಆದರೆ ಶ್ರೀಲಂಕಾದ ಅಪರಾಧ ತನಿಖಾ ಇಲಾಖೆಯ ಪ್ರಮುಖ ತನಿಖಾಧಿಕಾರಿಗಳು ವೈದ್ಯರು ಯಾವುದೇ ಸಂತಾನಹರಣ ಮಾಡಿಲ್ಲ ಎಂದು ಕಂಡುಹಿಡಿದಿದೆ. ಶ್ರೀಲಂಕಾದ ಕಾನೂನು ಮತ್ತು ಗುಪ್ತಚರ ಸಂಸ್ಥೆಳು ಆ ವೈದ್ಯರಿಗೆ ಭಯೋತ್ಪಾದನಾ ಜಾಲದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿವೆ ಎಂದಿದೆ. ಈ ಫ್ಯಾಕ್ಟ್ ಚೆಕ್‌ ವರದಿಯೊಂದಿಗೆ ತನಿಖಾಧಿಕಾರಿಗಳು ಕೋರ್ಟ್ ಗೆ ಸಲ್ಲಿಸಿದ ವರದಿಯನ್ನೂ ಲಗತ್ತಿಸಿರುವುದನ್ನು ಎಎಫ್‌ಪಿ ಪ್ರಕಟಿಸಿದೆ.

Fact Check: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ಎಎಫ್‌ಪಿ ಫ್ಯಾಕ್ಟ್ ಚೆಕ್‌ ವರದಿ

ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.

Also Read: ಈ ಬಾರಿ ಲೋಕಸಭೆಗೆ 110 ಮಂದಿ ಮುಸ್ಲಿಂ ಸಂಸದರು ಚುನಾಯಿತರಾಗಿದ್ದಾರೆ ಎಂಬ ಹೇಳಿಕೆ ವೈರಲ್

ಆ ಬಳಿಕ ಜುಲೈ 26 2019ರ ರಾಯ್ಟರ್ಸ್ ವರದಿಯಲ್ಲಿ, ಬೌದ್ಧ ಮಹಿಳೆಯರಿಗೆ ಸಂತಾನಹರಣ ಮಾಡಿದ ಆರೋಪಿ ವೈದ್ಯರಿಗೆ ಶ್ರೀಲಂಕಾ ಕೋರ್ಟ್ ಜಾಮೀನು ಎಂದಿದೆ. ಇದರಲ್ಲಿ, ಬಹುಸಂಖ್ಯಾತ ಸಿಂಹಳೀಯ ಬೌದ್ಧರ 4,000 ಕ್ಕೂ ಹೆಚ್ಚು ಮಹಿಳೆಯರಿಗೆ ಸಂತಾನಹರಣ ಮಾಡಿದ ಆರೋಪ ಹೊತ್ತಿರುವ ಮುಸ್ಲಿಂ ವೈದ್ಯರಿಗೆ ಶ್ರೀಲಂಕಾದ ನ್ಯಾಯಾಲಯವು ಗುರುವಾರ ಜಾಮೀನು ನೀಡಿದೆ ಎಂದು ಅವರ ವಕೀಲರು ಹೇಳಿದರು. ಕೋಮು ರಕ್ತಪಾತದಿಂದ ದೀರ್ಘಕಾಲ ನಲುಗಿದ ದೇಶದಲ್ಲಿ ಆಳವಾದ ಸೂಕ್ಷ್ಮ ಪ್ರಕರಣ ಇದಾಗಿದೆ. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಶೇಗು ಶಿಹಾಬ್ದೀನ್ ಮೊಹಮ್ಮದ್ ಶಫಿ ಅವರಿಗೆ 2.75 ಮಿಲಿಯನ್ ರೂಪಾಯಿ ($ 15,600) ಜಾಮೀನು ನೀಡಲಾಗಿದೆ ಎಂದು ಅವರ ವಕೀಲ ಫಾರಿಸ್ ಸಾಲಿ, ವಾಯುವ್ಯ ಶ್ರೀಲಂಕಾದ ಕುರುನಾಗಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಐದು ಗಂಟೆಗಳ ವಿಚಾರಣೆಯ ನಂತರ ರಾಯಿಟರ್ಸ್ಗೆ ತಿಳಿಸಿದರು ಎಂದಿದೆ.

Fact Check: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ರಾಯ್ಟರ್ಸ್ ವರದಿ

ಜುಲೈ 26, 2019ರ ಇಂಡಿಯಾ ಟುಡೇ ವರದಿಯಲ್ಲಿ, ಬೌದ್ಧ ಮಹಿಳೆಯರಿಗೆ ಸಂತಾನಹರಣ ಮಾಡಿದ ಆರೋಪ ಹೊತ್ತ ವೈದ್ಯರಿಗೆ ಮೇಲೆ ಶ್ರೀಲಂಕಾ ನ್ಯಾಯಾಲಯವು ಜಾಮೀನು ನೀಡಿದೆ ಎಂದಿದೆ. ಬಹುಸಂಖ್ಯಾತ ಸಿಂಹಳೀಯ ಬೌದ್ಧರ 4,000 ಕ್ಕೂ ಹೆಚ್ಚು ಮಹಿಳೆಯರಿಗೆ ಸಂತಾನಹರಣ ಮಾಡಿದ ಆರೋಪ ಹೊತ್ತಿರುವ ಮುಸ್ಲಿಂ ವೈದ್ಯರಿಗೆ ಶ್ರೀಲಂಕಾದ ನ್ಯಾಯಾಲಯವು ಗುರುವಾರ ಜಾಮೀನು ನೀಡಿದೆ ಎಂದು ಅವರ ವಕೀಲರು ಹೇಳಿದರು, ಕೋಮು ರಕ್ತಪಾತದಿಂದ ದೀರ್ಘಕಾಲ ನಲುಗಿದ ದೇಶದಲ್ಲಿ ಅತಿ ಸೂಕ್ಷ್ಮ ಪ್ರಕರಣ ಇದಾಗಿದೆ ಎಂದು ವರದಿಯಲ್ಲಿದೆ.

ಈ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಡಿಸೆಂಬರ್ 16, 2021ರ ದಿ ವೀಕ್‌ ವರದಿಯಲ್ಲಿ, 4 ಸಾವಿರ ಸಿಂಹಳೀಯ ಮಹಿಳೆಯರ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿದ ಆರೋಪ ಹೊತ್ತಿದ್ದ ವೈದ್ಯರನ್ನು ಲಂಕಾ ಸರ್ಕಾರ ಪುನಃ ನೇಮಿಸಿದೆ ಎಂದಿದೆ. ಈ ವರದಿಯಲ್ಲಿ, ವೈದ್ಯರ ವಿರುದ್ಧ ಆರೋಪದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಸಾಬೀತಾಗಿಲ್ಲ. ನ್ಯಾಯಾಲಯದ ವಿಚಾರಣೆಯಲ್ಲಿ, ಕ್ರಿಮಿನಲ್ ತನಿಖಾ (ಸಿಐಡಿ) ಅಧಿಕಾರಿಗಳು ವೈದ್ಯರ ವಿರುದ್ಧದ ಆರೋಪಗಳನ್ನು ಸಮರ್ಥಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದಾರೆ ಎಂದಿದೆ.

Fact Check: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ದಿ ವೀಕ್‌ ವರದಿ

ಡಿಸೆಂಬರ್ 16, 2021ರ ಟ್ರಿಬ್ಯೂನ್‌ ಇಂಡಿಯಾ ವರದಿಯಲ್ಲೂ , 4 ಸಾವಿರ ಸಿಂಹಳೀಯ ಮಹಿಳೆಯರ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿದ ಆರೋಪ ಹೊತ್ತಿದ್ದ ವೈದ್ಯರನ್ನು ಲಂಕಾ ಸರ್ಕಾರ ಪುನಃ ನೇಮಿಸಿದೆ ಎಂದಿದೆ. ಜೊತೆಗೆ ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ, ಡಾ.ಶಾಫಿ ಶಿಹಾಬುದ್ದೀನ್‌ ಅವರಿಗೆ ಕಡ್ಡಾಯ ರಜಾದಿನಗಳ ಬಾಕಿ ವೇತನ ಪಾವತಿ ಮಾಡುವುದಾಗಿ ಹೇಳಿದೆ ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ , ಇಲ್ಲಿ ನೋಡಬಹುದು.

Conclusion

ಈ ತನಿಖೆಯ ಪ್ರಕಾರ, ಶ್ರೀಲಂಕಾದ ಡಾ ಶಾಫಿ ಶಿಹಾಬುದ್ದೀನ್‌ ಎಂಬ ವೈದ್ಯರ ವಿರುದ್ಧ 2019ರಲ್ಲಿ 4 ಸಾವಿರ ಸಿಂಹಳೀಯ ಮಹಿಳೆಯರಿಗೆ ಸಂತಾನಹರಣ ನಡೆಸಿದ ಆರೋಪ ಕೇಳಿಬಂದಿದ್ದು ಬಳಿಕ ತನಿಖಾಧಿಕಾರಿಗಳು ಆ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಶ್ರೀಲಂಕಾ ಸರ್ಕಾರ ಅವರನ್ನು ಮತ್ತೆ ಸೇವೆಗೆ ನಿಯೋಜಿಸಿದೆ ಎಂದು ಗೊತ್ತಾಗಿದೆ.

Also Read: ಕಾಂಗ್ರೆಸ್‌ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಎಂದ ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Result: False

Our Sources
Report By AFP Fact Check, Dated: July 5, 2019

Report By Reuters, Dated: July 26, 2019

Report By India Today, Dated: July 26, 2019

Report By The Week, Dated: December 16, 2021

Report By Tribune India, Dated: December 16, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.