Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರತಿಮೆ ಅನಾವರಣ
Fact
ಟೈಮ್ಸ್ ಸ್ಕ್ವೇರ್‌ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಪ್ರತಿಮನೆ ಅನಾವರಣ ಮಾಡಿಲ್ಲ. ವೀಡಿಯೋ ಕಂಪ್ಯೂಟರೀಕೃತ ದೃಶ್ಯಗಳಾಗಿವೆ
ಅಮೆರಿಕದ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಪ್ರತಿಮೆ ಅನಾವರಣ ಮಾಡಲಾಗಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರತಿಮೆ ಅನಾವರಣ ಮಾಡಿದ್ದಾರೆ. ಅಲ್ಲಿನ ಜನರಿಗೆ ವಿರಾಟ್ ಕೊಹ್ಲಿ ಕ್ರಿಕೆಟ್ ಗಿಂತಲೂ ದೊಡ್ಡವರು” ಎಂದಿದೆ.




ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿ ಪ್ರತಿಮೆಯನ್ನು ತೋರಿಸುವ ವೀಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ. ಕೆಲವು ಬಳಕೆದಾರರು ಅದೇ ಸ್ಕ್ರೀನ್‌ಗ್ರಾಬ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ದೃಶ್ಯಾವಳಿಯು ಯೂಟ್ಯೂಬ್‌ನ ವೀಡಿಯೋವನ್ನು ತೋರಿಸಿದೆ. ಇದರ ಬಗ್ಗೆ ಸತ್ಯಶೋಧನೆಯನ್ನು ನ್ಯೂಸ್ ಚೆಕರ್ ನಡೆಸಿದ್ದು, ಈ ವೀಡಿಯೋ ವಾಸ್ತವವಾಗಿ CGI (ಕಂಪ್ಯೂಟರ್ ಜನರೇಟೆಡ್ ಇಮಾಜಿನರಿ) ಆಗಿದೆ ಮತ್ತು ಕ್ರಿಕೆಟಿಗನ ನಿಜವಾದ ಪ್ರತಿಮೆಯಲ್ಲ ಎಂದು ಕಂಡುಕೊಂಡಿದೆ.
ನ್ಯೂಸ್ 18 , ಮನಿ ಕಂಟ್ರೋಲ್ , ಹಿಂದೂಸ್ತಾನ್ ಟೈಮ್ಸ್ , ಎಬಿಪಿ ನ್ಯೂಸ್ ಮುಂತಾದ ಹಲವಾರು ಭಾರತೀಯ ಸುದ್ದಿವಾಹಿನಿಗಳು ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತೀಯ ಕ್ರಿಕೆಟಿಗನ ದೈತ್ಯಾಕಾರದ ಪ್ರತಿಮೆಯನ್ನು ಅನಾವರಣಗೊಳಿಸಿದ ಬಗ್ಗೆ ವರದಿ ಮಾಡಿವೆ.
ನಾವು ನ್ಯೂಯಾರ್ಕ್ ಸಿಟಿಯ ಟೈಮ್ ಸ್ಕ್ವೇರ್‌ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದೇವೆ, ಆದರೆ ವಿರಾಟ್ ಕೊಹ್ಲಿ ಅವರ ಪ್ರತಿಮೆಯ ಅನಾವರಣದ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಹೆಚ್ಚುವರಿಯಾಗಿ, ಜೂನ್ 28, 2024 ರಂದು @timessquarenyc ನ Instagram ಖಾತೆಯಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಅಂತಹ ಯಾವುದೇ ಪ್ರತಿಮೆ ಸ್ಥಾಪಿಸಿರುವುದನ್ನು ತೋರಿಸಿಲ್ಲ.

ಅದರ ವೆಬ್‌ಸೈಟ್‌ನಲ್ಲಿ ಕ್ರಿಕೆಟಿಗನ ಪ್ರತಿಮೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅರ್ಥ್‌ಕ್ಯಾಮ್ ಮೂಲಕ ಸ್ಟ್ರೀಮ್ ಮಾಡಲಾದ ಟೈಮ್ಸ್ ಸ್ಕ್ವೇರ್‌ನ ಲೈವ್ ದೃಶ್ಯಾವಳಿಯು ಅಂತಹ ಯಾವುದೇ ಪ್ರತಿಮೆಯನ್ನು ತೋರಿಸಲಿಲ್ಲ.
ಗೂಗಲ್ನಲ್ಲಿ “Virat Kohli,” “statue” ಮತ್ತು “Duroflex” ಎಂದು ಕೀವರ್ಡ್ ಸರ್ಚ್ ಮಾಡಿದಾಗ ಜೂನ್ 23, 2024 ರಂದು ಮ್ಯಾಟ್ರೆಸ್ ಸಂಸ್ಥೆಯ ಇನ್ಸ್ಟಾಗ್ರಾಮ್ ಪೋಸ್ಟ್ ಲಭ್ಯವಾಗಿದೆ. ಅದರಲ್ಲಿ ವೈರಲ್ ಆದ ವೀಡಿಯೋ ದೃಶ್ಯಾವಳಿ ಇದ್ದು, ಅದರಲ್ಲಿ “ಈಗಲೇ ಅನಾವರಣಗೊಂಡಿದೆ: ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ದೊಡ್ಡ ವಿರಾಟ್ ಕೊಹ್ಲಿಯ ಪ್ರತಿಮೆ. ಈ ರಾಜನ ಕರ್ತವ್ಯ, ನಾವು ಜಾಗತಿಕವಾಗಿ ವಿಸ್ತರಣೆ ಹೊಂದುತ್ತಿದ್ದು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ! ನ್ಯೂಯಾರ್ಕ್, ವೆಸ್ಟ್ ಇಂಡೀಸ್ ಮತ್ತು ವಿಶ್ವ ಕಪ್ 2024 ರ ಉದ್ದಕ್ಕೂ ವಿರಾಟ್ ಅವರ ನೆಚ್ಚಿನ ಡ್ಯುರೊಫ್ಲೆಕ್ಸ್ ಹಾಸಿಗೆಯನ್ನು ಅವರಿಗೆ ತಲುಪಿಸಲಾಗುತ್ತಿದೆ! #ViratSleepsOnDuroflex *CGI ವಿಡಿಯೋ ” ಎಂದಿದೆ.
ಪೋಸ್ಟ್‌ನಲ್ಲಿ ಬಳಸಲಾದ ಹ್ಯಾಶ್‌ಟ್ಯಾಗ್‌ಗಳು – “#GreatSleepGreatHealth #ViratKohli #worldcup #cricket #CGI #cgianimation – ದೃಶ್ಯವು ಕಂಪ್ಯೂಟರ್‌ನಿಂದ ರಚಿಸಲ್ಪಟ್ಟ ವೀಡಿಯೋ ಚಿತ್ರಣವಾಗಿದೆ ಎಂದು ಮತ್ತಷ್ಟು ಒತ್ತಿಹೇಳುತ್ತದೆ.

ನಾವು ಡ್ಯುರೊಫ್ಲೆಕ್ಸ್‌ನ ಪ್ರೊಫೈಲ್ ಅನ್ನು ನೋಡಿದ್ದು ಅಂತಹ ಅನೇಕ CGI ಮೂಲಕ ರಚಿತವಾದ ವಿಷಯವನ್ನು ಕಂಡುಕೊಂಡಿದ್ದೇವೆ.

ಟೈಮ್ಸ್ ಸ್ಕ್ವೇರ್‌ನಲ್ಲಿರುವ ಕೊಹ್ಲಿಯ ಪ್ರತಿಮೆಯನ್ನು ತೋರಿಸುವ ಅದೇ ತುಣುಕನ್ನು ಅವರ X ಖಾತೆಯಲ್ಲಿ “#CGI” ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನು ಡ್ಯುರೊಫ್ಲೆಕ್ಸ್‌ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ “#CGI #cgi ಅನಿಮೇಷನ್” ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಈ ತನಿಖೆಯ ಪ್ರಕಾರ, ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ದೈತ್ಯ ಪ್ರತಿಮೆಯನ್ನು ತೋರಿಸುವ ವೈರಲ್ ದೃಶ್ಯಗಳು ನಿಜವಾಗಿ CGI ನಿಂದ ಮಾಡಿದ್ದಾಗಿದೆ. ಇದು ನ್ಯೂಯಾರ್ಕ್‌ನಲ್ಲಿ ಯಾವುದೇ ನಿಜವಾದ ಪ್ರತಿಮೆ ಸ್ಥಾಪನೆಯನ್ನು ತೋರಿಸುವುದಿಲ್ಲ.
Our Source’s
Instagram Post By @timessquarenyc, Dated: June 28, 2024
Instagram Post By @duroflexworld, Dated: June 23, 2024
X Post By @Duroflex_world, Dated: June 23, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.